ರಾಜ್ಯದಲ್ಲಿ ಹೆಚ್ಚು ಸಕ್ಕರೆ ಕಾರ್ಖಾನೆ(Sugar Factory) ಇರೋ ಜಿಲ್ಲೆ ಬೆಳಗಾವಿ(Belgaum) ಜಿಲ್ಲೆಯ ಇಡೀ ರಾಜಕಾರಣ ನಿರ್ಧಾರವಾಗೊದು ಸಕ್ಕರೆ ಲಾಭಿ ಇಂದಲೇ. ಇದು ಹಲವು ಸಂದರ್ಭಗಳಲ್ಲಿ ಸಾಬೀತು ಸಹ ಆಗಿದೆ. ಇಲ್ಲಿನ ಬಹುತೇಕ ರಾಜಕೀಯ ನಾಯಕರು ಸಕ್ಕರೆ ಕಾರ್ಖಾನೆ ಹೊಂದಿದ್ದಾರೆ. ಜಿಲ್ಲೆಯ 25 ಸಕ್ಕರೆ ಕಾರ್ಖಾನೆಗಳು ಪ್ರತಿ ವರ್ಷ ಕಬ್ಬು ನುರಿಸುತ್ತವೇ,ಸದ್ಯ ಪ್ರಸಕ್ತ ಹಂಗಾಮು ಆರಂಭವಾಗಿದೆ. ಒಂದು ಕಾರ್ಖಾನೆ ಇದ್ದವರು ಮತ್ತೊಂದು ಸಕ್ಕರೆ ಕಾರ್ಖಾನೆಯನ್ನು ಕೆಲವೇ ವರ್ಷಗಳಲ್ಲಿ ನಿರ್ಮಾಣ ಮಾಡಿದ್ದಾರೆ. ಆದರೇ ಕಾರ್ಖಾನೆಯ ಕಬ್ಬು ಕಳುಹಿಸುವ ರೈತನಿಗೆ ಮಾತ್ರ ಸಂಕಷ್ಟ ತಪ್ಪಿಲ್ಲ. ಜಿಲ್ಲೆಯಲ್ಲಿ ಕಾರ್ಖಾನೆ ಹಾಗೂ ರೈತರ ನಡುವೆ ನಿರಂತರ ಸಂಘರ್ಷ ನಡೆಯುತ್ತಲೇ ಇರುತ್ತದೆ.
ಬೆಳಗಾವಿ ಜಿಲ್ಲೆಯಲ್ಲಿ ಕಬ್ಬು ಬೆಳೆಗಾರರ ಹೋರಾಟ ನಿರಂತರ ನಡೆಯುತ್ತದೆ. ಪ್ರತಿ ವರ್ಷ ಕಾರ್ಖಾನೆಗಳ ವಿರುದ್ಧ ಹೋರಾಟ ಅನಿವಾರ್ಯ ಆಗಿದೆ. ವರ್ಷವಿಡೀ ಕಷ್ಟಪಟ್ಟು ಕಬ್ಬು ಬೆಳೆದು ಕಾರ್ಖಾನೆಗೆ ಸಾಗಾಟ.ನಂತರ ಹಣಕ್ಕಾಗಿ ಹೋರಾಟ ನಡೆಸುವುದು ಜಿಲ್ಲೆಯಲ್ಲಿ ಅನಿವಾರ್ಯವಾಗಿದೆ. ಸರ್ಕಾರ ಕಬ್ಬು ಕಾರ್ಖಾನೆಗೆ ಕಳುಹಿಸಿದ 14 ದಿನಗಳಲ್ಲಿ ಹಣ ಪಾವತಿ ಮಾಡಬೇಕು ಎಂದು ನಿಯಮ ಮಾಡಿದೆ. ಎಸ್ ಎಪಿ ಕಾನೂನು ಯಾವೊಬ್ಬ ಕಾರ್ಖಾನೆಗಳ ಮಾಲೀಕರು ಪಾಲಿಸಲ್ಲ.
ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ಎಂ ಕೆ ಹುಬ್ಬಳ್ಳಿ ಬಳಿ ಇರೋ ಮಲಪ್ರಭಾ ಸಕ್ಕರೆ ಕಾರ್ಖಾನೆ ಸಾವಿರಕ್ಕೂ ಹೆಚ್ಚು ರೈತರ ಬಾಕಿ ಹಣ ಉಳಿಸಿಕೊಂಡಿದೆ. ಕಾರ್ಖಾನೆ ರೈತರ ಹಿತ ಕಾಪಾಡುವ ವಚನ ನೀಡಿ ಅಧಿಕಾರಕ್ಕೆ ಬಂದ ಅಧ್ಯಕ್ಷರು ಹಾಗೂ ಆಡಳಿತ ಮಂಡಳಿ ವಿರುದ್ಧ ರೈತರು ಆಕ್ರೋಶ ಹೊರ ಹಾಕಿದ್ದಾರೆ.
ಇದನ್ನೂ ಓದಿ: ಹುಟ್ಟಿದಾಗ ಹೆಣ್ಣು ಮಗು ಅಂದ್ರು, ಡಿಸ್ಚಾರ್ಜ್ ವೇಳೆ ಗಂಡು ಮಗು ಕೊಟ್ರು.. Mangalore Hospital ಯಡವಟ್ಟು!
ಎಂ ಕೆ ಹುಬ್ಬಳ್ಳಿ ರೈತ ಶಿವಾನಂದ ಬೋಗುರು ಕಳೆದ ಮೂರು ವರ್ಷಗಳಿಂದ ಬಾಕಿ ಹಣ ಪಡೆಯಲು ಹೋರಾಟ ನಡೆಸುತ್ತಿದ್ದಾರೆ. 2017- 18 ರಲ್ಲಿ ಎಂ ಕೆ ಹುಬ್ಬಳ್ಳಿ ಮಲಪ್ರಭಾ ಸಕ್ಕರೆ ಕಾರ್ಖಾನೆಗೆ 114 ಟನ್ ಕಬ್ಬು ಕಳುಹಿಸಿದ್ಧ. ಕಾರ್ಖಾನೆಯಿಂದ ಟನ್ಗೆ 2200 ರೂಪಾಯಿ ಅಂತೆ ಹಣ ಪಾವತಿ ಆಗಿದೆ. ಒಂದು ಟನ್ 600 ರೂಪಾಯಿ ಹಣ ಬಾಕಿ ಉಳಿಸಿಕೊಂಡಿದೆ. ಬಾಕಿ ಹಣ ಪಡೆಯಲು ಕಳೆದ ಮೂರು ವರ್ಷಗಳಿಂದ. ಶಿವಾನಂದ ಹೋರಾಟ ನಡೆಸುತ್ತಿದ್ದಾರೆ.
ಕೆಲ ತಿಂಗಳ ಹಿಂದೆ ರೈತ ತಾನೇ ತನ್ನ ಸಮಾಧಿ ನಿರ್ಮಾಣ ಮಾಡಿಕೊಂಡು ಧರಣಿ ಮಾಡಿದ್ದನು. ಈ ವೇಳೆ ಬಾಕಿ ಹಣ ಕೊಡುವ ಭರವಸೆ ನೀಡಿದ್ದ ಕಾರ್ಖಾನೆ ಅಧ್ಯಕ್ಷ ನಾಸೀರ್ ಭಾಗವಾನ್. ಈ ವಿಚಾರ ಮುಂದಿಟ್ಟುಕೊಂದು ಕಾರ್ಖಾನೆ ಚುನಾವಣೆಯಲ್ಲಿ ಪ್ರಚಾರ ನಡೆಸಿದ್ದರು. ಗೆದ್ದ ಬಳಿ ಹಣ ಕೊಡಲು ಬರಲ್ಲ ಎಂದು ಉಡಾಫೆ ಉತ್ತರ ನೀಡುತ್ತಿದ್ದಾರೆ.
ಇದನ್ನೂ ಓದಿ: ಕಾಲಿಗೆ ಕಟ್ಟಿಗೆಯ ಗೂಟ ಹೊಡೆದುಕೊಂಡು ಸರಪಳಿ ಹರಿದುಕೊಂಡರು: ಈ ಆಚರಣೆ ನೋಡಿದ್ರೆ ಮೈಜುಮ್ ಅನ್ನುತ್ತೆ ..!
80 ಸಾವಿರ ಹಣ ಪಡೆಯಲು ನಿರಂತರ ಹೋರಾಟ ಮಾಡುತ್ತಿರೋ ಶಿವಾನಂದ ಬೋಗುರು ಅಷ್ಟೇ ಅಲ್ಲ 1400 ರೈತರಿಗೆ ಸಿಕ್ಕಿಲ್ಲ ಹಣ, 7 ಕೋಟಿ ರೂಪಾಯಿ ಹಣ ಬಾಕಿ ಉಳಿಸಿಕೊಂಡ ಕಾರ್ಖಾನೆ ಎಂಬುದು ರೈತ ಮುಖಂಡರ ಆರೋಪ.
ವರದಿ: ಚಂದ್ರಕಾಂತ್ ಸುಗಂಧಿ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ