• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • ಬೆಳಗಾವಿಯಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ಸೋದರನಿಗೆ ಗೆಲುವು: ರಮೇಶ್ ಜಾರಕಿಹೊಳಿ ಬಗ್ಗೆ ಡಿಕೆಶಿ ವ್ಯಂಗ್ಯ!

ಬೆಳಗಾವಿಯಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ಸೋದರನಿಗೆ ಗೆಲುವು: ರಮೇಶ್ ಜಾರಕಿಹೊಳಿ ಬಗ್ಗೆ ಡಿಕೆಶಿ ವ್ಯಂಗ್ಯ!

ಲಕ್ಷ್ಮೀ ಹೆಬ್ಬಾಳ್ಕರ್​, ಡಿಕೆಶಿ, ರಮೇಶ್​ ಜಾರಕಿಹೊಳಿ

ಲಕ್ಷ್ಮೀ ಹೆಬ್ಬಾಳ್ಕರ್​, ಡಿಕೆಶಿ, ರಮೇಶ್​ ಜಾರಕಿಹೊಳಿ

MLC Election Results: ಚುನಾವಣೆ ಫಲಿತಾಂಶ ಬಳಿಕ ಡಿಕೆಶಿ ಜತೆಗೆ ಓಪನ್ ವಾರ್ ಆಗಲಿ ಎಂದಿದ್ದ ರಮೇಶ್​ ಜಾರಕಿಹೊಳಿ‌ಗೆ ಮಾತಿನಲ್ಲೇ ತಿವಿದರು. ಯಾರು ಯಾರನ್ನು ಸೋಲಿಸಿದ್ರು ಅಂತ ಸಿಎಂ ಬೊಮ್ಮಾಯಿ ಹೇಳಬೇಕು ಎಂದು ಡಿಕೆಶಿ ಸವಾಲೆಸೆದರು.

  • Share this:

ಬೆಳಗಾವಿ: ವಿಧಾನ ಪರಿಷತ್​ ಚುಣಾವಣಾ ಫಲಿತಾಂಶ (MLC Election Results) ಹೊರ ಬಿದ್ದಿದ್ದು, ಪ್ರತಿಷ್ಠೆಯ ಕಣವಾಗಿದ್ದ ಬೆಳಗಾವಿಯಲ್ಲಿ (Belgaum) ಕಾಂಗ್ರೆಸ್​​ (Congress) ಮೇಲುಗೈ ಸಾಧಿಸಿದೆ. ದ್ವಿಕ್ಷೇತ್ರವಾಗಿರುವ ಬೆಳಗಾವಿ-ಚಿಕ್ಕೋಡಿಯಲ್ಲಿ ಚನ್ನರಾಜು (ಕಾಂಗ್ರೆಸ್), ಲಖನ್ ಜಾರಕಿಹೊಳಿ (ಪಕ್ಷೇತರ) ಗೆಲುವು ಸಾಧಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಸೋಲು ಕಂಡಿದ್ದಾರೆ. ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್​​ ಸೋದರ ಚನ್ನರಾಜು ಗೆಲುವಿನ ಮೂಲಕ ಮಾಜಿ ಸಚಿವ ರಮೇಶ್​ ಜಾರಕಿಹೊಳಿ ಎದುರು ಡಿಕೆಶಿ-ಲಕ್ಷ್ಮೀ ಹೆಬ್ಬಾಳ್ಕರ್​ ಹಿರಿಹಿರಿ ಹಿಗ್ಗಿದ್ದಾರೆ. ಈ ಸಂಬಂಧ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಮಾಜಿ ಸಚಿವ ರಮೇಶ ಜಾರಕಿಹೊಳಿಗೆ ಟಾಂಗ್ ‌ಕೊಟ್ಟರು. ಚುನಾವಣೆ ಫಲಿತಾಂಶ ಬಳಿಕ ಡಿಕೆಶಿ ಜತೆಗೆ ಓಪನ್ ವಾರ್ ಆಗಲಿ ಎಂದಿದ್ದ ರಮೇಶ್​ ಜಾರಕಿಹೊಳಿ‌ಗೆ ಮಾತಿನಲ್ಲೇ ತಿವಿದರು. ಯಾರು ಯಾರನ್ನು ಸೋಲಿಸಿದ್ರು ಅಂತ ಸಿಎಂ ಬೊಮ್ಮಾಯಿ ಹೇಳಬೇಕು. ರಮೇಶನನ್ನು ಪಕ್ಕದಲ್ಲಿ ಕುರಿಸಿಕೊಂಡು ಬೊಮ್ಮಾಯಿ‌ ಒಂದು ಮತ ನಾನು ಕೇಳಿತ್ತಿನಿ ಅಂದಿದ್ರು ಎಂದು ವ್ಯಂಗ್ಯವಾಡಿದರು.


ಇದನ್ನೂ ಓದಿ: MLC Election Results: ಪರಿಷತ್ ಚುನಾವಣಾ ಫಲಿತಾಂಶ: ಯಾರಿಗೆ ಎಷ್ಟು ಸ್ಥಾನ? ಫೈನಲ್ ಪಟ್ಟಿ ಇಲ್ಲಿದೆ


‘ಬಿಚ್ಚಿದ್ದು ಮಾಡಿದ್ದು ನಾವೆಲ್ಲ ನೋಡಿದ್ದೇವೆ’


ಸ್ವಯಂಕೃತ ಅಪರಾಧವನ್ನು ಬಿಜೆಪಿ ಮಾಡಿಕೊಂಡಿದೆ. ಬೇಕಾಗಿತ್ತು ಮಾಡಿಕೊಂಡಿದ್ದಾರೆ, ಒಳ್ಳೆಯದಾಗಲಿ. ಬಹಿರಂಗ ವಾರ್ ಯಾವ ವಾರ್ ಅವರನ್ನೇ ಕೇಳಿ. ಬಿಚ್ಚಿದ್ದು ಮಾಡಿದ್ದು ನಾವೆಲ್ಲ ನೋಡಿದ್ದೇವೆ ಎನ್ನುವ ಮೂಲಕ ಪರೋಕ್ಷವಾಗಿ ಸಿಡಿ ಪ್ರಕರಣವನ್ನು ಉಲ್ಲೇಖಿಸಿದರು. ರಾಜ್ಯದಲ್ಲಿ ಪರಿಷತ್ ಚುನಾವಣೆ ಫಲಿತಾಂಶ ಸಂಬಂಧ ವೈಯಕ್ತಿಕವಾಗಿ ಅತಿ ಸಂತೋಷ ಆಗಿಲ್ಲ, ಸಂತೋಷ ಅಷ್ಟೇ ಆಗಿದೆ. ನಮ್ಮ ಪ್ರಕಾರ 13 ರಿಂದ 14 ಸ್ಥಾನ ಗೆಲ್ಲಬೇಕಿತ್ತು. ರಾಜ್ಯದಲ್ಲಿ 11 ಕಡೆ ಕಾಂಗ್ರೆಸ್ ಗೆದ್ದಿದ್ದೇವೆ. ಕಲಬುರಗಿ, ಕೊಡಗು,‌ ಚಿಕ್ಕಮಗಳೂರನಲ್ಲಿ ನಿರೀಕ್ಷೆ ಹುಸಿಯಾಗಿದೆ. ದ್ವಿಸದಸ್ಯ ಸ್ಥಾನಗಳಲ್ಲಿ ಬಿಜೆಪಿಗೆ ಹಿನ್ನಡೆಯಾಗಿದೆ. ಮತದಾರರು ಬಿಜೆಪಿ ಅಧಿಕೃತ ಅಭ್ಯರ್ಥಿ ವಿರುದ್ಧ ಮತದಾನ ಆಗಿದೆ ಎಂದು ಫಲಿತಾಂಶವನ್ನು ವಿಶ್ಲೇಷಿಸಿದರು.


ಕಾಂಗ್ರೆಸ್ ನಾಯಕರ ಒಗ್ಗಟ್ಟಿಗೆ ಗೆಲವು


ರಾಜ್ಯದಲ್ಲಿ ಜನ ಬದಲಾವಣೆ ಬಯಸಿದ್ದಾರೆ. ಹಾನಗಲ್ ನಲ್ಲಿ ಮತದಾರರು ಬದಲಾವಣೆ ಬಯಸಿದ್ರು. ಈ ಚುನಾವಣೆಯಲ್ಲಿ ನಾಯಕರು ಬದಲಾವಣೆ ಬಯಸಿದ್ದಾರೆ. ಚುನಾವಣೆಯಲ್ಲಿ ಕಾಂಗ್ರೆಸ್ ನಾಯಕರು ಒಗ್ಗಟ್ಟು ಪ್ರದರ್ಶನ ಮಾಡಿದ್ರು. ನಮಗೆ ಬಿಜೆಪಿ, ದಳ ಪಕ್ಷದಿಂದ ಮತಗಳು ಬಂದಿವೆ. ಸಾಮೂಹಿಕ ನಾಯಕತ್ವದ ಚುನಾವಣೆ ಮಾಡಿ ಯಶಸ್ವಿಯಾಗಿದ್ದೇವೆ. ಹಣಬಲದಿಂದ ಕಾಂಗ್ರೆಸ್, ಬಿಜೆಪಿ ಗೆಲವು ಸಾಧಿಸಿದಿ ಎಂಬ ಎಚ್ ಡಿಕೆ ಆರೋಪಕ್ಕೆ ಏನ್ ಒಂದು ಬಲ ಇದಿಯಲ್ಲ ಬಿಡಿ ಎಂದರು ಉಡಾಫೆಯಲ್ಲಿ ಪ್ರತಿಕ್ರಿಯಿಸಿದರು.


ಇದನ್ನೂ ಓದಿ: ಚಿಕ್ಕಮಗಳೂರಿನಲ್ಲಿ 3 ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿ ಗೆಲುವು: ಮರು ಎಣಿಕೆಗೆ ಕಾಂಗ್ರೆಸ್ ಆಗ್ರಹ


ಜಾರಕಿಹೊಳಿ ಬ್ರದರ್ಸ್ ಗೆ ಟಾಂಗ್


ಸೋದರನ ಗೆಲುವಿನ ಬಳಿ ಮಾತನಾಡಿದ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್​, ಜಾರಕಿಹೊಳಿ ಬ್ರದರ್ಸ್ ಗೆ ತಿರುಗೇಟು ನೀಡಿದರು. ದೇವರ ಆಶೀರ್ವಾದ, ಮತದಾರರ ಆಶೀರ್ವಾದಿಂದ ಗೆಲುವು ಸಾಧಿಸಿದ್ದೇವೆ. ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ನೇತೃತ್ವದಲ್ಲಿ ಚುನಾವಣೆ ನಡೆಸಿ ಜಯ ಸಾಧಿಸಿದ್ದೇವೆ. ಅವರು ಕಾಂಗ್ರೆಸ್​​ನ ಸೋಲಸ್ತಿವಿ ಸೋಲಸ್ತಿವಿ ಅಂದ್ರು. ನಾವು ಗೆಲ್ಲುತ್ತಿವಿ ಗೆಲ್ಲುತ್ತಿವಿ ಎಂದು ಗೆದ್ದಿದ್ದೇವೆ ಎಂದು ಹೇಳುವ ಮೂಲಕ ಜಾರಕಿಹೊಳಿ ಬ್ರದರ್ಸ್ ಗೆ ಟಾಂಗ್​ ಕೊಟ್ಟರು. ಕಾಂಗ್ರೆಸ ಪಕ್ಷ ಒಟ್ಟಗ್ಗಿನಿಂದ ಚುನಾವಣೆ ಎದುರಿಸಿದೆ.


2023ರ ಚುನಾವಣೆಗೆ ದಿಕ್ಸೂಚಿ


ಎಂಎಲ್​​ಸಿ ಚುನಾವಣೆ ಫಲಿತಾಂಶ ಮುಂದಿನ 2023ರ ಚುನಾವಣೆಗೆ ದಿಕ್ಸೂಚಿ ಆಗಿದೆ.  2023 ರಲ್ಲಿ ಮತ್ತೆ ಕಾಂಗ್ರೆಸ್​​​ ಪಕ್ಷ ಅಧಿಕಾರಕ್ಕೆ ತರಲು ಶ್ರಮಿಸ್ತಿವಿ. ಕಾಂಗ್ರೆಸ್​​ ಪಕ್ಷದಲ್ಲಿ ದೆಹಲಿ ಹೈಕಮಾಂಡ್ ಪವರ್ ಸೆಂಟರ್ . ನನ್ನ ಸಮುದಾಯದ ಬಾಂಧವರು ಕೈ ಹಿಡಿದಿದ್ದಾರೆ. ಅನ್ಯ ಸಮುದಾಯದ ಜನರು ನನ್ನ ಮಗಳಾಗಿ ಸ್ವೀಕರಿಸಿದ್ದಾರೆ. ಕಾಂಗ್ರೆಸ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು ಶ್ರಮವಹಿಸಿದ್ದಾರೆ. ಪಕ್ಷೇತರ ಅಭ್ಯರ್ಥಿ ಗೆಲುವಿನ ಬಗ್ಗೆ ಅವರ ಹೈಕಮಾಂಡ್ ಯೋಚನೆ ಮಾಡಲಿದೆ ನಾನಲ್ಲ ಎಂದರು.

Published by:Kavya V
First published: