MLA Abhay Patil: ಶಾಸಕ ಅಭಯ ಪಾಟೀಲ್​ಗೆ ಸಚಿವ ಸ್ಥಾನ ನೀಡಲು ಸಿಎಂಗೆ ಮನವಿ; ಕಾರ್ಯಕ್ರಮದಿಂದ ಅಂತರ ಕಾಯ್ದುಕೊಂಡ ಜಾರಕಿಹೊಳಿ ಸಹೋದರರು!

ಸುವರ್ಣಸೌಧಕ್ಕೆ ಕೆಲವು ಕಚೇರಿಗಳ ಸ್ಥಳಾಂತರಕ್ಕೆ ಸಿದ್ಧತೆ ಮಾಡಿದ್ದು,  ಡಿಸೆಂಬರ್ ನಲ್ಲಿ ಬೆಳಗಾವಿಯಲ್ಲಿ ಅಧಿವೇಶನ ನಡೆಸುವ ಚಿಂತನೆ ಇದೆ. ಅದನ್ನ ಕ್ಯಾಬಿನೆಟ್ ನಲ್ಲಿ ಚರ್ಚಿಸಿ ಅಪ್ರೂವ್ ಮಾಡ್ತೀವಿ. ಡಿಸೆಂಬರ್ ಒಳಗೆ ಯಾವ ಕಚೇರಿ ಶಿಫ್ಟ್ ಮಾಡಲು ಸಾಧ್ಯ ಇದೆ ಆ ಎಲ್ಲ ಕಚೇರಿ ಸುವರ್ಣಸೌಧಕ್ಕೆ ಶಿಫ್ಟ್ ಮಾಡ್ತೇವೆ ಎಂದು ಭರವಸೆ ನೀಡಿದರು.

ಶಾಸಕ ಅಭಯ ಪಾಟೀಲ್ ಮನೆಯಲ್ಲಿ ಔತಣಕೂಟದಲ್ಲಿ ಪಾಲ್ಗೊಂಡಿದ್ದ ಸಿಎಂ ಬಸವರಾಜ ಬೊಮ್ಮಾಯಿ.

ಶಾಸಕ ಅಭಯ ಪಾಟೀಲ್ ಮನೆಯಲ್ಲಿ ಔತಣಕೂಟದಲ್ಲಿ ಪಾಲ್ಗೊಂಡಿದ್ದ ಸಿಎಂ ಬಸವರಾಜ ಬೊಮ್ಮಾಯಿ.

  • Share this:
ಬೆಳಗಾವಿ (ಸೆಪ್ಟೆಂಬರ್ 26): ಬೆಳಗಾವಿಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ (CM Basavaraja Bommai) ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಿದರು‌. ಇದೇ ವೇಳೆ ಶಾಸಕ ಅಭಯ ಪಾಟೀಲ್ (MLA Abhay Patil) ಅವರಿಗೆ ಮಂತ್ರಿ ಸ್ಥಾನ ನೀಡುವಂತೆ ಬೆಂಬಲಿಗರು ಸಿಎಂಗೆ ಒತ್ತಾಯ ಮಾಡಿದರು. ಇನ್ನೂ ಸಿಎಂ ಬಸವರಾಜ ಬೊಮ್ಮಾಯಿ ಕಾರ್ಯಕ್ರಮದಿಂದ ಜಾರಕಿಹೊಳಿ ಸಹೋದರರು ಅಂತರ ಕಾಯ್ದುಕೊಂಡರು‌. ಮೂರು ಸಲ ಸಿಎಂ ಭೇಟಿ ಸಂದರ್ಭದಲ್ಲಿ ಸಹ ಶಾಸಕರಾದ ರಮೇಶ ಜಾರಕಿಹೊಳಿ, ಬಾಲಚಂದ್ರ ಜಾರಕಿಹೊಳಿ ಬರದೇ ಇರೋದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಆದರೆ ಸಿಎಂ ಮಾತ್ರ ಬಾಲಚಂದ್ರ ಜಾರಕಿಹೊಳಿ ಕಾರ್ಯಕ್ರಮಕ್ಕೆ ಬರಲ್ಲ ಎಂದು ಮೊದಲೇ ಹೇಳಿದ್ದಾರೆ. ಕ್ಷೇತ್ರದ ಅಭಿವೃದ್ಧಿ ಬಗ್ಗೆ ಪತ್ರ ಬರೆದಿದ್ದಾರೆ ಎಂದು ಸಿಎಂ ಸಮರ್ಥನೆ ಮಾಡಿಕೊಂಡರು.

ಬೆಳಗಾವಿ ಜಿಲ್ಲೆಗೆ ಸಿಎಂ ಬಸವರಾಜ ಬೊಮ್ಮಾಯಿ ಎರಡು ದಿನಗಳ ಪ್ರವಾಸ ನಡೆಸಿದರು. ಈ ವೇಳೆಯಲ್ಲಿ  ಹುಕ್ಕೇರಿ ಹಾಗೂ ಬೆಳಗಾವಿ ದಕ್ಷಿಣ ಕ್ಷೇತ್ರದಲ್ಲಿ ಹಲವು ಕಾರ್ಯಕ್ರಮಗಳಲ್ಲಿ ಪಾಲ್ಗೊಂಡರು. ಇಂದು ಬೆಳಗ್ಗೆ ಸಿಎಂ ಸರ್ಕೀಟ್ ಹೌಸ್ ನಲ್ಲಿ ರೈತರು ಹಾಗೂ ವಿವಿಧ ಸಂಘ, ಸಂಸ್ಥೆಗಳ ಮುಖಂಡರನ್ನು ಭೇಟಿ ಮಾಡಿದರು. ಅನೇಕರು ತಮ್ಮ ಬೇಡಿಕೆ ಈಡೇರಿಸುವಂತೆ ಮನವಿ ಸಲ್ಲಿಸಿದರು. ಬಳಿಕ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ ಅವರು, ಅ. 3ರಿಂದ ಬೆಳಗಾವಿಯಲ್ಲಿ ಸಕ್ಕರೆ ನಿರ್ದೇಶನಾಲಯ ಕಚೇರಿ ಆರಂಭಕ್ಕೆ ಸೂಚನೆ ನೀಡಲಾಗಿದೆ. ಸುವರ್ಣಸೌಧಕ್ಕೆ ಕೆಲವು ಕಚೇರಿಗಳ ಸ್ಥಳಾಂತರಕ್ಕೆ ಸಿದ್ಧತೆ ಮಾಡಿದ್ದು,  ಡಿಸೆಂಬರ್ ನಲ್ಲಿ ಬೆಳಗಾವಿಯಲ್ಲಿ ಅಧಿವೇಶನ ನಡೆಸುವ ಚಿಂತನೆ ಇದೆ. ಅದನ್ನ ಕ್ಯಾಬಿನೆಟ್ ನಲ್ಲಿ ಚರ್ಚಿಸಿ ಅಪ್ರೂವ್ ಮಾಡ್ತೀವಿ. ಡಿಸೆಂಬರ್ ಒಳಗೆ ಯಾವ ಕಚೇರಿ ಶಿಫ್ಟ್ ಮಾಡಲು ಸಾಧ್ಯ ಇದೆ ಆ ಎಲ್ಲ ಕಚೇರಿ ಸುವರ್ಣಸೌಧಕ್ಕೆ ಶಿಫ್ಟ್ ಮಾಡ್ತೇವೆ ಎಂದು ಭರವಸೆ ನೀಡಿದರು.

2019 - 20ರಲ್ಲಿ ಬೆಳಗಾವಿ ಜಿಲ್ಲೆಯಲ್ಲಿ ಅತ್ಯಧಿಕ ಮಳೆಯಾಗಿ ಸಾಕಷ್ಟು ಬೆಳೆ, ಮ‌ನೆ ಹಾನಿಯಾಗಿದೆ. ಆ ವೇಳೆ ಯಡಿಯೂರಪ್ಪ ಪೂರ್ಣ ಬಿದ್ದ ಮನೆಗಳಿಗೆ 5 ಲಕ್ಷ ಘೋಷಣೆ ಮಾಡಿದ್ದರು. ಭಾಗಶಃ ಬಿದ್ದ ಮನೆಗಳ ಎರಡು ಭಾಗ ಮಾಡಿ ಒಂದು ಲಕ್ಷ, ಮೂರು ಲಕ್ಷ ರೂ. ಮಾಡಿದರು. ಮನೆಗಳ ರಿಪೇರಿಗೆ 50 ಸಾವಿರ ರೂ. ಪರಿಹಾರ ಘೋಷಿಸಿದ್ರು. ಬೆಳಗಾವಿ ಜಿಲ್ಲೆಯಲ್ಲಿ 44,205 ಮನೆಗಳಿಗೆ ಈಗಾಗಲೇ ಪರಿಹಾರ ಕಾರ್ಯ ಪ್ರಾರಂಭವಾಗಿದೆ. ಈಗಾಗಲೇ 861 ಕೋಟಿ ರೂ. ಪರಿಹಾರ ಕೊಟ್ಟಿದ್ದೇವೆ. ಬೆಳೆ ಹಾನಿಯಾದ 1 ಲಕ್ಷ 63 ಸಾವಿರ ರೈತರಿಗೆ 263 ಕೋಟಿ ರೂ. ಕೊಟ್ಟಿದ್ದೇವೆ. ಬಾಕಿ ಇರುವಂತಹದ್ದಕ್ಕೆ ಬಹಳಷ್ಟು ಸಮಸ್ಯೆ ಇದ್ದು ರೈತರು, ಗ್ರಾಮಸ್ಥರು ಬೇಡಿಕೆ ಇಟ್ಟಿದ್ರು. ನಾನು, ಡಿಸಿ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಒಂದು ಸಭೆ ಮಾಡಿದ್ದೇವೆ. ಮುಂದಿನ ವಾರ ಬೆಂಗಳೂರಿಗೆ ಬೆಳಗಾವಿ ಡಿಸಿ ಬರ್ತಾರೆ. ಈ ವೇಳೆ ಚರ್ಚೆ ನಡೆಸಿ, ಮುಂದಿನ ಹಣಕಾಸು ಇಲಾಖೆಯವರ ಜೊತೆ ಚರ್ಚೆ ಮಾಡಿ ಪರಿಹಾರಕ್ಕೆ ಕ್ರಮ‌ ಕೈಗೊಳ್ಳುತ್ತೇವೆ ಎಂದರು.

ಇದನ್ನು ಓದಿ: Eco Beach: ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಇಕೋ ಬೀಚ್​ಗೆ ಮತ್ತೆ ಅಂತರಾಷ್ಟ್ರೀಯ ಮನ್ನಣೆ!

ಸಿಎಂ ಬೆಳಗಾವಿ ದಕ್ಷಿಣ ಕ್ಷೇತ್ರದ ‌ಶಾಸಕ ಅಭಯ ಪಾಟೀಲ್ ನಿವಾಸಕ್ಕೆ ಉಪಹಾರ ಕೂಟಕ್ಕಾಗಿ ಆಗಮಿಸಿದರು. ಈ ವೇಳೆ ಸಿಎಂ, ಸಚಿವರಾದ ಕಾರಜೋಳ,‌ ಕತ್ತಿ, ‌ಮಾಜಿ‌ ಸಚಿವ ಲಕ್ಷ್ಮಣ ಸವದಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳಿಲ್ ಕಟೀಲ್ ಕುಮಾರ್ ಪಾಲ್ಗೊಂಡಿದ್ದರು. ಬಳಿಕ ಸಿಎಂಗೆ ಹಲವು ಮುಖಂಡರು, ಶಾಸಕ ಅಭಯ ಪಾಟೀಲ್ ಗೆ ಸಚಿವ ಸ್ಥಾನ ನೀಡಬೇಕು ಎಂದು ಮನವಿ ಸಲ್ಲಿಸಿದರು. ಬೆಳಗಾವಿ ‌ಪಾಲಿಕೆ‌ ಚುನಾವಣೆಯಲ್ಲಿ ಅಭಯ‌ ಪಾಟೀಲ್ ಗೆಲವು ಸಾಧಿಸಿದ್ದಾರೆ.‌ ಅವರ ಕೆಲಸವನ್ನು ಸರ್ಕಾರ ಗಮನಿಸಬೇಕು ಎಂದು ಮನವಿ ಮಾಡಿದರು.
Published by:HR Ramesh
First published: