Rain: ಬೆಳಗಾವಿಯಲ್ಲಿ ಮುಂಗಾರು ಮಳೆಯ ಅಬ್ಬರ ಓರ್ವ ಮೀನುಗಾರ ಸಾವು; ನೀರಿನಲ್ಲಿ ಕೊಚ್ಚಿಹೋದ ರೈತನಿಗಾಗಿ ಶೋಧ ಕಾರ್ಯ

ಸವದತ್ತಿ ತಾಲೂಕಿನ ಯಕ್ಕುಂಡಿ ಗ್ರಾಮದ ಬಳಿಯಲ್ಲಿ ಮಲಪ್ರಭಾ ನದಿಯ ಹಿನ್ನಿರಿನಲ್ಲಿ ನಿನ್ನೆ ಸಂಜೆ ಮೂರು ಜನ ಮೀನುಗಾರರು ಮೀನು ಹಿಡಿಯಲು ತೆರಳಿದ್ದರು. ಈ ವೇಳೆಯಲ್ಲಿ ನೀರಿನ ರಭಸ ಹೆಚ್ಚಾಗಿದ್ದು, ದೋಣಿ ಮುಳುಗಿದೆ

ಸವದತ್ತಿ ತಾಲೂಕಿನ ಯಕ್ಕುಂಡಿ ಗ್ರಾಮದ ಬಳಿಯಲ್ಲಿ ಮಲಪ್ರಭಾ ನದಿಯ ಹಿನ್ನಿರಿನಲ್ಲಿ ನಿನ್ನೆ ಸಂಜೆ ಮೂರು ಜನ ಮೀನುಗಾರರು ಮೀನು ಹಿಡಿಯಲು ತೆರಳಿದ್ದರು. ಈ ವೇಳೆಯಲ್ಲಿ ನೀರಿನ ರಭಸ ಹೆಚ್ಚಾಗಿದ್ದು, ದೋಣಿ ಮುಳುಗಿದೆ

ಸವದತ್ತಿ ತಾಲೂಕಿನ ಯಕ್ಕುಂಡಿ ಗ್ರಾಮದ ಬಳಿಯಲ್ಲಿ ಮಲಪ್ರಭಾ ನದಿಯ ಹಿನ್ನಿರಿನಲ್ಲಿ ನಿನ್ನೆ ಸಂಜೆ ಮೂರು ಜನ ಮೀನುಗಾರರು ಮೀನು ಹಿಡಿಯಲು ತೆರಳಿದ್ದರು. ಈ ವೇಳೆಯಲ್ಲಿ ನೀರಿನ ರಭಸ ಹೆಚ್ಚಾಗಿದ್ದು, ದೋಣಿ ಮುಳುಗಿದೆ

  • Share this:
ಬೆಳಗಾವಿ(ಜೂನ್,19)- ಪಶ್ಚಿಮ ಘಟ್ಟ ಪ್ರದೇಶ ಹಾಗೂ ಬೆಳಗಾವಿ ಜಿಲ್ಲೆಯಲ್ಲಿ ಕಳೆದ  5 ದಿನಗಳಿಂದ ವ್ಯಾಪಕವಾಗಿ ಮಳೆಯಾಗುತ್ತಿದೆ. ಮುಂಗಾರು ಮಳೆಯ ಅಬ್ಬರದಿಂದ ನದಿ ಒಳ ಹರಿವು ಹೆಚ್ಚಳವಾಗಿದ್ದು, ಹಳ್ಳಗಳು ತುಂಬಿಕೊಂಡಿವೆ. ಇನ್ನೂ ನಗರದ ಪ್ರದೇಶದಲ್ಲಿ ಮರ ಬಿದ್ದು ಅನಾಹುತಗಳು ಸಂಭವಿಸಿವೆ. ಬೆಳಗಾವಿ ಜಿಲ್ಲೆಯಲ್ಲಿ ಓರ್ವ ಮೀನುಗಾರ ನದಿಯ ಪ್ರವಾಹಕ್ಕೆ ಸಿಕ್ಕು ಮೃತಪಟ್ಟಿದ್ದು, ಮತ್ತೋರ್ವ ರೈತರನಿಗಾಗಿ ಶೋಧ ಕಾರ್ಯ ನಡೆಸಲಾಗುತ್ತಿದೆ. ಅನೇಕ ರಸ್ತೆಗಳು ನೀರಿನಲ್ಲಿ ಕೊಚ್ಚಿ ಹೋಗಿದ್ದು, ಜಿಲ್ಲೆಯಲ್ಲಿ ಜನಜೀವನ ಅಸ್ತವ್ಯಸ್ಥಗೊಂಡಿದೆ.

ಬೆಳಗಾವಿ ತಾಲೂಕಿನಲ್ಲಿ ವ್ಯಾಪಕವಾಗಿ ಮಳೆಯಾಗುತ್ತಿದ್ದು, ಮಾರ್ಕಂಡೇಯ ನದಿ ತುಂಬಿ ಹರಿಯುತ್ತಿದೆ. ಕಾಕತಿ- ಕಡೋಲಿ ಗ್ರಾಮದ ಬಳಿಯಲ್ಲಿ ರೈತನೋರ್ವ ನಿನ್ನೆ ನೀರಿಗೆ ಇಳಿದ್ದು, ಕಾಲು ಜಾರಿ ಬಿದ್ದು ನಾಪತ್ತೆಯಾಗಿದ್ದಾನೆ. ಕಾಕತಿ ಗ್ರಾಮದ ಸಿದ್ರಾಯಿ ಸುತಗಟ್ಟಿ (65) ಕಾಣೆಯಾಗಿರೋ ರೈತ. ನಿನ್ನೆ ಸಂಜೆಯಿಂದ ಎಸ್ ಡಿ ಆರ್ ಎಫ್ ತಂಡ ಶೋಧ ಕಾರ್ಯ ನಡೆಸುತ್ತಿದೆ. ಆದರೇ ಈ ವರೆಗೆ ರೈತನ ಪತ್ತೆ ಕಾರ್ಯ ಆಗಿಲ್ಲ. ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿದ್ದು, ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯಾಗುತ್ತಿದೆ. 20ಕ್ಕೂ ಹೆಚ್ಚು ಎಸ್ ಡಿ ಆರ್ ಎಫ್ ಸಿಬ್ಬಂದಿ ಸತತ ಪ್ರಯತ್ನವನ್ನು ಮುಂದುವರೆಸಿದ್ದಾರೆ. ಮಳೆ ನಡುವೆ ರೈತ ಸಿದ್ರಾಯಿ ಸುತಗಟ್ಟಿ ಶೋಧ ಕಾರ್ಯ ನಡೆಯುತ್ತಿದೆ. 24 ಗಂಟೆ ಕಳೆದು ರೈತನ ಪತ್ತೆಯಾಗದ ಹಿನ್ನಲೆಯಲ್ಲಿ ಕುಟುಂಬಸ್ಥರ ಆತಂಕಕ್ಕೆ ಕಾರಣವಾಗಿದೆ.

ಇದನ್ನು ಓದಿ: ಬೆಳಗಾವಿಯಲ್ಲಿ ಮಳೆ ಅಬ್ಬರ; ಧುಮ್ಮಿಕ್ಕಿ ಹರಿಯುತ್ತಿರುವ ಗೋಕಾಕ್​ ಜಲಪಾತ

ಸವದತ್ತಿ ತಾಲೂಕಿನ ಯಕ್ಕುಂಡಿ ಗ್ರಾಮದ ಬಳಿಯಲ್ಲಿ ಮಲಪ್ರಭಾ ನದಿಯ ಹಿನ್ನಿರಿನಲ್ಲಿ ನಿನ್ನೆ ಸಂಜೆ ಮೂರು ಜನ ಮೀನುಗಾರರು ಮೀನು ಹಿಡಿಯಲು ತೆರಳಿದ್ದರು. ಈ ವೇಳೆಯಲ್ಲಿ ನೀರಿನ ರಭಸ ಹೆಚ್ಚಾಗಿದ್ದು, ದೋಣಿ ಮುಳುಗಿದೆ. ಇಬ್ಬರು ಸಹೋದರರು ಈಜು ಮೂಲಕ ದಡ ಸೇರಿದ್ದಾರೆ. ಆದರೇ ತಂದೆ ಹುಸೆನ್ ಸಾಬ್ ಅತ್ತಾರ(52) ಈಜು ಆಡಲು ಸಾಧ್ಯವಾಗದೇ ನದಿಯಲ್ಲಿ ನಾಪತ್ತೆಯಾಗಿದ್ದಾನೆ. ಇಂದು ಬೆಳಗ್ಗೆಯಿಂದಲೇ ಎಸ್ ಡಿ ಆರ್ ಎಫ್ ತಂಡ ಶೋಧ ಕಾರ್ಯ ಆರಂಭ ಮಾಡಿತ್ತು. ಮದ್ಯಾಹ್ನದ ವೇಳೆ ಮೃತ ಹುಸೇನ್ ಸಾಬ್ ಅತ್ತಾರ ಶವ ಪತ್ತೆಯಾಗಿದೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಸ್ಥಳೀಯರು ಸಹ ಕಾರ್ಯಾಚರಣೆಗೆ ಸಾಥ್ ನೀಡಿದರು.

ಇದನ್ನು ಓದಿ; ಮಳೆ ಅಬ್ಬರದ ನಡುವೆಯೂ ಆನ್​ಲೈನ್​ ಕ್ಲಾಸ್; ಜೀವ ಕೈಯಲ್ಲಿಡಿದು ಪಾಠ ಕೇಳುತ್ತಿರುವ ವಿದ್ಯಾರ್ಥಿಗಳು

ಬೆಳಗಾವಿ ತಾಲೂಕಿನಲ್ಲಿ ವ್ಯಾಪಕವಾಗಿ ಮಳೆಯಾಗುತ್ತಿದ್ದು, ಅನೇಕ ಸೇತುವೆಗಳು ಕೊಚ್ಚಿಕೊಂಡು ಹೋಗಿವೆ. ಉಚ್ಚಗಾವ್ - ಬೋಜಾಗಾ ರಸ್ತೆಯ ಬಿಡ್ಜ್ ನೀರಿನ ಸೆಳೆತಕ್ಕೆ ಕೊಚ್ಚಿಕೊಂಡು ಹೋಗಿದೆ. ಬೈಕ್, ಕಾಲ್ನಡಿಗೆ ಮೇಲೆ ಹೋಗಲು ಜನ ಪರದಾಡು ಸ್ಥಿತಿ ನಿರ್ಮಾಣವಾಗಿದೆ.  ಎರಡು ಗ್ರಾಮಗಳ ಸಂಪರ್ಕ ಕಡಿತಗೊಂಡಿದ್ದು, ತಾತ್ಕಾಲಿಕವಾಗಿ ರಸ್ತೆ ದುರಸ್ಥಿ ಮಾಡಬೇಕು. ಹಿರಿಯ ಅಧಿಕಾರಿಗಳು ಸಹ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು ಎಂದು  ಅಧಿಕಾರಿಗಳಿಗೆ ಸ್ಥಳೀಯರು ಆಗ್ರಹಿಸಿದ್ದಾರೆ.

ಮಹಾರಾಷ್ಟ್ರದ ಘಟ್ಟ ಪ್ರದೇಶ ಹಾಗೂ ಬೆಳಗಾವಿ ಜಿಲ್ಲೆಯಾದ್ಯಂತ ಮಳೆಯ ಆರ್ಭಟ ಮುಂದುವರೆದಿದೆ. ವರುಣನ ಅಬ್ಬರಕ್ಕೆ ನದಿಗಳು ಅಪಾಯದ ಮಟ್ಟದಲ್ಲಿ ಹರಿಯುತ್ತಿವೆ. ಮಳೆಯ ಅಬ್ಬರದಿಂದ ಚಿಕ್ಕೋಡಿ ವಿಭಾಗದ ಒಟ್ಟು 7 ಕೆಳ ಹಂತದ ಸಂಪರ್ಕ ಸೇತುವೆಗಳು ಜಲಾವೃತವಾಗಿವೆ. ಕಲ್ಲೋಳ ಗ್ರಾಮದ ದತ್ತ ದೇವಸ್ಥಾನ ಹಾಗೂ ಕಾರದಗಾ ಗ್ರಾಮದ ಬಂಗಾಲಿ ಬಾಬಾ ದೇವಸ್ಥಾನಗಳಿಗೆ ಮಳೆ ನೀರು ನುಗ್ಗಿದೆ. ಬೆಳಗಾವಿ ಜಿಲ್ಲೆಯ ನಿಪ್ಪಾಣಿ, ಚಿಕ್ಕೋಡಿ ಹಾಗೂ ಹುಕ್ಕೇರಿ ತಾಲೂಕಿನ ಗ್ರಾಮಗಳಲ್ಲಿ ಪ್ರವಾಹ ಭೀತಿ ಎದುರಾಗಿದೆ ಬೆಳಗಾವಿಯಲ್ಲಿ ರಣಮಳೆ ಸುರಿಯುತ್ತಿದ್ದು, ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಘಟಪ್ರಭಾ ಹಾಗೂ ಕೃಷ್ಣಾ ನದಿಗಳು ಪ್ರವಾಹ ಭೀತಿ ಸೃಷ್ಟಿಸಿವೆ.
Published by:Seema R
First published: