ಉತ್ತರ ಕರ್ನಾಟಕದ ಮಹತ್ವಾಕಾಂಕ್ಷೆ ರೈಲು ಯೋಜನೆಗೆ (North Karnataka Raliway Project) ವಿರೋಧ ವ್ಯಕ್ತವಾಗಿದೆ. ಬೆಳಗಾವಿ To ಧಾರವಾಡ (Belagavi To Dharwad) ನೇರ ರೈಲು ಯೋಜನೆ ಮಾರ್ಗ ಬದಲಾವಣೆ ರೈತರು (Farmers) ಆಗ್ರಹಿಸುತ್ತಿದ್ದಾರೆ. ಅಭಿವೃದ್ಧಿ ಗೆ ನಮ್ಮ ವಿರೋಧವಿಲ್ಲ ಹಾಗಂತ ಫಲವತ್ತಾದ ಭೂಮಿಯನ್ನ ಸ್ವಾಧೀನ ಪಡಿಸಿಕೊಳ್ಳಲು ಬಿಡುವುದಿಲ್ಲ ಎಂದು ರೈತರು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. ದಿವಂಗತ ಸುರೇಶ್ ಅಂಗಡಿ (Suresh Angadi) ಕೇಂದ್ರ ರೈಲ್ವೆ ರಾಜ್ಯ ಸಚಿವರಾಗಿದ್ದಾಗ ಉತ್ತರ ಕರ್ನಾಟಕ ಜನತೆಯ ಮಹತ್ವಾಕಾಂಕ್ಷೆಯ ಬೆಳಗಾವಿಯಿಂದ ಧಾರವಾಡ ನೇರ ರೈಲು ಮಾರ್ಗ ಯೋಜನೆಗೆ ಮಂಜೂರು ಮಾಡಿದ್ದರು. ಈಗ ಈ ನೇರ ರೈಲು ಯೋಜನೆ ಮಾರ್ಗಕ್ಕೆ ರೈತರಿಂದ ವಿರೋಧ ವ್ಯಕ್ತವಾಗಿದೆ.
73 ಕಿಲೋ ಮೀಟರ್ ನೇರ ರೈಲು ಮಾರ್ಗ
ಬೆಳಗಾವಿಯಿಂದ ಧಾರವಾಡಕ್ಕೆ 73 ಕಿಲೋ ಮೀಟರ್ ನೇರ ರೈಲು ಮಾರ್ಗಕ್ಕೆ ಭೂಮಿ ಸ್ವಾಧೀನ ಕ್ಕೆ ಸರ್ಕಾರ ಮುಂದಾಗುತ್ತಿದ್ದು, ಇದನ್ನ ವಿರೋಧಿಸಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಮುಖಂಡ ಚೂನಪ್ಪ ಪೂಜಾರಿ ನೇತೃತ್ವದಲ್ಲಿ ರೈತರು ಪ್ರತಿಭಟನೆ ನಡೆಸಿದ್ದಾರೆ.
ಇದನ್ನೂ ಓದಿ: Belagavi; ರೈತರ ವಿರೋಧದ ಮಧ್ಯೆಯೂ ರಾಷ್ಟ್ರೀಯ ಹೆದ್ದಾರಿ 4 ಎ ಬೈಪಾಸ್ ರಸ್ತೆ ಕಾಮಗಾರಿ ಆರಂಭ
ರೈತರಿಂದ ಒಂದು ದಿನದ ಸಾಂಕೇಂತಿಕ ಹೋರಾಟ
ಬೆಳಗಾವಿ ಚನ್ನಮ್ಮ ವೃತ್ತದಿಂದ ಡಿಸಿ ಕಚೇರಿ ವರೆಗೂ ಪ್ರತಿಭಟನಾ ರ್ಯಾಲಿ ನಡೆಸಿದ ರೈತರು, ಡಿಸಿ ಕಚೇರಿ ಮುಂದೆ ಒಂದು ದಿನದ ಸಾಂಕೇತಿಕ ಹೋರಾಟ ನಡೆಸಿದ್ರು. ಸರ್ಕಾರದ ಬೆಳಗಾವಿಯಿಂದ ಧಾರವಾಡ ನೇರ ರೈಲು ಮಾರ್ಗ ಯೋಜನೆ ಗೆ ನಮ್ಮ ವಿರೋಧವಿಲ್ಲ. ಆದ್ರೆ ಬೆಳಗಾವಿ ತಾಲೂಕಿನ ಕೆ.ಕೆ.ಕೋಪ್ಪ, ದೇಸನೂರು, ನಂದಿಹಳ್ಳಿ ಗ್ರಾಮದಲ್ಲಿ ರೈತರು ತಮ್ಮ ಫಲವತ್ತಾದ ಭೂಮಿಯನ್ನ ಕಳೆದುಕೊಳ್ಳುತ್ತಾರೆ.
ಯಾವುದೇ ಕಾರಣಕ್ಕೂ ಫಲವತ್ತಾದ ಭೂಮಿ ನೀಡಲ್ಲ
ಈಗಾಗಲೇ ಬೆಳಗಾವಿ ಗ್ರಾಮೀಣ ಮತಕ್ಷೇತ್ರದ ರಾಷ್ಟ್ರೀಯ ಹೆದ್ದಾರಿ 4ರ ಹಲಗಾ ಮಚ್ಛೆ ಬೈಪಾಸ್ ರಸ್ತೆ, ರಿಂಗ್ ರೋಡ್ ಹಾಗೂ ಈಗ ರೈಲ್ವೆ ಯೋಜನೆ ಅಂತಾ ಭೂಮಿ ಸ್ವಾಧೀನ ಕ್ಕೆ ಸರ್ಕಾರ ಮುಂದಾಗಿದೆ. ಹೀಗಾಗಿ ನಾವು ಯಾವುದೇ ಕಾರಣಕ್ಕೂ ಫಲವತ್ತಾದ ಭೂಮಿ ನೀಡುವುದಿಲ್ಲ. ಬದಲಾಗಿ ಬಂಜರು ಭೂಮಿ ಇರುವ ಮಾರ್ಗವಾಗಿ ಯೋಜನೆಯನ್ನ ಅನುಷ್ಠಾನ ಗೊಳಿಸುವಂತೆ ರೈತರು ಆಗ್ರಹಿಸಿದ್ದಾರೆ.
927 ಕೋಟಿ ರೂಪಾಯಿ ಯೋಜನೆಗೆ ಸರ್ಕಾರದ ಗ್ರೀನ್ ಸಿಗ್ನಲ್
ಬೆಳಗಾವಿಯಿಂದ ಧಾರವಾಡ ನೇರ ರೈಲು ಮಾರ್ಗ ಯೋಜನೆಯ ಡಿಪಿಆರ್ ಅನ್ನ ಸುರೇಶ್ ಅಂಗಡಿ ಜೀವತವಿದ್ದಾಗಲೇ ಆಗಿದೆ. ಬೆಳಗಾವಿ ಕಿತ್ತೂರು ಧಾರವಾಡ ಮಾರ್ಗವಾಗಿ 73 ಕಿಲೋಮೀಟರ್ ಯೋಜನೆ ಇದಾಗಿದೆ. 927 ಕೋಟಿ ರೂಪಾಯಿ ಯೋಜನೆ ಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ ವೂ ಗ್ರೀನ್ ಸಿಗ್ನಲ್ ನೀಡಿದೆ.
ಇದನ್ನೂ ಓದಿ: ದೇವೇಗೌಡರಿಗೆ ಅವರ ಮಕ್ಕಳ ಮೇಲೆ ನಂಬಿಕೆ ಹೋಗಿದೆ: JDS MLA ಶ್ರೀನಿವಾಸ್ ಗೌಡ
ಹೀಗಾಗಿ ಭೂಮಿ ಸ್ವಾಧೀನಕ್ಕೆ ಜಿಲ್ಲಾಡಳಿತ ಸಿದ್ಧತೆ ನಡೆಸುತ್ತಿದೆ. ಆದ್ರೆ ಬೆಳಗಾವಿ ತಾಲೂಕಿನ ಕೆ.ಕೆ.ಕೋಪ್ಪ, ದೇಸನೂರ, ನಂದಿಹಳ್ಳಿ ಗ್ರಾಮದಲ್ಲಿ ಭೂಮಿ ಕಳೆದುಕೊಳ್ಳುವ ರೈತರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಸಂಸದೆ ಮಂಗಳಾ ಅಂಗಡಿ ಮನೆ ಮುಂದೆ ಪ್ರತಿಭಟನೆಯ ಎಚ್ಚರಿಕೆ
ಈಗಿರುವ ಮಾರ್ಗ ಬದಲಾವಣೆ ಗೆ ಸಂಸದೆ ಮಂಗಳಾ ಅಂಗಡಿ (MP Mangala Angadi) ವಿರೋಧಿಸುತ್ತಿದ್ದಾರೆ. ಸದ್ಯ ಜಿಲ್ಲಾಡಳಿತ ರೈತರು, ಸಂಸದರು,ಶಾಸಕರು ಮತ್ತು ರೈಲ್ವೆ ಇಲಾಖೆ ಅಧಿಕಾರಿಗಳ ಸಭೆಯನ್ನ ವಾರದಲ್ಲಿಯೇ ಕರೆಯುವುದಾಗಿ ಭರವಸೆ ಕೊಟ್ಟಿದ್ದಾರೆ.
ಸಭೆ ಕರೆದು ರೈಲು ಮಾರ್ಗ ಬದಲಾಯಿಸದಿದ್ದರೇ ಸಂಸದೆ ಮಂಗಳಾ ಅಂಗಡಿ ಮನೆ ಮುಂದೆ ಪ್ರತಿಭಟನೆ ನಡೆಸುವುದಾಗಿ ರೈತರು ಎಚ್ಚರಿಕೆ ನೀಡಿದ್ದಾರೆ. ಉತ್ತರ ಕರ್ನಾಟಕ ಜನತೆಯ ಮಹತ್ವಾಕಾಂಕ್ಷೆಯ ಯೋಜನೆಗೆ ರೈತರ ವಿರೋಧ ವ್ಯಕ್ತವಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ