Son Killed by Father: 2 ವರ್ಷದ ಮಗನನ್ನೇ ಕೊಂದು ನಾಟಕವಾಡಿದ ಪಾಪಿ ತಂದೆ ಸಿಕ್ಕಿಬಿದ್ದಿದ್ದೇ ರೋಚಕ!

ಹೆತ್ತ ಮಗನನ್ನೇ ಕೊಂದು ಕುಟುಂಬಸ್ಥರೊಂದಿಗೆ ಮಗನನ್ನ ಹುಡುಕುವಂತೆ ಡ್ರಾಮಾ ಮಾಡಿದ್ದಾನೆ. ಇಷ್ಟೇ ಅಲ್ಲದೆ ಹಾರೂಗೇರಿ ಪೊಲೀಸ್ ಠಾಣೆಗೆ ತೆರಳಿ ಮಗ ಕಿಡ್ನಾಪ್ ಆಗಿದ್ದಾನೆ ಅಂತಾ ಕೇಸ್ ಕೊಟ್ಟಿದ್ದಾನೆ.

ಪಾಪಿ ತಂದೆ, ಕೊಲೆಯಾದ ಮಗು

ಪಾಪಿ ತಂದೆ, ಕೊಲೆಯಾದ ಮಗು

  • Share this:
ಬೆಳಗಾವಿ:  ಮೊನ್ನೆಯಷ್ಟೇ ಅಜ್ಜಿ ಮನೆಯಲ್ಲಿ ಹುಟ್ಟು ಹಬ್ಬ ಆಚರಿಸಿಕೊಂಡು ತಂದೆ ಮನೆಗೆ ಬಂದಿತ್ತು ಆ ಪುಟ್ಟ ಕಂದಮ್ಮ. ಹೀಗೆ ಬಂದಿದ್ದ ಮಗು ನಿನ್ನೆ ಸಂಜೆ ಇದ್ದಕ್ಕಿದ್ದಂತೆ ನಾಪತ್ತೆಯಾಗಿತ್ತು. ಈ ಕುರಿತು ಠಾಣೆಗೆ ದೂರು ಕೂಡ ನೀಡಿ ಮಗನನ್ನ ಹುಡುಕಿಕೊಡುವಂತೆ ಪೊಲೀಸರಿಗೆ ಮನವಿ ಮಾಡಿದ್ದ ತಂದೆ. ಇಂದು ಸಂಜೆ ಸ್ಥಳ ಪರಿಶೀಲನೆಗೆ ಬಂದ ಪೊಲೀಸರಿಗೆ ಮಗು ಕೊಳವೆ ಬಾವಿಗೆ ಬಿದ್ದಿರುವುದು ಗೊತ್ತಾಗಿದೆ. ಬೋರ್ ವೆಲ್ ನಲ್ಲಿ ಬಿದ್ದ ಮಗುವನ್ನು ರಕ್ಷಿಸಲು ಅಗ್ನಿಶಾಮಕ ಸಿಬ್ಬಂದಿ ಶ್ರಮಿಸುತ್ತಿದ್ದರು.  ಆದರೆ ಕೆಲವೇ ಕ್ಷಣಗಳಲ್ಲಿ ಚಿತ್ರಣ ಬದಲಾಗಿತ್ತು.

ಅಲ್ಲಿ ಮಗು ಬದುಕುತ್ತೆ ಅಂದುಕೊಂಡವರು ದಂಗಾಗಿ ಹೋಗಿದ್ದರು. ಅಷ್ಟಕ್ಕೂ ಮಗು ಬದುಕಲಿಲ್ಲ ಅನ್ನೋ ವಿಚಾರ ಗೊತ್ತಾಗುತ್ತಿದ್ದಂತೆ ತಾಯಿಯ ಆಕ್ರಂದನ ಮುಗಿಲು ಮುಟ್ಟಿದ್ರೇ ಊರಿನ ಜನರು ಒಂದು ಕ್ಷಣ ಶಾಕ್ ಆಗಿದ್ರೂ.  ರಾಯಬಾಗ ತಾಲೂಕಿನ ಆಲಖನೂರ ಗ್ರಾಮದ ಸಿದ್ದಪ್ಪ ಹಸರೆ  ಎಂಬುವವರ ಎರಡು ವರ್ಷದ ಮಗ ಶರತ್ ಬೋರ್ ವೆಲ್ ಗೆ ಮಗು ಬಿದ್ದಿದೆ ಅಂತಾ ಹರಸಾಹಸ ಪಟ್ಟು ಬದುಕಿಸಲು ಓಡಾಡ್ತಿದ್ದವರು. ಮಗು ಸತ್ತಿದೆ ಅಂತಾ ಗೊತ್ತಾಗುತ್ತಿದ್ದಂತೆ ಕೂಡಲೇ ಹಗ್ಗದಿಂದ ಮಗುವಿನ ಶವವನ್ನ ಅಗ್ನಿಶಾಮಕ ಸಿಬ್ಬಂದಿ ಹೊರ ತೆಗೆದ್ರೂ. ಇಷ್ಟೋತ್ತಿಗಾಗಲೇ ಪೊಲೀಸರು ಅದೊಬ್ಬನನ್ನ ಬಂಧಿಸಿ ತಮ್ಮದೇ ಸ್ಟೈಲ್ ನಲ್ಲಿ ವಿಚಾರಣೆ ಶುರು ಮಾಡಿದ್ದರು.‌ ಸ್ಥಳಕ್ಕೆ ಬಂದ ತಹಶೀಲ್ದಾರ್​​​ ಸ್ಥಳ ಪಂಚನಾಮೆ ಮಾಡಿ ಶವವನ್ನ ಪೋಸ್ಟ್ ಮಾರ್ಟ್ಂ ಗೆ ಕಳುಹಿಸಿದ್ದರು.

ಇಲ್ಲಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಿದ್ದು ಬೇರೆ ಯಾರನ್ನೂ ಅಲ್ಲಾ ಹೆತ್ತ ತಂದೆಯನ್ನೇ. ಮಗು ಶರತ್ ತಂದೆ ಸಿದ್ದಪ್ಪ ಹಸಿರೆ ಎಂಬಾತನೇ ಅರೆಸ್ಟ್ ಆಗಿದ್ದ. ಅಷ್ಟಕ್ಕೂ ಇಲ್ಲಿ ಪಾಪಿ ತಂದೆ ಸಿದ್ದಪ್ಪನೇ ಮಗನನ್ನ ಕೊಂದು ಬೋರ್ ವೆಲ್ ನಲ್ಲಿ ಎಸೆದು ಡ್ರಾಮಾ ಮಾಡಿ ಇದೀಗ ಸಿಕ್ಕಿಹಾಕಿಕೊಂಡು ಜೈಲು ಸೇರಿದ್ದಾನೆ. ಅಷ್ಟಕ್ಕೂ ಇಲ್ಲಿ ಆಗಿದ್ದು ಇಷ್ಟೇ ಈ ಸಿದ್ದಪ್ಪ ಕಳೆದ ಕೆಲ ವರ್ಷಗಳಿಂದ ಹಾಲಪ್ಪ ಎಂಬುವವರ ಜಮೀನು ಪಾಲು ತೆಗೆದುಕೊಂಡು ಉಳುಮೆ ಮಾಡುತ್ತಿದ್ದ. ಇಡೀ ಕುಟುಂಬವೇ ಅಲ್ಲಿ ಕಷ್ಟಪಟ್ಟು ದುಡಿದು ಜೀವನ ಕಟ್ಟಿಕೊಳ್ಳುತ್ತಿತ್ತು. ನಾಲ್ಕು ವರ್ಷದ ಹಿಂದೆ ರಾಜಶ್ರೀ ಎಂಬುವಳ ಜತೆಗೆ ಸಿದ್ದಪ್ಪ ಮದುವೆಯಾಗಿದ್ದು ಎರಡು ವರ್ಷದ ಶರತ್ ನಾಲ್ಕು ವರ್ಷದ ಇನ್ನೊಂದು ಗಂಡು ಮಗುವಿದೆ.

ಇದನ್ನೂ ಓದಿ: Love, Sex, Dhoka: ಪೊಲೀಸ್ ಠಾಣೆ ಎದುರೇ ಪ್ರಿಯಕರನಿಗೆ ಗೂಸಾ ಕೊಟ್ಟ ಯುವತಿ

2ನೇ ಮಗನನ್ನ ಕೊಲ್ಲಲೇಬೇಕು ಅಂದುಕೊಂಡ ಪಾಪಿ ಸಿದ್ದಪ್ಪ ನಿನ್ನೆ ಕುಟುಂಬಸ್ಥರಿಗೆ, ಹೆಂಡತಿಗೆ ನೀರು ಹಾಯಿಸೋದಿದೆ ನೀವು ಕೆಲಸಕ್ಕೆ ಹೋಗಿ ನಾನು ಜಮೀನು ನೋಡಿಕೊಳ್ಳುತ್ತೇನೆ ಅಂದಿದ್ದಾನೆ.‌ ಇದನ್ನ ನಂಬಿದ ಕುಟುಂಬಸ್ಥರು ಕೆಲಸಕ್ಕೆ ಹೋಗಿದ್ದಾರೆ. ಇತ್ತ ಸಿದ್ದಪ್ಪ ಮಗನನ್ನ ಮನೆಯಿಂದ ಮುನ್ನೂರು ಮೀಟರ್ ದೂರದಲ್ಲಿರುವ ಕಬ್ಬಿನ ಗದ್ದೆಗೆ ಕರೆದುಕೊಂಡು ಹೋಗಿದ್ದಾನೆ. ಅಲ್ಲಿ ಹೋಗಿ ಕತ್ತು ಹಿಸುಕಿ ಕೊಂದು ನಂತರ ಬೋರ್ ವೆಲ್ ಗೆ ಹಾಕಿ ವಾಪಾಸ್ ಬಂದಿದ್ದಾನೆ. ಇದಾದ ಬಳಿಕ ನಿನ್ನೆ ಸಂಜೆ ಎಲ್ಲರೂ ಮನೆಗೆ ವಾಪಾಸ್ ಆಗ್ತಿದ್ದಂತೆ ಮಗ ಕಾಣ್ತಿಲ್ಲ ಅಂತಾ ಹೇಳಿ ಕುಟುಂಬಸ್ಥರೊಂದಿಗೆ ಮಗನನ್ನ ಹುಡುಕುವಂತೆ ಡ್ರಾಮಾ ಮಾಡಿದ್ದಾನೆ. ಇಷ್ಟೇ ಅಲ್ಲದೆ ಹಾರೂಗೇರಿ ಪೊಲೀಸ್ ಠಾಣೆಗೆ ತೆರಳಿ ಮಗ ಕಿಡ್ನಾಪ್ ಆಗಿದ್ದಾನೆ ಅಂತಾ ಕೇಸ್ ಕೊಟ್ಟಿದ್ದಾನೆ.

ಕೇಸ್ ದಾಖಲಿಸಿಕೊಂಡು ಸ್ಥಳಕ್ಕೆ ಬಂದ ಪೊಲೀಸರು ಸಿದ್ದಪ್ಪನ ಕರೆದು ವಿಚಾರಣೆ ನಡೆಸಿದ್ದಾರೆ. ಆತ ಎಲ್ಲೇಲ್ಲಿ ಓಡಾಡ್ತಿದ್ದ ಅಂತಾ ಕೇಳಿದಾಗ ಬೋರ್ ವೆಲ್ ಬಳಿ ಕರೆದುಕೊಂಡು ಹೋಗಿ ನಾನು ನೀರು ಹಾಯಿಸುತ್ತಿದ್ದೆ ಆತ ಇಲ್ಲೇ ಆಟವಾಡ್ತಿದ್ದ ಅಂತಾ ಹೇಳಿದ್ದಾನೆ. ಆಗ ಇಣುಕಿ ನೋಡಿದ ಪೊಲೀಸರಿಗೆ ಮಗುವಿನ ದೇಹ ಕಾಣಿಸುತ್ತೆ. ಕೂಡಲೇ ಆತನನ್ನ ಹೊರ ತೆಗೆದಾವ ಮಗು ಮೃತಪಟ್ಟಿರುತ್ತದೆ.‌ ಇದರಿಂದ ಡೌಟ್ ಬಂದ ಪೊಲೀಸರು ತಂದೆ ಸಿದ್ದಪ್ಪನ ವಶಕ್ಕೆ ಪಡೆದು ಪೊಲೀಸ್ ಭಾಷೆಯಲ್ಲಿ ವಿಚಾರಣೆ ನಡೆಸಿದಾಗ ತಾನೇ ಮಗನನ್ನ ಕೊಂದಿರುವುದಾಗಿ ಒಪ್ಪಿಕೊಂಡಿದ್ದಾನೆ. ಕೂಡಲೇ ಅತನನ್ನ ಬಂಧಿಸಿದ ಪೊಲೀಸರು ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ. ಇತ್ತ ಮಗ ಸತ್ತಿರುವ ಸುದ್ದಿ ಕೇಳಿ ತಾಯಿಯ ಆಕ್ರಂದನ ಮುಗಿಲು ಮುಟ್ಟಿತ್ತು, ಕುಟುಂಬಸ್ಥರು ಗೋಳಾಡಿದ್ರೂ. ಇನ್ನೂ ರಾತ್ರಿ ಹನ್ನೊಂದು ಗಂಟೆ ಹೊತ್ತಿಗೆ ಮರಣೋತ್ತರ ಪರೀಕ್ಷೆ ನಡೆಸಿ ಶವ ಹಸ್ತಾಂತರ ಮಾಡ್ತಾರೆ. ಇತ್ತ ಸಿದ್ದಪ್ಪನ ಅಣ್ಣನ ಜಮೀನಿನಲ್ಲೇ ಬಾಲಕ ಶರತ್ ನ ಅಂತ್ಯಸಂಸ್ಕಾರವನ್ನ ಕುಟುಂಬಸ್ಥರು ನೆರವೇರಿಸಿದ್ದಾರೆ.

ಒಟ್ಟಾರೆ ಮಗನನ್ನ ಕೊಂದು ಕೊಳವೆಬಾವಿಗೆ ಹಾಕಿ ನಂತರ ಮಗ ಕಿಡ್ನಾಪ್ ಆಗಿದ್ದಾನೆ ಅಂತಾ ಡ್ರಾಮಾ ಮಾಡಿದ ತಂದೆ ಇದೀಗ ಅರೆಸ್ಟ್ ಆಗಿದ್ದಾನೆ. ಮಗನನ್ನ ಕಳೆದುಕೊಂಡ ತಾಯಿಗೆ ದಿಕ್ಕೆ ತೋಚದಂತಾಗಿದೆ. ಇತ್ತ ಮಗನನ್ನ ಅದ್ಯಾವ ಕಾರಣಕ್ಕೆ ತಂದೆ ಕೊಂದು ಬೋರ್ ವೆಲ್ ಗೆ ಎಸೆದ ಎಂಬುದು ಪೊಲೀಸರ ತನಿಖೆಯಿಂದಷ್ಟೇ ಹೊರ ಬರಬೇಕಿದೆ.
Published by:Kavya V
First published: