Belagavi: ಚಿರತೆ ಹಿಡಿಯಲು ಆನೆ ತಂದರು, ಆನೆಗಾಗಿ ಕಬ್ಬು 'ಕದ್ದರು'

ಸದ್ಯ ಬೆಳಗಾವಿಯ ಅರಣ್ಯ ಇಲಾಖೆಯ ಕೆಲ ಅಧಿಕಾರಿಗಳು ಆನೆಗಳನ್ನು ಬಳಸಿ ಚಿರತೆ ಹಿಡಿಯುವುದು ಸುರಕ್ಷಿತ ಹಾಗೂ ಸುಲಭವಾಗುವುದೆಂಬ ಲೆಕ್ಕಾಚಾರ ಹಾಕಿದರು. ಇದು ಉತ್ತಮವೂ ಹೌದು ಎನ್ನಬಹುದು. ಆದರಂತೆ ಆನೆಗಳನ್ನೂ ಸಹ ತರಿಸಲಾಯಿತು. ಆನೆಯನ್ನೇನೋ ತಂದಿದ್ದಾಯಿತು. ಆದರೆ, ಆ ದೃಢಕಾಯ ಜೀವಿಗಳಿಗೆ ಆಹಾರ ಎಲ್ಲಿಂದ ಒದಗಿಸಬೇಕು? ಇದು ಅರಣ್ಯ ಅಧಿಕಾರಿಗಳಿಗೆ ಸ್ವಲ್ಪ ಚಿಂತೆಗೀಡು ಮಾಡಿದ್ದು ಇದಕ್ಕೆ ಕಂಡುಕೊಂಡ ಉಪಾಯ ನೋಡಿ

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಈಗಾಗಲೇ ಬೆಳಗಾವಿ (Belagavi) ಜನರಿಗೆಲ್ಲ ಗೊತ್ತಿರುವಂತೆ ಕಳೆದ ಹಲವು ದಿನಗಳಿಂದ ನಗರದ ಹಸಿರು ಹೆಚ್ಚಾಗಿರುವ ಗಾಲ್ಫ್ ಪ್ರದೇಶದಲ್ಲಿ ಚಿರತೆಯೊಂದು (Leopard) ಸೇರಿಕೊಂಡಿದೆ. ನಿತ್ಯವೂ ಅಲ್ಲಿನ ಜನರಿಗೆ ಓಡಾಡಲು ಒಂದು ರೀತಿಯ ಭಯದ ವಾತಾವರಣ ನಿರ್ಮಾಣವಾಗಿದೆ, ಏಕೆಂದರೆ ಯಾವ ಸಮಯದಲ್ಲಿ ಎಲ್ಲಿಂದ ಚಿರತೆ ಬಂದು ದಾಳಿ (Attack) ಮಾಡುವುದೋ ಎಂಬ ಭಯ ಜನರದ್ದು. ಅಲ್ಲದೆ, ಈ ಪ್ರದೇಶದ ವ್ಯಾಪ್ತಿಯಲ್ಲಿರುವ ಶಾಲೆಗಳಿಗೆ (School) ಮುನ್ನೆಚ್ಚರಿಕೆ ಕ್ರಮವಾಗಿ (Precautionary measure) ರಜೆಗಳನ್ನೂ ನೀಡಲಾಗಿದೆ. ಈ ಮಧ್ಯೆ ಚಿರತೆ ಹಿಡಿಯಲು ಅರಣ್ಯ ಅಧಿಕಾರಿಗಳು (Forest Officer) ಹರ ಸಾಹಸ ಪಡುತ್ತಿದ್ದಾರಾದರೂ ಇನ್ನೂ ಯಶಸ್ವಿಯಾಗಿಲ್ಲ.

ಈ ನಡುವೆ, ಚಿರತೆ ಹಿಡಿಯಲೆಂದು ಹಲವಾರು ಬಗೆಯ ಪ್ರಯತ್ನಗಳನ್ನು ಸ್ಥಳೀಯವಾಗಿ ಅರಣ್ಯ ಇಲಾಖೆಯ ಅಧಿಕಾರಿಗಳು ಮಾಡುತ್ತಲೇ ಇದ್ದಾರಾದರೂ ಚಿರತೆ ಮಾತ್ರ ಸಿಗುತ್ತಿಲ್ಲ. ಆದರೆ, ಆಗಾಗ ಕೆಲವರ ಕಣ್ಣಿಗೆ ಈ ಚಿರತೆ ಮಾತ್ರ ಬೀಳಿತ್ತಲೇ ಇದೆ. ಕೆಲ ದಿನಗಳ ಹಿಂದೆ ರೇಸ್ ಕೋರ್ಸ್ ರಸ್ತೆಯ ಬದಿಗುಂಟ ಚಿರತೆ ಓಡುತ್ತಿರುವುದನ್ನು ಬಸ್ ಚಾಲಕರೊಬ್ಬರು ಚಿತ್ರೀಕರಿಸಿದ್ದರು. ಅದಾದ ಬಳಿಕ ಚಿರತೆ ಹಿಡಿಯುವ ಕಾರ್ಯಕ್ರಮ ಮತ್ತೆ ಸಕ್ರಿಯವಾಯಿತಾದರೂ ಫಲಿತಾಂಶ ಮಾತ್ರ ಸಿಗುತ್ತಲೇ ಇಲ್ಲ.

ಚಿರತೆಯನ್ನು ಪತ್ತೆಹಚ್ಚಲು ಗಜರಾಜರ ಬಳಕೆ 
ಈ ಮಧ್ಯೆ ಸ್ಥಳೀಯ ಇಲಾಖೆಯ ಅಧಿಕಾರಿಗಳು ಮತ್ತೊಂದು ಆಲೋಚನೆಯನ್ನು ಮಾಡಿದರು. ಈ ನೂತನ ಆಲೋಚನೆಯಂತೆ ಅನುಕೂಲವಾಗಲೆಂದು ಅರಣ್ಯ ಅಧಿಕಾರಿಗಳು ಶಿವಮೊಗ್ಗದಿಂದ ಎರಡು ಗಜರಾಜರನ್ನು ತರಿಸಿಕೊಂಡಿದ್ದಾರೆ. ಹೌದು, ಸಾಮಾನ್ಯವಾಗಿ ಸಫಾರಿ ಸಂದರ್ಭದಲ್ಲೂ ಜನರು ಆನೆಗಳ ಮೇಲೆಯೇ ಸವಾರಿ ಮಾಡುತ್ತಾರೆ. ಏಕೆಂದರೆ ಆನೆಗಳನ್ನು ಬಳಸಿಕೊಂಡು ಕಲ್ಲು ಮುಳ್ಳುಗಳಿರುವ, ವಾಹನಗಳು ಓಡಾಡಲು ಬಾರದಂತಹ ಹುಲ್ಲುಗಾವಲಿನಲ್ಲೂ ನುಸುಳಬಹುದು ಹಾಗೂ ಆನೆಯು ಎತ್ತರವಿರುವುದರಿಂದ ಅದರಲ್ಲಿ ಸಾಗುವವರಿಗೆ ಸುರಕ್ಷತೆಯ ಜೊತೆ ದೂರದವರೆಗೂ ಏನಾದರೂ ಇದೆಯೇ ಎಂಬುದನ್ನು ಗಮನಿಸಬಹುದು.

ಇದನ್ನೂ ಓದಿ: Viral Video: ಇದು ಆನೆ ಬೀಡಿ ಎಳೆಯುವುದಾ ಅಥವಾ ಹೊಗೆ ಬಿಡುವುದಾ? ನೀವೇ ಹೇಳಿ

ಆನೆಗಳ ಆಹಾರಕ್ಕೆ ಅಧಿಕಾರಿಗಳು ಮಾಡಿದ್ದೇನು ನೋಡಿ 
ಹಾಗಾಗಿ, ಸದ್ಯ ಬೆಳಗಾವಿಯ ಅರಣ್ಯ ಇಲಾಖೆಯ ಕೆಲ ಅಧಿಕಾರಿಗಳು ಆನೆಗಳನ್ನು ಬಳಸಿ ಚಿರತೆ ಹಿಡಿಯುವುದು ಸುರಕ್ಷಿತ ಹಾಗೂ ಸುಲಭವಾಗುವುದೆಂಬ ಲೆಕ್ಕಾಚಾರ ಹಾಕಿದರು. ಇದು ಉತ್ತಮವೂ ಹೌದು ಎನ್ನಬಹುದು. ಆದರಂತೆ ಆನೆಗಳನ್ನೂ ಸಹ ತರಿಸಲಾಯಿತು. ಆನೆಯನ್ನೇನೋ ತಂದಿದ್ದಾಯಿತು. ಆದರೆ, ಆ ದೃಢಕಾಯ ಜೀವಿಗಳಿಗೆ ಆಹಾರ ಎಲ್ಲಿಂದ ಒದಗಿಸಬೇಕು? ಇದು ಅರಣ್ಯ ಅಧಿಕಾರಿಗಳಿಗೆ ಸ್ವಲ್ಪ ಚಿಂತೆಗೀಡು ಮಾಡಿದೆ. ಆದರೂ ಅರಣ್ಯ ಇಲಾಖೆಯ ಕೆಲ ಸಿಬ್ಬಂದಿ ಕಾನೂನು ಬಾಹಿರ ಅಥವಾ ಅಕ್ರಮವಾಗಿರುವ ಒಂದು ವಿಧಾನ ಅನುಷ್ಠಾನಕ್ಕೆ ತಂದೆಯೇ ಬಿಟ್ಟರು.

ಕಬ್ಬಿನ ಗದ್ದೆಯಿಂದ ಕಬ್ಬು ಕಳವು 
ಆ ವಿಧಾನದಂತೆ ಇಲಾಖಾ ಸಿಬ್ಬಂದಿ ನಗರದ ಹೊರವಲಯದ ಮುತಗಾ ಬಳಿಯಿದ್ದ ಕಬ್ಬಿನ ಗದ್ದೆಯೊಂದರಿಂದ ಬೆಳೆದು ನಿಂತ ಕಬ್ಬುಗಳನ್ನು ಕತ್ತರಿಸಿಕೊಂಡು ಹೋಗಿದ್ದಾರೆನ್ನಲಾಗಿದೆ. ಬುಧವಾರದ ನಸುಕಿನ ಸಮಯದಲ್ಲಿ ಈ ಕಬ್ಬು ಕದಿಯುವಿಕೆ ನಡೆದಿದ್ದು ತದನಂತರ ಬೆಳಕು ಹರಿದ ಮೇಲೆ ತಮ್ಮ ಗದ್ದೆಯತ್ತ ಬಂದ ರಾಜು ಕಣಬರ್ಕರ್ ಎಂಬುವರಿಗೆ ಕಬ್ಬುಗಳನ್ನು ಕಿತ್ತಿರುವುದು ಗೊತ್ತಾಗಿದೆ. ಒಟ್ಟು ಐದು ಕ್ವಿಂಟಾಲ್ ಗಳಷ್ಟು ಕಬ್ಬುಗಳನ್ನು ಕೀಳಲಾಗಿದೆ ಎಂದು ತಿಳಿದುಬಂದಿದೆ. ಸುದ್ದಿ ತಿಳಿದ ನಂತರ ಕೆಲವು ಗ್ರಾಮಸ್ಥರನ್ನು ಒಗ್ಗೂಡಿಸಿಕೊಂಡು ಆನೆಗಳು ಬಿಡಾರ ಹೂಡಿದ್ದ ಸ್ಥಳಕ್ಕೆ ಬಂದ ರೈತ ಅಧಿಕಾರಿಗಳನ್ನು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ:  Video: ಕಾಡಿನಲ್ಲಿ ಕಳೆದು ಹೋದ ಮರಿ ಆನೆಯನ್ನು ಮತ್ತೆ ಅದರ ಹಿಂಡಿನೊಂದಿಗೆ ಸೇರಿಸಿದ ಅರಣ್ಯ ಸಿಬ್ಬಂದಿ! ಈ ಸಂತಸದ ಕ್ಷಣವನ್ನೊಮ್ಮೆ ನೋಡಿ

ಮೊದ ಮೊದಲು ಇದನ್ನು ನಿರಾಕರಿಸಿದ್ದ ಕೆಲ ಅಧಿಕಾರಿಗಳು ತದನಂತರ ಇಲಾಖೆಯ ಸಿಬ್ಬಂದಿ ವರ್ಗ ಮಾಡಿದ್ದನ್ನು ಒಪ್ಪಿಕೊಂಡು ಇಲಾಖೆಯ ಮೇಲಾಧಿಕಾರಿಗಳು ಈ ಸಂಬಂಧ ಬೆಳೆ ಹೊತ್ತೊಯ್ದ ಬಗ್ಗೆ ಸಮೀಕ್ಷೆ ನಡೆಸಿ ಅದಕ್ಕೆ ಸೂಕ್ತ ಪರಿಹಾರವನ್ನು ನೀಡುವುದಾಗಿ ಹೇಳಿದ್ದಾರೆಂದು ತಿಳಿದುಬಂದಿದೆ. ಒಟ್ಟಿನಲ್ಲಿ, ಚಿರತೆ ಹಿಡಿಯುವ ಸವಾಲೇ ದೊಡ್ಡದಾಗಿರುವಾಗ ಅಧಿಕಾರಿಗಳಿಗೆ ಈಗ ಆನೆಯ ಹೊಟ್ಟೆ ತುಂಬಿಸುವುದೂ ಸಹ ಮತ್ತೊಂದು ದೊಡ್ಡ ಸವಾಲಾಗದಿರಲಿ ಎಂದು ಆಶಿಸುತ್ತೇವೆ. ಆನೆಗಳ ಊಟ ಸೇರಿದಂತೆ ನಿರ್ವಹಣೆಯ ಬಗ್ಗೆ ಇಲಾಖೆ ತ್ವರಿತವಾಗಿ ಕ್ರಮ ತೆಗೆದುಕೊಳ್ಳಲಿ.
Published by:Ashwini Prabhu
First published: