Karnataka Rain Update: ರಾಜ್ಯದೆಲ್ಲೆಡೆ ವರುಣನ ಆರ್ಭಟ; ಯಾದಗಿರಿಯಲ್ಲಿ ಮಳೆಗೆ ಕೊಚ್ಚಿಹೋಗಿದ್ದ ಬಾಲಕನ ರಕ್ಷಣೆ

ರಾಜಧಾನಿಯಲ್ಲಿ ಕೂಡ ಇಂದು ಮಳೆ ಆರ್ಭಟ ಮುಂದುವರೆದಿದೆ. ಬೆಳಗ್ಗೆಯಿಂದ ಕೊಂಚ ಮೋಡ ಕವಿದ ವಾತಾವರಣ ಇದ್ದು, ಮಧ್ಯಾಹ್ನದ ಬಳಿಕ ನಗರದ ವಿವಿಧ ಭಾಗಗಳಲ್ಲಿ ಜೋರು ಮಳೆಯಾಗಿದೆ

ಯಾದಗಿರಿಯವ ಕೊಡೇಕಲ್ ಮನೆಗಳಿಗೆ ನೀರು ನುಗ್ಗಿರುವ ದೃಶ್ಯ

ಯಾದಗಿರಿಯವ ಕೊಡೇಕಲ್ ಮನೆಗಳಿಗೆ ನೀರು ನುಗ್ಗಿರುವ ದೃಶ್ಯ

  • Share this:
    ಬೆಂಗಳೂರು (ಸೆ. 21): ಬಂಗಾಳ ಕೊಲ್ಲಿಯ ವಾಯುಭಾರ ಕುಸಿತದ ಪರಿಣಾಮ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ (heavy Rain in karnataka) ಕಳೆದೆರಡು ದಿನಗಳಿಂದ ಭಾರೀ ಮಳೆಯಾಗುತ್ತಿದೆ. ರಾಜಧಾನಿ ಬೆಂಗಳೂರು (bengaluru Rain) ಸೇರಿದಂತೆ ಧಾರವಾಡ, ಬೆಳಗಾವಿ, ಯಾದಗಿರಿಯಲ್ಲಿ (Rain In dharwad, Yadgiri, Belagavi) ಮಳೆ ಅಬ್ಬರ ಜೋರಾಗಿದೆ. ಮುಂಗಾರಿನ ಕೊನೆಯ ತಿಂಗಳಲ್ಲಿ ಅಧಿಕ ಮಳೆಯಾಗುವ ನಿರೀಕ್ಷೆ ಇದೆ ಎಂದು ಈ ಹಿಂದೆಯೇ ಹವಾಮಾನ ಇಲಾಖೆ ಮುನ್ಸೂಚನೆ ನೀಡಿತ್ತು, ಅದರಂತೆ, ಕರಾವಳಿ, ಮಲೆನಾಡು ಸೇರಿದಂತೆ ಉತ್ತರ ಒಳನಾಡಿನಲ್ಲಿ ಮಳೆ ಅಬ್ಬರ ಹೆಚ್ಚಿದೆ.

    ಯಾದಗಿರಿಯಲ್ಲಿ ದಾಖಲೆ ಮಳೆ
    ಬಿಸಿಲನಗರಿಯ ಜನರು ಕಳೆದ ರಾತ್ರಿ ಸುರಿದ ಮಳೆ ಆರ್ಭಟಕ್ಕೆ ನಲುಗಿ ಹೋಗಿದ್ದಾರೆ. ರಾತ್ರಿ ಇಡೀ ಮಳೆ ಸುರಿದಿದ್ದು, ಕೆರೆಗಳು ತುಂಬಿ ನೀರು ಗ್ರಾಮಕ್ಕೆ ನುಗ್ಗಿರುವ ಘಟನೆ ಜಿಲ್ಲೆಣ ಹುಣಸಗಿಯಲ್ಲಿ ನಡೆದಿದೆ. ಕಳೆದ ರಾತ್ರಿ ಜಿಲ್ಲೆಯಲ್ಲಿ 75. 5 ಎಂಎಂಎ ಮಳೆ ದಾಖಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಹುಣಸಗಿ ತಾಲೂಕಿನ ಗೆದ್ದಲಮರಿ, ಬಲಶೆಟ್ಟಿ ಗ್ರಾಮದಲ್ಲಿ ಮಳೆ ಆರ್ಭಟ ಹೆಚ್ಚಿದ್ದು, ಸುಮಾರು 10 ಮನೆಗಳಿಗೆ ನೀರು ನುಗ್ಗಿದೆ. ಪರಿಣಾಮ ವಿದ್ಯುತ್​ ಸಂಪರ್ಕ ಕಡಿತಗೊಂಡು ಜನರು ಸಂಕಷ್ಟ ಅನುಭವಿಸಿದ್ದಾರೆ. ಜೊತೆಗೆ ರೈತರ ಹೊಲಗಳಿಗೂ ನೀರು ನುಗ್ಗಿದ್ದು, ಸಂಪೂರ್ಣ ಬೆಳೆ ನಾಶವಾಗಿದೆ.

    ಕೊಚ್ಚಿ ಹೋಗಿದ್ದ ಬಾಲಕನ ರಕ್ಷಣೆ
    ಯಾದಗಿರಿ ಜಿಲ್ಲೆಯಲ್ಲಿ ವರುಣನ ಅಬ್ಬರಕ್ಕೆ ಗೆದ್ದಲಮರಿ ಗ್ರಾಮದ ಬಾಲಕ ಕೊಚ್ಚಿಕೊಂಡಿ ಹೋಗಿದ್ದ ಘಟನೆ ನಡೆದಿತ್ತು. ಈ ವೇಳೆ ತಕ್ಷಣಕ್ಕೆ ಅಲ್ಲಿನ ಯುವಕರು ಆತನನ್ನು ಕಾಪಾಡಿದರು. ಗೆದ್ದಲಮರಿ ಗ್ರಾಮದ 6 ವರ್ಷದ ಬಾಲಕ ಬಸವರಾಜ ಸೇತುವೆ ದಾಟುವಾಗ ನೀರಲ್ಲಿ ಕೊಚ್ಚಿ ಹೋಗಿ ಗಡ್ಡೆಯಲ್ಲಿ ಸಿಕ್ಕಿಬಿದ್ದಿದ್ದ. ಅದೇ ಗ್ರಾಮದ ಯಮನೂರಿ, ಕೆಂಚಪ್ಪ ಹಾಗೂ ಹಣಮಂತ ಎಂಬುವವರುಜೀವದ ಹಂಗು ತೊರೆದು ಬಾಲಕನ ಜೀವ ಕಾಪಾಡಿದರು.

    ಗದಗದಲ್ಲೂ ಸಿಡಿಲು ಬಡಿದು ಕುರಿ ಸಾವು
    ಗದಗದಲ್ಲೂ ಗುಡುಗು, ಮಿಂಚಿನ ಆರ್ಭಟದ ಮಳೆಗೆ ರೋಣ ತಾಲೂಕಿನ ಜನರು ಕಂಗಾಲಾಗಿದ್ದಾರೆ. ಸಿಡಿಲು ಬಡೆದು ಹತ್ತಕ್ಕೂ ಹೆಚ್ಚು ಕುರಿಗಳು ಸಾವು, 20 ಕ್ಕೂ ಹೆಚ್ಚು ಕುರಿಗಳಿಗೆ ಗಾಯವಾಗಿದೆ. ರಾಯಪ್ಪ ಪೂಜಾರಿ,ಅಜೀತ ಪೂಜಾರಿ ಎಂಬವವರಿಗೆ ಸೇರಿದ ಕುರಿಗಳು ಸಾವನ್ನಪ್ಪಿದ್ದು, ಅವರು ಪರಿಹಾರಕ್ಕೆ ಆಗ್ರಹಿಸಿದ್ದಾರೆ

    ಇದನ್ನು ಓದಿ: ಸೇನೆ ಸೇರಬೇಕು ಎಂಬ ಮಹಿಳೆಯರಿಗೆ Good News​: ಮೇನಲ್ಲಿ ನಡೆಯಲಿದೆ NDA Exam

    ಬೆಳಗಾವಿಯಲ್ಲಿ ಮುಂಜಾನೆಯಿಂದ ಧಾರಾಕಾರ ಮಳೆ
    ನಗರದಲ್ಲಿ ಬೆಳಗ್ಗೆಯಿಂದಲೇ ದಟ್ಟವಾದ ಮೊಡಕವಿದ ವಾತಾವರಣ ಇದ್ದು, ಏಕಾಏಕಿ ಮಳೆ ಸುರಿಯುತ್ತಿರುವ ಹಿನ್ನಲೆ ಜನಜೀವನ ಸಂಪೂರ್ಣ ಅಸ್ತವ್ಯಸ್ಥವಾಗಿದೆ. ಮಳೆಯಿಂದಾಗಿ ವಾಹನ ಸವಾರರು, ಜನ ಸಾಮಾನ್ಯರ ಪರದಾಡುವ ದೃಶ್ಯ ನಗರದಲ್ಲಿ ಕಂಡು ಬಂದಿದೆ. ವರುಣನ ಆರ್ಭಟದಿಂದ ಬೀದಿ ವ್ಯಾಪಾರಸ್ಥರು ತತ್ತರಿಸುವುದು ಕಂಡು ಬಂದಿದೆ.

    ಧಾರವಾಡದಲ್ಲಿ ಮಳೆ ಅಬ್ಬರ
    ಧಾರವಾಡದಲ್ಲಿ ಮಧ್ಯಾಹ್ನ ಸುರಿದ ಜೋರು ಮಳೆ ನಗರಕ್ಕೆ ತಂಪೆರೆದಿದೆ. ಬೆಳಗ್ಗೆಯಿಂದಲೇ ಮೋಡ ಕವಿದ ವಾತಾವರಣವಿದ್ದು, ಮಧ್ಯಾಹ್ನದವರೆಗೂ ಆಗಾಗ ಸುರಿದ ತುಂತುರು ಮಳೆ ಸುರಿಯುತ್ತಿತ್ತು. ಮಧ್ಯಾಹ್ನದ ಬಳಿಕ ಜೋರಾದ ಮಳೆ ಅಬ್ಬರ ಆರಂಭವಾಗಿದೆ.

    ಇದನ್ನು ಓದಿ: ನಮ್ಮ ದೇಹವನ್ನು ತಂದೆಗಾಗಲಿ, ಗಂಡನಿಗಾಗಲಿ ನೀಡಬೇಡಿ; ಶಂಕರ್​ ಬಗ್ಗೆ ಮಕ್ಕಳ ಸಾಲು ಸಾಲು ಆರೋಪ

    ಬೆಂಗಳೂರಿನಲ್ಲೂ ವರುಣನ ಆರ್ಭಟ
    ರಾಜಧಾನಿಯಲ್ಲಿ ಕೂಡ ಇಂದು ಮಳೆ ಆರ್ಭಟ ಮುಂದುವರೆದಿದೆ. ಬೆಳಗ್ಗೆಯಿಂದ ಕೊಂಚ ಮೋಡ ಕವಿದ ವಾತಾವರಣ ಇದ್ದು, ಮಧ್ಯಾಹ್ನದ ಬಳಿಕ ನಗರದ ವಿವಿಧ ಭಾಗಗಳಲ್ಲಿ ಜೋರು ಮಳೆಯಾಗಿದೆ. ಸೋಮವಾರ ಕೂಡ ನಗರದಲ್ಲಿ ಸಹ ಗುಡುಗು, ಸಿಡಿಲು ಸಹಿತ ಧಾರಾಕಾರ ಮಳೆಯಾಗಿದೆ. ಇಂದು ಸಹ ನಗರದಲ್ಲಿ ಭಾರೀ ಮಳೆಯಾಗಿದ್ದು, ಜನರು ಹೈರಾಣಾಗಿದ್ದಾರೆ.

    ನಗರದಲ್ಲಿ ಭಾರೀ ಮಳೆಯಿಂದಾಗಿ ನೀರು ರಸ್ತೆ ಮೇಲೆಯೇ ಹರಿಯುತ್ತಿದೆ. ಕೆಲ ಕಡೆ ಕಾಲುವೆಗಳಲ್ಲಿ ನೀರು ತುಂಬಿ ಹರಿಯುತ್ತಿದ್ದು, ತ್ಯಾಜ್ಯವೆಲ್ಲ ರಸ್ತೆಗೆ ಬಂದು ಬಿದ್ದು ಅವಾಂತರ ಸೃಷ್ಟಿಸಿದೆ. ಮಳೆಯಿಂದ ತಪ್ಪಿಸಿಕೊಳ್ಳಲು ಕೆಲವರು, ರಸ್ತೆಯ ಪಕ್ಕ–ಪಕ್ಕದ ಮಳಿಗೆಗಳಲ್ಲಿ ಆಶ್ರಯ ಪಡೆದರು. ಭಾರೀ ಮಳೆಯಿಂದಾಗಿ ಹಲವರು ಪ್ರದೇಶಗಳಲ್ಲಿ ಜನಜೀವನ ಅಸ್ತವ್ಯಸ್ತವಾಗಿದ್ದು, ವಾಹನ ಸಂಚಾರಕ್ಕೆ ಪರದಾಡುವ ಪರಿಸ್ಥಿತಿ ಇದುರಾಗಿತ್ತು.
    Published by:Seema R
    First published: