ಬೆಳಗಾವಿಯಲ್ಲಿಂದು ಐದು ಭಾಷೆಯ ಡಿಜಿಟಲ್ ಗ್ರಂಥಾಲಯವನ್ನು ಲೋಕಾರ್ಪಣೆ ಮಾಡಲಿರುವ ಸಿಎಂ

ಸ್ಮಾರ್ಟ್ ಸಿಟಿ ಯೋಜನೆಯ ಅಡಿಯಲ್ಲಿ 2. 5 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಆಗಿರೋ  5 ಭಾಷೆಯ ರವೀಂದ್ರ ಕೌಶಿಕ್ ಡಿಜಿಟಲ್ ಗ್ರಂಥಾಯಲದ ಉದ್ಘಾಟನೆ ಮಾಡಲಿದ್ದಾರೆ.

ಡಿಜಿಟಲ್​ ಗ್ರಂಧಾಲಯ

ಡಿಜಿಟಲ್​ ಗ್ರಂಧಾಲಯ

 • Share this:
  ಬೆಳಗಾವಿ (ಸೆಪ್ಟೆಂಬರ್,25):  ಎರಡು ದಿನ ಜಿಲ್ಲಾ ಪ್ರವಾಸ ನಡೆಸಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿವಿಧ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.  ಇಂದು ಬೆಳಗಾವಿಯಲ್ಲಿ ಸ್ಮಾರ್ಟ್ ಸಿಟಿ ಯೋಜನೆಯ ಅಡಿಯಲ್ಲಿ 2. 5 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಆಗಿರೋ  5 ಭಾಷೆಯ ರವೀಂದ್ರ ಕೌಶಿಕ್ ಡಿಜಿಟಲ್ ಗ್ರಂಥಾಯಲದ ಉದ್ಘಾಟನೆ ಮಾಡಿ ಲೋಕಾರ್ಪಣೆ ಆಗಲಿದೆ. ಇದೇ ರೀತಿ 2.7 ಕೋಟಿ ವೆಚ್ಚದಲ್ಲಿ ನಿರ್ಮಾಣ ಆಗಿರುವಟ ರಾಜ್ಯದ ಮೊದಲ ಬುದ್ಧಿಮಾಂದ್ಯತೆ ಮಕ್ಕಳ ಪಾರ್ಕ್ ನ ಉದ್ಘಾಟನೆಯನ್ನು ಸಿಎಂ‌ ಬಸವರಾಜ ಬೊಮ್ಮಾಯಿ ನಡೆಸಲಿದ್ದಾರೆ. ಇದಕ್ಕಾಗಿ ಎಲ್ಲಾ ರೀತಿಯ ಅಂತಿಮ ಹಂತದ ಸಿದ್ಧತೆಗಳು ಪೂರ್ಣಗೊಂಡಿವೆ.

  5 ಭಾಷೆಯ ಡಿಜಿಟಲ್​ ಗ್ರಂಥಾಲಯ

  ಬೆಳಗಾವಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಶಾಸಕ ಅಭಯ ಪಾಟೀಲ್, ದೇಶಕ್ಕಾಗಿ ಸುಮಾರು 26 ವರ್ಷ ತಮ್ಮ ಯೌವನವನ್ನು‌ ಮುಡಿಪಾಗಿಟ್ಟ ಮರೆತು ಹೋಗಿದ್ದ ರವೀಂದ್ರ ಕೌಶಿಕ್ ಅವರ ಹೆಸರಿನ ಮೇಲೆ ಈ ಗ್ರಂಥಾಲಯವನ್ನು ಪ್ರಾರಂಭಿಸಲಾಗುತ್ತಿದೆ. ಈ ಕಾರ್ಯಕ್ರಮದಲ್ಲಿ ರವೀಂದ್ರ ಕೌಶಿಕ್ ಅವರ ಸಹೋದರ ಪತ್ನಿ, ಹಾಗೂ ಪುತ್ರ ಆಗಮಿಸಲಿದ್ದಾರೆ. ಅವರನ್ನು ಇಲ್ಲಿ ಸನ್ಮಾನಿಸಲಾಗುವುದು. ಗ್ರಂಥಾಲಯ ಕನ್ನಡ,‌ಮರಾಠಿ, ಹಿಂದಿ ಇಂಗ್ಲಿಷ್ ಸೇರಿ 5 ಭಾಷೆಗಳನ್ನು ಒಳಗೊಂಡ ಡಿಜಿಟಲ್ ಗ್ರಂಥಾಲಯ ಇದಾಗಿದೆ. ಜಗತ್ತಿನ ಯಾವ ದೇಶದಲ್ಲಿಯೂ ಇಂಥ ಗ್ರಂಥಾಲಯ ಇಲ್ಲ, ಇದು ಮಾದರಿಯಾಗಲಿದೆ ಎಂದರು.

  ಇದನ್ನು ಓದಿ: ಜನರ ಸುತ್ತಲೂ ಅಭಿವೃದ್ಧಿ ಆಗಬೇಕು, ಅಭಿವೃದ್ಧಿ ಸುತ್ತಲೂ ಜನರು ಓಡಾಡಬೇಕು; ಸಿಎಂ ಬಸವರಾಜ ಬೊಮ್ಮಾಯಿ

  ದೇಶಕ್ಕೆ ಮಾದರಿಯಾಗಲಿದೆ ಉದ್ಯಾನವನ

  ದೇಶಕ್ಕಾಗಿ ತ್ಯಾಗ ಮಾಡಿದ ಮಹನಿಯರನ್ನು ನೆನಪಿಸುವ ದೃಷ್ಟಿಯಿಂದ ಮರೆತು ಹೋಗಿದ್ದ ದೇಶ ಪ್ರೇಮಿ ರವೀಂದ್ರ ಕೌಶಿಕ್ ಅವರ ಹೆಸರನ್ನು ಈ ಗ್ರಂಥಾಲಯ ಕ್ಕೆ ಈಡಲಾಗಿದೆ. ಅವರ ಸಂಬಂಧಿಕರನ್ನು ಕಾರ್ಯಕ್ರಮಕ್ಕೆ ಕರೆಸುವ ನಿಟ್ಟಿನಲ್ಲಿ ಅವರ ಶೋಧ ಕಾರ್ಯ ಮಾಡಲಾಗಿತ್ತು. ಅವರು ಜೈಪುರ ದಲ್ಲಿ ಇರುವದರಿಂದ ಅವರನ್ನು ಕೂಡಾ ಈ ಕಾರ್ಯಕ್ರಮಕ್ಕೆ ಕರೆಸಲಾಗಿದೆ ಎಂದು ಅಭಯ ಪಾಟೀಲ್ ಹೇಳಿದ್ರು.
  ಅದರಂತೆ ಬುದ್ಧಿಮಾಂದ್ಯತೆ ಮಕ್ಕಳನ್ನು ಪಾಲಕರು ಉದ್ಯಾನವನಗಳಿಗೆ ತರಲು ಮುಜುಗರಕ್ಕೆ ಒಳಗಾಗಿ ಆ ಮಕ್ಕಳನ್ನು ಉದ್ಯಾನವನಗಳಿಗೆ ಕರೆತರಲು ಹಿಂದೇಟು ಹಾಕುತ್ತಿದ್ದರು. ಈ ವಿಷಯವನ್ನು ಮನಗಂಡು 2.5 ಕೋಟಿ ವೆಚ್ಚದಲ್ಲಿ ಬುದ್ಧಿಮಾಂದ್ಯತೆ ಮಕ್ಕಳ ಉದ್ಯಾನವನ್ನು ತಯಾರಿಸಲಾಗಿದೆ. ಈ ಉದ್ಯಾನವವು ದೇಶಕ್ಕೆ ಮಾದರಿಯಾಗಲಿದೆ. ಅದರಲ್ಲಿ ಮಕ್ಕಳ‌ ತಂದೆ ತಾಯಿಯವರನ್ನು ಬಿಟ್ಟರೆ ಬೇರೆಯವರಿಗೆ ಒಳಗೆ ಪ್ರವೇಶ ಇರುವದಿಲ್ಲ ಎಂದು ನುಡಿದರು.

  ಇದನ್ನು ಓದಿ: UPSCಯಲ್ಲಿ ಚಿತ್ರದುರ್ಗ ಜಿಲ್ಲೆಯ ಕುಗ್ರಾಮದ ಯುವತಿ ಸಾಧನೆ; ಮಮತಾ ಸಾಧನೆಗೆ ಮೆಚ್ಚುಗೆ

  ಮಹಾತ್ಮ ಫುಲೆ ಉದ್ಯಾನವನದ ನವೀಕರಣ

  ಅಲ್ಲದೆ ಬುದ್ಧಿಮಾಂದ್ಯತೆ ಮಕ್ಕಳ ಉದ್ಯಾನವನದ ಕುರಿತು ಅವರಿಗೆ ಅಲ್ಲಿ ಇರಬೇಕಾದ ವ್ಯವಸ್ಥೆಗಳ ಕುರಿತು ಮಹಾರಾಷ್ಟ್ರದ ಪುಣೆಯಲ್ಲಿ ಒಂದು ಉದ್ಯಾನವನಕ್ಕೆ ಭೇಟಿ ನೀಡಿ ಪರಿಶೀಲಿಸಿ ಹಾಗೂ ವೈದ್ಯರು ಮತ್ತು ಮಕ್ಕಳ‌ ಪಾಲಕರ ಸಲಹೆಯನ್ನು ಪಡೆದು ಈ ಉದ್ಯಾನವನ ನಿರ್ಮಾಣ ಮಾಡಲಾಗಿದೆ. ಅಲ್ಲದೆ ನಗರದಲ್ಲಿನ ಮಹಾತ್ಮ ಫುಲೆ ಉದ್ಯಾನವನದ ನವೀಕರಣ ಸೇರಿದಂತೆ ಒಟ್ಟು 2.5 ಕೋಟಿ ರೂ. ವೆಚ್ಚ ಮಾಡಲಾಗಿದೆ. ಈ ಉದ್ಯಾನ ಮತ್ತು ರವೀಂದ್ರ ಕೌಶಿಕ್ ಡಿಜಿಟಲ್ ಗ್ರಂಥಾಲಯ ಲೋಕಾರ್ಪಣೆ ಕಾರ್ಯವನ್ನು  ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನೆರವೇರಿಸಲಿದ್ದಾರೆ

  ಅಭಿವೃದ್ದಿ ಆಗಬೇಕು

  ಇನ್ನು ನಿನ್ನೆ ಸಂಕೇಶ್ವರ ಪಟ್ಟಣದ ನೇಸರಿ ಗಾರ್ಡನ್ ಹಾಲ್​ನಲ್ಲಿ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿದ ಬಳಿಕ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ ಅವರು, ಬಿ.ಎಸ್.ಯಡಿಯೂರಪ್ಪ ಅವರ ಮಾರ್ಗದರ್ಶನದಲ್ಲಿ ಸರ್ಕಾರ ನಡೆಯುತ್ತಿದೆ. ಯಡಿಯೂರಪ್ಪ ಯೋಜನೆಗಳಿಗೆ ಅನುಮೋದನೆ ಕೊಟ್ಟು ಸಾಕಷ್ಟು ಅನುದಾನ ಕೊಟ್ಟಿದ್ದಾರೆ. ನಾನು ರಿಬನ್ ಕಟ್ ಮಾಡಿದ್ದೇನೆ. ನಮಗೆ ಉಪಕಾರ ಮಾಡಿದವರನ್ನು ಸ್ಮರಿಸಬೇಕಿದೆ. ಜನರ ಸುತ್ತಲೂ ಅಭಿವೃದ್ಧಿ ಆಗಬೇಕು. ಅಭಿವೃದ್ಧಿ ಸುತ್ತಲೂ ಜನರು ಓಡಾಡಬೇಕು ಎಂದು ತಿಳಿಸಿದರು.
  Published by:Seema R
  First published: