ಬೆಳಗಾವಿಯಲ್ಲಿ ಕಲರ್ ಫುಲ್ Fashion Show; 31 ಜನ ಮಾಡೆಲ್​ಗಳಿಂದ Cat Walk!

ಬೆಳಗಾವಿಗರ ವಿನ್ಯಾಸ ಫ್ಯಾಷನ್ ಶೋ ವೀಕೆಂಡ್ ಕಲರವ ಹೆಚ್ಚಿಸುವಂತೆ ಮಾಡಿದೆ. ಯಾವುದೇ ಕ್ಯಾಪಿಟಲ್ ಸಿಟಿ ಗೂ ಕಮ್ಮಿ ಇಲ್ಲದಂತೆ ವಿದ್ಯಾರ್ಥಿಗಳು ತಮ್ಮ ಪ್ರತಿಭೆ ಅನಾವರಣಗೊಳಿಸಿದ್ದಾರೆ. 

ಫ್ಯಾಷನ್​ ಶೋನಲ್ಲಿ ಹೆಜ್ಜೆ ಹಾಕಿದ ವಿದ್ಯಾರ್ಥಿ ಮಾಡೆಲ್​ಗಳು

ಫ್ಯಾಷನ್​ ಶೋನಲ್ಲಿ ಹೆಜ್ಜೆ ಹಾಕಿದ ವಿದ್ಯಾರ್ಥಿ ಮಾಡೆಲ್​ಗಳು

  • Share this:
ಬೆಳಗಾವಿ (ಅಕ್ಟೋಬರ್ 20): ಬೆಳಗಾವಿ ಕಲರ್ ಫುಲ್ ಫ್ಯಾಷನ್ ಶೋ (Colorful  Fashion Show In Belagavi)  ನಡೆಯಿತು. ಮಾದಕ ಚಲುವೆಯರ ಕ್ಯಾಟ್ ವಾಕ್ (Cat Walk) ನೋಡುಗರು ಕಣ್ಣು ಮಿಟುಕಿಸದಂತೆ ಮಾಡಿತು. ಮನಸ್ಸು ಹಿಡಿದಿಡುವ ಮ್ಯೂಸಿಕ್,  ಮ್ಯೂಸಿಕ್ ಬೀಟ್ ಗೆ ತಕ್ಕಂತೆ ಕ್ಯಾಟ್ ವಾಕ್ ಮಾಡೋ ಸುಂದರಿಯರು. ಇದನ್ನು ನೋಡಿ ಎಲ್ಲರೂ ಎಂಜಾಯ್ ‌ಮಾಡಿದರು. ಬೆಳಗಾವಿ ಜೀರಿಗೆ ಸಭಾಭವನದಲ್ಲಿ ಕೆಎಲ್ಇ ಸಂಸ್ಥೆ ಫ್ಯಾಷನ್ ಟೆಕ್ನಾಲಜಿ ಕಾಲೇಜಿನ ವಿದ್ಯಾರ್ಥಿಗಳು ವಿನ್ಯಾಸ 2021 ಫ್ಯಾಷನ್ ಶೋ ಕಲರವ ನಡೆಯಿತು. ಸಿಲಿಕಾನ್ ಸಿಟಿ ಬೆಂಗಳೂರಿಗೆ ಏನು ಕಮ್ಮಿ ಇಲ್ಲ ಅನ್ನೋ ರೀತಿ ಮಾಡೆಲ್ ಗಳ ಥಳಕು ಬಳಕು ನಡಿಗೆ ಎಲ್ಲರ ಕಣ್ಣು ಕಟ್ಟುವಂತೆ ಇತ್ತು. ಮಾಡೆಲ್ ಜಗತ್ತಿನ ಬೆಡಗಿ ಮಿಸ್ ಪ್ರಿನ್ಸೆಸ್ ಇಂಡಿಯಾ ಸ್ನೇಹಲ್ ಬಿರ್ಜೆ ಈ ಫ್ಯಾಷನ್ ಶೋಗೆ ಚಾಲನೆ ನೀಡಿದರು. ರ್ಯಾಂಪ್ ಮೇಲೆ 31 ಯುವ ಮಾಡೆಲ್ ಗಳು ಕ್ಯಾಟ್ ವಾಕ್ ಮಾಡಿದ್ರು. ಆಕರ್ಷಕ ಉಡುಪುಗಳನ್ನ ತೊಟ್ಟ ಸುಂದರಿಯರು ನೋಡುಗರನ್ನ ಮಂತ್ರ ಮುಗ್ಧಗೊಳಿಸಿದರು.

2006 ರಿಂದಲೂ ಕೆಎಲ್ಇ ಸಂಸ್ಥೆ ಫ್ಯಾಷನ್ ಟೆಕ್ನಾಲಜಿ ಕಾಲೇಜಿನಿಂದ ಈ ಫ್ಯಾಷನ್ ಶೋ ಆಯೋಜಿಸಿಕೊಂಡು ಬರಲಾಗುತ್ತಿದೆ. ಕೋವಿಡ್ ಇರುವುದರಿಂದ ಕಳೆದೆರಡು ವರ್ಷ ಫ್ಯಾಷನ್ ಶೋ ನಡೆದಿರಲಿಲ್ಲ. ಈ ಕಾಲೇಜಿನ ಅಂತಿಮ ವರ್ಷದ ವಿದ್ಯಾರ್ಥಿಗಳೇ ಒಂದೊಂದು ಥಿಮ್ ಗೆ ಅನುಸಾರವಾಗಿ ಡ್ರೇಸಗಳನ್ನು ಡಿಸೈನ್ ಮಾಡಿದ್ದಾರೆ. ಹೀಗೆ ವಿದ್ಯಾರ್ಥಿಗಳೇ ಸಂಶೋಧಿಸಿದ 30 ಥಿಮ್ ಗೆ 31 ಯುವ ಮಾಡೆಲ್ ಗಳು 150 ಬಾರಿ ರ್ಯಾಂಪ್ ಮೇಲೆ ಕ್ಯಾಟ್ ವಾಕ್ ಮಾಡಿದರು.

ಈ ವಿನ್ಯಾಸ 2021 ಫ್ಯಾಷನ್ ಶೋ ಬರೀ ಮನರಂಜನೆಗೆ ಮಾತ್ರ ಸೀಮಿತವಾಗಿರಲಿಲ್ಲ. ಫ್ಯಾಷನ್ ಡಿಸೈನಿಂಗ್ ವಿದ್ಯಾರ್ಥಿಗಳ ಪ್ರತಿ ಅನಾವರಣಕ್ಕೆ ಮತ್ತು ಯುವ ಮಾಡೆಲ್​ಗಳಿಗೆ ರ್ಯಾಂಪ್ ಮೇಲೆ ಕ್ಯಾಟ್ ವಾಕ್ ಮಾಡಲು ವೇದಿಕೆ ಆಗಿದೆ. ಅದರಲ್ಲೂ ಮಾಡೆಲಿಂಗ್ ಕ್ಷೇತ್ರದಲ್ಲಿ ಸಾಧನೆ ಮಾಡಬೇಕೆಂಬ ಬಯಕೆ ಇರುವ ಉತ್ತರ ಕರ್ನಾಟಕ ವಿದ್ಯಾರ್ಥಿಗಳಿಗೆ ಈ ಫ್ಯಾಷನ್ ಶೋ ಉತ್ತಮ ವೇದಿಕೆಯಾಗಿ ರೂಪುಗೊಂಡಿದೆ.

ಮಾಡೆಲ್ ಸ್ನೇಹಲ್ ಬಿರ್ಜೆ ಮಾತನಾಡಿ, ಮಾಡೆಲಿಂಗ್ ಕ್ಷೇತ್ರಕ್ಕೆ ತನ್ನದೇ ಆದ ಇತಿಹಾಸ ಇದೆ. ಬಣ್ಣದ ಲೋಕ ಸುಂದರವಾಗಿ ಕಾಣುತ್ತದೆ. ಹೀಗಾಗಿ ಜನ ಇಷ್ಟ ಪಡುತ್ತಾರೆ. ಕ್ಷೇತ್ರದಲ್ಲಿ ಸಾಧನೆ ಮಾಡಲು ತ್ಯಾಗ, ಪರಿಶ್ರಮದ ಅಗತ್ಯತೆ ಇದೆ. ಜಾಣ್ಮೆ, ವ್ಯವಹಾರ ಜ್ಞಾನ, ಚತುರತನ ಅವಶ್ಯಕತೆ ‌ಇದೆ ಎಂದರು.

ಕೆಎಲ್ಇ ಕಾಲೇಜಿನ ವೇದಶ್ರೀ ಮಾತನಾಡಿ, ಕಾಲೇಜಿನಲ್ಲಿ ತಂತ್ರಜ್ಞಾನ ಮತ್ತು ಉಡುಪು ವಿನ್ಯಾಸ ಮಹಿಳಾ ವಿದ್ಯಾಲಯ ಶಿಕ್ಷಣ  ಮತ್ತು ಫಲಿತಾಂಶ ಮಾತ್ರವಲ್ಲೇ ಫ್ಯಾಷನ್ ಕ್ಷೇತ್ರಕ್ಕೆ ಪೂರಕವಾದ ಸಂಸ್ಕೃತಿ ಹಾಗೂ ಉಡುಪು ವಿನ್ಯಾಸ, ಜ್ಞಾನಾರ್ಜನೆ ಒದಗಿಸಿದೆ ಎಂದರು.

ಇದನ್ನು ಓದಿ: Banashankari Women Murder Twist: 17 ವರ್ಷದ ಬಾಲಕನೊಂದಿಗೆ ಲವ್ವಿಡವ್ವಿ; ಆಂಟಿ ಪ್ರೀತ್ಸೆ ಲವ್ ಕಹಾನಿ ಕೊಲೆಯಲ್ಲಿ ಅಂತ್ಯ!

ಬೆಳಗಾವಿಗರ ವಿನ್ಯಾಸ ಫ್ಯಾಷನ್ ಶೋ ವೀಕೆಂಡ್ ಕಲರವ ಹೆಚ್ಚಿಸುವಂತೆ ಮಾಡಿದೆ. ಯಾವುದೇ ಕ್ಯಾಪಿಟಲ್ ಸಿಟಿ ಗೂ ಕಮ್ಮಿ ಇಲ್ಲದಂತೆ ವಿದ್ಯಾರ್ಥಿಗಳು ತಮ್ಮ ಪ್ರತಿಭೆ ಅನಾವರಣಗೊಳಿಸಿದ್ದಾರೆ.

ರಾಜ್ಯೋತ್ಸವ ಮೆರವಣಿಗೆ ಅವಕಾಶ ನೀಡುವಂತೆ ಮನವಿ

ಬೆಳಗಾವಿಯಲ್ಲಿ ಪ್ರತಿವರ್ಷ ಕನ್ನಡ ರಾಜ್ಯೋತ್ಸವವನ್ನು ಅದ್ಧೂರಿಯಾಗಿ ವಿಜೃಂಭಣೆಯಿಂದ ಆಚರಣೆ ಮಾಡಲಾಗುತ್ತದೆ. ಇದೇ ದಿನ ಎಂಇಎಸ್ ಸಹ‌ ಕನ್ನಡ ರಾಜ್ಯೋತ್ಸವದ ವಿರುದ್ಧವಾಗಿ ಕರಾಳ ದಿ‌ನ ಆಚರಣೆ ಮಾಡಿ ಉದ್ಧಟನ ಪ್ರದರ್ಶನ ಮಾಡುತ್ತದೆ. ಇಷ್ಟು ವರ್ಷ ಕಳೆದರೂ ಕರಾಳ‌ ದಿನಕ್ಕೆ ಕಡಿವಾಣ ಹಾಕಲು ರಾಜ್ಯ ಸರ್ಕಾರಕ್ಕೆ ಸಾಧ್ಯವಾಗಿಲ್ಲ. ಆದರೆ ಈ ಸಲ ಕೋವಿಡ್  ನೆಪ‌ ಹೇಳಿ ಸರ್ಕಾರ ಅದ್ಧೂರಿ ಕನ್ನಡ ರಾಜ್ಯೋತ್ಸವ ಮೆರವಣಿಗೆಗೆ ಕಡಿವಾಣ ಹಾಕಲು ಮುಂದಾಗಿದೆ. ಈ ವರೆಗೆ ಮೆರವಣಿಗೆಗೆ ಅವಕಾಶ ನೀಡಿಲ್ಲ. ಇದು ಬೆಳಗಾವಿ ಕನ್ನಡ ಪರ ಹೋರಾಟಗಾರ ಆಕ್ರೋಶಕ್ಕೆ ಕಾರಣವಾಗಿದೆ. ಧರಣಿ‌ ನಡೆಸಿ ಅಕ್ಟೋಬರ್ ‌22ರ ಒಳಗಾಗಿ ಸರ್ಕಾರ ಈ ಬಗ್ಗೆ ಸೂಕ್ತ ನಿರ್ಧಾರ ಪ್ರಕಟ ಮಾಡಬೇಕು ಎಂದು ಆಗ್ರಹ ಮಾಡಿವೆ.

ವರದಿ: ಚಂದ್ರಕಾಂತ ಸುಗಂಧಿ
Published by:HR Ramesh
First published: