Belagavi Municipal Corporation: ಬೆಳಗಾವಿ ಪಾಲಿಕೆ ಫೈಟ್; ಐತಿಹಾಸಿಕ ಗೆಲವು ಸಾಧಿಸಿದ ಬಿಜೆಪಿ, ಧೂಳೀಪಟವಾದ ಎಂಇಎಸ್!

ಗಡಿ ಹಾಗೂ ಭಾಷಾ ವಿವಾದವನ್ನೆ ಕೆದಕಿ ಮರಾಠಿಗರ ಮತ ಸೆಳೆಯುತ್ತಿದ್ದ ಎಂ.ಇ.ಎಸ್ ಈ ಭಾರೀ ಸಂಪೂರ್ಣ ನೆಲ ಕಚ್ಚಿದೆ. ಇದೇ ಮೊದಲ ಬಾರಿಗೆ  ಪಕ್ಷಾಧಾರಿತ ಚಿನ್ಹೆ ಗುರುತಿನ ಮೇಲೆ ನಡೆದ ಪಾಲಿಕೆ ಚುನಾವಣೆಯಲ್ಲಿ ಎಂ.ಇ.ಎಸ್ ಸೋತು ಸುಣ್ಣವಾಗಿದೆ. ಎಂ.ಇ.ಎಸ್ ಭದ್ರಕೋಟೆಯನ್ನ ಬೇಧಿಸುವಲ್ಲಿ ಬಿಜೆಪಿ ಸಫಲವಾಗಿದ್ದು ಸುಲಭವಾಗಿಯೇ ಪಾಲಿಕೆಯ ಅಧಿಕಾರದ ‌ಚುಕ್ಕಾಣಿ ಹಿಡಿದಿದೆ.

ಬೆಳಗಾವಿ ಮಹಾನಗರ ಪಾಲಿಕೆ

ಬೆಳಗಾವಿ ಮಹಾನಗರ ಪಾಲಿಕೆ

  • Share this:
ಬೆಳಗಾವಿ (ಸೆ. 6): ಬೆಳಗಾವಿ ಮಹಾನಗರ ಪಾಲಿಕೆಯ ಚುನಾವಣೆಯಲ್ಲಿ (Belagavi Municipal Corporation Election) ಕಂಡು  ಕೇಳರಿಯದ ಅಚ್ಚರಿ ಫಲಿತಾಂಶ ಹೊರಬಿದ್ದಿದೆ. ಬಿಜೆಪಿ (BJP) ಭರ್ಜರಿ ವಿಜಯ ಸಾಧಿಸಿದ್ದರೆ ಎಂ.ಇ.ಎಸ್ (MES) ಹೇಳ ಹೆಸರಿಲ್ಲದಂತೆ ಧೂಳಿಪಟವಾಗಿದೆ. ಈ ಚುನಾವಣೆಯಲ್ಲಿ ಕಾಂಗ್ರೆಸ್ ಗೂ ತೀವ್ರ ಹಿನ್ನಡೆಯಾಗಿದ್ದು, MIM ತನ್ನ ಮೊದಲ ಖಾತೆ ತೆರೆದಿದೆ. ತೀವ್ರ ಕುತೂಹಲ ಕೆರಳಿಸಿದ್ದ ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆಯ ಫಲಿತಾಂಶ ಹೊರ ಬಿದ್ದಿದ್ದು ಬಿಜೆಪಿ ಅತಿದೊಡ್ಡ ಪಕ್ಷವಾಗಿ ಹೊರ ಹೊಮ್ಮಿದೆ.

ಪಾಲಿಕೆಯ 58 ವಾರ್ಡಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ 36 ವಾರ್ಡಗಳಲ್ಲಿ ಗೆಲ್ಲುವ ಮೂಲಕ ಪಾಲಿಕೆಯ ಅಧಿಕಾರದ ಗದ್ದುಗೆ ಏರಿದೆ.  10 ಸ್ಥಾನ ಪಡೆದಿರುವ ಕಾಂಗ್ರೆಸ್ ಗೂ ಮುಖಭಂಗವಾಗಿದ್ದು, ನಾಡದ್ರೋಹಿ  ಎಂ.ಇ.ಎಸ್ ಕೇವಲ 3 ಸ್ಥಾನ ಪಡೆದು ಧೂಳಿಪಟವಾಗಿದೆ. ಇನ್ನೂ ಅಚ್ಚರಿ ಎಂಬಂತೆ ಎಂ.ಐ.ಎಂ ಅಭ್ಯರ್ಥಿಯೋರ್ವ ಗೆಲುವು ಸಾಧಿಸಿದ್ದು, ಕಾಂಗ್ರೆಸ್- ಬಿಜೆಪಿ ಟಿಕೆಟ್ ವಂಚಿತ ಬಂಡಾಯ ಅಭ್ಯರ್ಥಿಗಳು ಸೇರಿದಂತೆ 9 ಜನ ಪಕ್ಷೇತರರು ಗೆಲುವು ಸಾಧಿಸಿದ್ದಾರೆ.

ಬೆಳಗಾವಿ ಮಹಾನಗರ ಪಾಲಿಕೆ ಇತಿಹಾಸದಲ್ಲಿಯೇ ಇದೇ ಮೊದಲ ಭಾರಿಗೆ ನಾಡದ್ರೋಹಿ ಎಂ.ಇ.ಎಸ್ ಗೆ ತೀವ್ರ ಮುಖಭಂಗವಾಗಿದೆ. ಗಡಿ ಹಾಗೂ ಭಾಷಾ ವಿವಾದವನ್ನೆ ಕೆದಕಿ ಮರಾಠಿಗರ ಮತ ಸೆಳೆಯುತ್ತಿದ್ದ ಎಂ.ಇ.ಎಸ್ ಈ ಭಾರೀ ಸಂಪೂರ್ಣ ನೆಲ ಕಚ್ಚಿದೆ. ಇದೇ ಮೊದಲ ಬಾರಿಗೆ  ಪಕ್ಷಾಧಾರಿತ ಚಿನ್ಹೆ ಗುರುತಿನ ಮೇಲೆ ನಡೆದ ಪಾಲಿಕೆ ಚುನಾವಣೆಯಲ್ಲಿ ಎಂ.ಇ.ಎಸ್ ಸೋತು ಸುಣ್ಣವಾಗಿದೆ. ಎಂ.ಇ.ಎಸ್ ಭದ್ರಕೋಟೆಯನ್ನ ಬೇಧಿಸುವಲ್ಲಿ ಬಿಜೆಪಿ ಸಫಲವಾಗಿದ್ದು ಸುಲಭವಾಗಿಯೇ ಪಾಲಿಕೆಯ ಅಧಿಕಾರದ ‌ಚುಕ್ಕಾಣಿ ಹಿಡಿದಿದೆ. ಬಿಜೆಪಿಗೆ ಬಹುಮತ ನೀಡಿದ ಬೆಳಗಾವಿ ಜನತೆಗೆ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಅವರು ಧನ್ಯವಾದ ತಿಳಿಸಿದ್ದಾರೆ.

ಇದನ್ನು ಓದಿ: Sandalwood Smuggling; ತುಮಕೂರು ಜಿಲ್ಲೆಯಲ್ಲಿ ಹೆಚ್ಚಿದ ತಮಿಳುನಾಡು ಮೂಲದ ಶ್ರೀಗಂಧ ಕಳ್ಳರ ಹಾವಳಿ; ಮೂವರ ಸೆರೆ

ನಿಷೇಧಾಜ್ಞೆ ಉಲ್ಲಂಘಿಸಿ ಸಂಭ್ರಮಾಚರಣೆ

ಸೆಕ್ಷನ್ 144 ನಿಷೇದಾಜ್ಞೆ ಉಲ್ಲಂಘಿಸಿ, ವಾರ್ಡ್ ನಂಬರ್ 38 ರ ಪಕ್ಷೇತರ ಅಭ್ಯರ್ಥಿ ಅಜೀಮ್ ಪಟವೇಕರ್ ಪರ ಸಂಭ್ರಮಾಚರಣೆ ನಡೆಸಿ, ಕಿರುಚಾಡುತ್ತಿದ್ದವರ ಮೇಲೆ  ಪೊಲೀಸರು ಲಾಠಿ ಲಾರ್ಜ್ ನಡೆಸಿದರು. ಪೊಲೀಸರ ಲಾಠಿ ಚಾರ್ಜ್ ಗೆ ಅಜೀಂ ಪಟವೇಗಾರ್ ಬೆಂಬಲಿಗರು ದಿಕ್ಕಾಪಾಲಾಗಿ ಓಡಿ ಹೋಗಿದ್ದಾರೆ.

ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆ ಫಲಿತಾಂಶ ನಾಡದ್ರೋಹಿ ಎಂ.ಇ.ಎಸ್ ಗೆ ತಕ್ಕ ಪಾಠ ಕಲಿಸಿದಂತಾಗಿದ್ದು ಇನ್ನಾದರೂ ನಾಡದ್ರೋಹಿ ಬಾಲ ಮುದುರಿಕೊಂಡು ಇರ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

ಬಿಜೆಪಿ ಗೆಲುವಿನ ರುವಾರಿ ಶಾಸಕ ಅಭಯ ಪಾಟೀಲ್ ಮಾತನಾಡಿ, ಮಹಾನಗರ ಪಾಲಿಕೆಯ ಜನ ಅಭಿವೃದ್ಧಿಗೆ ಮತ ನೀಡಿದ್ದಾರೆ‌. ಫಲಿತಾಂಶ ಸ್ಥಳೀಯ ರಾಜಕಾರಣಕ್ಕೆ ಹೊಸ ದಿಕ್ಕು ತೋರಿಸಿದೆ. ಜೆಪಿಯ 35 ಜನ ಪಾಲಿಕೆ ಸದಸ್ಯರು ಆಯ್ಕೆಯಾಗಿದ್ದಾರೆ‌. ರಾಜ್ಯ ನಾಯಕರ ಪ್ರಯತ್ನದಿಂದ ಹೆಚ್ಚಿನ ಸ್ಥಾನ. ಜನರ ಕನಸಿನ ಬೆಳಗಾವಿ ನಿರ್ಮಾಣ ಮಾಡಲು ನಾವು ಬದ್ದ. ಪಾಲಿಕೆ ಆಡಳಿತ ಜನರ ಬಾಗಿಲಿಗೆ ಮುಟ್ಟಿಸಲು ಎಲ್ಲಾ ರೀತಿಯ ಪ್ರಯತ್ನ. 56 ಜನ ಪಾಲಿಕೆ ಸದಸ್ಯರು ಹೊಸಬರು ಆಯ್ಕೆ ಆಗಿದ್ದಾರೆ. ಹೊಸ ಪಾಲಿಕೆ ಸದಸ್ಯರಿಗೆ ಜನರ ಸಮಸ್ಯೆ, ಕೆಲಸದ ಬಗ್ಗೆ ತರಬೇತಿ ಕ್ಯಾಂಪ್ ಮಾಡುತ್ತೇವೆ. ಯಶಸ್ವಿ ಮಹಾನಗರ ಪಾಲಿಕೆ ಗಳಿಗೆ ಟೂರ್ ಫಿಕ್ಸ್ ಮಾಡುತ್ತೇವೆ. ಜನ ಸಂಪರ್ಕ ಸಭೆ,  ವಾರ್ಡ್ ವ್ಯಾಪ್ತಿಯಲ್ಲಿ ಕಚೇರಿ, ಜನರ ಜತಗೆ ನಿರಂತರ ಸಂಪರ್ಕದಲ್ಲಿ ಎಲ್ಲಾ ಕೆಲಸ. ಪಕ್ಷದ ಚಿನ್ಹೆ ಮೇಲೆ ನಡೆದ ಚುನಾವಣೆ ಸಿಕ್ಕ ಗೆಲವು ಬೆಳಗಾವಿ ಜನರ ಗೆಲವು. ಪಾಲಿಕೆ ಸದಸ್ಯರು ಆದರ್ಶ ಪಾಲಿಕೆ ಸದಸ್ಯರಾಗಿ ಕೆಲಸ ಮಾಡುತ್ತೇವೆ‌ ಎಂದು ಹೇಳಿದರು.
Published by:HR Ramesh
First published: