ಶಾಸಕ ಅಭಯ ಪಾಟೀಲ್ ಗೆ ಸಿಎಂ ಬುಲಾವ್; ಪಾಲಿಕೆ ಸೋಲಿಗೆ ಗುಂಪುಗಾರಿಕೆ ಕಾರಣ ಎಂದ ಸತೀಶ ಜಾರಕಿಹೊಳಿ.

ಬೆಳಗಾವಿ ಪಾಲಿಕೆ ಮೇಯರ್, ಉಪ ಮೇಯರ್ ಆಯ್ಕೆ ಬಗ್ಗೆ ಮಹತ್ವದ ಚರ್ಚೆ ನಡೆಸಲಿದ್ದಾರೆ. ಮೇಯರ್ ಆಯ್ಕೆಯ ಅಧಿಕಾರ ಅಭಯ ಪಾಟೀಲ್​ಗೆ ನೀಡುವ ಸಾಧ್ಯತೆ ಇದೆ

ಶಾಸಕ ಅಭಯ ಪಾಟೀಲ್ ಗೆ ಸಿಎಂ ಬುಲಾವ್

ಶಾಸಕ ಅಭಯ ಪಾಟೀಲ್ ಗೆ ಸಿಎಂ ಬುಲಾವ್

  • News18
  • Last Updated :
  • Share this:
ಬೆಳಗಾವಿ(ಸೆ, 8)- ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆ (belagavi municipal corporation Result) ಫಲಿತಾಂಶ ಹೊರ ಬಿದ್ದು ಎರಡು ದಿನ ಕಳೆದಿದೆ. ಆದರೆ ಇನ್ನು ಫಲಿತಾಂಶದ ಗೆಲವು, ಸೋಲಿನ ಬಗ್ಗೆ ಆತ್ಮವಾಲೋಕನದಲ್ಲಿ ರಾಜಕೀಯ ಪಕ್ಷದ ನಾಯಕರು ಮುಳುಗಿದ್ದಾರೆ. ಇನ್ನೂ ಕಾಂಗ್ರೆಸ್ ಕೇವಲ 10 ಸ್ಥಾನ ಮಾತ್ರ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಈ ಬಗ್ಗೆ ಬೆಳಗಾವಿಯಲ್ಲಿ ಮಾತನಾಡಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ, ಪಕ್ಷದಲ್ಲಿ ಎರಡು ಗುಂಪುಗಳ ನಡುವಿನ ಹೊಂದಾಣಿಕೆ ಕೊರತೆಯಿಂದ ಅನೇಕ ಸ್ಥಾನ ಕಳೆದುಕೊಂಡ ಬಗ್ಗೆ ಹೇಳಿದ್ದಾರೆ. ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿರುವುದರಲ್ಲಿ  ಆಶ್ವರ್ಯ ಪಡುವುದು ಏನಿಲ್ಲ. ಕಾಂಗ್ರೆಸ್ ಪ್ರಥಮ ಭಾರಿಗೆ ಚಿನ್ಹೆಯ ಮೇಲೆ ಸ್ಪರ್ಧೆ ಮಾಡಿತ್ತು,  ನಮಗೆ ಸಿಕ್ಕಿದ ಸ್ಥಾನಕ್ಕೆ ತೃಪ್ತಿ ಇದೆ ಎಂದಿದದಾರೆ

ಚುನಾವಣೆ ಮೊಲದೇ  ನಾವು ಮ್ಮ ವೀಕ್ಷಕರಿಗೆ ಅಧ್ಯಕ್ಷರಿಗೆ ಹೇಳಿದ್ದೆವು. ಕಾಂಗ್ರೆಸ್ 15 ಸ್ಥಾನ ಗೆಲ್ಲಬಹುದು, ಪಕ್ಷೇತರರು 5 ಸ್ಥಾನ ಗೆಲ್ಲಬಹುದು ಎಂದು.  ಸದ್ಯ ನಮ್ಮ ಲೆಕ್ಕಾಚಾರಕ್ಕೆ ನಾವು ಹತ್ತಿರವಾಗಿದ್ದೇವೆ. ನಮ್ಮಲ್ಲಿ ಹೊಂದಾಣಿಕೆ ಕೊರತೆಯಿಂದ 7- 8 ಸ್ಥಾನ ಕಳೆದುಕೊಂಡಿದ್ದೇವೆ ಎಂದು ಸಹ ಒಪ್ಪಿಕೊಂಡಿದ್ದಾರೆ.

ಎಂಇಎಸ್​ನಿಂದ ಬಿಜೆಪಿಗೆ ಲಾಭ

ಸಮಸ್ಯೆ ಆಗಿದ್ದು ಎಂ.ಇ.ಎಸ್ ನಲ್ಲಿ ಹೊಂದಾಣಿಕೆ ಇಲ್ಲದೇ ಬಿಜೆಪಿ ಗೆದ್ದಿದೆ. ಆದರೆ ಬಿಜೆಪಿಯವರು ಇಡೀ ಪಾರ್ಲಿಮೆಂಟ್ ಗೆದ್ದಂತೆ ಬಿಂಬಿಸುತ್ತಿದ್ದಾರೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಯಾರಿಗೆ ಎಷ್ಟು ಮತ ಬಿದ್ದಿತ್ತೋ ಈಗಲೂ ಅಷ್ಟೇ ಮತಗಳು ಬಿದ್ದಿವೆ. ಅಂಕಿ ಸಂಖ್ಯೆಯಲ್ಲಿ ಬಿಜೆಪಿ ಮುಂದಿದೆ ಅಷ್ಟೇ ಎಂದು ಸತೀಶ ಜಾರಕಿಹೊಳಿ ವಿವರಿಸಿದರು

ಇದನ್ನು ಓದಿ: ಪ್ರವಾಸಿಗರ ಸಂಖ್ಯೆ ಇಳಿಮುಖ: ಸಂಕಷ್ಟಕ್ಕೆ ತಲುಪಿದ ಹಂಪಿ ಪ್ರವಾಸಿ ಗೈಡ್​ಗಳು

ಅಭಯ್​ ಪಾಟೀಲ್​ಗೆ ಬುಲಾವ್​

ಬೆಳಗಾವಿ ‌ಮಹಾನಗರ ಪಾಲಿಕೆಯಲ್ಲಿ‌ ಬಿಜೆಪಿಗೆ ಸ್ಪಷ್ಟ ಬಹುಮತ‌‌ ಹಿನ್ನೆಲೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿಗೆ ತೀವ್ರ ಹರ್ಷ ವ್ಯಕ್ತಪಡಿಸಿದ್ದಾರೆ. ಚುನಾವಣೆ ಉಸ್ತುವಾರಿ ಶಾಸಕ ಅಭಯ ಪಾಟೀಲ್ ಗೆ ಬರುವಂತೆ ಸಿಎಂ ಸೂಚಿಸಿದ್ದಾರೆ. ನಿನ್ನೆ ಸಂಜೆ ಬೆಳಗಾವಿಯಿಂದ ಬೆಂಗಳೂರಿಗೆ ಪ್ರಯಾಣ‌ ಬೆಳೆಸಿದ್ದಾರೆ  ನಾಳೆ ಬೆಳಗ್ಗೆ ಅಭಯ ಪಾಟೀಲ್, ಸಿಎಂ ಬಸವರಾಜ ಬೊಮ್ಮಾಯಿ ಭೇಟಿ ಸಾಧ್ಯತೆ ಇದೆ. ಬೆಳಗಾವಿ ಪಾಲಿಕೆ ಮೇಯರ್, ಉಪ ಮೇಯರ್ ಆಯ್ಕೆ ಬಗ್ಗೆ ಮಹತ್ವದ ಚರ್ಚೆ ನಡೆಸಲಿದ್ದಾರೆ. ಮೇಯರ್ ಆಯ್ಕೆಯ ಅಧಿಕಾರ ಅಭಯ ಪಾಟೀಲ್​ಗೆ ನೀಡುವ ಸಾಧ್ಯತೆ ಇದೆ

ಇದನ್ನು ಓದಿ: ರೈತರಿಗೆ ಬಂಪರ್ ಸುದ್ದಿ: ಹಿಂಗಾರು ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಹೆಚ್ಚಿಸಲು ಕೇಂದ್ರ ಅನುಮೋದನೆ

ಚಿನ್ಹೆ ಮೇಲೆ ಚುನಾವಣೆ, ಅಭ್ಯರ್ಥಿಗಳ ಆಯ್ಕೆ, ಚುನಾವಣೆ ತಂತ್ರಗಾರಿಕೆಯಲ್ಲಿ ಅಭಯ ಪಾಟೀಲ್ ಯಶಸ್ವಿ ಆಗಿದ್ದಾರೆ. ದಕ್ಷಿಣ ಕ್ಷೇತ್ರ ವ್ಯಾಪ್ತಿಯ 25 ಕ್ಷೇತ್ರಗಳ ಪೈಕಿ 22 ರಲ್ಲಿ ಬಿಜೆಪಿ‌ ಗೆಲವು ಸಾಧಿಸಿದೆ. ಇದರಿಂದ ಎಂಇಎಸ್​​ಗೆ ಬೆಳಗಾವಿಯಲ್ಲಿ ಮಣ್ಣು ಮುಕ್ಕಿಸಿದ ಅಭಯ‌ ಪಾಟೀಲ್  ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದ್ದು, ಅವರಿಗೆ ಸಿಎಂ ಮಣೆ ಹಾಕಲಿದ್ದಾರೆ ಎಂಬ ಬಗ್ಗೆ ಬಿಜೆಪಿ ವಲಯದಲ್ಲಿ ‌ಚರ್ಚೆ ಆಗಿದೆ.

ಕುತೂಹಲ ಮೂಡಿಸಿದ ಭೇಟಿ
ಸಿಎಂ ಬಸವರಾಜ ಬೊಮ್ಮಾಯಿ, ಅಭಯ ಪಾಟೀಲ್ ಭೇಟಿ ಬಗ್ಗೆ ಸಾಕಷ್ಟು ಕುತೂಹಲ ಮೂಡಿದೆ. ಕಳೆದ 30 ವರ್ಷಗಳಿಂದ ಬಿಜೆಪಿಯಲ್ಲಿ ನಿಷ್ಠಾವಂತ ಕಾರ್ಯಕರ್ತನಾಗಿ ಅಭಯ್​ ಪಾಟೀಲ್​ ಕೆಲಸ ಮಾಡುತ್ತಿದ್ದು. ಬಿಜೆಪಿಯಿಂದ ಮೂರು ಸಲ ಅಭಯ ಪಾಟೀಲ್ ಶಾಸಕರಾಗಿ ಆಯ್ಕೆ ಆಗಿದ್ದಾರೆ. ಬೊಮ್ಮಾಯಿ ಸಂಪುಟ ರಚನೆ ವೇಳೆಯಲ್ಲಿ ಅಭಯ ಪಾಟೀಲ್ ಹೆಸರು ಇತ್ತದರೂ, ಕೊನೆ ಘಳಿಗೆಯಲ್ಲಿ ಹೆಸರು ಕೈ ಬಿಡಲಾಗಿತ್ತು. ಸದ್ಯ ಸದ್ಯ ಸಂಪುಟದಲ್ಲಿ ನಾಲ್ಕು ಸ್ಥಾನ ಖಾಲಿ ಹಿನ್ನೆಲೆ. ಬೆಳಗಾವಿ ಪಾಲಿಕೆ ಗೆಲುವಿನಿಂದಾಗಿ  ಸ್ಥಾನ ಸಿಗುವ‌‌ ನಿರೀಕ್ಷೆಯಲ್ಲಿ ಇರೋ ಅಭಯ ಪಾಟೀಲ್ ಇದ್ದಾರೆ ಎನ್ನಲಾಗಿದೆ.
Published by:Seema R
First published: