Belagavi: ಮಾಜಿ ಸೈನಿಕನ‌ ಹುಚ್ಚಾಟ: 5 ಸುತ್ತು ಗುಂಡು ಹಾರಿಸಿದ ವಿಡಿಯೋ ವೈರಲ್

ಮಾರ್ಚ್ 27ರಂದು ಎಲಿಮುನ್ನೋಳಿ ಗ್ರಾಮದಲ್ಲಿ ಆಯೋಜಿಸಿದ್ದ ಮದುವೆ ಸಮಾರಂಭದಲ್ಲಿ ಈ ಘಟನೆ ನಡೆದಿದೆ. ಎಲಿಮುನ್ನೋಳಿ ಗ್ರಾಮದ ರಫಿಕ್ ಅಹಮ್ಮದ ತಹಶೀಲ್ದಾರ್ ಗುಂಡಿನ ಸುರಿಮಳೆಗೈದ ಮಾಜಿ ಯೋಧ.

ಫೈರಿಂಗ್

ಫೈರಿಂಗ್

  • Share this:
ಉತ್ತರ ಭಾರತದ ಮದುವೆ (North India Wedding) ಸಮಾರಂಭಗಳಲ್ಲಿ ಗಾಳಿಯಲ್ಲಿ ಗುಂಡು (Firing) ಹಾರಿಸುವ ಸಂಪ್ರದಾಯವಿತ್ತು. ಆದರೆ ಈ ಕಾನೂನುಗಳ ಕಠಿಣವಾಗಿರುವ ಹಿನ್ನೆಲೆ ಇಂತಹ ಪದ್ಧತಿ ಮತ್ತು ಸಂಪ್ರದಾಯಗಳಿಗೆ ಬ್ರೇಕ್ ಹಾಕಲಾಗಿದೆ. ಆದ್ರೂ ಕೆಲವು ಕಡೆ ಕದ್ದುಮುಚ್ಚಿ ಗುಂಡು ಹಾರಿಸಲಾಗಿರುತ್ತದೆ. ದಕ್ಷಿಣ ಭಾರತದ ಮದುವೆಗಳ (South India Wedding) ಅಂದ್ರೆ ಈ ರೀತಿಯ ಯಾವುದೇ ಜೀವಕ್ಕೆ ಅಪಾಯವುಂಟ ಮಾಡುವ ಆಚರಣೆಗಳು ಇರಲ್ಲ. ಎರಡೂ ಕುಟುಂಬಗಳನ್ನು (Family) ಒಂದು ಮಾಡುವ ಅಥವಾ ಸನೀಹಕ್ಕೆ ತರುವಂತೆ ಶಾಸ್ಯ್ರಗಳು ಹೆಚ್ಚಾಗಿ ಇರುತ್ತವೆ. ಬೆಳಗಾವಿ ಜಿಲ್ಲೆಯ ಹುಕ್ಕೇರಿ (Hukkeri, Belagavi) ತಾಲೂಕಿನ ಎಲಿಮುನ್ನೋಳಿ ಗ್ರಾಮದಲ್ಲಿ ಮಾಜಿ ಸೈನಿಕನೋರ್ವ (Ex Soldier) ತನ್ನ ಬಂದೂಕಿನಿಂದ ಗುಂಡಿನ ಸುರಿಮಳೆಗೈದಿದ್ದಾನೆ. ಸದ್ಯ ಈ ವಿಡಿಯೋ (Viral video) ಸೋಶಿಯಲ್ ಮೀಡಿಯಾ(Social Media)ದಲ್ಲಿ ವೈರಲ್ ಆಗಿದೆ.

ಮಾರ್ಚ್ 27ರಂದು ಎಲಿಮುನ್ನೋಳಿ ಗ್ರಾಮದಲ್ಲಿ ಆಯೋಜಿಸಿದ್ದ ಮದುವೆ ಸಮಾರಂಭದಲ್ಲಿ ಈ ಘಟನೆ ನಡೆದಿದೆ. ಎಲಿಮುನ್ನೋಳಿ ಗ್ರಾಮದ ರಫಿಕ್ ಅಹಮ್ಮದ ತಹಶೀಲ್ದಾರ್ ಗುಂಡಿನ ಸುರಿಮಳೆಗೈದ ಮಾಜಿ ಯೋಧ. ರಫಿಕ್ ಅಹಮದ್ ಗುಂಡು ಹಾರಿಸುತ್ತಿದ್ದಂತೆ ಮದುವೆಗೆ ಆಗಮಿಸಿದ್ದ ಅತಿಥಿಗಳೆಲ್ಲ ಆತಂಕಕ್ಕೆ ಒಳಗಾಗಿದ್ದಾರೆ.

ರಫಿಕ್ ಅಹಮದ್ ಪರವಾನಿಗೆ ಪಡೆದುಕೊಂಡಿರುವ ಗನ್ ನಿಂದಲೇ 5 ಸುತ್ತು ಗುಂಡು ಹಾರಿಸಿರುವ ಮಾಹಿತಿ ಲಭ್ಯವಾಗಿದೆ. ಇನ್ನು ಈ ವಿಷಯ ತಿಳಿಯುತ್ತಲೇ ಹುಕ್ಕೇರಿ ಠಾಣಾ ಪೊಲೀಸರು ಸುಮೋಟೋ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮದುವೆ ಬಳಿಕ ಗಾಳಿಯಲ್ಲಿ ಗುಂಡು ಹಾರಿಸಿದ ವಧು

ಉತ್ತರ ಭಾರತದ ರಾಜ್ಯಗಳ ಮದುವೆಗಳಲ್ಲಿ ಗುಂಡು ಹಾರಿಸೋದು ಸಾಮಾನ್ಯ. ಆದ್ರೆ ಇಂತಹ ಸಂದರ್ಭದಲ್ಲಿ ಸಾವು ನೋವುಗಳು ಸಂಭವಿಸುತ್ತಿರುತ್ತವೆ. ಇನ್ನೂ ಈ ರೀತಿ ಗುಂಡು ಹಾರಿಸೋದು ಕಾನೂನುಬಾಹಿರ.
View this post on Instagram


A post shared by Deepesh Thakur (@deepesh966)


ಕೆಂಪು ಮತ್ತು ಮೆಜೆಂಟಾ ಲೆಹೆಂಗಾ ಧರಿಸಿರುವ ವಧು, ಮೂರು ಸುತ್ತು ಗುಂಡು ಹಾರಿಸುತ್ತಾಳೆ.  ನಂತರ ಕೈಯಲ್ಲಿರುವ ಗನ್ ನನ್ನು ಮತ್ತೊಬ್ಬರಿಗೆ ಹಸ್ತಾಂತರಿಸುತ್ತಾಳೆ. deepesh966 ಇನ್ ಸ್ಟಾಗ್ರಾಂನಲ್ಲಿ ವಿಡಿಯೋ ಅಪ್ಲೋಡ್ ಮಾಡಲಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇನ್ನೂ ವಿಡಿಯೋ ನೋಡಿದ ನೆಟ್ಟಿಗರು, ಈ ವಧುವನ್ನು ಮದುವೆಯಾಗುವ ಗಂಡ ಹುಷಾರ್ ಆಗಿರಬೇಕು. ಈಗಲೇ ಹಿಂದೆ, ಮುಂದೆ ಹೆಂಗೆ ಎಂದು ಕಮೆಂಟ್ ಮಾಡಿದ್ದಾರೆ.

ಇದನ್ನೂ ಓದಿ:  ಮದುವೆ ಆಗ್ಬೇಕಾಗಿದ್ದವ ಸೆಲ್ಫಿ ವಿಡಿಯೋ ಮಾಡಿ Suicide ಮಾಡಿಕೊಂಡ! ಆತನ ಸಾವಿನ ಹಿಂದಿತ್ತು ವಿವಾಹಿತೆಯ ನೆರಳು!

ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರೆಯಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ನೋ ಎಂಟ್ರಿ

ರಾಜ್ಯದಲ್ಲಿ ಹಿಜಾಬ್ ಬಳಿಕ ನಡೆದ ಬೆಳವಣಿಗೆಯ ಬಳಿಕ ದಕ್ಷಿಣಕನ್ನಡ (Dakshina Kannada) ಜಿಲ್ಲೆಯ ಹಲವು ದೇವಸ್ಥಾನಗಳ (Temple) ಜಾತ್ರೋತ್ಸವದಲ್ಲಿ ಹಿಂದೂ ಧರ್ಮದವರನ್ನು ಹೊರತುಪಡಿಸಿ ಅನ್ಯಧರ್ಮೀಯರಿಗೆ ವ್ಯಾಪಾರಕ್ಕೆ ಅವಕಾಶವನ್ನು ನಿಶೇಧಿಸಲಾಗುತ್ತಿದೆ. ಈಗಾಗಲೇ ಜಿಲ್ಲೆಯ ಹಲವು ಪ್ರಮುಖ ದೇವಸ್ಥಾನಗಳ ಜಾತ್ರೋತ್ಸವದಲ್ಲಿ ಈ ನಿಶೇಧ ಜಾರಿಯಾಗಿದ್ದು, ಜಿಲ್ಲೆಯ ಅತ್ಯಂತ ದೊಡ್ಡ ಜಾತ್ರೆ ಎಂದೇ ಹೆಸರುವಾಸಿಯಾಗಿರುವ ಪುತ್ತೂರು ಮಹಾಲಿಂಗೇಶ್ವರ (Puttur Mahalingeshwara) ದೇವಸ್ಥಾನದ ಜಾತ್ರೆಯಲ್ಲಿ ಈ ಬಾರಿ ಅನ್ಯಮತೀಯರಿಗೆ ಕಟ್ಟುನಿಟ್ಟಿನ ನಿಶೇಧ ಹೇರಲಾಗಿದೆ. ಜಾತ್ರೋತ್ಸವದ ಪ್ರಯುಕ್ತ ವ್ಯಾಪಾರಕ್ಕಾಗಿ ಜಾತ್ರೆ ಗದ್ದೆಯ ಏಲಂ ಪ್ರಕ್ರಿಯೆಯೂ ನಡೆದಿದ್ದು, ಯಾವುದೇ ಕಾರಣಕ್ಕೂ ಅನ್ಯಮತೀಯರಿಗೆ ಸಂಪೂರ್ಣ ನಿಷೇಧ ಹೇರಲಾಗಿದೆ.

ಅನ್ಯಧರ್ಮೀಯರ ಪಾಲ್ಗೊಳ್ಳುವಿಕೆಗೆ ವಿರೋಧ

ಪ್ರಮುಖವಾಗಿ ಜಿಲ್ಲೆಯ ಹಲವು ದೇವಸ್ಥಾನಗಳಲ್ಲಿ ನಡೆಯುವ ಜಾತ್ರೋತ್ಸವದಲ್ಲಿ ಹಿಂದೂ ಧರ್ಮದವರನ್ನು ಹೊರತುಪಡಿಸಿ ಅನ್ಯಧರ್ಮೀಯರ ಪಾಲ್ಗೊಳ್ಳುವಿಕೆಗೆ ವಿರೋಧ ವ್ಯಕ್ತವಾಗಿತ್ತು. ಅಲ್ಲದೆ ಜಾತ್ರೋತ್ಸವ ಸಂದರ್ಭದಲ್ಲಿ ದೇವಸ್ಥಾನಕ್ಕೆ ಸಂಬಂಧಪಟ್ಟ ಜಾಗದಲ್ಲಿ ಅನ್ಯಮತೀಯರಿಗೆ ವ್ಯಾಪಾರಕ್ಕೆ ಅವಕಾಶವನ್ನೂ ನಿರಾಕರಿಸಲಾಗಿತ್ತು.

ಇದನ್ನೂ ಓದಿ:  Murder Case: ಗುರಾಯಿಸಿದ ಎಂಬ ಕಾರಣಕ್ಕೆ ಯುವಕನನ್ನೇ ಕೊಂದಿದ್ದ ಪಾಪಿಗಳು! ಹಂತಕರಿಗೆ ಈಗ ಜೀವಾವಧಿ ಶಿಕ್ಷೆ

ಜಿಲ್ಲೆಯ ಪ್ರಮುಖ ಹಾಗೂ ಅತೀ ದೊಡ್ಡ ಜಾತ್ರೆ

ಇದೀಗ ಜಿಲ್ಲೆಯ ಪ್ರಮುಖ ಹಾಗೂ ಅತೀ ದೊಡ್ಡ ಜಾತ್ರೆ ಎಂದೇ ಹೆಸರುವಾಸಿಯಾಗಿರುವ ಪುತ್ತೂರಿನ ಮಹಾಲಿಂಗೇಶ್ವರ ದೇವಸ್ಥಾನದ ಬಾರಿಯಾಗಿದ್ದು, ಸುಮಾರು 10 ದಿನಗಳ ಕಾಲ ನಡೆಯಲಿರುವ ಈ ಜಾತ್ರೆಯಲ್ಲಿ ವ್ಯಾಪಾರಕ್ಕಾಗಿ ಊರ ಹಾಗೂ ಪರವೂರಿನ ವ್ಯಾಪಾರಿಗಳು ಇಲ್ಲಿ ಬಂದು ಸೇರುತ್ತಾರೆ.
Published by:Mahmadrafik K
First published: