Rain Effect: ಬೆಳೆಗಾರರ ಕೈಗೆಟುಕದ ದ್ರಾಕ್ಷಿ.. ಹಣ್ಣಿನ ಜೊತೆ ರೈತರ ನೆಮ್ಮದಿಯನ್ನು ಆಪೋಷನ ಪಡೆದ ವರುಣ

ಒಂದು ವಾರದಿಂದ ಮೋಡ ಕವಿದ ವಾತಾವರಣ, ಮಳೆಯಿಂದ ದ್ರಾಕ್ಷಿ ಬೆಳೆಗೆ ವಣಿ ಹಾಗೂ ಕೊಳೆ ರೋಗ ಬೇಗನೇ ವ್ಯಾಪಿಸಿದೆ. ಹೂವು -ಕಾಯಿ ಕಟ್ಟುವ  ಕಾಳುಗಳನ್ನು ನಾಶ ಮಾಡುತ್ತದೆ. ಇದರಿಂದ ದ್ರಾಕ್ಷಿ ಗೊನೆಯಲ್ಲಿರುವ ಕಾಳುಗಳು ಉದುರುತ್ತವೆ. ಮಳೆಯಿಂದ ಗೊನೆಯಲ್ಲಿ ನೀರು ನಿಲ್ಲುವುದ್ದರಿಂದ ದ್ರಾಕ್ಷಿ ಗೊನೆಗಳು ಕೊಳೆಯುತ್ತವೆ .

ಹಾಳಾಗಿರುವ ದ್ರಾಕ್ಷಿ ಬೆಳೆ

ಹಾಳಾಗಿರುವ ದ್ರಾಕ್ಷಿ ಬೆಳೆ

  • Share this:
ಬೆಳಗಾವಿ: ಅಕಾಲಿಕ‌ ಮಳೆಯಿಂದ (Heavy Rain)  ರಾಜ್ಯದ ಜನ ತತ್ತರಿಸಿದ್ದಾರೆ. ವರುಣದ ಅಬ್ಬಕ್ಕೆ ಗಡಿ ಭಾಗದ ದ್ರಾಕ್ಷಿ(Grape Crop) ಬೆಳೆಗಾರರು  ಕಂಗಾಲಾಗಿದ್ದು, ಸುಮಾರು 6 ಸಾವಿರ ಹೆಕ್ಟರಗಿಂತ ಹೆಚ್ಚು ಬೆಳೆ ನಾಶವಾಗಿದೆ (Damage to crop). ಅಕಾಲಿಕ ಮಳೆಯಿಂದ ದ್ರಾಕ್ಷಿ ಬೆಳೆಗಾರರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಅಕಾಲಿಕ ಮಳೆ ಹಾಗೂ ಮೋಡ ಕವಿದ ವಾತಾವರಣದಿಂದ  ಹವಾಮಾನ ವೈಪರಿತ್ಯದ ಕಾರಣ ದ್ರಾಕ್ಷಿ ಬೆಳೆಗೆ ರೋಗ ಬಾಧಿಸಿದ್ದು , ರೈತರನ್ನ ಹೈರಾಣಾಗಿಸಿದೆ. ಜಿಲ್ಲೆಯ ಅಥಣಿ ಹಾಗೂ ಕಾಗವಾಡ ತಾಲೂಕುಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ದ್ರಾಕ್ಷಿ ಬೆಳೆ ರೈತರಿಗೆ ಜೀವನದ ಆಧಾರವಾಗಿದೆ. ಬಹುತೇಕ ಬೆಳೆಗಾರರು ಈಗ ದ್ರಾಕ್ಷಿ ಬೆಳೆ ಬೆಳಿದಿದ್ದಾರೆ. ತೋಟಗಳಲ್ಲಿ ಹೂವುಗಳು ಮೂಡಿ ಕಾಯಿ ಕಟ್ಟುವ ಹಂತದಲ್ಲಿದೆ. ಇಂತಹ ಸ್ಥಿತಿಯಲ್ಲಿ ಅಕಾಲಿಕ ಮಳೆ ಸುರಿದಿದ್ದರಿಂದ ಡವಣಿ ಹಾಗೂ ಕೊಳೆ ರೋಗದಿಂದ ದ್ರಾಕ್ಷಿ ಕಾಳುಗಳು ಉದುರುತ್ತಿವೆ.

ಬೆಳೆಗೆ ಆವರಿಸಿದ ವಣಿ & ಕೊಳೆ ರೋಗ: ಅಥಣಿ ತಾಲೂಕಿನ ಸುಮಾರು 6 ಸಾವಿರ ಹೆಕ್ಟೇರ್‌ಗಿಂತ ಹೆಚ್ಚಿನ ಪ್ರದೇಶದಲ್ಲಿ ದ್ರಾಕ್ಷಿ ಬೆಳೆಯಲಾಗುತ್ತಿದ್ದು, ಬಹುತೇಕ‌ ದ್ರಾಕ್ಷಿ ಬೆಳೆಗೆ ರೋಗ ತಲುಲಿದೆ. ಸರಕಾರ ದ್ರಾಕ್ಷಿ ಬೆಳೆಗಾರರಿಗೆ ಸೂಕ್ತ ಪರಿಹಾರ ನೀಡುವಂತೆ ರೈತ ಮುಖಂಡರು ಒತ್ತಾಯಿಸಿದ್ದಾರೆ. ಕಳೆದ  ಒಂದು ವಾರದಿಂದ ಮೋಡ ಕವಿದ ಮಂಜಿನಿಂದ ಹಾಗೂ ಮಳೆಯಿಂದ ದ್ರಾಕ್ಷಿ ಬೆಳೆಗೆ ವಣಿ ಹಾಗೂ ಕೊಳೆ ರೋಗ ಬೇಗನೇ ವ್ಯಾಪಿಸಿ ಹೂವು ಕಾಯಿ ಕಟ್ಟುವ  ಕಾಳುಗಳನ್ನು ನಾಶ ಮಾಡುತ್ತದೆ. ಇದರಿಂದ ದ್ರಾಕ್ಷಿ ಗೊನೆಯಲ್ಲಿರುವ ಕಾಳುಗಳು ನೆಲಕ್ಕೆ ಬೀಳುತ್ತದೆ. ಮಳೆಯಿಂದ ಗೊನೆಯಲ್ಲಿ ನೀರು ನಿಲ್ಲುವುದ್ದರಿಂದ ದ್ರಾಕ್ಷಿ ಗೊನೆಗಳು ಕೊಳೆಯುತ್ತವೆ .

ರೈತರು ಎಷ್ಟೇ ಪ್ರಮಾಣದ ಔಷಧಿ ಸಿಂಪಡಿಸಿದರೂ, ರೋಗ ಹತೋಟಿಗೆ ಮಾತ್ರ ಬರುತ್ತಿಲ್ಲ.  ಅಥಣಿ ತಾಲೂಕಿನ ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಹಳ್ಳಿಗಳ ರೈತರ ದ್ರಾಕ್ಷಿ ತೋಟಗಳಿಗೆ ಭೇಟಿ ನೀಡಿ ಅಕಾಲಿಕ ಮಳೆಯಿಂದ ಹಾನಿಯಾದ ಬಗ್ಗೆ ಮಾಹಿತಿ ಪಡೆದು ಮೇಲಾಧಿಕಾರಿಗಳಿಗೆ ವರದಿ ಸಲ್ಲಿಸಿ ಪರಿಹಾರ ಕೊಡಿಸುವ ಭರವಸೆ ನೀಡಿದ್ದಾರೆ.

ಸಂಕಷ್ಟದಲ್ಲಿ ಕಬ್ಬು ಬೆಳೆಗಾರರು: ಇನ್ನು ದ್ರಾಕ್ಷಿ ಬೆಳೆಗಾರರ ಸಮಸ್ಯೆ ಒಂದೆಡೆಯಾದರೆ ಮತ್ತೊಂದೆಡೆ  ಕಬ್ಬು ಬೆಳೆಗಾರರು ಸಹ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅಕಾಲಿಕ ಮಳೆಯಿಂದ  ಗದ್ದೆಗಳಿಲ್ಲಿ ನೀರು ತುಂಬಿ ಜಮೀನು ಕೆಸರು ಗದ್ದೆಮತಾಗಿದೆ.  ಚಿಕ್ಕೋಡಿ, ರಾಯಬಾಗ, ಅಥಣಿ, ಹುಕ್ಕೇರಿ ತಾಲೂಕಿನಲ್ಲಿ ಸುರಿದ ಮಳೆಯಿಂದ ಕಟಾವು ಮಾಡಿದ ಕಬ್ಬು ಕಾರ್ಖಾನೆಗೆ  ಕಳಿಸಲಾಗದೆ ರೈತ ಪರದಾಡುತ್ತಿದ್ದಾನೆ. ಮಳೆಯಿಂದ ಜಮೀನುಗಳಿಗೆ ಟ್ರಾಕ್ಟರಗಳು ಬರುತ್ತಿಲ್ಲಾ. ಗದ್ದೆಗಳಲ್ಲಿ ಟ್ರಾಕ್ಟರ್ ಗಳು  ಸಿಲುಕಿ ಕೊಂಡಿದ್ದು ಟ್ರಾಕ್ಟರ್ ಗಳನ್ನ ಹೊರ ತೆಗೆಯಲು  ರೈತರು ಹರ ಸಾಹಸ ಪಡುತ್ತಿದ್ದಾರೆ. ಪರಿನಾಮ ಕಟಾವು ಮಾಡಿದ ಕಬ್ಬು ಗದ್ದೆಯಲ್ಲೆ ಬೀಳುವಂತಾಗಿದೆ.

ಇದನ್ನೂ ಓದಿ: PM Kisan Scheme ಹಣ 16 ಸಾವಿರ ರೂಗೆ ಹೆಚ್ಚಿಸಲು ಕೃಷಿ ಬೆಲೆ ಆಯೋಗ ಶಿಫಾರಸು; ಇಲ್ಲಿದೆ ಅದರ ಸಲಹೆಗಳ ಪಟ್ಟಿ

ಒಟ್ಟಿನಲ್ಲಿ ಮೊದಲೇ ಸಾಲದ ಸುಳಿಯಲ್ಲಿ ಸಿಲುಕಿರುವ ರೈತರು ಹವಾಮಾನ ವೈಪರಿತ್ಯ ಅಕಾಲಿಕ ಮಳೆಯಿಂದ  ಕಂಗಾಲಾಗಿದ್ದಾರೆ. ಹೀಗಾಗಿ ಸರಕಾರ ಈ ಭಾಗದ ದ್ರಾಕ್ಷಿ ಬೆಳೆಗಾರರಿಗೆ ಸೂಕ್ತ ಪರಿಹಾರ ನೀಡಬೇಕು ಅಲ್ಲದೇ ದ್ರಾಕ್ಷಿ ಬೆಳೆಗೆ ವಿಮೆ ತುಂಬಿರುವ ರೈತರಿಗೆ ಶೀಘ್ರ ಹಣ ಬಿಡುಗಡೆ ಮಾಡಬೇಕು ಎಂದು ದ್ರಾಕ್ಷಿ ಬೆಳೆಗಾರರು ಆಗ್ರಹಿಸಿದ್ದಾರೆ.

ಬಂಗಾಳ ಕೊಲ್ಲಿಯಿಂದ ಆರಂಭಗೊಂಡಿದ್ದ ಮೇಲ್ಮೈ ಸುಳಿಗಾಳಿ ದುರ್ಬಲಗೊಂಡ ಹಿನ್ನೆಲೆ ರಾಜ್ಯದಲ್ಲಿ ಒಂದು ವಾರದಿಂದ ಸುರಿಯುತ್ತಿರುವ ಅಕಾಲಿಕ ಮಳೆಗೆ  ಬ್ರೇಕ್ ಬಿದ್ದಿದೆ. ಇಂದು ದಕ್ಷಿಣ ಒಳನಾಡು ಮತ್ತು ಕರಾವಳಿ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಲಿದೆ. ಶಿವಮೊಗ್ಗ, ಹಾಸನ. ದಾವಣಗೆರೆ, ಚಿಕ್ಕಬಳ್ಳಾಪುರ, ಮೈಸೂರು, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಹಗುರ ಮಳೆಯಾಗುವ ಸಾಧ್ಯತೆಗಳಿವೆ. ಇನ್ನುಳಿದಂತೆ ಚಳಿ ಸಹ ರಾಜ್ಯದಲ್ಲಿ ಆರಂಭವಾಗಲಿದೆ. ಉತ್ತರ ಕರ್ನಾಟಕ  ಭಾಗದಲ್ಲಿ ಚಳಿ ಮತ್ತು ಸುಳಿ ಗಾಳಿಯ ಜೊತೆ ಒಣ ಹವೆ ಇರಲಿದೆ.
Published by:Kavya V
First published: