Bank Robbery: ಬೆಳಗಾವಿ ಡಿಸಿಸಿ ಬ್ಯಾಂಕ್​ನಲ್ಲಿ ದರೋಡೆ; 4 ಕೋಟಿ ಹಣ, 1 ಕೋಟಿ ಬೆಲೆಬಾಳುವ ಚಿನ್ನಾಭರಣ ಕಳವು

ಬೆಳಗಾವಿ ಜಿಲ್ಲೆಯ ಸದವತ್ತಿ ತಾಲೂಕಿನ ಮುರುಗೋಡ ಗ್ರಾಮದ ಬಿಡಿಸಿಸಿ ಬ್ಯಾಂಕ್ ಶಾಖೆಯಲ್ಲಿ ಕಳ್ಳತನ ನಡೆದಿದೆ. ನಿನ್ನೆ ರಾತ್ರಿ ದರೋಡೆ ಕೋಟ್ಯಾಂತರ ಹಣ ಖದ್ದು ಪರಾರಿಯಾಗಿದ್ದಾರೆ

ಬೆಳಗಾವಿ ಡಿಸಿಸಿ ಬ್ಯಾಂಕ್​

ಬೆಳಗಾವಿ ಡಿಸಿಸಿ ಬ್ಯಾಂಕ್​

  • Share this:
ಬೆಳಗಾವಿ (ಮಾ,6): ಬೆಳಗಾವಿಯ (Belagavi) ಡಿಸಿಸಿ ಬ್ಯಾಂಕ್ (DCC Bank) ರಾಜ್ಯದಲ್ಲಿ ಮಹತ್ವದ ಸಹಕಾರಿ ಬ್ಯಾಂಕ್ ಆಗಿದೆ. ಬಿಡಿಸಿಸಿ ಬ್ಯಾಂಕ್ ಎಂದ್ರೇ ಸಾಕು ಇಲ್ಲಿನ ರಾಜಕಾರಣಿಗಳ ಮೇಲಾಟ ನೆನಪಿಗೆ ಬರುತ್ತದೆ. ಆದರೇ ಡಿಸಿಸಿ ಬ್ಯಾಂಕ್ ಒಂದು ಶಾಖೆಯಲ್ಲಿ ಕೋಟ್ಯಾಂತರ ರೂಪಾಯಿ ಹಣ ದರೋಡೆಯಾಗಿದೆ. (Robbery) ಅಪಾರ ಪ್ರಮಾಣದ ಹಣದ ಜೊತೆಗೆ ಬಂಗಾರದ ಆಭರಣ (Jewelry) ಸಹ ಕಳ್ಳತವಾಗಿದೆ. ಈ ಪ್ರಕರಣ ಸದ್ಯ ರಾಜ್ಯದಲ್ಲಿ ಸಂಚಲನ ಮೂಡಿಸಿದ್ದು, ಪ್ರಕರಣ ಹಿಂದೆ ಹಲವು ಅನುಮಾನಗಳು ವ್ಯಕ್ತವಾಗಿದೆ. ನಿನ್ನೆ ತಡರಾತ್ರಿ ದರೋಡೆ ನಡೆದಿದ್ದು, ಇಂದು ಬೆಳಗ್ಗೆ ತಡವಾಗಿ ಪ್ರಕರಣ ಬೆಳಕಿಗೆ ಬಂದಿದೆ. ಪ್ರಕರಣ ಅನುಮಾನಸ್ಪವಾಗಿದ್ದು, ಈಗಾಗಲೇ ಪೊಲೀಸರು ದೂರು ದಾಖಲಿಸಿಕೊಂಡು ಆರೋಪಿಗಳ ಬೆನ್ನು ಹತ್ತಿದ್ದಾರೆ.

ಬೆಳಗಾವಿಯ ಬಿಡಿಸಿಸಿ ಬ್ಯಾಂಕ್ ದರೋಡೆ

ಬೆಳಗಾವಿ ಜಿಲ್ಲೆಯ ಸದವತ್ತಿ ತಾಲೂಕಿನ ಮುರುಗೋಡ ಗ್ರಾಮದ ಬಿಡಿಸಿಸಿ ಬ್ಯಾಂಕ್ ಶಾಖೆಯಲ್ಲಿ ಕಳ್ಳತನ ನಡೆದಿದೆ. ನಿನ್ನೆ ರಾತ್ರಿ ನಡೆದ ದರೋಡೆಯಲ್ಲಿ ಬರೋಬ್ಬರಿ 4.37 ಕೋಟಿ ರೂಪಾಯಿ ಹಣ ಹಾಗೂ 1.65 ಕೋಟಿ ಮೌಲ್ಯದ ಚಿನ್ನಾಭರಣ ದೋಚಲಾಗಿದೆ. ಘಟನೆ ಬೆಳಕಿಗೆ ಬರುತ್ತಿದ್ದಂತೆ ಬೆಳರಚ್ಚು ತಜ್ಞರು, ಶ್ವಾನ ದಳ ಹಾಗೂ ಮುರಗೋಡು ಪೊಲೀಸರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬ್ಯಾಂಕ್ ಶಾಖೆಯನ್ನು ಸಂಪೂರ್ಣವಾಗಿ ಪೊಲೀಸ್ ವಶಕ್ಕೆ ಪಡೆಯಲಾಗಿದ್ದು, ಯಾರೊಬ್ಬರನ್ನು ಸಹ ಒಳಗೆ ಪ್ರವೇಶ ನೀಡಿಲ್ಲ.

ಇದನ್ನೂ ಓದಿ: Russia-Ukraine War: ಹಿಮದ ಗಡ್ಡೆ ಕರಗಿಸಿ ನೀರು ಕುಡಿದು ಬಂಕರ್​ನಲ್ಲಿ ಬದುಕು; ಉಕ್ರೇನ್​ ಸುಮಿ ನಗರದಲ್ಲಿ ವಿದ್ಯಾರ್ಥಿಗಳ ಪರದಾಟ

ಮ್ಯಾನೇಜರ್​ ರಿಂದ ಪೊಲೀಸರಿಗೆ ದೂರು

ಬಿಡಿಸಿಸಿ ಬ್ಯಾಂಕ್ ಮುರಗೋಡ ಶಾಖೆಯ ಮ್ಯಾನೇಜರ್ ಪ್ರಮೋದ ಯಲಿಗಾರ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಬ್ಯಾಂಕ್ ನಲ್ಲಿ ಕಳೆದ ಒಂದು ತಿಂಗಳಿಂದ ಕರ್ತವ್ಯ ನಿರ್ವಹಿಸುತ್ತೇನೆ ಎಂದು ಹೇಳಿದ್ದಾರೆ. ಅಷ್ಟೆ ಅಲ್ಲದೇ ಬ್ಯಾಂಕ್ ನಲ್ಲಿ ಮ್ಯಾನೇಜರ್, ಕ್ಯಾಶರ್ ಹಾಗೂ ಸಿಬ್ಬಂದಿ 6 ಜನ ಕೆಲಸ ನಿರ್ವಹಣೆ ಮಾಡುತ್ತಿದ್ದೇವೆ. ನಿನ್ನೆ ಬ್ಯಾಂಕ್ ನಲ್ಲಿ 4.41 ಕೋಟಿ ರೂಪಾಯಿ ಹಣ ನಗದು  ಹಾಗೂ  ಚಿನ್ನಾಭರಣ ಅಡಮಾನವಾಗಿ ಇಟ್ಟು ಸಾಲ ಕೊಟ್ಟಿದ್ದ 3.93 ಕೆಜಿ ಚಿನ್ನಾಭರಣ ಸಹ ಇತ್ತು.

ಇಂದು ಬೆಳಗ್ಗೆ ಈ ದರೋಡೆ ಪ್ರಕರಣ ಬೆಳಕಿಗೆ ಬಂದಿದೆ. ಶೆಟರ್ ಕೀ ಹಾಗೂ ಸ್ಟ್ರಾಂಗ್ ರೂಂ ಕೀ ಎರಡು ಸೆಟ್ಟು ಇತ್ತು. ಸ್ಟ್ರಾಂಗ್ ರೂಂ ಒಡೆದಿಲ್ಲ, ಬದಲಾಗಿ ಕೀ ಬಳಸಿ ಓಪನ್ ಮಾಡಲಾಗಿದೆ. ಇನ್ನೂ ಸಿಸಿಟಿವಿ ಡಿವಿಆರ್ ಸಹ ಕಳ್ಳತನ ಮಾಡಲಾಗಿದೆ ಎಂದು ಮ್ಯಾನೇಜರ್ ಪ್ರಮೋದ್​ ಯಲಿಗಾರ್ ದೂರು ನೀಡಿದ್ದಾರೆ.

ಇದನ್ನೂ ಓದಿ: Kalaburagi: ಹಾಲು ಕುಡಿದ ಕಲ್ಲಿನ ಬಸವ, ನಂದಿ ವಿಗ್ರಹದ ಪವಾಡ ನೋಡಲು ಹರಿದು ಬರ್ತಿದೆ ಜನ ಸಾಗರ

ಸಿಸಿಟಿವಿ ಡಿವಿರ್​ ಹೊತ್ತೊಯ್ದ ಖದೀಮರು

ಈ ಕಳ್ಳತನ ಪ್ರಕರಣ ಹಿಂದೆ ಹಲವು ಅನುಮಾನಗಳು ಸದ್ಯ ವ್ಯಕ್ತವಾಗಿದ್ದು, ಸ್ಥಳಕ್ಕೆ ಹೆಚ್ಚುವರಿ ಎಸ್ಪಿ ಹಾಗೂ ಮುರಗೋಡ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಎಲ್ಲಾ ಸಿಬ್ಬಂದಿಯನ್ನು ಕರೆದು ವಿಚಾರಣೆಯನ್ನು ಆರಂಭಿಸಿದ್ದಾರೆ.  ಶೀಘ್ರದಲ್ಲಿಯೇ ಆರೋಪಿಗಳನ್ನು ಬಂಧಿಸುವ ಭರಸವೆಯಲ್ಲಿ ಪೊಲೀಸರು ಇದ್ದಾರೆ. ಮರಗೋಡು ಚಿಕ್ಕ ಶಾಖೆಯಲ್ಲಿ ದೊಡ್ಡ ಮೊತ್ತದ ಹಣ ಇಟ್ಟಿರುವ ಬಗ್ಗೆಯೂ ಅನುಮಾನಗಳು ವ್ಯಕ್ತವಾಗಿವೆ
Published by:Pavana HS
First published: