HOME » NEWS » State » BELGAUM ELDERLY COUPLE RECOVERED FROM CORONA IN BELAGAVI CSB KVD

99ರ ಇಳಿ ವಯಸ್ಸಿನಲ್ಲೂ ಕೊರೊನಾ ಗೆದ್ದ ದಂಪತಿ : ಒಳ್ಳೆಯ ಊಟವೇ ಸೋಂಕಿಗೆ ಮದ್ದಂತೆ..!

ಧೃತಿಗೆಡದೆ  ಬಾಬುರಾವ್ ಧೈರ್ಯ ತಂದುಕೊಂಡು  ಮನೆಯಲ್ಲೇ  ಚಿಕಿತ್ಸೆ ಪಡೆದುಕೊಂಡು ಗುಣಮುಖರಾಗಿದ್ದಾರೆ.

news18-kannada
Updated:June 11, 2021, 9:47 PM IST
99ರ ಇಳಿ ವಯಸ್ಸಿನಲ್ಲೂ ಕೊರೊನಾ ಗೆದ್ದ ದಂಪತಿ : ಒಳ್ಳೆಯ ಊಟವೇ ಸೋಂಕಿಗೆ ಮದ್ದಂತೆ..!
ವೃದ್ಧ ದಂಪತಿ
  • Share this:
ಬೆಳಗಾವಿ: ಇಡೀ ದೇಶವನ್ನು ಕೊರೊನಾ ಸೋಂಕಿನ ಎರಡನೇ ಕಾಡುತ್ತಿದೆ. ಈ ಸಲ ಅನೇಕ ಯುವಕರು ಸೋಂಕಿಗೆ ಬಲಿಯಾಗಿದ್ದಾರೆ. ಇದರಿಂದ ಅದೆಷ್ಟೋ ಕುಟುಂಬಗಳು ಬೀದಿ ಪಾಲಾಗಿವೆ. ಇಂತಹ ಅನೇಕ ಕಹಿ ಘಟನೆಗಳು ನಿತ್ಯ ಕೇಳುತ್ತೇವೆ. ಆದರೇ ಬೆಳಗಾವಿ ವೃದ್ಧ ದಂಪತಿ ಮಾತ್ರ ನಮ್ಮೊಂದಿಗೆ ಆತ್ಮಬಲ, ಧೈರ್ಯ ಇದ್ರೆ ಎಂತಹ ಪರಿಸ್ಥಿತಿಯಲ್ಲೂ ಗೆಲ್ಲಬಹುದು ಎಂಬುದಕ್ಕೆ ಸಾಕ್ಷಿ ಆಗಿದ್ದಾರೆ. ಕೊರೊನ ವೈರಸ್ ನ್ನ ಮೆಟ್ಟಿ ನಿಂತು ಆತ್ಮಬಲದಿಂದ  ಮನೆಯಲ್ಲೇ ಕರೋನ ವಿರುದ್ಧ  ಹೋರಾಡಿ ಜಯಗಳಿಸುವ ಮೂಲಕ ಮಾದರಿಯಾಗಿದ್ದಾರೆ.

ಕೊರೊನಾ ಸೋಂಕು ತಗುಲಿದೆ ಅಂತಾ ಗೊತ್ತಾದ್ರೆ ಸಾಕು ಜೀವನದಲ್ಲಿ ಜಿಗುಪ್ಸೆ ಹೊಂದಿ ಧೃತಿಗೆಟ್ಟು ಚಿಂತಾಜನಕರಾಗಿರುತ್ತಾರೆ. ಆದ್ರೆ ಆತ್ಮಬಲ, ಧೈರ್ಯ ಇದ್ರೆ ಸಾಕು ಕೊರೊನಾ ಎದುರಿಸಬಹುದ ಎನ್ನುವುದಕ್ಕ ಈ ವೃದ್ಧ ದಂಪತಿ ಸಾಕ್ಷಿ. ಬಾಬುರಾವ್ ವಾಳ್ವೆಕರ್ ವಯಸ್ಸು (99) ಬೆಳಗಾವಿ ಶಿವಬಸವ ನಗರದ ನಿವಾಸಿ. ಕಳೆದ 20 ದಿನಗಳ ಹಿಂದೆ ಇವರಿಗೆ ಕರೋನ ವೈರಸ್ ಸೋಂಕು ದೃಢವಾಗಿತ್ತು.  ಬಾಬುರಾವ್ ವೃತ್ತಿಯಲ್ಲಿ ರೈಲ್ವೆ ಪೊಲೀಸ್ ಇಲಾಖೆ ಸೇವೆ ಸಲ್ಲಿಸಿ ಸದ್ಯ ನಿವೃತ್ತಿ ಹೊಂದಿದ್ದಾರೆ. 1942 ರಲ್ಲಿ ಬ್ರಿಟಿಷ್‌ ಸರ್ಕಾರದ ಅವಧಿಯಲ್ಲಿ ಮುಂಬೈನ ಅಲಿಭಾಗ್ ನಲ್ಲಿ ಪೊಲೀಸ್ ಇಲಾಖೆಯಲ್ಲಿ  ಸೇವೆ ಶುರು ಮಾಡ್ತಾರೆ. ಮಹಾರಾಷ್ಟ್ರದ ರತ್ನಾಗಿರಿ, ಸಾಂಗಲಿ, ಕರ್ನಾಟಕದ ವಿಜಯಪುರ  ಸೇರಿದಂತೆ ಹಲವು ಕಡೆ ಸೇವೆ ಸಲ್ಲಿಸಿ 1979 ರಲ್ಲಿ ಬೆಳಗಾವಿಯಲ್ಲಿ   ಪೊಲೀಸ್  ಇಲಾಖೆಯಲ್ಲಿ  ಸೇವೆ ಸಲ್ಲಿಸಿ  ಸೇವೆಯಿಂದ ನಿವೃತ್ತಿಯಾಗಿದ್ದಾರೆ.

ಇದನ್ನೂ ಓದಿ: ಲಸಿಕೆ ಹಾಕಿಸಿಕೊಂಡ ಸ್ಥಳದಲ್ಲಿ ಬಲ್ಬ್ ಬೆಳಗಿದ ಪ್ರಕರಣಕ್ಕೆ ಟ್ವಿಸ್ಟ್: ಬಯಲಾಯ್ತು ಅಸಲಿ ಸತ್ಯ..!

ಸದ್ಯ ನಿವೃತ್ತಿ ಜೀವನ ನಡೆಸುತ್ತಿರೋ ಬಾಬುರಾವ್ ವಾಳ್ವೆಕರ್ ಹಾಗೂ ಇವರ ಪತ್ನಿ 86 ವರ್ಷದ ಶಾಂತಾಬಾಯಿಗೆ ಕಳೆದ ದಿನಗಳ 20 ಹಿಂದೆ ಸೋಂಕು ದೃಢವಾಗಿದೆ.  ಇದರಿಂದ ಧೃತಿಗೆಡದೆ  ಬಾಬುರಾವ್ ಧೈರ್ಯ ತಂದುಕೊಂಡು  ಮನೆಯಲ್ಲೇ  ಚಿಕಿತ್ಸೆ ಪಡೆದುಕೊಂಡು ಗುಣಮುಖರಾಗಿದ್ದಾರೆ. ಕೀಪ್ ಲಾಫಿಂಗ್ ಕೀಪ ವಾಕಿಂಗ್, ಪೌಷ್ಟಿಕಾಹಾರ ಸೇವನೆ ಸೂತ್ರದಡಿ ಕೊರೊನಾ ಗೆದ್ದಿದ್ದೇನೆ, ಸೋಂಕಿಗೆ ಒಳಗಾದ್ರೆ  ಬಂದ್ರೆ ಹೆದರ ಬೇಡಿ ಅದನ್ನು ತೆಲೆಯಿಂದ ತೆಗದುಹಾಕಿ ಅಂತಿದ್ದಾರೆ ಇವರು.

ಬಾಬುರಾವ್  ಅವರಿಗೆ ಕರೋನ ಸೋಂಕಿನ ಲಕ್ಷಣಗಳು ಕಂಡುಬರುತ್ತಿದ್ದಂತೆ ಮಗ ಮುರಳಿಧರ ಹಾಗೂ  ಹರ್ಷಿತ್ ತಕ್ಷಣ  ವೈದ್ಯರನ್ನು ಸಂಪರ್ಕ ಮಾಡ್ತಾರೆ. ಕೂಡಲೇ ಬೆಳಗಾವಿಯ  ಲೇಕ್-ವೀವ್ ಆಸ್ಪತ್ರೆಯ  ಡಾ. ಶಶಿಕಾಂತ ಕುಲಗೋಡ ವೈದ್ಯರು ಮನೆಗೆ ಆಗಮಿಸಿ  ಬಾಬುರಾವ್ ಹಾಗೂ ಶಾಂತಾಬಾಯಿ ಅವರನ್ನು  ಆರೋಗ್ಯ ವಿಚಾರಿಸಿದ್ದಾರೆ ಕೊರೊನಾ ತಪಾಸಣೆ ‌ಮಾಡ್ತಾರೆ . ದಂಪತಿಗಳಲ್ಲಿ  ಕೊರೊನಾ ಸೋಂಕು ದೃಢವಾದ ಹಿನ್ನೆಲೆಯಲ್ಲಿ ವಯೋ ವೃದ್ಧಕಾರಣ ಮನೆಗೆ ಡಾ. ಸಂತೋಷ ನೇತೃತ್ವದ ವೈದ್ಯರ ತಂಡ  ಬಾಬುರಾವ್ ಮತ್ತು ಶಾಂತಾಬಾಯಿಗೆ ಮನೆಯಲ್ಲೇ  ಚಿಕಿತ್ಸೆ ಶರು ಮಾಡ್ತಾರೆ.

ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದ ವೃದ್ಧ ದಂಪತಿಗಳ ಆತ್ಮ ಸ್ಥೈರ್ಯ  ಆತ್ಮ ಬಲ ನೋಡಿ ದಂಗಾಗಿ ಹೋಗ್ತಾರೆ. ಕರೋನಗೆ ಹೆದರದೇ  ಧೃತಿಗೆಡದೆ ಚಿಕಿತ್ಸೆ  ಸ್ಪಂದಿಸಿದ್ದಾರೆ. ಕಳೆದ ಇಪ್ಪತ್ತು ದಿನ  ಬಾಬುರಾವ್ ದಂಪತಿಗಳಿಗೆ ಡಾ. ಸಂತೋಷ ಕೊರೊನಾಗೆ  ಚಿಕಿತ್ಸೆ  ನೀಡಿದ್ದಾರೆ. ತಂದೆ , ತಾಯಿ ಇಳಿವಯಸ್ಸಿನಲ್ಲೂ ಕೊರೊನಾ  ಗೆದ್ದು ಬಂದಿದ್ದು ಮಗ ಮುರಳಿಧರ್ ಹಾಗೂ ಕುಟುಂಬದ ಸದಸ್ಯರು  ಸಂತೋಷ ವ್ಯಕ್ತಪಡಿಸುತ್ತಿದ್ದಾರೆ. ತಂದೆ ಉತ್ತಮ ಪೌಷ್ಟಿಕಾಹಾರ  ಸೇವನೆಯಿಂದೇ ಇಂದು ಆರೋಗ್ಯವಂತರಾಗಿದ್ದಾರೆ.  ಧೈರ್ಯದಿಂದ ಇದ್ದರೆ ಮನೆಯಲ್ಲೂ ಸೋಂಕು ಗೆಲ್ಲಬಹುದು ಅಂತಿದ್ದಾರೆ ಮುರಳೀಧರ.
Published by: Kavya V
First published: June 11, 2021, 9:47 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories