• Home
  • »
  • News
  • »
  • state
  • »
  • Rain: ಬೆಳಗಾವಿಯಲ್ಲಿ ಮಳೆ ಅಬ್ಬರ; ಮಹಾರಾಷ್ಟ್ರ ಮಳೆಗೆ ಉಕ್ಕಿ ಹರಿಯುತ್ತಿರುವ ಕೃಷ್ಣೆ

Rain: ಬೆಳಗಾವಿಯಲ್ಲಿ ಮಳೆ ಅಬ್ಬರ; ಮಹಾರಾಷ್ಟ್ರ ಮಳೆಗೆ ಉಕ್ಕಿ ಹರಿಯುತ್ತಿರುವ ಕೃಷ್ಣೆ

ಮಹಾರಾಷ್ಟ್ರದಲ್ಲಿ ಭಾರಿ ಪ್ರಮಾಣದ ಕೃಷ್ಣಾ ನದಿಯು ಅಪಾಯ ಮಟ್ಟ ಮೀರಿ ಉಕ್ಕಿ ಹರಿಯುತ್ತಿದೆ.

ಮಹಾರಾಷ್ಟ್ರದಲ್ಲಿ ಭಾರಿ ಪ್ರಮಾಣದ ಕೃಷ್ಣಾ ನದಿಯು ಅಪಾಯ ಮಟ್ಟ ಮೀರಿ ಉಕ್ಕಿ ಹರಿಯುತ್ತಿದೆ.

ಮಹಾರಾಷ್ಟ್ರದಲ್ಲಿ ಭಾರಿ ಪ್ರಮಾಣದ ಕೃಷ್ಣಾ ನದಿಯು ಅಪಾಯ ಮಟ್ಟ ಮೀರಿ ಉಕ್ಕಿ ಹರಿಯುತ್ತಿದೆ.

  • Share this:

ಬೆಳಗಾವಿ(ಜುಲೈ. 22):  ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ಮಳೆಯಾಗುತ್ತಿದ್ದು, ಕಳೆದ ಎರಡು ದಿನಗಳಿಂದ ಮಳೆಯ ಅಬ್ಬರ ಮತ್ತಷ್ಟು ಹೆಚ್ಚಾಗಿದೆ. ಬೆಳಗಾವಿ ತಾಲೂಕು, ಖಾನಾಪುರ ತಾಲೂಕಿನಲ್ಲಿ ಅತಿಹೆಚ್ಚು ಮಳೆಯಾಗುತ್ತಿದೆ. ಬೆಳಗಾವಿ ನಗರದಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿದ್ದು, ಜನ ಜೀವನ ಅಸ್ತವ್ಯಸ್ಥವಾಗಿದೆ. ಮಳೆಯಿಂದ ರಾಷ್ಟ್ರೀಯ ಹೆದ್ದಾರಿ ನಾಲ್ಕು ನದಿಯಂತೆ ಆಗಿದ್ದು, ಅಪಾಯವನ್ನು ಲೆಕ್ಕಿಸದೇ ವಾಹನ ಸವಾರರು ಪ್ರಯಾಣ ನಡೆಸುತ್ತಿದ್ದಾರೆ. ಬೆಳಗಾವಿ ನಗರ, ನಂದಗಢದಲ್ಲಿ ಮನೆಗಳ ಬಿದ್ದು ಅವಾಂತರ ಸೃಷ್ಠಿಯಾಗಿದೆ. ಜತೆಗೆ ಬಳ್ಳಾರಿ ನಾಲಾ ನೀರು ವ್ಯಾಪಕವಾಗಿ ಹರಿಯುತ್ತಿದ್ದು, ಸಾವಿರಾರು ಎಕರೆ ಪ್ರದೇಶದಲ್ಲಿ ಬೆಳೆದೆ ಬೆಳೆ ನೀರಿನಲ್ಲಿ ಮುಳುಗಿದೆ ಹೋಗಿದೆ. ಭತ್ತ ಸೇರಿ ವಿವಿಧ ಬೆಳೆಯನ್ನು ಭಿತ್ತನೆ ಮಾಡಿದ ರೈತರಿಗೆ ಮತ್ತೊಮ್ಮೆ ನಷ್ಟ ಭೀತಿ ಆರಂಭವಾಗಿದೆ.


ಬೆಳಗಾವಿ, ಖಾನಾಪುರದಲ್ಲಿ ಕಳೆದ ಎರಡು ದಿನಗಳಿಂದ ನಿರಂತರವಾಗಿ ಮಳೆಯಾಗುತ್ತಿದ್ದು, ಜನ ಜೀವನ ಸಂಪೂರ್ಣವಾಗಿ ಅಸ್ತವ್ಯಸ್ಥವಾಗಿದೆ. ಬೆಳಗಾವಿ ನಗರದಲ್ಲಿ ಮಳೆಯ ಅಬ್ಬರದಿಂದ ರಸ್ತೆಗಳು ನದಿಗಳಾಗಿವೆ.  ಇನ್ನೂ ವಾಹನ ಸವಾರರು ಓಡಾಡಲು ಪರಾಡುವ ದೃಶ್ಯಗಳು ನಗರದಲ್ಲಿ ಸಾಮಾನ್ಯವಾಗಿದೆ.


ಭೂತರಾಮನಹಟ್ಟಿ, ಸುತಗಟ್ಟಿ ಗುಡ್ಡಗಾಡು ಪ್ರದೇಶದಲ್ಲಿ ಮಳೆಯಾಗುತ್ತಿದ್ದು, ನೀರು ರಾಷ್ಟ್ರೀಯ 4ಕ್ಕೆ ನುಗ್ಗಿದೆ. ಇದರಿಂದ ಹೆದ್ದಾರಿಗಳು ನದಿಯಂತೆ ಆಗಿದ್ದು, ವಾಹನ ಸವಾರರು ಇದನ್ನು ಲೆಕ್ಕಿಸದೆ ಸಂಚಾರ ನಡೆಸುತ್ತಿದ್ದಾರೆ. ಆರ್ ಸಿ ಯು ಬಳಿಯಲ್ಲಿ ನೀರಿನ ರಭಸಕ್ಕೆ ಕಾರವೊಂದು ಕೊಚ್ಚಿಕೊಂಡು ಸ್ಪಲ್ಪ ದೂರ ಹೋಗಿದೆ. ಆದರೇ ಯಾವುದೇ ಪ್ರಯಾಣಿಕರಿಗೆ ಹಾನಿ ಸಂಭವಿಸಿಲ್ಲ.


ಇದನ್ನು ಓದಿ: ಯಾರಾಗಲಿದ್ದಾರೆ ಮುಂದಿನ ಸಿಎಂ?; ಧಾರವಾಡ ಜಿಲ್ಲೆಯ ನಾಯಕರ ಲೆಕ್ಕಾಚಾರ ಶುರು


ಖಾನಾಪುರದಲ್ಲಿ ಮಳೆಯ ಅಬ್ಬರ ತೀವ್ರವಾಗಿದ್ದು, ಅನೇಕ ಗ್ರಾಮಗಳ ರಸ್ತೆ ಸಂಚಾರ ಸಂಪೂರ್ಣವಾಗಿ ಬಂದ್ ಆಗಿದೆ. ಕಣಕುಂಬಿ, ಲೋಂಡಾ, ಜಾಂಬೋಟಿ, ಹಬ್ಬಾನಟ್ಟಿಗಳ ಬ್ರಿಡ್ಜ್ ಮೇಲೆ ನೀರು ಬಂದಿದೆ. ನೀಲವಾಡೆ, ಅಂಬೋಲಿ, ಕಬನಾಳ್ಳಿ, ಹಾಗೂ ಹಬ್ಬಾನಟ್ಟಿನ ನಡುವಿನ ರಸ್ತೆ ಸಂಚಾರ ಬಂದ್ ಆಗಿದೆ. ಮಳೆಯಿಂದ ಮಲಪ್ರಭಾ ನದಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ.


ಬೆಳಗಾವಿ ನಗರದ ಖಡೇಬಜಾರ್ ನಲ್ಲಿ ಹಳೇಯ ಮನೆಯೊಂದು ನೋಡು ನೋಡುತ್ತಿದ್ದಂತೆ ಕುಸಿದು ಹೋಗಿದೆ. ಸ್ಥಳೀಯರೊಬ್ಬರು ಈ ದೃಶ್ಯವನ್ನು ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ. ಆದರೇ ಅದೃಷ್ಟವಷಾತ್ ಯಾರಿಗೂ ಹಾನಿ ಸಂಭವಿಸಿಲ್ಲ. ಖಾನಾಪುರದ ಭಟ್ ಗಲ್ಲಿಯಲ್ಲಿ ಸಹ ಎರಡು ಮನೆಗಳ ಗೋಡೆ ಕುಸಿದು ಹೋಗಿದೆ. ಮನೆಯ ವಸ್ತುಗಳು ಹಾನಿಯಾಗಿದ್ದು, ಈ ಬಗ್ಗೆ ಸ್ಥಳೀಯ ಅಧಿಕಾರಿಗಳ ಗಮನಕ್ಕೆ ತರಲಾಗಿದೆ.


ಬೆಳಗಾವಿ ಜಿಲ್ಲೆಯಲ್ಲಿ ಕಳೆದ 2 ದಿನಗಳಿಂದ ಜಿಲ್ಲೆಯಲ್ಲಿ ವ್ಯಾಪಕವಾಗಿ ಮಳೆಯಾಗುತ್ತಿದೆ. ಜಿಲ್ಲಾಡಳಿತ ಎಲ್ಲಾ ರೀತಿಯ ಮುಂಜಾಗೃತಾ ಕ್ರಮವನ್ನು ಕೈಗೊಂಡಿದೆ. ಯಾವುದೇ ಪ್ರವಾಹ ಸ್ಥಿತಿ ಸದ್ಯ ನಿರ್ಮಾಣವಾಗಿಲ್ಲ. ಮಹಾರಾಷ್ಟ್ರ ಅಧಿಕಾರಿಗಳ ಜತೆಗೆ ನಿರಂತರವಾಗಿ ಸಂಪರ್ಕದಲ್ಲಿ ಇದ್ದು, ಕೊಯ್ನಾದಿಂದ ನೀರು ಬಿಡುಗಡೆ ಬಗ್ಗೆ ಮಾಹಿತಿ ಸಿಗಲಿದೆ ಎಂದರು.
ಉಕ್ಕಿ ಹರಿಯುತ್ತಿರುವ ಕೃಷ್ಣೆ


ಮಹಾರಾಷ್ಟ್ರದ ಮಹಾಮಳೆಗೆ ಯಾದಗಿರಿ ಜಿಲ್ಲೆಯ ಜನರು ತತ್ತರಿಸಿ ಹೋಗಿದ್ದಾರೆ. ಮಹಾರಾಷ್ಟ್ರದಲ್ಲಿ ಭಾರಿ ಪ್ರಮಾಣದ ಕೃಷ್ಣಾ ನದಿಯು ಅಪಾಯ ಮಟ್ಟ ಮೀರಿ ಉಕ್ಕಿ ಹರಿಯುತ್ತಿದೆ. ಜಿಲ್ಲೆಯ ಹುಣಸಗಿ ತಾಲೂಕಿನ ನಾರಾಯಣಪುರ ಗ್ರಾಮದ ಸಮೀಪದ ಬಸವಸಾಗರ ಜಲಾಶಯ ಭರ್ತಿಯಾಗಿದೆ. 33.33 ಟಿಎಂಸಿ ಸಂಗ್ರಹ ಸಾಮರ್ಥ್ಯದ ಬಸವಸಾಗರ ಜಲಾಶಯದಲ್ಲಿ, 29.36 ನೀರು ಸಂಗ್ರಹವಾಗಿದೆ‌. ಬಸವಸಾಗರ ಜಲಾಶಯದಿಂದ ಕೃಷ್ಣಾ ನದಿಗೆ 129640 ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ. ಜಲಾಶಯಕ್ಕೆ 120000 ಒಳಹರಿವಿದೆ.ಜಲಾಶಯಕ್ಕೆ ದಿನೆ ದಿನೇ ಒಳಹರಿವು ಹೆಚ್ಚಾಗುತ್ತಿದ್ದು.ಜಲಾಶಯದ 22 ಕ್ರೈಸ್ಟ್ ಗೇಟ್  ಒಪನ್ ಮಾಡುವ ಹೆಚ್ಚಿನ ಪ್ರಮಾಣದ  ಕೃಷ್ಣಾ ನದಿಗೆ ಬಿಡುಗಡೆ ಮಾಡಲಾಗಿದೆ.ಕೃಷ್ಣಾ ನದಿ ತೀರದಲ್ಲಿ ಆತಂಕ ಎದುರಾಗಿದೆ.
ಜಿಲ್ಲಾಡಳಿತ ಕೂಡ ಪ್ರವಾಹ ಪರಿಸ್ಥಿತಿ ಎದುರಿಸಲು ಅಗತ್ಯ ಸಿದ್ದತೆ ಮಾಡಿಕೊಂಡಿದೆ. ಜನರು ಯಾವುದೇ ಕಾರಣಕ್ಕೂ ನದಿ ತೀರಕ್ಕೆ ತೆರಳಬಾರದೆಂದು ಎಚ್ಚರಿಕೆ ನೀಡಲಾಗಿದೆ. ಈಗಾಗಲೇ ಹಳ್ಳಿಗಳಲ್ಲಿ ಡಂಗ್ಯೂರು ಸಾರುವ ಮೂಲಕ ಜನರಿಗೆ ಎಚ್ಚರಿಕೆ ನೀಡಲಾಗಿದೆ.


ಯಾದಗಿರಿ ಜಿಲ್ಲೆಯ ಕೊಳ್ಳುರು ಸೇತುವೆಯು ಯಾದಗಿರಿ ಹಾಗೂ ರಾಯಚೂರು ಜಿಲ್ಲೆಗೆ ಸಂಪರ್ಕ ಕಲ್ಪಿಸುವ ಸೇತುವೆಯಾಗಿದೆ.ಕಳೆದ ವರ್ಷ ಕೂಡ ಕೃಷ್ಣಾ ನದಿಯ ಪ್ರವಾಹಕ್ಕೆ ಮುಳುಗಡೆಯಾಗಿತ್ತು.ಈಗ ಮತ್ತೆ ಕೃಷ್ಣಾ ನದಿಯ ಪ್ರವಾಹ ಹಿನ್ನೆಲೆ ಸೇತುವೆಯು ಮುಳುಗಡೆ ಭೀತಿ ಎದುರಿಸುತ್ತಿದೆ.ಸೇತುವೆ ಮುಳುಗಡೆಗೆ ಕೆಲವೆ ಅಡಿಯಷ್ಟು ಬಾಕಿ ಇದೆ.ಇದೆ ರೀತಿ ಪ್ರವಾಹ ಹೆಚ್ಚಾದರೆ ಸೇತುವೆ ಮುಳುಗಡೆಯಾಗಲಿದೆ.

Published by:Seema R
First published: