ಹುಬ್ಬಳ್ಳಿ- ಧಾರವಾಡ ಸೇರಿದಂತೆ ಮೂರು ಮಹಾನಗರ ಪಾಲಿಕೆಗಳ ಚುನಾವಣೆ ಘೋಷಿಸಿದ ಆಯೋಗ

ತಾಲೂಕು ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣೆಗಳನ್ನು ಕೊರೋನಾ ನೆಪ ಮಾಡಿಕೊಂಡು ಮುಂದೂಡಲಾಗಿದೆ. ಈಗ ಮೂರನೇ ಅಲೆಯ ಭೀತಿಯೂ ಸಹ ಎದುರಾಗಿರುವ ಕಾರಣ ಮತ್ತಷ್ಟು ಈ ಚುನಾವಣೆಗಳು ವಿಳಂಬವಾಗುವ ಸಂಭವವಿದೆ. ರಾಜ್ಯ ಸರ್ಕಾರವೇ ಚುನಾವಣೆ ನಡೆಸದಂತೆ ಚುನಾವಣಾ ಆಯೋಗದ ಬಳಿ ಮನವಿ ಮಾಡಿಕೊಂಡಿದೆ. ಈ ಹಿನ್ನೆಲೆಯಲ್ಲಿ ಚುನಾವಣೆ ಆಯೋಗ ಕ್ಷೇತ್ರಗಳ ಮೀಸಲಾತಿ ಪ್ರಕಟಿಸಿದರೂ ಚುನಾವಣೆ ದಿನಾಂಕ ಪ್ರಕಟಿಸಿಲ್ಲ.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

 • Share this:
  ಹುಬ್ಬಳ್ಳಿ-ಧಾರವಾಡ, ಬೆಳಗಾವಿ, ಕಲಬುರ್ಗಿ ನಗರ ಪಾಲಿಕೆಗಳಿಗೆ ರಾಜ್ಯ ಚುನಾವಣಾ ಆಯೋಗ ಬುಧವಾರದಂದು (ಆ.11) ಚುನಾವಣಾ ದಿನಾಂಕ ಘೋಷಣೆ ಮಾಡಿ ರಾಜಕೀಯ ಪಕ್ಷಗಳಿಗೆ ದಿಡೀರ್​ ಶಾಕ್​ ನೀಡಿದೆ.

  ಆಗಸ್ಟ್ 16 ರಂದು ಚುನಾವಣಾ ಅಧಿಸೂಚನೆ ಪ್ರಕಟವಾಗಲಿದ್ದು, ಆಗಸ್ಟ್ 23 ರಂದು ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದೆ. ಸೆಪ್ಟೆಂಬರ್ 3ರಂದು ಮತದಾನ ನಡೆಯಲಿದೆ. ಸೆಪ್ಟೆಂಬರ್ 6 ರಂದು ಫಲಿತಾಂಶ ಪ್ರಕಟಗೊಳ್ಳಲಿದೆ.

  ರಾಜ್ಯದಲ್ಲಿ ಉಪ ಚುನಾವಣೆಗಳು ನಡೆದ ನಂತರ ತಾಲೂಕು, ಜಿಲ್ಲಾ ಪಂಚಾಯಿತಿ ಚುನಾವಣೆಗಳನ್ನ ನಡೆಸಲಾಗುತ್ತದೆ ಎಂದು ಹೇಳಲಾಗಿತ್ತು. ಆದರೆ, ಕೊರೋನಾ ನೆಪ ಮಾಡಿಕೊಂಡು ಚುನಾವಣೆ ಮುಂದೂಡಲಾಗಿತ್ತು,ಇದೀಗ ರಾಜ್ಯದ ಮೂರು ನಗರ ಪಾಲಿಕೆ ಚುನಾವಣೆಗೆ ದಿನಾಂಕ ಘೋಷಣೆ ಮಾಡಲಾಗಿದೆ.

  ಆ.16ರಂದು ಜಿಲ್ಲಾಧಿಕಾರಿಗಳು ಚುನಾವಣಾ ಅಧಿಸೂಚನೆ ಹೊರಡಿಸಲಿದ್ದು, ಅದೇ ದಿನದಿಂದ ಮೂರು ಮಹಾನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಗೆ ಬರಲಿದೆ.

  ಕಳೆದ ಮೂರು ವರ್ಷಗಳಿಂದ ಈ ಈ ಮೂರು ಮಹಾನಗರ ಪಾಲಿಕೆಗಳ ಚುನಾವಣೆ ನೆನೆಗುದಿಗೆ ಬಿದ್ದಿದ್ದವು. ಈಗ ಕಾಲ ಕೂಡಿ ಬಂದಂತೆ ಆಗಿದೆ ಎಂದು ಸ್ಥಳೀಯ ರಾಜಕೀಯ ಮುಖಂಡರು ಸಂತಸ ವ್ಯಕ್ತಪಡಿಸಿದ್ದಾರೆ.

  ತಾಲೂಕು ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣೆಗಳನ್ನು ಕೊರೋನಾ ನೆಪ ಮಾಡಿಕೊಂಡು ಮುಂದೂಡಲಾಗಿದೆ. ಈಗ ಮೂರನೇ ಅಲೆಯ ಭೀತಿಯೂ ಸಹ ಎದುರಾಗಿರುವ ಕಾರಣ ಮತ್ತಷ್ಟು ಈ ಚುನಾವಣೆಗಳು ವಿಳಂಬವಾಗುವ ಸಂಭವವಿದೆ. ರಾಜ್ಯ ಸರ್ಕಾರವೇ ಚುನಾವಣೆ ನಡೆಸದಂತೆ ಚುನಾವಣಾ ಆಯೋಗದ ಬಳಿ ಮನವಿ ಮಾಡಿಕೊಂಡಿದೆ. ಈ ಹಿನ್ನೆಲೆಯಲ್ಲಿ ಚುನಾವಣೆ ಆಯೋಗ ಕ್ಷೇತ್ರಗಳ ಮೀಸಲಾತಿ ಪ್ರಕಟಿಸಿದರೂ ಚುನಾವಣೆ ದಿನಾಂಕ ಪ್ರಕಟಿಸಿಲ್ಲ.

  ಈಗ ಈ ಮಹಾನಗರ ಪಾಲಿಕೆಗಳಿಗೆ ಕರ್ನಾಟಕ ಚುನಾವಣೆ ಆಯೋಗ ಚುನಾವಣೆ ಘೋಷಣೆ ಮಾಡಿರುವುದನ್ನು ನೋಡಿದರೆ ಮುಂದಿನ ದಿನಗಳಲ್ಲಿ ತಾಲೂಕು, ಜಿಲ್ಲಾ ಪಂಚಾಯಿತಿ ಚುನಾವಣೆ ನಿಗದಿ ಮಾಡುವ ಎಲ್ಲಾ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ. ಅಲ್ಲದೇ ಬೃಹತ್​ ಬೆಂಗಳೂರು ಚುನಾವಣೆಯೂ ಸಹ ವಾರ್ಡ್​ ಮರು ವಿಂಗಡಣೆ ಹಾಗೂ ಹೊಸಾ ಬಿಬಿಎಂಪಿ ಕಾಯ್ದೆ ಜಾರಿ ಸಲುವಾಗಿ ಈಗಾಗಲೇ ತಡವಾಗಿದೆ.

  ಅಲ್ಲದೇ ಬಿಜೆಪಿ ತಾನು ಸೋಲುತ್ತೇನೆ ಎನ್ನುವ ಭೀತಿಯಿಂದ ಬಿಬಿಎಂಪಿ ಚುನಾವಣೆಯನ್ನು ಬೇಕಂತಲೇ ಮುಂದೂಡುತ್ತಿದೆ ಎಂಬುದು ಪ್ರತಿಪಕ್ಷಗಳ ಆರೋಪ. ಮೇಲಿನ ಎಲ್ಲಾ ಚುನಾವಣೆಗಳು ನಡೆದರೆ ಬಿಬಿಎಂಪಿ ಚುನಾವಣೆ ಮಾಡಲೇ ಬೇಕಾದ ಒತ್ತಡಕ್ಕೆ ಆಯೋಗ ಸಿಲುಕಿಕೊಳ್ಳುತ್ತದೆ. ಹಾಗಾದರೆ ಕೊರೋನಾ ಮೂರನೇ ಅಲೆಯ ನಡುವೆಯೂ ರಾಜ್ಯದಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣಾ ಕಾವು ಸಾಕಷ್ಟು ಸುದ್ದಿ ಮಾಡಲಿದೆ.

  ಇದನ್ನೂ ಓದಿ: ಸದ್ಯದಲ್ಲೇ ಕೆಜಿಎಫ್​ ಬಳಿ ತಲೆ ಎತ್ತಲಿರುವ ಬೃಹತ್ ಕೈಗಾರಿಕಾ ಟೌನ್ ಶಿಪ್: ಸಚಿವ ನಿರಾಣಿ ಮಾಹಿತಿ

  ನೂತನ ಸಿಎಂ ಆಗಿ ಗಾದಿಗೆ ಏರಿರುವ ಹಾಗೂ ಮೂರು ಸ್ಥಳೀಯ ಸಂಸ್ಥೆಗಳು ಉತ್ತರ ಕರ್ನಾಟಕ ಭಾಗಕ್ಕೆ ಸೇರಿರುವ ಕಾರಣ ಬೊಮ್ಮಾಯಿ ಅವರಿಗೆ ಈಗಿರುವ ಜವಾಬ್ದಾರಿಯ ಜೊತೆಗೆ ಗೆಲ್ಲಲೇ ಬೇಕಾದ ಹೆಚ್ಚಿನ ಒತ್ತಡ ಬೀಳಬಹುದು ಎಂದು ಹೇಳಲಾಗುತ್ತಿದೆ.  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
  Published by:HR Ramesh
  First published: