Belagavi: ಸಿಬ್ಬಂದಿ ಬೇಜವಾಬ್ದಾರಿಯಿಂದಲೇ ಮೂರು ಮಕ್ಕಳ ದಾರುಣ ಸಾವು.. ಇಬ್ಬರು ಅಧಿಕಾರಿಗಳು ಸಸ್ಪೆಂಡ್​

ನರ್ಸ್(Nurse), ಫಾರ್ಮಸಿಸ್ಟ್ ಬೇಜವಾಬ್ದಾರಿಯಿಂದ ಮಕ್ಕಳ ಸಾವು ಸಂಭವಿಸಿದೆ ಎಂದು ತಿಳಿದುಬಂದಿದೆ. ಬೆಳಗಾವಿಯಲ್ಲಿ ಮೂವರು ಮಕ್ಕಳ ನಿಗೂಢ ಸಾವು ಪ್ರಕರಣಕ್ಕೆ ಸಂಬಂಧಿಸಿ ಆರೋಗ್ಯ ಸಚಿವ ಡಾ.ಕೆ. ಸುಧಾಕರ್(Dr. K Sudhakar) ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಸೆಪ್ಟಿಕ್ ಶಾರ್ಟ್ ಸಿಂಡ್ರೋಮ್‌ನಿಂದ ಮೃತಪಟ್ಟಿರಬಹುದು. ಈ ಬಗ್ಗೆ ತನಿಖೆ ಮಾಡಿ ವರದಿ ನೀಡುವಂತೆ ಸೂಚಿಸಿದ್ದೇನೆ ಎಂದು ತಿಳಿಸಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
 ಬೆಳಗಾವಿ(Belagavi)ಯಲ್ಲಿ 3 ಮಕ್ಕಳ ನಿಗೂಢ ಸಾವು(Death) ಪ್ರಕರಣಕ್ಕೆ ಸಂಬಂಧಿಸಿ ಪ್ರಾಥಮಿಕ ವರದಿ ತನಿಖಾಧಿಕಾರಿ ಈಶ್ವರ್ ಗಡಾದ್ ಸೋಮವಾರ ಹೇಳಿಕೆ ನೀಡಿದ್ದಾರೆ. ಅದರಂತೆ, ಸಿಬ್ಬಂದಿ ಬೇಜವಾಬ್ದಾರಿಯಿಂದ ಮಕ್ಕಳು ಮೃತಪಟ್ಟಿದ್ದಾರೆ. ನರ್ಸ್(Nurse), ಫಾರ್ಮಸಿಸ್ಟ್ ಬೇಜವಾಬ್ದಾರಿಯಿಂದ ಮಕ್ಕಳ ಸಾವು ಸಂಭವಿಸಿದೆ ಎಂದು ತಿಳಿದುಬಂದಿದೆ. ಬೆಳಗಾವಿಯಲ್ಲಿ ಮೂವರು ಮಕ್ಕಳ ನಿಗೂಢ ಸಾವು ಪ್ರಕರಣಕ್ಕೆ ಸಂಬಂಧಿಸಿ ಆರೋಗ್ಯ ಸಚಿವ ಡಾ.ಕೆ. ಸುಧಾಕರ್(Dr. K Sudhakar) ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಸೆಪ್ಟಿಕ್ ಶಾರ್ಟ್ ಸಿಂಡ್ರೋಮ್‌ನಿಂದ ಮೃತಪಟ್ಟಿರಬಹುದು. ಈ ಬಗ್ಗೆ ತನಿಖೆ ಮಾಡಿ ವರದಿ ನೀಡುವಂತೆ ಸೂಚಿಸಿದ್ದೇನೆ ಎಂದು ತಿಳಿಸಿದ್ದಾರೆ. ಇನ್ನೂ ಸೂಕ್ತ ರೀತಿಯಲ್ಲಿ ಆ ಮಕ್ಕಳಿಗೆ ಚಿಕಿತ್ಸೆ ನೀಡಿದ್ದಾರಾ? ಇಲ್ವಾ? ಎಂಬುದನ್ನು ತನಿಖೆ ನಡೆಸಬೇಕಿದೆ ಎಂದು ಸಚಿವರು ಹೇಳಿದ್ದಾರೆ. ಎರಡು ದಿನಗಳಲ್ಲಿ ವರದಿ(Report) ನೀಡಲು ಸೂಚನೆ ಸಹ ನೀಡಲಾಗಿದೆ. ಇಬ್ಬರು ಅಧಿಕಾರಿಗಳನ್ನು ಸಸ್ಪೆಂಡ್ ಮಾಡಲಾಗಿದೆ.ANM, ಫಾರ್ಮಸಿಸ್ಟ್‌ ಅಮಾನತು(Suspend) ಮಾಡಲಾಗಿದೆ.ಯಾರದ್ದು ತಪ್ಪು ಎನ್ನುವುದಕ್ಕಿಂತ ಮೂರು ಮಕ್ಕಳ ಬದುಕು ಅಂತ್ಯಾವಾಗಿದ್ದು, ನಿಜಕ್ಕೂ ದುರಂತವವೇ ಸರಿ. ಇನ್ನೂ ತನಿಖೆಗಾಗಿ ನೋಡಲ್​ ಅಧಿಕಾರಿಗಳ(Nodel Officers)ನ್ನು ಸಹ ಇಲ್ಲಿಗೆ ಕಳುಸಹಿಲಾಗುತ್ತಿದೆ. ಮಕ್ಕಳನ್ನು ಕಳೆದುಕೊಂಡ ಪೋಷಕರು ಮಾತ್ರ ಕಣ್ಣೀರಿನಲ್ಲೆ ಕೈ ತೊಳೆಯುತ್ತಿದ್ದಾರೆ.

ಸಿಬ್ಬಂದಿ ಬೇಜವಾಬ್ದಾರಿ.. ತಪ್ಪಿದ ಭಾರಿ ಅನಾಹುತ!

ಬೆಳಗಾವಿಯಲ್ಲಿ ಜನವರಿ 12ರಂದು ಭಾರಿ ಅನಾಹುತವೊಂದು ತಪ್ಪಿದೆ. 23 ಕಂದಮ್ಮಗಳನ್ನ ಬೇಜವಾಬ್ದಾರಿಯುತವಾಗಿ ಸಾಲಹಳ್ಳಿ ನರ್ಸ್ ನೋಡಿಕೊಂಡಿದ್ದಾಳೆ ಎಂದು ತಿಳಿದುಬಂದಿದೆ. ಕೆಲಸ ಸರಿಯಾಗಿ ಮಾಡದೇ ಅಸಡ್ಡೆ ತೋರಿಸಿದ್ದಾಳೆ. ತಾನೂ ಆಸ್ಪತ್ರೆಗೆ ಹೋಗದೇ, ಆಶಾ ಕಾರ್ಯಕರ್ತೆಯನ್ನು ನರ್ಸ್​ ಕಳುಹಿಸಿದ್ದಳು. ಫ್ರಿಡ್ಜ್​ನಲ್ಲಿ ಅಡುಗೆ ಸಾಮಾಗ್ರಿಗಳ ಪಕ್ಕದಲ್ಲೇ ವ್ಯಾಕ್ಸಿನ್ ಇಟ್ಟಿದ್ದಳು. ನಂತರ ಎರಡು ದಿನಗಳಲ್ಲಿ 23 ಜನ ಮಕ್ಕಳಿಗೆ ವ್ಯಾಕ್ಸಿನೇಷನ್‌ ಮಾಡಿಸಲಾಗಿದೆ. ಅದೃಷ್ಟವಶಾತ್ 20 ಮಕ್ಕಳು ಯಾವುದೇ ಗಂಭೀರ ಸಮಸ್ಯೆ ಎದುರಿಸಿಲ್ಲ. ಆದರೆ, ಸಿಬ್ಬಂದಿ ಬೇಜವಾಬ್ದಾರಿಗೆ ಮೂರು ಮಕ್ಕಳ ಸಾವು ಸಂಭವಿಸಿದೆ. ಮೂರು ಮಕ್ಕಳು ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇದನ್ನು ಓದಿ: ಸಾವಿನಲ್ಲೂ ಸಾರ್ಥಕತೆ ಮೆರೆದ ಮಳವಳ್ಳಿಯ ನಾಗಮ್ಮ: 5 ಜನರ ಬಾಳಿಗೆ ಸಿಕ್ತು ಬೆಳಕು!

ರುಬೆಲ್ಲಾ ಲಸಿಕೆ ಪಡೆದು ಮೂರು ಮಕ್ಕಳು ಸಾವು!

ರುಬೆಲ್ಲಾ ಲಸಿಕೆ ಪಡೆದ ಆರು ಮಕ್ಕಳಿಗೆ ಪರಿಣಾಮ ಆಗಿದ್ದು ಅದರಲ್ಲಿ ಮೂರು ಮಕ್ಕಳ ಸಾವು ಸಂಭವಿಸಿದೆ. ಸದ್ಯ ಬೆಳಗಾವಿ ಜಿಲ್ಲಾಸ್ಪತ್ರೆಯಲ್ಲಿ ಒಂದು ಮಗುವಿಗೆ ಚಿಕಿತ್ಸೆ ನೀಡಲಾಗುತ್ತಿದೆ. ರಾಮದುರ್ಗ ತಾಲೂಕು ಆಸ್ಪತ್ರೆಯಲ್ಲಿ ಇನ್ನೊಂದು ಮಗು ಚಿಕಿತ್ಸೆ ಪಡೆಯುತ್ತಿದೆ. ಬೆಳಗಾವಿಯಲ್ಲಿ ನರ್ಸ್ ಬೇಜವಾಬ್ದಾರಿಯೇ ಮೂರು ಜೀವ ಬಲಿಪಡೆದಿದೆ ಎಂದು ತಿಳಿದುಬಂದಿದೆ. ಈಗಾಗಲೇ ಇಬ್ಬರು ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ. ಈ ಪ್ರಕರಣದ ಸತ್ಯಾಸತ್ಯತೆ ತಿಳಿದುಬಂದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಸುಧಾಕರ್​ ಕೂಡ ಹೇಳಿದ್ದಾರೆ.

ಇದನ್ನು ಓದಿ: ಇಂದು ಸಂಜೆ ಸಿಎಂ‌ ಬೊಮ್ಮಾಯಿ ನೇತೃತ್ವದಲ್ಲಿ ಕೋವಿಡ್ ಸಿದ್ಧತೆ ಕುರಿತು ಸಭೆ

ತನಿಖೆಗಾಗಿ ಇಬ್ಬರು ಅಧಿಕಾರಿಗಳ ನೇಮಕ

ಬೆಳಗಾವಿ ಜಿಲ್ಲೆಯಲ್ಲಿ ಮೂವರು ಮಕ್ಕಳ ಸಾವು ಪ್ರಕರಣಕ್ಕೆ ಸಂಬಂಧಿಸಿ ಪ್ರಕರಣದ ತನಿಖೆಗೆ ಇಬ್ಬರು ಹಿರಿಯ ಅಧಿಕಾರಿಗಳ ನೇಮಕ ಮಾಡಲಾಗಿದೆ. ಆರೋಗ್ಯ ಸಚಿವ ಡಾ.ಸುಧಾಕರ್ ಸೂಚನೆ ಮೇರೆಗೆ WHO ಅಧಿಕಾರಿ ಡಾ.ಸಿದ್ದಲಿಂಗಯ್ಯ, ಡಾ.ಪ್ರಭು ಬಿರಾದಾರ ನೇಮಕ ಮಾಡಲಾಗಿದೆ. ಇಬ್ಬರು ಅಧಿಕಾರಿಗಳ ನೇತೃತ್ವದಲ್ಲಿ ಪ್ರಕರಣದ ತನಿಖೆ ನಡೆಯಲಿದೆ. ಬೆಳಗಾವಿ ಆರೋಗ್ಯ ಇಲಾಖೆ ವಿಭಾಗೀಯ ಜಂಟಿ ನಿರ್ದೇಶಕ ಡಾ.ಪ್ರಭು ಬಿರಾದಾರ ತನಿಖೆ ನಡೆಸಲಿದ್ದಾರೆ. ಮೂರು ಮಕ್ಕಳನ್ನು ಕಳೆದುಕೊಂಡ ಪೋಷಕರಿಗೆ ನ್ಯಾಯ ಸಿಗಬೇಕಿದೆ ಅಂತಾರೆ ಇಲ್ಲಿನ ಜನ
Published by:Vasudeva M
First published: