ಚಿಕ್ಕೋಡಿ, ಬೆಳಗಾವಿ: ಸರ್ಕಾರಿ ಜಾಗಗಳನ್ನ (Government Land) ಬಡವರು (Poor People) ಒತ್ತುವರಿ (Occupied) ಮಾಡಿಕೊಂಡ್ರೆ ಕೋರ್ಟ್ ನಿಂದ (Court) ನೋಟಿಸ್ (Notice) ನೀಡಿ, ಒತ್ತುವರಿ ತೆರವು ಕಾರ್ಯಾಚರಣೆ ಮಾಡೋದನ್ನ ನಾವು ನೀವು ನೋಡೇ ಇರ್ತಿವಿ. ಅದರೆ ಇಲ್ಲೊಂದು ಸರ್ಕಾರಿ ಸಂಸ್ಥೆಯೇ ರೈತನ (Farmer) ಜಮೀನು (Land) ಒತ್ತುವರಿ ಮಾಡಿಕೊಂಡಿದ್ದು, ರೈತನ ಗದ್ದೆಯಲ್ಲಿ ಅರಣ್ಯ ಇಲಾಖೆಯಿಂದ (Forest Department) ನರೇಗಾ ಯೋಜನೆಯಡಿ (Narega Project) ಕಾಮಗಾರಿ ಮಾಡಿ ಕೈ ತೊಳೆದುಕೊಂಡಿದೆ. ಗದ್ದೆ ಒತ್ತುವರಿಯಾಗಿದ್ದಕ್ಕೆ ರೈತ ಎನೂ ಮಾಡಬೇಕು ಅಂತ ತಿಳಿಯದೆ ಕಂಗಾಲಾಗಿದ್ದಾನೆ.. ಅಷ್ಟಕ್ಕೂ ಅಗಿದ್ದೆನು ಅಂತೀರಾ ಈ ಸ್ಟೋರಿ ನೋಡಿ.
ಗ್ರಾಮ ಪಂಚಾಯತ್ ಅಧಿಕಾರಿಗಳಿಂದ ಎಡವಟ್ಟು
ನರೇಗಾ ಯೋಜನೆಯಡಿಯಲ್ಲಿ ಗ್ರಾಮ ಪಂಚಾಯತಿ ಅಧಿಕಾರಿಗಳು ಮಾಡಿದ ಯಡವಟ್ಟಿನಿಂದ ರೈತನ ಕಂಗಾಲಾಗಿದ್ದಾನೆ. ರೈತನ ಜಮೀನಿನಲ್ಲಿ ಅರಣ್ಯ ಇಲಾಖೆ 1200 ಕ್ಕೂ ಅಧಿಕ ಗಿಡ ನೆಟ್ಟಿದೆ. ಕಳೆದ ಆರು ತಿಂಗಳಿಂದ ಜಮೀನಿನಿಂದ ಗಿಡಗಳನ್ನ ತೆರವುಗೊಳಿಸುವಂತೆ ಮನವಿ ಮಾಡಿ ರೈತ ಸುಸ್ತಾಗಿದ್ದಾನೆ. ಹೌದು ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಖಡಕಲಾಟ ಗ್ರಾಮ ಪಂಚಾಯತಿ ವ್ಯಾಪ್ತಿಯ ನಿವಾಸಿ ನಂದಕುಮಾರ ಮಗದುಮ್ಮ ಎನ್ನುವ ರೈತ ಈಗ ಪರದಾಡುವಂತಾಗಿದೆ.
ರೈತನ ಜಮೀನಲ್ಲಿ ಗಿಡ ನೆಟ್ಟ ಅಧಿಕಾರಿಗಳು
ಪೀರವಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ 2020-21ನೇ ಸಾಲಿನಲ್ಲಿ ಉದ್ಯೋಗ ಖಾತರಿ ಯೋಜನೆಯಡಿ ಸರ್ವೇ ನಂಬರ್ 16ರಲ್ಲಿ ಬರುವ ಸರ್ಕಾರಿ ಜಮೀನಿನಲ್ಲಿ ಗಿಡಗಳನ್ನ ನೆಡಲಾಗಿತ್ತು ಆದರೆ ನಿಪ್ಪಾಣಿ ತಾಲೂಕಿನ ಚಾಂದ ಶಿರದವಾಡ್ ಗ್ರಾಮದ ನಂದಕುಮಾರ ಮಗದುಮ್ಮ ಎನ್ನುವವರ ತಂದೆ ಭಾರತೀಯ ಸೈನ್ಯದಲ್ಲಿ ಸೇವೆ ಸಲ್ಲಿಸಿದ ಕಾರಣ 20 ವರ್ಷಗಳ ಹಿಂದೆ ಕೇಂದ್ರ ಸರಕಾರ 3 ಏಕರೆ 27 ಗುಂಟೆ ಜಮೀನನ್ನ ಅವರ ಹೆಸರಿಗೆ ನೀಡಿತ್ತು.
ಇದನ್ನೂ ಓದಿ: Akrama-Sakrama: ಮತ್ತೆ ಶುರುವಾಗಿದೆ ಅರಣ್ಯ ಅತಿಕ್ರಮಣದಾರರಿಗೆ ಆತಂಕ, ಅಕ್ರಮ-ಸಕ್ರಮಕ್ಕಾಗಿ ನಡೆಯುತ್ತಿದೆ ಹೋರಾಟ
ಇನ್ನೂ ನರೇಗಾ ಯೋಜನೆಯಡಿ ಗಿಡಗಳನ್ನ ಸರ್ವೆ ನಂಬರ್ 16ರ ಹಿಸ್ಸಾ 'ಹ' ಹಾಗೂ ಹಿಸ್ಸಾ 'ಫ' ದಲ್ಲಿ ಸರಕಾರಿ ಜಮೀನು ಇದ್ದು ಇದೇ ಸರ್ವೇ ನಂಬರ್ ನಲ್ಲಿ ಹಿಸ್ಸಾ 'ಬ' ದಲ್ಲಿ ನಂದಕುಮಾರ ಮಗದುಮ್ಮ ಅವರ ಜಮೀನು ಕೂಡ ಬರುತ್ತೆ ಆದರೆ ಗ್ರಾಮ ಪಂಚಾಯತಿ ಅಧಿಕಾರಿಗಳು ನರೇಗಾ ಯೋಜನೆಯಲ್ಲಿ ಅವರ ಜಮೀನಿನಲ್ಲಿ ಗಿಡಗಳನ್ನ ನೆಟ್ಟಿದ್ದಾರೆ.
ಮನವಿ ಮಾಡಿದರೂ ಆಗದ ಪ್ರಯೋಜನ
ನಮ್ಮ ಕುಟುಂಬ ಚಾಂದ ಶಿರವಾಡದಲ್ಲಿ ವಾಸವಿದ್ದೇವೆ ಅಲ್ಲಿಂದ ಇಲ್ಲಿಗೆ ಬರಬೇಕಾದರೆ 25 ಕಿಮೀ ಇದೆ. ಆರು ತಿಂಗಳ ಹಿಂದೆ ಜಮೀನು ಸಾಗುವಳಿ ಮಾಡಬೇಕು ಅಂತ ಬಂದಾಗ ನಮ್ಮ ಜಮೀನಿನಲ್ಲಿ ಗಿಡ ನೆಟ್ಟಿದ್ದು ಗೊತ್ತಾಗಿದೆ ಹೀಗಾಗಿ ಅಂದಿನಿಂದ ನಾನೂ ಗ್ರಾಮ ಪಂಚಾಯತಿ ಅಧಿಕಾರಿಗಳು ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳನ್ನ ಸಂಪರ್ಕ ಮಾಡಿದರೆ ಅವರು ಗಿಡಗಳನ್ನ ತಗೆಯುವುದಾಗಿ ಹೇಳಿ ಇನ್ನೂ ತೆರವುಗೊಳಿಸಿಲ್ಲ, ಗಿಡಗಳನ್ನ ತೆರವುಗೊಳಿಸುವಂತೆ ಕಚೇರಿ ಕಚೇರಿ ಅಲೆದಾಡಿ ಸಾಕಾಗಿದೆ ಅಂತ ತಮ್ಮ ಅಳಲನ್ನ ತೋಡಿಕೊಳ್ಳುತ್ತಿದ್ದಾರೆ.
ರೈತನ ಬೆಂಬಲಕ್ಕೆ ನಿಂತ ರೈತ ಸಂಘಟನೆ
ಇನ್ನೂ ರೈತ ನಂದಕುಮಾರ್ ಗೆ ಅನ್ಯಾಯವಾದ ಕಾರಣ ರೈತ ಸಂಘದವರು ಕೂಡ ರೈತನ ಬೆಂಬಲಕ್ಕೆ ನಿಂತಿದ್ದು ಖಡಕಲಾಟ ಗ್ರಾಮ ಪಂಚಾಯತಿ ಅಧಿಕಾರಿಗಳು ಹಾಗೂ ಸದಸ್ಯರ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ. ಈ ಬಗ್ಗೆ ಖಡಕಲಾಟ ಗ್ರಾಮ ಪಂಚಾಯತಿ ಪಿಡಿಓ ಅವರನ್ನ ಕೇಳಿದರೆ ಈ ಹಿಂದೆ ಇದ್ದ ಪಿಡಿಓ ಅವರು ಕೆಲಸ ಮಾಡಿಸಿದ್ದಾರೆ. ಇನ್ನೂ 16ರ ಸರ್ವೇ ನಂಬರ್ ನಲ್ಲಿ ಇರುವಂತೆ ಸುಮಾರು 903 ಗಿಡಗಳನ್ನ 26,0967 ರೂಪಾಯಿ ಖರ್ಚು ಮಾಡಿ ನರೇಗಾ ಯೋಜನೆಯಡಿ ಪಿರವಾಡಿ ಗ್ರಾಮದ ಸರಕಾರಿ ಜಾಗೆಯಲ್ಲಿ ಗಿಡಗಳನ್ನ ನೆಡಲಾಗಿದೆ.
ಸಬೂಬು ಹೇಳುತ್ತಿರುವ ಅಧಿಕಾರಿಗಳು
ಈಗಾಗಲೇ ರೈತ ನಂದಕುಮಾರ ಗ್ರಾಮ ಪಂಚಾಯತಿ ಸಂಪರ್ಕ ಮಾಡಿದ್ದಾರೆ ಈ ಹಿಂದೆಯೇ ಅವರಿಗೆ ನ್ಯಾಯ ಒದಗಿಸಿ ಕೊಡಬೇಕಿತ್ತು ಆದರೆ ನಾನೂ ಇಲ್ಲಿ ಅಧಿಕಾರಿಯಾಗಿ ಬಂದು ಮೂರು ತಿಂಗಳಾಯ್ತು ಹಾಗಾಗಿ ನಾಲ್ಕು ದಿನದಲ್ಲಿ ಈ ಬಗ್ಗೆ ಪರಿಶೀಲನೆ ಮಾಡಿ ಸರಕಾರಿ ಜಮೀನು ಇದ್ದರೆ ಸರಕಾರಕ್ಕೆ ಉಳಿಯುತ್ತದೆ. ಅವರ ಜಮೀನು ಇದ್ದರೆ ಅದನ್ನ ನಾವು ಸರಿಪಡಿಸುತ್ತೇವೆ ಅಂತ ಹೇಳುತ್ತಿದ್ದಾರೆ.
ಇದನ್ನೂ ಓದಿ: House Damage: ಕುಸಿಯುವ ಹಂತದಲ್ಲಿರುವ ಮನೆಯಲ್ಲೇ ವೃದ್ಧ ದಂಪತಿ ವಾಸ! 2 ವರ್ಷಗಳಿಂದ ತಪ್ಪದ ಗೋಳಾಟ
ಒಟ್ಟಿನಲ್ಲಿ ಗ್ರಾಮ ಪಂಚಾಯತಿ ಅಧಿಕಾರಿಗಳು ಮಾಡಿದ ಯಡವಟ್ಟಿನಿಂದ ರೈತ ಪರದಾಡುವಂತಾಗಿದ್ದು, ಕೂಡಲೇ ಅಧಿಕಾರಿಗಳು ಎಚ್ಚೆತ್ತುಕೊಂಡು ರೈತನಿಗೆ ನ್ಯಾಯ ಒದಗಿಸಿ ಕೊಡಬೇಕಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ