Santosh Patil Case: ಲಕ್ಷ್ಮಿ ಹೆಬ್ಬಾಳ್ಕರ್ ಹಳೆ ಹೇಳಿಕೆ ವೈರಲ್; ಹೇಳಿಕೆಗೆ ಶಾಸಕರು ಹೇಳಿದ್ದೇನು?

ಸಂತೋಷ್ ಪಾಟೀಲ್ ಸಾವು ಪ್ರಕರಣ ಇದೀಗ ರಾಜಕೀಯ ತಿರುವು ಪಡೆದುಕೊಂಡಿದೆ. ಬಿಜೆಪಿ ಸರ್ಕಾರದ ವಿರುದ್ಧ ಹೋರಾಡಲು ಕಾಂಗ್ರೆಸ್ ಪಕ್ಷಕ್ಕೆ ಹೊಸದೊಂದು ಅಸ್ತ್ರ ಸಿಕ್ಕಿದ್ದು ಅದನ್ನ ಬಳಸಿಕೊಳ್ಳಲು ಕಾಂಗ್ರೆಸ್ ಪ್ರಯತ್ನ ನಡೆಸಿದೆ. ಅದರಲ್ಲಿ ಯಶಸ್ಸು ಕಂಡಿದೆ.

ಲಕ್ಷ್ಮಿ ಹೆಬ್ಬಾಳ್ಕರ್

ಲಕ್ಷ್ಮಿ ಹೆಬ್ಬಾಳ್ಕರ್

  • Share this:
ಬೆಳಗಾವಿ: ಕುಂದಾ ನಗರಿ ಬೆಳಗಾವಿ (Belagavi) ಸದಾ ಒಂದಿಲ್ಲೊಂದು ವಿಚಾರದಲ್ಲಿ ಸುದ್ದಿಯಲ್ಲಿರುತ್ತೆ. ಆದರೀಗ ಬಿಜೆಪಿ ಸರ್ಕಾರ ಪ್ರಭಾವಿ ಸಚಿವ, ಹಿರಿಯ ರಾಜಕಾರಣಿ ಕೆ.ಎಸ್.ಈಶ್ವರಪ್ಪ(KS Eshwarappa)ನವರ ಮಂತ್ರಿ ಸ್ಥಾನವನ್ನ (Minister Post) ಕಿತ್ತುಕೊಂಡಿದೆ. ಹೌದು, ಬೆಳಗಾವಿ ತಾಲೂಕಿನ ಬಡಸ ಗ್ರಾಮದ ಕ್ಲಾಸ್ ಒನ್ ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ (Santosh Patil Suicide Case) ಪ್ರಕರಣದಿಂದಾಗಿ ಈಶ್ವರಪ್ಪ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದಾರೆ. ಹೌದು ಕಳೆದ 2021ರಲ್ಲಿ ಸಂತೋಷ್ ಪಾಟೀಲ್ ಬೆಳಗಾವಿ ತಾಲೂಕಿನ ಹಿಂಡಲಗಾ ಗ್ರಾಮದಲ್ಲಿ 4 ಕೋಟಿ ರೂ.ಗಳ ವೆಚ್ಚದಲ್ಲಿ  108 ಕಾಮಗಾರಿಗಳನ್ನ ಮಾಡಿಸಿದ್ದೇನೆ. ಅದಕ್ಕೆ 40%ಕಮಿಷನ್ ಕೇಳುತ್ತಿದ್ದಾರೆ ಅಂತಾ ಆರೋಪಿಸಿದ್ದರ. ಈ ಬಗ್ಗೆ ಪ್ರದಾನಿ‌ ನರೇಂದ್ರ ಮೋದಿ, ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವರಿಗೆ ಪತ್ರ ಬರೆದು ಹಣ ಬಿಡುಗಡೆ ಮಾಡುವಂತೆ ಮನವಿ ಮಾಡಿಕೊಂಡಿದ್ದರು.

ಇದಾದ ಬಳಿಕ ಕೆ.ಎಸ್.ಈಶ್ವರಪ್ಪ ಸಂತೋಷ್ ಪಾಟೀಲ್ ನನಗೆ ಯಾರು ಅನ್ನೋದೇ ಗೊತ್ತಿಲ್ಲ. ನಾನು ಯಾವುದೇ ರೀತಿಯ ಕಾಮಗಾರಿಗೆ ಆರ್ಡರ್ ಕೊಟ್ಟಿಲ್ಲ ಅಂತಾ ಹೇಳಿದ್ರು. ಇಷ್ಟೇ ಅಲ್ಲದೇ ಸಂತೋಷ್ ವಿರುದ್ಧ ಮಾನನಷ್ಟ ಮೊಕದ್ದಮೆ ‌ಹೂಡಿದ್ದರು.

ಈಶ್ವರಪ್ಪ ವಿರುದ್ಧ ಸಂತೋಷ್ ಪಾಟೀಲ್ ಕುಟುಂಬ ಆಕ್ರೋಶ

ಸಂತೋಷ್ ಪಾಟೀಲ್ ವಿರುದ್ಧ ಮಾನನಷ್ಟ ಮೊಕದ್ದಮೆ ಹೀಗೆ ಹಲವು ಕಾರಣಗಳಿಂದಾಗಿಯೇ ಸಂತೋಷ್ ಪಾಟೀಲ್ ಮನನೊಂದು ಉಡುಪಿಯ ಖಾಸಗಿ ಹೋಟೆಲ್ ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಅಂತಾ ಮೃತನ‌ ಸಹೋದರ  ಆರೋಪಿಸಿದ್ದಾರೆ. ಇನ್ನೂ ಸಂತೋಷ್ ಅವರ ಪತ್ನಿಯೂ ಸಹ ಈಶ್ವರಪ್ಪ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ಇದನ್ನೂ ಓದಿ: Congress ಅಹೋರಾತ್ರಿ ಧರಣಿ ಅಂತ್ಯ; K.S ಈಶ್ವರಪ್ಪ ಸಾಮಾನ್ಯ ವ್ಯಕ್ತಿಯಲ್ಲ, ಸಾಕ್ಷಿ ನಾಶ ಮಾಡಬಲ್ಲರು- ಸಿದ್ದರಾಮಯ್ಯ

ಸಂತೋಷ್ ಪಾಟೀಲ್ ಸಾವು ಪ್ರಕರಣ ಇದೀಗ ರಾಜಕೀಯ ತಿರುವು ಪಡೆದುಕೊಂಡಿದೆ. ಬಿಜೆಪಿ ಸರ್ಕಾರದ ವಿರುದ್ಧ ಹೋರಾಡಲು ಕಾಂಗ್ರೆಸ್ ಪಕ್ಷಕ್ಕೆ ಹೊಸದೊಂದು ಅಸ್ತ್ರ ಸಿಕ್ಕಿದ್ದು ಅದನ್ನ ಬಳಸಿಕೊಳ್ಳಲು ಕಾಂಗ್ರೆಸ್ ಪ್ರಯತ್ನ ನಡೆಸಿದೆ. ಅದರಲ್ಲಿ ಯಶಸ್ಸು ಕಂಡಿದೆ.

Contractor Santosh patil Suicide case MLA Laxmi Hebbalkar old statement viral csb mrq
ಪ್ರತಿಭಟನೆ


ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿಕೆ ವೈರಲ್

ಆದರೆ ಸಂತೋಷ್ ಪಾಟೀಲ್ ಕಾಮಗಾರಿಯನ್ನೇ ಮಾಡಿಲ್ಲ.108 ಕಾಮಗಾರಿ ಮಾಡಿದ್ದು ಹುಡಿಕಿ ಕೊಟ್ರೆ ಅವಾರ್ಡ್ ಕೊಡ್ತೇನಿ ಅಂತಾ ಏಪ್ರಿಲ್ 4ರಂದು ಹೇಳಿದ್ದ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಇದೀಗ ಯು ಟರ್ನ್ ತೆಗೆದುಕೊಂಡಿದ್ದಾರೆ.

ಹೌದು, ಪ್ರಕರಣ ಮೊದಲು ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದ್ದು ಹೀಗೆ.. ಇದು ವಿಚಿತ್ರವಾದ ಘಟ‌ನೆ. ಹಿಂಡಲಗಾ ಪಂಚಾಯಿತಿಯಲ್ಲಿ ಬಿಜೆಪಿ ಅಧಿಕಾರ ಇದೆ. ನಾನು ಶಾಸಕಿಯಾದ ಮೇಲೆ ಅನುದಾನಕ್ಕೆ ಎಲ್ಲರ ಬಳಿ ಕೇಳಿದೆ. ಕ್ಷೇತ್ರಕ್ಕೆ ಯಾವುದೇ ಅನುದಾನ ಬಂದರೂ ಶಾಸಕರು ಪೂಜೆ ಮಾಡಬೇಕು. ಟೆಂಡರ್ ಆದ ಬಳಿಕ ಕಾಮಗಾರಿ ಆರಂಭಿಸಬೇಕು. ಜಿಲ್ಲಾ ಪಂಚಾಯತ, ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ ಕೇಳಿದೆ.

Contractor Santosh patil Suicide case MLA Laxmi Hebbalkar old statement viral csb mrq
ಪ್ರತಿಭಟನೆ


ಯಾವುದೇ ಅನುದಾನ ಬಿಡುಗಡೆ ಆಗಿಲ್ಲ. ಗ್ರಾಮದಲ್ಲಿ ಕಾಮಗಾರಿ ನಡೆದಿರುವ ಬಗ್ಗೆ ಪರಿಶೀಲನೆ ನಡೆಸಿ 108ಕಾಮಗಾರಿಯನ್ನ ಹುಡುಕಿ ಕೊಟ್ಟರೇ ನಾನು ಅವಾರ್ಡ್ ಕೊಡ್ತಿನಿ ಅಂತಾ ಹೇಳಿದ್ದಲ್ಲದೇ ಕಳಪೆ ಕಾಮಗಾರಿ ಆಗಿದ್ದು, ಈಗ ಮಣ್ಣು ಸಹ ಸಿಗಲ್ಲ. ನನ್ನ ಗಮನಕ್ಕೆ ಯಾವುದೇ ಕಾಮಗಾರಿ ಬಗ್ಗೆ ತಂದಿಲ್ಲ. ಬಿಜೆಪಿ ಗ್ರಾಪಂ, ಗುತ್ತಿಗೆದಾರ ಸಹ ಬಿಜೆಪಿಯವನೇ. ಬಿಜೆಪಿಯವರೇ ಆರೋಪ ಮಾಡಿದ್ದಾರೆ. ಈ ಬಗ್ಗೆ ತನಿಖೆ ಆಗಬೇಕು. ನಮ್ಮ ಸರ್ಕಾರ ಬಂದ್ರೆ ನಾನು ತನಿಖೆ ಮಾಡಿಸುತ್ತೇನೆ‌ ಅಂತಾ ಹೇಳಿದ್ರು. ಆದ್ರೆ ಇದೀಗ ಉಲ್ಟಾ ಹೊಡೆದಿರುವ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿಕೆ ವೈರಲ್ ಆಗುತ್ತಿದೆ.

ಇದನ್ನೂ ಓದಿ:  K.S Eshwarappa: ರಾಜೀನಾಮೆ ಗಡಿಬಿಡಿಯಲ್ಲೇ 29 ಅಧಿಕಾರಿಗಳ ವರ್ಗಾವಣೆ; ಈಶ್ವರಪ್ಪ ಮೇಲೆ ಮತ್ತೊಂದು ಆರೋಪ

ಹಳೆ ಹೇಳಿಕೆ ಸಮರ್ಥಿಕೊಂಡ ಶಾಸಕಿ ಹೆಬ್ಬಾಳ್ಕರ್

ಇದಕ್ಕೆ ಸಮರ್ಥನೆ ಮಾಡಿಕೊಂಡಿರೋ ಶಾಸಕಿ ಹೆಬ್ಬಾಳ್ಕರ್ ವರೆಸೆ ಏನು ಅಂತೀರಾ ನೀವೆ ಕೇಳಿ, ನನ್ನ ಹೇಳಿಕೆ ಟ್ರೋಲ್ ಮಾಡಲಿ, ನಾನು ಸ್ವಾಗತ ಮಾಡ್ತಿ‌ನಿ. ನಾನು ನನ್ನ ಹೇಳಿಕೆಯಿಂದ ಹಿಂದೆ ಸರಿಯಲ್ಲ. ಇಲಾಖೆ ಅಧಿಕಾರಿಗಳ ಜವಾಬ್ದಾರಿ ಇದೆಯಲ್ಲ. ಜಿಪಂ ಸಿಇಓ ಅವರನ್ನು ಮೂರು ಸಲ ಭೇಟಿಯಾಗಿದ್ದೀನಿ. ನನ್ನ ಗಮನಕ್ಕೆ ಬಂದಿದ್ದರಿಂದಲೇ ನಾನು ಓಡಾಡಿದ್ದೀನಿ. ಯಾವ ಇಲಾಖೆಯಿಂದ ಕೆಲಸ ಆಗಿದೆ. ಕಳಪೆನಾ ಏನು ಅಂತ ಅವರ ಇಲಾಖೆ ಅಧಿಕಾರಿಗಳ ಜವಾಬ್ದಾರಿಯಾಗಿದೆ. ಈಶ್ವರಪ್ಪ ಭರವಸೆ ಮೇಲೆ ಸಂತೋಷ ಪಾಟೀಲ್ ಕೆಲಸ ಮಾಡಿದ್ದಾನೆ. ಈ ಬಗ್ಗೆ ಗ್ರಾಪಂ ಅಧ್ಯಕ್ಷರ ವಿರುದ್ಧವು ತನಿಖೆ  ಆಗಬೇಕು‌ ಎಂದು ಒತ್ತಾಯ ಮಾಡಿದ್ದಾರೆ.
Published by:Mahmadrafik K
First published: