Belagavi MES ಮುಖಂಡನ ವಿವಾದಾತ್ಮಕ ಪೋಸ್ಟ್; ಸಿಎಂ ಖಡಕ್​ ಎಚ್ಚರಿಕೆ

ರಾಜಕೀಯ ಉಳಿವಿಗಾಗಿ ರಾಜ್ಯದ ಗಡಿ ಭಾಷೆ ವಿಚಾರಗಳನ್ನು ಎತ್ತುವುದು ಸಣ್ಣತನ. ಈ ರೀತಿಯನ್ನು ಮಹಾರಾಷ್ಟ್ರದ ಎಲ್ಲಾ ರಾಜಕಾರಣಿಗಳು ಕೈಬಿಡುವಂತೆ  ಆಗ್ರಹಿಸಿದರು

ಬಸವರಾಜ ಬೊಮ್ಮಾಯಿ ಹಾಗೂ ಉದ್ಧವ್ ಠಾಕ್ರೆ ಸಂಗ್ರಹ ಚಿತ್ರ

ಬಸವರಾಜ ಬೊಮ್ಮಾಯಿ ಹಾಗೂ ಉದ್ಧವ್ ಠಾಕ್ರೆ ಸಂಗ್ರಹ ಚಿತ್ರ

  • Share this:
ಬೆಳಗಾವಿ (ಮೇ. 2)-  ಮಹಾರಾಷ್ಟ್ರ ಡಿಸಿಎಂ ಅಜಿತ್ ಪವಾರ್ (Maharashtra DCM Ajith Pawar) ಹೇಳಿಕೆ ಬೆನ್ನಲ್ಲೆ ಎಂಇಎಸ್ ಮುಖಂಡರು ಕಿರಿಕ್ ಮಾಡಿದ್ದಾರೆ. ಗಡಿ ಜಿಲ್ಲೆ ಬೆಳಗಾವಿಯಲ್ಲಿ ಮತ್ತೆ ಎಂಇಎಸ್ (MES) ಪುಂಡಾಟ ಪ್ರದರ್ಶನ ಮಾಡಿದೆ. ಡಿಸೆಂಬರ್ ತಿಂಗಳಲ್ಲಿ ನಡೆದ ಗಲಾಟೆ ಸಂಬಂಧ ಎಂಇಎಸ್ ಮುಖಂಡರ ಮೇಲೆ ದೇಶದ್ರೋಹ  ದಾಖಲು ಮಾಡಲಾಗಿತ್ತು. ಆದರೆ ಚಾರ್ಜ್​​ಶೀಟ್​​ ಸಲ್ಲಿಕೆ ವೇಳೆಯಲ್ಲಿ ದೇಶದ್ರೋಹದ ಪ್ರಕರಣ ಕೈ ಬಿಡಲಾಗಿತ್ತು. ಕೇಸ್ ಕೈ ಬಿಟ್ಟ ಬೆನ್ನಲ್ಲೇ ಪುಂಡಾಟಿಕೆ ಆರಂಭ ನಾಡದ್ರೋಹಿ ಎಂಇಎಸ್ ಮುಖಂಡನಿಂದ ಭಾಷಾ ಸಾಮರಸ್ಯ ಕದಡುವ ಹುನ್ನಾರ ಮಾಡಿದ್ದಾರೆ.

ವಿವಾದ ಮೂಡಿಸಿದ ಪೋಸ್ಟ್​​

ಎಂಇಎಸ್ ಮುಖಂಡ ಶುಭಂ ಶಳಕೆ ತನ್ನ ಫೇಸ್ ಬುಕ್ ನಲ್ಲಿ ಪೋಸ್ಟ್ ಹಾಕಿದ್ದು, ಸಂಪೂರ್ಣ ಸಂಯುಕ್ತ ಮಹಾರಾಷ್ಟ್ರ ಶೀರ್ಷಿಕೆಯಡಿ ನಕ್ಷೆ ಪೋಸ್ಟ್ ಮಾಡಿದ್ದಾರೆ. ಸಂಯುಕ್ತ ಮಹಾರಾಷ್ಟ್ರ ನಕ್ಷೆಯಲ್ಲಿ ಬೆಳಗಾವಿ, ನಿಪ್ಪಾಣಿ, ಕಾರವಾರ, ಬೀದರ್​​, ಬಾಲ್ಕಿ ಸೇರಿದೆ. ಮಹಾರಾಷ್ಟ್ರ ವಾದಿಗಳೇ ನಮಗೆ ಮನಃಪೂರ್ವಕವಾಗಿ ಮಹಾರಾಷ್ಟ್ರ ಡೇಗೆ ಶುಭಕೋರಲು ಆಗುತ್ತಿಲ್ಲ. ಸಂಯುಕ್ತ ಮಹಾರಾಷ್ಟ್ರಕ್ಕೆ ಬೆಳಗಾವಿ ರಕ್ತದ ಹೋರಾಟದ ಮುನ್ನುಡಿ ಬರೆದಿದೆ. ಬೆಳಗಾವಿ ಸೇರಿ ಗಡಿ ಭಾಗದ ಮರಾಠಿಗರು ನ್ಯಾಯಕ್ಕಾಗಿ ಕಾಯುತ್ತಿದ್ದೇವೆ ಎಂದು ಪೋಸ್ಟ್ ನಲ್ಲಿ ಹಾಕಲಾಗಿದೆ.

ಗಡಿ ಜಿಲ್ಲೆ ಬೆಳಗಾವಿಯಲ್ಲಿ ಮತ್ತೆ ಎಂಇಎಸ್ ಪುಂಡಾಟ ಪ್ರಾರಂಭಿಸಿದ ಹಿನ್ನೆಲೆ ಸುಪ್ರೀಂ ಕೋರ್ಟ್ ನಲ್ಲಿ ಮಹಾರಾಷ್ಟ್ರ ಸರ್ಕಾರ ಮತ್ತು ಎಂಇಎಸ್ ವಿರುದ್ಧ ಕರ್ನಾಟಕ ಸರ್ಕಾರ ನ್ಯಾಯಾಂಗ ನಿಂದನೆ ಕೇಸ್ ದಾಖಲಿಸಬೇಕು ಎಂದ ಕನ್ನಡ ಕ್ರಿಯಾ ಸಮಿತಿ ಒಕ್ಕೂಟದ ಅಧ್ಯಕ್ಷ ಅಶೋಕ‌ ಚಂದರಗಿ ಹೇಳಿದರು.

18 ವರ್ಷದಿಂದ ಬಾಕಿಇರುವ ಪ್ರಕರಣ

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಿನ್ನೆ ಮಹಾರಾಷ್ಟ್ರ ಸಂಸ್ಥಾಪನಾ ದಿನಾಚರಣೆ ಹಿನ್ನೆಲೆ ನಿನ್ನೆ ಡಿಸಿಎಂ ಅಜಿತ್ ಪವಾರ್ ಗಡಿ ಭಾಗದ ಹೋರಾಟಕ್ಕೆ ಬೆಂಬಲ ಕೊಡ್ತೇವಿ ಅಂತಾ ಹೇಳಿದ್ದರು.ಅದರ ಬೆನ್ನಲ್ಲೇ ಬೆಳಗಾವಿಯಲ್ಲಿ ಶುಭಂ ಶಳಕೆ ವಿಡಿಯೋ, ಸಹಿತ ವಿವಾದಿತ ಪೋಸ್ಟ್ ಹಾಕಿದ್ದಾರೆ.ಆದರೆ, ಎಂಇಎಸ್ ನವರು ಗಡಿ ಭಾಗವನ್ನ ಕೇಳಿ ಸುಪ್ರೀಂ ಕೋರ್ಟ್ ಗೆ ಹೋಗಿದ್ದಾರೆ. ಅದು 18 ವರ್ಷದ ಬಾಕಿ ಇದೆ ಎಂದರು.

ಇದನ್ನು ಓದಿ: "ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರುವವರೆಗೂ ಹೋರಾಟ" ಎಂದ 'ಮಹಾ' ಡಿಸಿಎಂ, ಇತ್ತ ಮತ್ತೆ ಎಂಇಎಸ್ ಕಿರಿಕ್!

ಮಹಾರಾಷ್ಟ್ರದವರು ಏನು ಮಾಡ್ತಿದ್ದಾರೆ ಅನೋದಕ್ಕಿಂತ ಕರ್ನಾಟಕದವರು ಏನು ಮಾಡ್ತಿದ್ದಾರೆ ಅನೋದು ನೋಡಬೇಕಿದೆ.ಅನೇಕ ಸರಿ ನಾವು ಸರ್ಕಾರಕ್ಕೆ ಕೇಳಿದ್ದೇವೆ.ಅವರ ನಮ್ಮ ವೈರಿಗಳು ಗಡಿಭಾಗ ಕಬಳಿಸಲು ನಿಂತವರಿದ್ದಾರೆ. ನೀವು ಗಡಿಭಾಗದ ರಕ್ಷಣೆಗೆ ನಿಂತವರು ಏನು ಮಾಡ್ತಿದ್ದೀರಾ ಅಂತಾ ಸರ್ಕಾರಕ್ಕೆ  ಅಶೋಕ ಚಂದರಗಿ ಪ್ರಶ್ನೆ ಮಾಡಿದ್ದಾರೆ.

ಕೇಸ್ ಹಾಕದಿದ್ದಕ್ಕೆ ಈ ರೀತಿ

ಎರಡು ರಾಜ್ಯಗಳಿಗೆ ಜಗಳ ಹಚ್ಚುವ ಕೆಲಸವನ್ನು ಎಇಎಂಇಎಸ್ ಮುಖಂಡರು ಮಾಡ್ತಿದ್ದಾರೆ.ನಕಾಶೆ ತೆಗೆಯುವ ಮೂಲಕ ಪ್ರಚೋದಿಸುವ, ದೇಶದ್ರೋಹ ಕೆಲಸವನ್ನ ಮಾಡಿದ್ದಾರೆ.ಇದು ದೇಶದ್ರೋಹ ಸಮಾನ ಕೆಲಸವಾಗುದೆ. ಸರ್ಕಾರದವರು ಒಂದುಕಡೆ ದೇಶದ್ರೋಹ ಕೇಸ್ ಹಾಕುತ್ತೇವೆ ಅಂತಾ ಹೇಳೊದು. ಮತ್ತೊಂದೆಡೆ ಅಧಿಕಾರಿಗಳು ಆ ಕೇಸ್ ಬಿಟ್ಟು ಹಾಕೋದು ಅವರಿಗೆ ಸಡಿಲು ಸಿಕ್ಕಿದೆ ಎಂದರು.

ಇದನ್ನು ಓದಿ: 5 ಲಕ್ಷ ಪುಸ್ತಕಗಳ ಮೇಲೆ ಆಂಜನೇಯ; 27 ಅಡಿ ಎತ್ತರದಲ್ಲಿ ಮಂಡಿಯೂರಿ ನಿಂತ ಹನುಮ

ಒಂದಿಂಚೂ ಜಾಗ ಕೊಡೆವುರಾಜ್ಯದ ಗಡಿ ಬಗ್ಗೆ ಸರ್ಕಾರದ ನಿಲುವು ಬಹಳ ಸ್ಪಷ್ಟವಾಗಿದೆ. ರಾಜ್ಯದ ಗಡಿ ಪ್ರದೇಶದ ಒಂದಿಂಚೂ ಜಾಗವನ್ನು ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಮಹಾರಾಷ್ಟ್ರದಲ್ಲಿನ ರಾಜಕಾರಣಿಗಳು ಇಕ್ಕಟ್ಟಿನಲ್ಲಿ ಸಿಲುಕಿದ್ದಾರೆ. ಅದಕ್ಕಾಗಿ ರಾಜ್ಯದ ಗಡಿ ಭಾಷೆಗಳ ಬಗ್ಗೆ ಕೆದಕುತ್ತಿದ್ದಾರೆ. ಮಹಾರಾಷ್ಟ್ರದಲ್ಲಿ ಹಲವಾರು ಕನ್ನಡ ಭಾಷೆ ಮಾತನಾಡುವ ಪ್ರದೇಶಗಳಿವೆ . ಈ ಬಗ್ಗೆಯೂ ಕ್ರಮ ತೆಗೆದುಕೊಳ್ಳುವ ಚಿಂತನೆ ಸರ್ಕಾರ ಮಾಡುತ್ತಿದೆ. ಅವರ ರಾಜಕೀಯ ಉಳಿವಿಗಾಗಿ ರಾಜ್ಯದ ಗಡಿ ಭಾಷೆ ವಿಚಾರಗಳನ್ನು ಎತ್ತುವುದು ಸಣ್ಣತನ. ಈ ರೀತಿಯನ್ನು ಮಹಾರಾಷ್ಟ್ರದ ಎಲ್ಲಾ ರಾಜಕಾರಣಿಗಳು ಕೈಬಿಡುವಂತೆ  ಆಗ್ರಹಿಸಿದರು
Published by:Seema R
First published: