ನಾನು ಹುಚ್ಚಾಸ್ಪತ್ರೆಗೆ ಹೋಗಲು ಸಿದ್ದನಾಗಿದ್ದೇನೆ ಎಂದ DK Shivakumar: ಈಶ್ವರಪ್ಪಗೆ ತಿರುಗೇಟು

ಕಾಂಗ್ರೆಸ್​​​ಗೆ‌ ನಡುಕ ಹುಟ್ಟಿದೆ ಅನ್ನೂ ಮಾಜಿ ಸಿಎಂ ಎಚ್​ಡಿಕೆ ಹೇಳಿಕೆಗೆ ಡಿಕೆಶಿ ತಿರುಗೇಟು ನೀಡಿದರು. ನನಗೆ ನಡುಕ ಹುಟ್ಟುತ್ತೋ ಇಲ್ವೋ ಅನ್ನೂದು ಎಚ್​ಡಿಕೆಗೆ ಗೊತ್ತಿದೆ. ನಾನು ನಡುಗುತ್ತಿನೋ ಹೇಗೆ ಇರ್ತಿನಿ ಎಂಬುದು ಎಚ್​ಡಿಕೆಗೆ ಗೊತ್ತಿದೆ.

ಡಿ.ಕೆ. ಶಿವಕುಮಾರ್​.

ಡಿ.ಕೆ. ಶಿವಕುಮಾರ್​.

  • Share this:
ಬೆಂಗಳೂರು ಗ್ರಾಮಾಂತರ/ ಬೆಳಗಾವಿ: ದೇವನಹಳ್ಳಿಯಲ್ಲಿ ನಡೆದ ಗಾಣಿಗ ಸಮುದಾಯದ ಕಾರ್ಯಗಾರದಲ್ಲಿ ಭಾಗವಹಿಸಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಬಿಜೆಪಿ-ಜೆಡಿಎಸ್​ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು. ಕಾಂಗ್ರೆಸ್​​​ಗೆ‌ ನಡುಕ ಹುಟ್ಟಿದೆ ಅನ್ನೂ ಮಾಜಿ ಸಿಎಂ ಎಚ್​ಡಿಕೆ ಹೇಳಿಕೆಗೆ ಡಿಕೆಶಿ ತಿರುಗೇಟು ನೀಡಿದರು. ನನಗೆ ನಡುಕ ಹುಟ್ಟುತ್ತೋ ಇಲ್ವೋ ಅನ್ನೂದು ಎಚ್​ಡಿಕೆಗೆ ಗೊತ್ತಿದೆ. ನಾನು ನಡುಗುತ್ತಿನೋ ಹೇಗೆ ಇರ್ತಿನಿ ಎಂಬುದು ಎಚ್​ಡಿಕೆಗೆ ಗೊತ್ತಿದೆ. ರಾಜಕಾರಣಕ್ಕಾಗಿ ಎಚ್​ಡಿಕೆ ಏನೇನೋ ಮಾತನಾಡ್ತಿದ್ದಾರೆ ಎಂದು ಟಾಂಗ್​ ಕೊಟ್ಟರು.

ನಾನು ಹುಚ್ಚಾಸ್ಪತ್ರೆಗೆ ಹೋಗಲು ಸಿದ್ದನಾಗಿದ್ದೇನೆ

ಹುಚ್ಚಾಸ್ವತ್ರೆಗೆ ಸೇರಿಸಬೇಕು ಎಂಬ ಸಚಿವ ಕೆ.ಎಸ್​.ಈಶ್ವರಪ್ಪ ಹೇಳಿಕೆಗೂ ಡಿಕೆಶಿ ತಿರುಗೇಟು ಕೊಟ್ಟರು. ನಾನು ಹುಚ್ಚಾಸ್ವತ್ರೆಗೆ ಹೋಗಲು ಸಿದ್ದನಾಗಿದ್ದೇನೆ, ಈಶ್ವರಪ್ಪ ಆದಷ್ಟು ಬೇಗ ಬೆಡ್ ರೆಡಿ ಮಾಡಿಟ್ಟಿರಲಿ ಎಂದರು. ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಹೇಳಿದ್ರು, 20 ಕಾಂಗ್ರೆಸ್ ಜನ ಶಾಸಕರು ಸಂಪರ್ಕದಲ್ಲಿದ್ದಾರೆ ಅಂತ. ಮತ್ಯಾಕೆ ಅವರಿಗೆ ಭಯ ಶುರುವಾಗಿದೆ ಗೊತ್ತಿಲ್ಲ. ನಾವಂತು ಯಾವ ಶಾಸಕರು ಸಂಪರ್ಕದಲ್ಲಿದ್ದಾರೆ ಅಂತ ಹೇಳಿಲ್ಲ ಎಂದರು.

ಸಂಜಯ ಪಾಟೀಲ ಹೇಳಿಕೆಗೆ ಖಂಡನೆ

ಇನ್ನು ಕಾಂಗ್ರೆಸ್​​ ಶಾಸಕಿ ಲಕ್ಷ್ಮೀ ಹೆಬ್ಬಾಳಕ ರಾತ್ರಿ ರಾಜಕೀಯದಿಂದ ಶಾಸಕಿಯಾಗಿದ್ದಾರೆ ಎಂಬ ಸಂಜಯ ಪಾಟೀಲ ವಿವಾದಾತ್ಮಕ ಹೇಳಿಕೆಯನ್ನು ಹುಕ್ಕೇರಿ ತಾಲೂಕಿನ ಕರಗುಪ್ಪಿ ಗ್ರಾಮದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಖಂಡಿಸಿದರು. ಈ ವಿವಾದಾತ್ಮಕ ಹೇಳಿಕೆ ಹೊಸದಲ್ಲ, ಅಧಿಕಾರದಲ್ಲಿ ಇದ್ದಾಗಲು ವಿವಾದಾತ್ಮಕ ಹೇಳಿಕೆ  ಕೊಡುತ್ತಿದ್ದರು ಈಗಲು ಕೊಡುತ್ತಿದ್ದಾರೆ . ಜವಾಬ್ದಾರಿ ಸ್ಥಾನದಲ್ಲಿದಲ್ಲಿದ್ದು, ಈ ರೀತಿ ಹೇಳೊದು ಸರಿಯಲ್ಲ. ಸಂಜಯ ಪಾಟೀಲ ಜವಾಬ್ದಾರಿ ಸ್ಥಾನದಲ್ಲಿದ್ದು, ಇತಿ ಮೀತಿಯಲ್ಲಿ ಮಾತನಾಡುವುದು ಒಳ್ಳೆಯದು. ಅವರೂ ಕೂಡಾ ಒಂದು ಪಕ್ಷದ ಅಧ್ಯಕ್ಷರು ಅವರ ಮಾತಿನ ಮೇಲೆ ಹಿಡಿತ ಇರಬೇಕು ಎಂದರು.

ಇದನ್ನೂ ಓದಿ: Mamata Banerjee Wins- ಭವಾನಿಪುರ್ ಉಪಚುನಾವಣೆ: ದಾಖಲೆ ಅಂತರದಲ್ಲಿ ಗೆದ್ದ ಮಮತಾ ಬ್ಯಾನರ್ಜಿ

ಬೆಳಗಾವಿ‌ ಲೋಕಸಭೆ ಚುನಾವಣೆಗೆ ಸ್ಪರ್ಧೆ ಮಾಡುತ್ತೇನೆ

ಚಿಕ್ಕೋಡಿ, ಗೋಕಾಕ ಪ್ರತ್ಯೇಕ ಜಿಲ್ಲೆಯ ವಿಚಾರವಾಗಿ ಮಾತನಾಡಿದ ಅವರು, ನಾವೆಲ್ಲರೂ ಪಕ್ಷಾತೀತವಾಗಿ ಹೋರಾಟ ಮಾಡಿದರೆ ಚಿಕ್ಕೋಡಿ, ಗೋಕಾಕ ಜಿಲ್ಲೆಯಾಗುತ್ತದೆ. ಮುಂದಿನ ಬಾರಿ ಬೆಳಗಾವಿ‌ ಲೋಕಸಭೆ ಚುನಾವಣೆಗೆ ಸ್ಪರ್ಧೆ ಮಾಡುವನಿದ್ದೇನೆ ಎಂದು ಇದೇ ವೇಳೆ ಸತೀಶ ಜಾರಕಿಹೊಳಿ ಹೇಳಿಕೆ ನೀಡಿದರು. ಲಖನ್​​ ಜಾರಕಿಹೊಳಿ ಕಾಂಗ್ರೆಸ್ ಪಕ್ಷದಲಿಲ್ಲ, ಕಳೆದ ಲೋಕಸಭೆ ಚುನಾವಣೆಯಲ್ಲಿ ಅವರು ಬಿಜೆಪಿಗೆ ಕೆಲಸ ಮಾಡಿದ್ದಾರೆ. ಯಮಕನಮರಡಿ ವಿಧಾನಸಭೆ ಚುನಾವಣೆಯಲ್ಲಿ ಯಾರು ಸ್ಪರ್ಧೆ ಮಾಡುತ್ತಾರೆ ಎಂಬುವುದು ಇನ್ನೂ ಖಚಿತವಿಲ್ಲ ಎಂದರು.

ಬಿಜೆಪಿಯಿಂದ 40 ಶಾಸಕರು ಕಾಂಗ್ರೆಸ್‌ಗೆ?

ಬಿಜೆಪಿ ತಾಲಿಬಾನ ಸಂಸ್ಕೃತಿ ಎಂಬ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಸತೀಶ್​ ಜಾರಕಿಹೊಳಿ, ಅದು ಮುಗಿದು ಹೋದ ಅಧ್ಯಾಯ.  ಇದರ ಬಗ್ಗೆ ಚರ್ಚೆ ಮಾಡುವುದು ಯಾರಿಗೂ ಲಾಭವಿಲ್ಲ, ನಷ್ಟವೂ ಇಲ್ಲ ಎಂದರು. ಬಿಜೆಪಿಯಿಂದ 40 ಶಾಸಕರು ಕಾಂಗ್ರೆಸ್‌ಗೆ ಆಗಮನ ವಿಚಾರವಾಗಿ ನಮ್ಮ ವರಿಷ್ಠರ ಮಟ್ಟದಲ್ಲಿ ಚರ್ಚೆ ನಡೆಯುತ್ತಿದೆ. ಯಾರ್ಯಾರು ಬರುತ್ತಾರೆ ಗೊತ್ತಿಲ್ಲ. ಆದರೆ, ಚರ್ಚೆ ನಡೆಯುತ್ತಿರುವುದು ನಿಜ  ಎಂದು ಸತೀಶ ಜಾರಕಿಹೊಳಿ ಸ್ಪಷ್ಟನೆ ನೀಡಿದರು.

ಲಕ್ಷ್ಮೀ ಹೆಬ್ಬಾಳ್ಕರ್ ಬೆನ್ನಿಗೆ ನಿಂತ ಪಂಚಮಸಾಲಿ ಸಮುದಾಯ

ಕುರಿತು ಸಂಜಯ್ ಪಾಟೀಲ್ ವಿವಾದಿತ ಹೇಳಿಕೆ ವಿಚಾರವಾಗಿ ಲಕ್ಷ್ಮೀ ಹೆಬ್ಬಾಳ್ಕರ್ ಬೆನ್ನಿಗೆ ನಿಂತ ಪಂಚಮಸಾಲಿ ಸಮುದಾಯ ನಿಂತಿದೆ. ಸಂಜಯ್ ಪಾಟೀಲ್ ಹೇಳಿಕೆಯನ್ನು ಲಿಂಗಾಯತ ಪಂಚಮಸಾಲಿ ಸಮುದಾಯ ಖಂಡಿಸಿದೆ. ಬೆಳಗಾವಿಯಲ್ಲಿ ಲಿಂಗಾಯತ ಪಂಚಮಸಾಲಿ ಮುಖಂಡರು ಸುದ್ದಿಗೋಷ್ಠಿ ನಡೆಸಿ, ಪಂಚಮಸಾಲಿ ಲಿಂಗಾಯತ ಸಮುದಾಯದ ಶಾಸಕಿ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ. ಮಾಧ್ಯಮಗಳಲ್ಲಿ ಸಂಜಯ್ ಪಾಟೀಲ್ ಹೇಳಿಕೆ ನೋಡಿದ್ದೇವೆ. ಇಡೀ ಮಹಿಳಾ ಸಮುದಾಯಕ್ಕೆ ಸಂಜಯ್ ಪಾಟೀಲ್ ಅವಹೇಳನ ಮಾಡಿದ್ದಾರೆ. ಮಾಜಿ ಶಾಸಕ ಸಂಜಯ್ ಪಾಟೀಲ್ ಕ್ಷಮೆಯಾಚಿಸಬೇಕು. ಸಂಜಯ್ ಪಾಟೀಲ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಬಿಜೆಪಿಗೆ ಆಗ್ರಹ ಮಾಡ್ತೇವೆ. ಮುಂದಿನ ದಿನಗಳಲ್ಲಿ ಇದೇ ರೀತಿ ಹೇಳಿಕೆ ನೀಡಿದ್ರೆ ಉಗ್ರ ಪ್ರತಿಭಟನೆ ಮಾಡುತ್ತೇವೆ. ಸಂಜಯ್ ಪಾಟೀಲ್ ವಿರುದ್ಧ ಉಗ್ರ ಪ್ರತಿಭಟನೆ ಮಾಡೋದಾಗಿ ಎಚ್ಚರಿಕೆ ನೀಡಿದರು.
Published by:Kavya V
First published: