Santosh Patil ಕುಟುಂಬಕ್ಕೆ ಕೋಟಿ ಪರಿಹಾರ, ಹೆಂಡತಿಗೆ ಸರ್ಕಾರಿ ನೌಕರಿ ನೀಡಬೇಕು; ಕಾಂಗ್ರೆಸ್​ ಆಗ್ರಹ

ಮೃತರ ಕುಟುಂಬಕ್ಕೆ ಕೂಡಲೇ ಒಂದು ಕೋಟಿ ಪರಿಹಾರ ಕೊಡಬೇಕು. ಅವರ ಪತ್ನಿಗೆ ಸರ್ಕಾರದ ನೌಕರಿ ಕೊಡಬೇಕು . ಈಶ್ವರಪ್ಪ ಮೇಲೆ ಕಾನೂನು ಪ್ರಕಾರ ಕ್ರಮ ಆಗಬೇಕು.

ಸಂತೋಷ್​ ಪಾಟೀಲ್​ ಕುಟುಂಬಕ್ಕೆ ಕಾಂಗ್ರೆಸ್​ ನಾಯಕರ ಸಾಂತ್ವನ

ಸಂತೋಷ್​ ಪಾಟೀಲ್​ ಕುಟುಂಬಕ್ಕೆ ಕಾಂಗ್ರೆಸ್​ ನಾಯಕರ ಸಾಂತ್ವನ

 • Share this:
  ಬೆಳಗಾವಿ (ಏ. 13):  ಉಡುಪಿಯಲ್ಲಿ ಆತ್ಮಹತ್ಯೆಗೆ ಶರಣಾದ ಸಂತೋಷ್​ ಪಾಟೀಲ್ ​ (Santosh Patil) ಅವರ ಬೆಳಗಾವಿ ಮನೆಗೆ ಕಾಂಗ್ರೆಸ್​ ಸದಸ್ಯರು (Congress leader) ಭೇಟಿ ನೀಡಿ, ಅವರ ಕುಟುಂಬಕ್ಕೆ ಸಾಂತ್ವನ ತಿಳಿಸಿದ್ದಾರೆ. ರಣದೀಪ್ ಸುರ್ಜೆವಾಲಾ, ಸಿದ್ದರಾಮಯ್ಯ, ಡಿಕೆ ಶಿವಕುಮಾರ್​ ಸೇರಿದಂತೆ ಹಲವು ನಾಯಕರ ದಂಡು ಮೃತ ಸಂತೋಷ ಪಾಟೀಲ್ ಪತ್ನಿ, ತಾಯಿಗೆ ಸಮಾಧಾನ ತಿಳಿಸಿದರು. ಇದಾದ ಬಳಿಕ ಕಾಂಗ್ರೆಸ್​ ಕಚೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಸಿದ್ದರಾಮಯ್ಯ, ನಾವು ಇಲ್ಲಿಗೆ ರಾಜಕಾರಣ ಮಾಡಲು ಬಂದಿಲ್ಲ ಎಂದು ಸ್ಪಷ್ಟಪಡಿಸಿದರು. 

  ಸಾವಿಗೆ ಈಶ್ವರಪ್ಪ ಕಾರಣ

  ಸಂತೋಷ್​ ಸಾವು ಅಮಾನವೀಯವಾಗಿದೆ. ಸಂತೋಷ್ ಸಾವಿಗೆ ಈಶ್ವರಪ್ಪನವರೇ ಕಾರಣ ಸಂತೋಷ ಕೂಡ ವಾಟ್ಸ್​ಆ್ಯಪ್​ ಮೆಸೇಜ್​ನಲ್ಲಿ ಹೇಳಿದ್ದಾರೆ. ಸಂತೋಷ ತಾಯಿ ಮತ್ತು ಪತ್ನಿ ಕೂಡ ಹೇಳಿದ್ದಾರೆ. ಸಂತೋಷ್ ಸಾವಿಗೆ ಈಶ್ವರಪ್ಪ ಕಾರಣ ಎಂದಿದ್ದಾರೆ ಎಂದು ತಿಳಿಸಿದರು.

  ಒಂದು ಕೋಟಿ ಪರಿಹಾರ, ಸರ್ಕಾರಿ ನೌಕರಿ ನೀಡಿ
  ಮೃತರ ಕುಟುಂಬಕ್ಕೆ ಕೂಡಲೇ ಒಂದು ಕೋಟಿ ಪರಿಹಾರ ಕೊಡಬೇಕು. ಅವರ ಪತ್ನಿಗೆ ಸರ್ಕಾರದ ನೌಕರಿ ಕೊಡಬೇಕು . ಈಶ್ವರಪ್ಪ ಮೇಲೆ ಕಾನೂನು ಪ್ರಕಾರ ಕ್ರಮ ಆಗಬೇಕು. ಕೂಡಲೇ ಈಶ್ವಪ್ಪರನ್ನು ಅರೆಸ್ಟ್ ಮಾಡಬೇಕು.

  ಈಶ್ವರಪ್ಪ ಸಚಿವನಾಗಲು ನಾಲಾಯಕ್​​

  ಭ್ರಷ್ಟಚಾರ, ಮರ್ಡರ್ ಕೇಸ್ ದಾಖಲು ಮಾಡಬೇಕು ಎಂದು ಆಗ್ರಹಿಸಿದರು
  ವರ್ಕ್​ ಆರ್ಡರ್​ ಇಲ್ಲದೇ ಕೆಲಸ ಹೇಗೆ ಆಗುತ್ತದೆ ಎಂಬ ಈಶ್ವರಪ್ಪ ಅವರ ಪ್ರಶ್ನೆಗೆ ಉತ್ತರಿಸಿದ ವಿಪಕ್ಷ ನಾಯಕ ಬೆಳಗಾವಿಯ ಹಿಂಡಲಗಾದಲ್ಲಿ ಕಾಮಗಾರಿ ವಿಚಾರದಲ್ಲಿ ಮಂತ್ರಿ ಹೇಳದೇ ಕಲಸ ಮಾಡಲು ಆಗುತ್ತಾ? ಮಂತ್ರಿ ಹೇಳಿದ ಮೇಲೆ ಕೆಲಸ ಮಾಡಿದ್ದಾರೆ. 40% ಕಮಿಷನ್ ಬೇಡಿದ್ದಾರೆ ಅಂತಾ ಸಂತೋಷ ತಾಯಿ ಹೇಳುತ್ತಿದ್ದಾರೆ. ಸಂತೋಷ್​ 4 ಕೋಟಿ ರೂ. ಕೆಲಸ ಮಾಡಿದ್ದಾರೆ. ಅದಕ್ಕೆ ಈಶ್ವರಪ್ಪ ಕಮಿಷನ್ ಡಿಮ್ಯಾಂಡ್ ಮಾಡಿದ್ದರಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಾವೆಲ್ಲರೂ ಸಂತೋಷ್​ ಅವರ ಕುಟುಂಬದ ಜೊತೆಗೆ ನಾವು ಇದ್ದೇವೆ. ಈಶ್ವರಪ್ಪ ಸಚಿವನಾಗಲು ನಾಲಾಯಕ. ಭ್ರಷ್ಟಾಚಾರ ಎಸಗಿದ್ದಾರೆ.

  ಇದನ್ನು ಓದಿ: KS Eshwarappa ಬಂಧನಕ್ಕೆ ಆಗ್ರಹಿಸಿ ಸಿಎಂ ಕಚೇರಿಗೆ ಮುತ್ತಿಗೆ; AAP ಕಾರ್ಯಕರ್ತರನ್ನು ವಶಕ್ಕೆ ಪಡೆದ ಪೊಲೀಸರು

  ಪ್ರಕರಣದಲ್ಲಿ ಬೊಮ್ಮಾಯಿ ಕೂಡ ಭಾಗಿ

  ರಣದೀಪ್ ಸಿಂಗ್ ಸುರ್ಜೇವಾಲ ಮಾತನಾಡಿ, ಬೊಮ್ಮಾಯಿ ಸರ್ಕಾರ ಈಶ್ವರಪ್ಪ ಪರ ನಿಲ್ಲುತ್ತಿದೆ. ಸಿಎಂ ಬೊಮ್ಮಾಯಿ ಕೂಡಾ ಇದರಲ್ಲಿ ಶಾಮೀಲಾಗಿದ್ದಾರೆ. ಬಿಜೆಪಿ ಸಚಿವರನ್ನ ಜೈಲಿಗೆ ಕಳಿಸುವ ಸಮಯ ಬಂದಿದೆ. ನಾವು ಅವರ ಕುಟುಂಬಕ್ಕೆ ಸಾಂತ್ವನ ಹೇಳಿದ್ದೆವೆ. ಕೊಲೆಯ ಮಂತ್ರಿ ಜೈಲಿನ ಒಳಗೆ ಹಾಕಬೇಕು ಅರುಣಸಿಂಗ್ ಅವರಿಗೆ ವಿಧವಾ ಮಹಿಳೆ ಕಣ್ಣೀರು ಕಾಣ್ತಾಯಿಲ್ಲ ಎಂದು ಕೇಳಿದರು.

  ಇದನ್ನು ಓದಿ: ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ; KS Eshwarappa

  ಸಾವಿನ ಮನೆಯಲ್ಲಿ ರಾಜಕಾರಣ ಮಾಡುತ್ತಿಲ್ಲ

  ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​ ಮಾತನಾಡಿ, ಸಾವಿನ ಮನೆಯಲ್ಲಿ ರಾಜಕಾರಣ ಮಾಡಲು ಬಂದಿಲ್ಲ.  ನಾವು ನ್ಯಾಯ ಕೊಡಿಸುವ ಸಲುವಾಗಿ ಬಂದಿದ್ದೇವೆ. ಕುಟುಂಬದಲ್ಲಿ ನೋವು ನೀವು ನೋಡಿದ್ದೀರ. ‌ತಾಯಿ, ಪತ್ನಿ ಎಲ್ಲಾ ವಿಚಾರ ನೋವು ಹೇಳಿದ್ದಾರೆ. ಇದು ಯಾರಿಂದ? ಸಾವಿಗೆ ಕಾರಣ ಏಕೆ ಅಂತಾ ಹೇಳಿದ್ದಾರೆ. ಇಂತಹ ಸಾವುಗಳನ್ನು  ನಿಲ್ಲಿಸಲು ಬಂದಿದ್ದೇವೆ ಎಂದರು.

  ಇನ್ನು ಪ್ರಕರಣ ಕುರಿತು ಸ್ಪೋಟಕ ಮಾಹಿತಿ ನೀಡಿದ ಕಾಂಗ್ರೆಸ್​ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್, ಸಂತೋಷ್ ಪಾಟೀಲ್​​​ಗೆ ಈಶ್ವರಪ್ಪ ಮಗ, ಶಾಸಕ ಧಮ್ಕಿ ಹಾಕಿದ್ದರು. ಈ ಒತ್ತಡವೂ ಸಂತೋಷ್ ಆತ್ಮಹತ್ಯೆಗೆ ಕಾರಣ ಎಂಬ ಮಾಹಿತಿಯಿದೆ. ಸಂತೋಷ್​ ಕಡೆಯವರಿಂದ ನನಗೆ ಈ ಮಾಹಿತಿ ಸಿಕ್ಕಿದೆ. ಈ ಬಗ್ಗೆ ರಾಜ್ಯ ನಾಯಕರು  ಸಮಗ್ರ ಮಾಹಿತಿ ನೀಡುತ್ತಾರೆ. ನಮ್ಮ ರಾಜ್ಯ ನಾಯಕರು ಸಂಜೆ ಇದರ ಬಗ್ಗೆ ವಿಸ್ತಾರವಾದ ಮಾಹಿತಿ ಬಿಡುಗಡೆ ಮಾಡುತ್ತಾರೆ ಎಂದರು
  Published by:Seema R
  First published: