• Home
  • »
  • News
  • »
  • state
  • »
  • Belagavi: ಬಿಲ್ಡರ್ ಕಣ್ಣಿಗೆ ಖಾರದ ಪುಡಿ ಎರಚಿ ಬರ್ಬರ ಹತ್ಯೆ, ಒಂದಲ್ಲ, ಎರಡಲ್ಲ ಮೂರು ಮದುವೆಯಾಗಿದ್ದ ರಾಜು

Belagavi: ಬಿಲ್ಡರ್ ಕಣ್ಣಿಗೆ ಖಾರದ ಪುಡಿ ಎರಚಿ ಬರ್ಬರ ಹತ್ಯೆ, ಒಂದಲ್ಲ, ಎರಡಲ್ಲ ಮೂರು ಮದುವೆಯಾಗಿದ್ದ ರಾಜು

ಬಿಲ್ಡರ್​ ರಾಜು

ಬಿಲ್ಡರ್​ ರಾಜು

ಭವಾನಿನಗರದ ಸಂಸ್ಕೃತಿ ಫಾರ್ಮ್ ನಿವಾಸಿ ಬಿಲ್ಡರ್ ರಾಜು ದೊಡ್ಡಬೊಮ್ಮನ್​ನವರ ಕಣ್ಣಿಗೆ ಖಾರದಪುಡಿ ಎರಚಿ ದುಷ್ಕರ್ಮಿಗಳು ಕೊಲೆಗೈದಿದ್ದಾರೆ.

  • Share this:

ಬೆಳಗಾವಿ (ಮಾ.15): ಬೆಳಗಾವಿಯ ಭವಾನಿ ನಗರದಲ್ಲಿ (Bhavaninagara) ಇವತ್ತು ಬೆಳ್ಳಂಬೆಳಿಗ್ಗೆ ರಸ್ತೆ ಬದಿಯಲ್ಲಿ ವ್ಯಕ್ತಿಯೊಬ್ಬ ಭೀಕರವಾಗಿ ಹತ್ಯೆಯಾಗಿದ್ದ(Murder). ಬೆಳಿಗ್ಗೆ ವಾಕಿಂಗ್ (Walking) ಹೋಗುತ್ತಿದ್ದ ಜ‌ನ ರಕ್ತದ ಮಡುವಿನಲ್ಲಿ ಹೆಣವಾಗಿ ಬಿದ್ದ ವ್ಯಕ್ತಿಯ ಬಗ್ಗೆ ಬೆಳಗಾವಿ ಗ್ರಾಮೀಣ ಠಾಣೆಗೆ ಮಾಹಿತಿ ನೀಡಿದ್ದರು. ಆತ  ಬೆಳಗಾವಿಯ ಭವಾನಿ ನಗರದ ಸಂಸ್ಕೃತಿ ಫಾರ್ಮ್ ನಿವಾಸಿ ಬಿಲ್ಡರ್  ರಾಜು  ದೊಡ್ಡಬೊಮ್ಮನ್​ನವರ (45). ಈತ ಬೆಳಗಿನ ಜಾವ ಮನೆಯಿಂದ ಎದ್ದು ಹೊರ ಹೋಗುತ್ತಿರುವಾಗ ಬೈಕ್ ನಲ್ಲಿ ಬಂದ ದುಷ್ಕರ್ಮಿಗಳು (Sinner) ಕಣ್ಣಿಗೆ ಖಾರದಪುಡಿ ಎರಚಿ, ಚಾಕುವಿನಿಂದ ಹತ್ತಕ್ಕೂ ಹೆಚ್ಚು  ಬಾರಿ ಇರಿದು ಕೊಲೆ ಮಾಡಿ ಪರಾರಿಯಾಗಿದ್ದಾರೆ. ರಸ್ತೆಯ ಬದಿಯಲ್ಲಿಯೇ ರಕ್ತದ ಮಡುವಿನಲ್ಲಿ ರಾಜು ಒದ್ದಾಡಿ ಪ್ರಾಣ ಬಿಟ್ಟಿದ್ದಾನೆ. ಈ ವಿಚಾರ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ  ಪೊಲೀಸರು (Police) ಬಂದಿದ್ದಾರೆ.  ಕೊಲೆ ಆರೋಪಿಗಳ ಬೆನ್ನು ಬಿದ್ದಿರುವ ಪೊಲೀಸರು  ಸಿಸಿಟಿವಿ ಕ್ಯಾಮೆರಾಗಳ ಮೂಲಕ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ. 


ಬಿಲ್ಡರ್​ ಹಿಸ್ಟರಿ ಭಯಂಕರ


ಮೃತ ಬಿಲ್ಡರ್ ರಾಜು ಬೆಳಗಾವಿಯ ಹಲವಾರು ಕಡೆ ಅಪಾರ್ಟ್​ಮೆಂಟ್ ನಿರ್ಮಾಣ ಮಾಡುವುದಾಗಿ ನೂರಾರು ಜನರಿಗೆ ವಂಚನೆ ಮಾಡಿದ್ದಾನೆ. ಎಂದು ಹೇಳಲಾಗುತ್ತಿದೆ.  ಅಷ್ಟೇ ಅಲ್ಲ ಹಲವು ಜನರಿಂದ ಮನೆ ಕಟ್ಟಿಕೊಡುವುದಾಗಿ ಹೇಳಿ ಹಣ ಪಡೆದು ವಂಚಿಸಿದ್ದ. ಇನ್ನು ಇದಷ್ಟೇ ಅಲ್ಲ ಉಮಾ , ದೀಪಾ ಹಾಗೂ ಕಿರಣ ಎಂಬ ಮೂವರನ್ನ ಅಧಿಕೃತ ಮದುವೆ ಮಾಡಿಕೊಂಡು ಅವರಿಗೆ ಬೇರೆ ಬೇರೆ ಕಡೆ ಮನೆ ಮಾಡಿ ಇಟ್ಟಿದ್ದ. ಮದುವೆಯಾದ ವಿಷಯ ಮೂರು ಜನರಿಗೆ ಗೊತ್ತಿತ್ತಂತೆ


ಒಂದಲ್ಲ ಎರಡಲ್ಲ 3 ಮದುವೆಯಾಗಿದ್ದ ಬಿಲ್ಡರ್​


ಒಟ್ಟು 3 ಜನ ಹೆಂಡತಿಯರಲ್ಲಿ ಇಬ್ಬರೂ ಜತೆಗೂ ಚೆನ್ನಾಗಿಯೇ ಇದ್ದ ಎಂದು ಹೇಳಲಾಗಿತ್ತದೆ. ಎರಡನೇ  ಹೆಂಡತಿ ಕಿರಣಾ ಜೊತೆ ಆಸ್ತಿ‌ವಿಚಾರಕ್ಕೆ ಜಗಳ ಮಾಡಿಕೊಂಡಿದ್ದರೂ ಅವಳನ್ನೂ ಬೇರೆ ಕಡೆ ಮನೆ ಮಾಡಿ ಇಟ್ಟು ಅವಳ ಜೊತೆಗೂ ಚೆನ್ನಾಗಿದ್ದ. ಇನ್ನು  ಸಾಯುದಕ್ಕೂ ಮುನ್ನ  ಇಬ್ಬರ ಹೆಂಡತಿ ಜೊತೆಗೆ  ಪೋನ್​ನಲ್ಲಿ ಮಾತನಾಡಿದ್ದ.  ರಾಜು ಸಾಯುವುದ್ದಕ್ಕೂ ಮುನ್ನ  ಬೆಳಿಗ್ಗೆ ವಾಕಿಂಗ್ ಹೋಗುವ ವೇಳೆ ಎರಡನೇ ಹೆಂಡತಿ ಕಿರಣಾಗೆ ಪೋನ್​ ‌ ಮಾಡಿದ್ದನು, ರಿಸಿವ್ ಮಾಡಿಲ್ಲ , ಬಳಿಕ  ಕಿರಣಾ ವಾಪಸ್ ಫೋನ್​ ಮಾಡಿದಾಗ  ರಾಜು ರಿಸಿವ್ ಮಾಡಿಲ್ಲ.


ಇದನ್ನೂ ಓದಿ: Crime News: ಗರ್ಭಿಣಿ ಪತ್ನಿಗೆ ಬೆಂಕಿ ಹಚ್ಚಿದ, ಮಗುವಿಗೂ ಕಚ್ಚಿದ! ಇವನೇನು ಪತಿಯೋ, ರಾಕ್ಷಸನೋ?


ಬೆಳ್ಳಂ ಬೆಳಗ್ಗೆ ರಾಜು ಕೊಲೆ


ರಾಜು ಕೊಲೆಯಾದ  ಸುದ್ದಿ ತಿಳಿಯುತ್ತದೆ 2ನೇ ಹೆಂಡತಿ ಕಿರಣಾಗೆ  ತಪ್ಪಿತಸ್ಥರಿಗೆ ಶಿಕ್ಷೆ ಆಗಲೇ ಬೇಕು ಎಂದು ಒತ್ತಾಯಿಸಿದ್ದಾರೆ. ಇತ್ತ ರಾಜು ಮೂರನೆಯ ಹೆಂಡತಿ ದೀಪಾ ಆಕ್ರಂದನ ಮುಗಿಲು ಮುಟ್ಟಿದೆ.  ಪತಿಯನ್ನು ಕಳೆದುಕೊಂಡ ದೀಪಾ  ಕಣ್ಣೀರ  ಒಂದು ಕಡೆಯಾದೇ ಇನ್ನೊಂದು ಕಡೆ ದೀಪಾ ಈಗ ಮೂರು ತಿಂಗಳ ಗರ್ಭಿಣಿಯಾಗಿದ್ದು ಮಗು ಅನಾಥ ಭಾವ ಕಾಡುತ್ತಿದೆ. ನಿನ್ನೆಯಷ್ಟೆ ಅವಳನ್ನು ಆಸ್ಪತ್ರೆಗೆ ಚಿಕಿತ್ಸೆ ಸೇರಿಸಿದ್ದ .ಅವಳ ನೋಡೊದಕ್ಕೇನೇ ಇಂದು  ಬೆಳಿಗ್ಗೆ  ಹೊರಗಡೆ ಹೊರಟಿದ್ದ ಎಂದು ಹೇಳಲಾಗುತ್ತಿದೆ.


ಇದನ್ನೂ ಓದಿ: Murder: ಗಂಡ-ಹೆಂಡತಿ ಜಗಳಕ್ಕೆ ಬಲಿಯಾದ ಗ್ರಾಮದ ಮುಖಂಡ, ಸಂಧಾನ ಮಾಡಲು ಹೋಗಿದ್ದೆ ತಪ್ಪಾಯ್ತಾ?


ಹಣಕಾಸಿನ ವಿಚಾರಕ್ಕೆ ಕೊಲೆಯಾಗಿರೋ ಶಂಕೆ


ಮೊದಲನೆಯ ಹೆಂಡತಿ  ಬೆಂಗಳೂರುನಲ್ಲಿದ್ರೆ, ಎರಡನೇ ಹೆಂಡತಿ ಟಿಳಕವಾಡಿ ನಗರದಲ್ಲಿದ್ದು,  ಮೂರನೆಯ ಹೆಂಡತಿ  ಬೆಳಗಾವಿಯ ಭವಾನಿ ನಗರದ ಸಂಸ್ಕೃತಿ ಫಾರ್ಮನಲ್ಲಿದ್ದರು  ಇನ್ನು ಈತ ಮೂರನೆಯ ಹೆಂಡತಿ ದೀಪಾ  ಜೊತೆಗೆ ಇರುತ್ತಿದ್ದ. ಇನ್ನು ತನ್ನ ಗಂಡನನ್ನು ಕಳೆದುಕೊಂಡ ದೀಪಾ ಅವರಿಗೆ ಕೊಲೆ  ಬೆದರಿಕೆ ಕರೆಗಳೂ ಬರುತ್ತಿದ್ದವು ಈ  ಕುರಿತು ನನ್ನ ಗಮನಕ್ಕೆ ತಂದಿದ್ದರು. ಹಣಕಾಸಿನ ವ್ಯವಹಾರದ ಕುರಿತು ಕೊಲೆಯಾಗಿರುವ ಶಂಕೆ ವ್ಯಕ್ತವಾಗಿದೆ ಕೊಲೆ ಮಾಡಿದವರಿಗೆ ಶಿಕ್ಷೆ ಆಗಲೇಬೇಕು ಅಂತ ಪತ್ನಿಯರು ಆಗ್ರಹಿಸಿದ್ದಾರೆ. ಈ ಕೊಲೆಗೆ ಕಾರಣವೇನು? ಕೊಲೆಗಾರರು ಯಾರು? ಎನ್ನುವುದು ಇನ್ನೂ ಗೊತ್ತಾಗಿಲ್ಲ.

Published by:ಪಾವನ ಎಚ್ ಎಸ್
First published: