ಬೆಳಗಾವಿ (ಸೆಪ್ಟೆಂಬರ್ 23): ರಾಜ್ಯದ ಎರಡು ಜಿಲ್ಲೆಗಳ ನಡುವೆ ಒಂದೇ ಕಚೇರಿಗಾಗಿ ಜಟಾಪಟಿ ಆರಂಭ ಆಗಿದೆ. ಬೆಳಗಾವಿ- ಧಾರವಾಡ (Belagavi And Dharawada) ನಡುವೆ ಕಚೇರಿಗಾಗಿ ಪೈಪೋಟಿ ಶುರುವಾಗಿದೆ. ಕಚೇರಿ ಆರಂಭವಾಗಿ ಒಂದು ವಾರ ಕಳೆಯುವ ಮೊದಲೇ ಹೈಜಾಕ್ ಮಾಡಲು ಯತ್ನ ನಡೆದಿದೆ. ಬೆಳಗಾವಿಯ ಕಚೇರಿಯನ್ನು ಧಾರವಾಡದಿಂದ ಹೈಜಾಕ್ ಮಾಡಲು ಯತ್ನ ನಡೆದಿದ್ದು, ಬೆಳಗಾವಿ ಹೋರಾಟಗಾರರ ಕೆಂಗಣ್ಣಿಗೆ ಗುರಿಯಾಗಿದೆ.
ಬೆಳಗಾವಿಗೆ ಕನ್ನಡ- ಸಂಸ್ಕೃತಿ ಜಂಟಿ ನಿರ್ದೇಶಕ ಕಚೇರಿ ಮಂಜೂರು ಆಗಿದೆ. ಸೆಪ್ಟೆಂಬರ್ 20ರಂದು ಬಸವರಾಜ್ ಹೂಗಾರ ಅಧಿಕಾರ ಸ್ವೀಕಾರ ಮಾಡಿದ್ದಾರೆ. ಬೆಳಗಾವಿಯಲ್ಲಿ ಇನ್ನೂ ಕಚೇರಿಗೆ ಸೂಕ್ತ ಜಾಗ ಸಿಕ್ಕಿಲ್ಲ. ಅದಕ್ಕೂ ಮೊದಲೇ ಕಚೇರಿಯನ್ನು ಧಾರವಾಡಕ್ಕೆ ಶಿಫ್ಟ್ ಮಾಡಲು ಒತ್ತಡ ಆರಂಭವಾಗಿದೆ. ಧಾರವಾಡದ ಸಾಹಿತಿಗಳು, ಹೋರಾಟಗಾರರ ಪ್ರಯತ್ನಕ್ಕೆ ಬೆಳಗಾವಿಯ ಕನ್ನಡ ಪರ ಹೋರಾಟಗಾರರಿಂದ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಾರ್ಯಕ್ಷಮತೆ ಹೆಚ್ಚಿಸಲು ರಾಜ್ಯದ ನಾಲ್ಕು ಕಂದಾಯ ವಿಭಾಗಗಳಲ್ಲಿ ಜಂಟಿ ನಿರ್ದೇಶಕರ ಕಚೇರಿ ಆರಂಭಿಸಲಾಗಿದೆ. ಬೆಳಗಾವಿಯ ಕಂದಾಯ ವಿಭಾಗಕ್ಕೆ ಒಂದು ಕಚೇರಿ ಮಂಜೂರು ಆಗಿದೆ. ಬೆಳಗಾವಿಯ ವಲಯ ಕಚೇರಿ ಬಾಗಲಕೋಟೆ, ವಿಜಯಪುರ, ಹಾವೇರಿ, ಧಾರವಾಡ, ಉತ್ತರ ಕನ್ನಡ ಹಾಗೂ ಗದಗ ಜಿಲ್ಲೆಗಳ ವ್ಯಾಪ್ತಿಯಲ್ಲಿ ಹೊಂದಿದೆ. 7 ಜಿಲ್ಲೆಗಳ ಟ್ರಸ್ಟ್, ಅಕಾಡೆಮಿ, ರಂಗ ಮಂದರಿ, ರಂಗಾಯಣ, ಸಹಾಯಕ ನಿರ್ದೇಶಕರ ಮೇಲ್ವಿಚಾರಣೆಗೆ ಉಸ್ತುವಾರಿ ಜಂಟಿ ನಿರ್ದೇಶಕರಿಗೆ ಇದೆ.
ಬೆಳಗಾವಿಗೆ ಮಂಜೂರು ಆಗಿರುವ ಜಂಟಿ ನಿರ್ದೇಶಕರ ಕಚೇರಿಗೆ ಇನ್ನೂ ಕಚೇರಿ ಸ್ಥಳವಕಾಶವೇ ಸಿಕ್ಕಿಲ್ಲ. ಈ ಮೊದಲೇ ಕಚೇರಿಯನ್ನು ಧಾರವಾಡಕ್ಕೆ ಹೈಜಾಕ್ ಮಾಡಲು ಯತ್ನ ನಡೆದಿದೆ. ಸಾಹಿತಿಗಳ ಹಾಗೂ ಕಲಾವಿದರ ಅನಕೂಲಕ್ಕಾಗಿ ಧಾರವಾಡದಲ್ಲಿ ಕಚೇರಿ ಇರಬೇಕು. ಧಾರವಾಡದ ಸಾಹಿತಿಗಳು, ಮುಖಂಡರಿಂದ ಒಮ್ಮತದ ಆಗ್ರಹ ಬಂದಿದೆ. ಧಾರವಾಡದಲ್ಲಿ ಈ ಬಗ್ಗೆ ಸಭೆ ನಡೆಸಿ ಸರ್ಕಾರ ಮೇಲೆ ಹಕ್ಕೊತ್ತಾಯ ತರಲು ನಿರ್ಧಾರ ಮಾಡಲಾಗಿದೆ.
ಧಾರವಾಡ ಪ್ರಯತ್ನಕ್ಕೆ ಬೆಳಗಾವಿಯ ಹೋರಾಟಗಾರರ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಜಂಟಿ ನಿರ್ದೇಶಕ ಕಚೇರಿಯನ್ನು ಸುವರ್ಣ ಸೌಧದಲ್ಲಿ ಆರಂಭಿಸಲು ಬೆಳಗಾವಿ ಜಿಲ್ಲಾಧಿಕಾರಿಗೆ ಹೋರಾಟಗಾರ ಅಶೋಕ ಚಂದರಗಿ ಆಗ್ರಹ ಮಾಡಿದ್ದಾರೆ. ಜಂಟಿ ನಿರ್ದೇಶಕ ಬಸವರಾಜ ಹೂಗಾರ ಅಧಿಕಾರ ವಹಿಸಿಕೊಂಡಿದ್ದಾರೆ. ಬಳಿಕ ವಿಭಾಗದ ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಧಾರವಾಡದಲ್ಲಿ ನಡೆಸಿದ್ದಾರೆ. ಇದಾದ ಬಳಿಕ ಧಾರವಾಡದಲ್ಲಿ ಕಚೇರಿಯನ್ನು ಹೈಜಾಕ್ ಮಾಡುವ ಯತ್ನ ನಡೆದಿದೆ. ಬೆಳಗಾವಿ ರಾಜಕೀಯ ನಾಯಕರಿಗೆ ಕಚೇರಿ ಬಗ್ಗೆ ಉದಾಸೀನತೆ ಇದೆ. ಇದರ ಲಾಭ ಪಡೆಯಲು ಧಾರವಾಡ ಮುಖಂಡರು ಮುಂದಾಗಿರುವುದು ಖಂಡನೀಯ. ನಾವು ಸಹ ಕಚೇರಿಯನ್ನು ಉಳಿಸಿಕೊಳ್ಳಲು ಎಲ್ಲಾ ರೀತಿಯ ಹೋರಾಟ ಮಾಡುತ್ತೇವೆ ಎಂದಿದ್ದಾರೆ. ಇನ್ನೂ ಈ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿಗೆ ಸಹ ಮನವಿ ನೀಡಲು ನಿರ್ಧರಿಸಲಾಗಿದೆ. ಸರ್ಕಾರ ಈ ಬಗ್ಗೆ ಯಾವ ಕ್ರಮ ಕೈಗೊಳ್ಳಲಿದೆ ಎಂಬುದು ಈಗ ಕುತೂಹಲ.
ಇದನ್ನು ಓದಿ: Bullock cart Race: ಧೂಳೆಬ್ಬಿಸಿದ ರಾಸುಗಳು..! ಅಜ್ಜಂಪುರ ದಲ್ಲಿ ಜೋಡೆತ್ತಿನ ಗಾಡಿ ಸ್ಪರ್ಧೆ ನೋಡಿ ಮಸ್ತ್ ಎಂಜಾಯ್ ಮಾಡಿದ ಜನರು!
ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಅನಗತ್ಯವಾಗಿ ಯಾರೂ ಮನೆಯಿಂದ ಹೊರಗೆ ಬಾರದೆ ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕಿದೆ. ಹಾಗೂ ಗುಂಪುಗೂಡುವುದನ್ನು ಆದಷ್ಟು ನಿಯಂತ್ರಿಸಬೇಕಿದೆ. ಸರ್ಕಾರ ಕಾಲಕಾಲಕ್ಕೆ ಹೊರಡಿಸುತ್ತಿರುವ ಕೊರೋನಾ ಮಾರ್ಗಸೂಚಿಗಳನ್ನು ಪ್ರತಿಯೊಬ್ಬರೂ ಕಡ್ಡಾಯವಾಗಿ ಪಾಲಿಸಬೇಕಿದೆ. ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ