Ganesha in Mosques- ಕರ್ನಾಟಕ ಗಡಿಸಮೀಪದ ಈ ಪಟ್ಟಣದ ಮಸೀದಿಗಳಲ್ಲಿ 50 ವರ್ಷಗಳಿಂದಲೂ ಗಣೇಶ ಹಬ್ಬ ಆಚರಣೆ

Kurundwada town- ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯ ಶಿರೋಳ ತಾಲೂಕಿನ ಕುರಂದವಾಡ ಪಟ್ಟಣದ ಕೆಲ ಮಸೀದಿಗಳಲ್ಲಿ ಕಳೆದ 50 ವರ್ಷಗಳಿಂದಲೂ ಗೌರಿ ಗಣೇಶ ಹಬ್ಬ ಆಚರಿಸಿಕೊಂಡು ಬರಲಾಗುತ್ತಿದೆ. ಇಂಥ ಭಾವೈಕ್ಯತೆಯ ನಿದರ್ಶನ ಈಗೀಗ ಅಪರೂಪವಾಗುತ್ತಿದೆ.

ಕುರಂದವಾಡ ಪಟ್ಟಣದ ಮಸೀದಿಯೊಂದರಲ್ಲಿ ಗಣೇಶ ಪ್ರತಿಷ್ಠಾಪನೆ

ಕುರಂದವಾಡ ಪಟ್ಟಣದ ಮಸೀದಿಯೊಂದರಲ್ಲಿ ಗಣೇಶ ಪ್ರತಿಷ್ಠಾಪನೆ

  • Share this:
ಚಿಕ್ಕೋಡಿ: ದೇಶದಲ್ಲಿ ಕೆಲ ಕಾಣದ ಕೈಗಳು ಹಿಂದೂ ಮುಸ್ಲಿಂ ಎಂಬ ಭೇದದ ವಿಷ ಬೀಜವನ್ನು ಬಿತ್ತುತ್ತಲೇ ಇವೆ. ಆದ್ರೆ ಇಂಥ ಯಾವುದೇ ವಿಷದ ಬೀಜಕ್ಕೆ ಸೊಪ್ಪು ಹಾಕದೆ ಈ ಪಟ್ಟಣದ ನಿವಾಸಿಗಳು ಭಾವೈಕ್ಯತೆಯ ಸಂದೇಶ ಸಾರುತ್ತಿದ್ದಾರೆ. ಮುಸ್ಲಿಂ ಬಾಂಧವರು ಮಸೀದಿಯಲ್ಲಿ ಗಣೇಶನನ್ನ ಕೂರಿಸಿ (Muslim community celebrating Ganesha festival in mosques) ವಿಘ್ನ ನಿವಾರಕನ ಆರಾಧನೆ ಮಾಡುತ್ತಿದ್ದಾರೆ. ಹೀಗೆ ಮಸೀದಿಯಲ್ಲಿ ಗಣೇಶನನ್ನ ಪ್ರತಿಷ್ಠಾಪಿಸಿ ಆರಾಧನೆ ಮಾಡುತ್ತಿರುವುದು ಬೆಳಗಾವಿ ಜಿಲ್ಲೆ ಗಡಿಗೆ ಹೊಂದಿಕೊಂಡಿರುವ ಮಹಾರಾಷ್ಟ್ರದ ಕುರಂದವಾಡ (Kurundwada town in Kolhapura, Maharashtra) ಪಟ್ಟಣದಲ್ಲಿ.

ಕುರಂದವಾಡದಲ್ಲಿ ಹಿಂದು ಮುಸ್ಲಿಮ್ ಎಂಬ ಯಾವುದೇ ಭಾವನೆ ಇಟ್ಟುಕ್ಕೊಂಡು, ನಮ್ಮದು ಆ ಜಾತಿ ನಿಮ್ಮದು ಈ ಜಾತಿ ಎಂದು ಯಾವುದೆ ಭೇದ ಭಾವ ಇಲ್ಲದೆ, ಬಂದಂತಹ ಎಲ್ಲ ಹಬ್ಬಗಳನ್ನು ಎಲ್ಲರೂ ಸೇರಿಕ್ಕೊಂಡು ವಿಜೃಂಬನೆಯಿಂದ ಆಚರಣೆ ಮಾಡುತ್ತಾರೆ. ಕಳೆದ 50 ವರ್ಷಗಳಿಂದಲೂ ಇಲ್ಲಿನ ಮುಸ್ಲಿಮ್ ಸಮುದಾಯದ ಜನರು ಮಸಿದಿಗಳಲ್ಲಿ ಗಣಪತಿ ಹಬ್ಬವನ್ನು ಆಚರಣೆ ಮಾಡುತ್ತಾರೆ.

ಮಹಾರಾಷ್ಟ್ರ ರಾಜ್ಯದ ಕೊಲ್ಲಾಪೂರ ಜಿಲ್ಲೆಯ ಶಿರೋಳ ತಾಲೂಕಿನ ಕುರಂದವಾಡ ಪಟ್ಟಣ ಹಿಂದು ಮುಸ್ಲಿಮ್ ಜಾತಿಯ ಸಾಮರಸ್ಯದ ತಾಣವಾಗಿದ್ದು, ಪಟ್ಟಣದ ತುಂಬೆಲ್ಲಾ ಮಸಿದಿಗಳು ಮತ್ತು ದರ್ಗಾಗಳಲ್ಲಿ ಗೌರಿ ಗಣೇಶ ಹಬ್ಬವನ್ನು ಆಚರಣೆ ಮಾಡುತ್ತಾರೆ. ಪಟ್ಟಣದ ಬೈರಕಬಾರಿ ಮಸೀದಿ, ಕುಡೆಖಾನ್ ಮಸೀದಿ, ಕಾರಖಾನ ಪೀಠ ಮಸೀದಿ ಸೇರಿದಂತೆ ಸುಮಾರು 5 ಕ್ಕೂ ಹೆಚ್ಚು ಮಸೀದಿಗಳಲ್ಲಿ ಗೌರಿ ಗಣೆಶ ಹಬ್ಬವನ್ನು ಆಚರಿಸುತ್ತಾರೆ. ಇಲ್ಲಿ ಯಾವುದೆ ಕಾರಣಕ್ಕೂ ಹಿಂದು ಮುಸ್ಲಿಮ್ ಭೇದ ಭಾವ ಇಲ್ಲದೆ ಮುಸ್ಲಿಂ ಜನರು ಗಣಪತಿಯನ್ನ ಹಬ್ಬವನ್ನು ಹಿಂದು ಸಂಪ್ರದಾಯದಂತೆಯೇ ಆಚರಣೆ ಮಾಡುತ್ತಾರೆ. ದಿನನಿತ್ಯ ಭಕ್ತಿ ಗೀತೆಗಳನ್ನು ಹಾಡಿ ಅಲ್ಲಿ ದಿನನಿತ್ಯ ಆರಾಧನೆ ಮಾಡುತ್ತಾರೆ. ವಿಶೇಷ ಎಂದರೆ ಪ್ರತಿ 12 ವರ್ಷಕ್ಕೊಮ್ಮೆ ಮೊಹರಂ ಮತ್ತು ಗಣೇಶ ಚತುರ್ಥಿ ಹಬ್ಬ ಏಕಕಾಲಕ್ಕೆ ಬರುತ್ತೆ (Moharam and Ganesha Festival comes on same date once in 12 years). ಆ ಸಂದರ್ಭದಲ್ಲೂ ಒಂದಡೆ ಮೊಹರಂ, ಮತ್ತೊಂದಡೆ ಗೌರಿ ಗಣೇಶ ಹಬ್ಬವನ್ನು ಆಚರಣೆ ಮಾಡಲಾಗುತ್ತಿದೆ.

ಇದನ್ನೂ ಓದಿ: Oscar Fernandes- ಆಸ್ಕರ್ ಫರ್ನಾಂಡಿಸ್ ಓರ್ವ ಸರಳ ಸಜ್ಜನಿಕೆ ರಾಜಕಾರಣಿ: ಸಂಸದ ಡಿ.ಕೆ. ಸುರೇಶ್

ಮಹಾರಾಷ್ಟ್ರದ ಕುರಂದವಾಡ ಪಟ್ಟಣದ ಮಸೀದಿಗಳಲ್ಲಿ ಗೌರಿ ಗಣೇಶ ಹಬ್ಬವನ್ನು ಆಚರಣೆ ಮಾಡಿ ತನ್ನ ಪ್ರಾಮುಖ್ಯತೆ ಮತ್ತು ನಾವೆಲ್ಲರೂ ಒಂದೆ ಎಂಬ ಭಾವನೆಯಿಂದ ಏಕತೆಯನ್ನು ಸಾರುತ್ತದೆ. ಕುರಂದವಾಡ ಪಟ್ಟಣದಲ್ಲಿ ಈ ರೀತಿ ಇದ್ದರೆ, ನಮ್ಮ ಜನ ಮಾತ್ರ ಒಡೆದಾಳುವ ನೀತಿಯನ್ನು ಅನುಸರಿಸುತ್ತಾರೆ. ಆದರೆ ಸಮಾಜ ಚಿಂತಕರು ಇದರಲ್ಲಿ ಯಾವುದೆ ಭೇದ ಭಾವವನ್ನು ಮಾಡಬಾರದು. ನಾವೆಲ್ಲರೂ ಒಂದೇ ದೇಶದ ಪ್ರಜೆಗಳು. ಎಲ್ಲರೂ ಸೇರಿಕೊಂಡು ಎಲ್ಲ ಹಬ್ಬವನ್ನು ಆಚರಣೆ ಮಾಡಬೇಕು ಅಂತಾರೆ ನಿಜಕ್ಕೂ ಕುರಂದವಾಡ ಪಟ್ಟಣದ ಜನರು. ಈ ಪಟ್ಟಣದ ಮಸೀದಿಗಳಲ್ಲಿ ಗೌರಿ ಗಣೆಶ ಹಬ್ಬದ ಆಚರಣೆ ನಿಜಕ್ಕೂ ದೇಶದಲ್ಲಿಯೇ ಮಾದರಿಯಾಗಿದೆ.

ಒಟ್ಟಿನಲ್ಲಿ ಜಾತಿ ಭೇದ ಭಾವ ಎಂದು ಪ್ರಶ್ನೆ ಮಾಡಿ ಬಡಿದಾಡುವ ಜನರು ಇಂತಹ ಏಕತೆಯನ್ನು ಸಾರುವ ಕುರಂದವಾಡ ಪಟ್ಟಣದ ಮುಸಲ್ಮಾನ್ ಬಾಂಧವರನ್ನು ನೋಡಿ ಕಲಿಯಬೇಕು. ಕುರಂದವಾಡ ಭಾವೈಕ್ಯತೆಗೆ ಹೆಸರಾದ ಪಟ್ಟಣ. ಇಲ್ಲಿ ಯಾವುದೆ ಜಾತಿ ಭೇದ ಇಲ್ಲದೆ ಎಲ್ಲರೂ ಸೇರಿಕೊಂಡು ಎಲ್ಲರ ಹಬ್ಬವನ್ನು ಆಚರಣೆ ಮಾಡುತ್ತಿದ್ದಾರೆ. ಇನ್ನು ಮುಂದೆಯೂ ಇದೆ ರೀತಿಯಾಗಿ ಭಾವೈಕ್ಯತೆ ಮುಂದುವರೆಯಲಿ ಎಂಬುವದೆ ನಮ್ಮ ಆಶಯ.

ವರದಿ: ಲೋಹಿತ್ ಶಿರೋಳ
Published by:Vijayasarthy SN
First published: