Belagavi Corporation Election: ಬೆಳಗಾವಿ ಪಾಲಿಕೆಯಲ್ಲಿ BJPಗೆ ಐತಿಹಾಸಿಕ ಗೆಲವು: MES ಧೂಳೀಪಟ

belagavi corporation election results: ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಮೊದಲ ಬಾರಿಗೆ ರಾಜಕೀಯ ಪಕ್ಷವೊಂದು ಅಧಿಕಾರಕ್ಕೆ ಬರುತ್ತಿದೆ. ಗಡಿಜಿಲ್ಲೆಯಲ್ಲಿ ಬಿಜೆಪಿ ಅಧಿಕಾರ ಸ್ಥಾಪಿಸುತ್ತಿದೆ. ಬೆಳಗಾವಿ ಮಹಾನಗರ ಪಾಲಿಕೆಯ 58 ಕ್ಷೇತ್ರಗಳ ಪೈಕಿ ಬಿಜೆಪಿ 36 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ.

ಬಿಜೆಪಿಗೆ ಭರ್ಜರಿ ಗೆಲುವು

ಬಿಜೆಪಿಗೆ ಭರ್ಜರಿ ಗೆಲುವು

  • Share this:
ಬೆಳಗಾವಿ(ಸೆ,6):  ಬೆಳಗಾವಿ ಮಹಾನಗರ ಪಾಲಿಕೆಯ ಚುನಾವಣೆಯಲ್ಲಿ ಕಂಡು ಕೇಳರಿಯದ ಅಚ್ಚರಿ ಫಲಿತಾಂಶ ಹೊರಬಿದ್ದಿದೆ. ಬಿಜೆಪಿ ಭರ್ಜರಿ ವಿಜಯ ಸಾಧಿಸಿದ್ದರೆ ಎಂ.ಇ.ಎಸ್ ಹೇಳ ಹೆಸರಿಲ್ಲದಂತೆ ಧೂಳಿಪಟವಾಗಿದೆ.  ಈ ಚುನಾವಣೆಯಲ್ಲಿ ಕಾಂಗ್ರೆಸ್ ಗೂ ತೀವ್ರ ಹಿನ್ನಡೆಯಾಗಿದ್ದು, MIM ತನ್ನ ಮೊದಲ ಖಾತೆ ತೆರೆದಿದೆ. ತೀವ್ರ ಕುತೂಹಲ ಕೆರಳಿಸಿದ್ದ ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆಯ ಫಲಿತಾಂಶ ಹೊರ ಬಿದ್ದಿದ್ದು ಬಿಜೆಪಿ ಅತಿದೊಡ್ಡ ಪಕ್ಷವಾಗಿ ಹೊರ ಹೊಮ್ಮಿದೆ. ಪಾಲಿಕೆಯ 58 ವಾರ್ಡಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ 36 ವಾರ್ಡಗಳಲ್ಲಿ ಗೆಲ್ಲುವ ಮೂಲಕ ಪಾಲಿಕೆಯ ಅಧಿಕಾರದ ಗದ್ದುಗೆ ಏರಿದೆ.  10 ಸ್ಥಾನ ಪಡೆದಿರುವ ಕಾಂಗ್ರೆಸ್ ಗೂ ಮುಖಭಂಗವಾಗಿದ್ದು , ಸದಾ ಖ್ಯಾತ ತೆಗೆಯುವ  ಎಂ.ಇ.ಎಸ್ ಕೇವಲ 3 ಸ್ಥಾನ ಪಡೆದು ಧೂಳಿಪಟವಾಗಿದೆ. ಇನ್ನೂ ಅಚ್ಚರಿ ಎಂಬಂತೆ ಎಂ.ಐ.ಎಂ ಅಭ್ಯರ್ಥಿಯೋರ್ವ ಗೆಲುವು ಸಾಧಿಸಿದ್ದು, ಕಾಂಗ್ರೆಸ್-ಬಿಜೆಪಿ ಟಿಕೆಟ್ ವಂಚಿತ ಬಂಡಾಯ ಅಭ್ಯರ್ಥಿಗಳು ಸೇರಿದಂತೆ 9 ಜನ ಪಕ್ಷೇತರರು ಗೆಲುವು ಸಾಧಿಸಿದ್ದಾರೆ.

ನೆಲ ಕಚ್ಚಿದ ಎಂಇಎಸ್​​..! 

ಬೆಳಗಾವಿ ಮಹಾನಗರ ಪಾಲಿಕೆ ಇತಿಹಾಸದಲ್ಲಿಯೇ ಇದೇ ಮೊದಲ ಭಾರಿಗೆ  ಎಂಇಎಸ್ ಗೆ ತೀವ್ರ ಮುಖಭಂಗವಾಗಿದೆ. ಗಡಿ ಹಾಗೂ ಭಾಷಾ ವಿವಾದವನ್ನೆ ಕೆದಕಿ ಮರಾಠಿಗರ ಮತ ಸೆಳೆಯುತ್ತಿದ್ದ ಎಂ.ಇ.ಎಸ್ ಈ ಭಾರೀ ಸಂಪೂರ್ಣ ನೆಲ ಕಚ್ಚಿದೆ. ಇದೇ ಮೊದಲ ಭಾರಿಗೆ  ಪಕ್ಷಾಧಾರಿತ ಚಿನ್ಹೆ ಗುರುತಿನ ಮೇಲೆ ನಡೆದ ಪಾಲಿಕೆ ಚುನಾವಣೆಯಲ್ಲಿ ಎಂ.ಇ.ಎಸ್ ಸೋತು ಸುಣ್ಣವಾಗಿದೆ. ಎಂ.ಇ.ಎಸ್ ಭದ್ರಕೋಟೆಯನ್ನ ಭೇಧಿಸುವಲ್ಲಿ ಬಿಜೆಪಿ ಸಫಲವಾಗಿದ್ದು ಸುಲಭವಾಗಿಯೇ ಪಾಲಿಕೆಯ ಅಧಿಕಾರದ ‌ಚುಕ್ಕಾಣಿ ಹಿಡಿದಿದೆ. ಬಿಜೆಪಿಗೆ ಬಹುಮತ ನೀಡಿದ ಬೆಳಗಾವಿ ಜನತೆಗೆ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಧನ್ಯವಾದ ತಿಳಿಸಿದ್ದಾರೆ.

ಸೆಕ್ಷನ್ 144 ನಿಷೇದಾಜ್ಞೆ ಉಲ್ಲಂಘಿಸಿ, ವಾರ್ಡ್ ನಂಬರ 38 ರ ಪಕ್ಷೇತರ ಅಭ್ಯರ್ಥಿ ಅಜೀಮ್ ಪಟವೇಕರ್ ಪರ ಸಂಭ್ರಮಾಚರಣೆ ನಡೆಸಿ, ಕಿರುಚಾಡುತ್ತಿದ್ದವರ ಮೇಲೆ  ಪೊಲೀಸರು ಲಾಠಿ ಲಾರ್ಜ್ ನಡೆಸಿದ್ರು. ಪೊಲೀಸರ ಲಾಠಿ ಚಾರ್ಜ್ ಗೆ ಅಜೀಂ ಪಟವೇಗಾರ್ ಬೆಂಬಲಿಗರು ದಿಕ್ಕಾಪಾಲಾಗಿ ಓಡಿ ಹೋಗಿದ್ದಾರೆ. ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆ ಫಲಿತಾಂಶ ಎಂ.ಇ.ಎಸ್ ಗೆ ತಕ್ಕ ಪಾಠ ಕಲಿಸಿದಂತಾಗಿದ್ದು ಇನ್ನಾದರೂ ಬಾಲ ಮುದುರಿಕೊಂಡು ಇರ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ: Karnataka ULB Results- ಬೆಳಗಾವಿ, ಹುಬ್ಬಳ್ಳಿ ಪಾಲಿಕೆಯಲ್ಲಿ ಬಿಜೆಪಿ ಮೇಲುಗೈ; ತರೀಕೆರೆ ಪುರಸಭೆ ಕೈ ವಶ

ಬಿಜೆಪಿ ಗೆಲುವಿನ ರುವಾರಿ ಶಾಸಕ ಅಭಯ ಪಾಟೀಲ್ ಮಾತನಾಡಿದರು.  ಮಹಾನಗರ ಪಾಲಿಕೆಯ ಜನ ಅಭಿವೃದ್ಧಿಗೆ ಮತ ನೀಡಿದ್ದಾರೆ‌. ಫಲಿತಾಂಶ ಸ್ಥಳೀಯ ರಾಜಕಾಣರಕ್ಕೆ ಹೊಸ ದಿಕ್ಕು ತೋರಿಸಿದೆ. ಜೆಪಿಯ 35 ಜನ ಪಾಲಿಕೆ ಸದಸ್ಯರು ಆಯ್ಕೆಯಾಗಿದ್ದಾರೆ‌. ರಾಜ್ಯ ನಾಯಕರ ಪ್ರಯತ್ನದಿಂದ ಹೆಚ್ಚಿನ ಸ್ಥಾನ. ಜನರ ಕನಸಿನ ಬೆಳಗಾವಿ ನಿರ್ಮಾಣ ಮಾಡಲು ನಾವು ಬದ್ದ. ಪಾಲಿಕೆ ಆಡಳಿತ ಜನರ ಬಾಗಿಲಿಗೆ ಮುಟ್ಟಿಸಲು ಎಲ್ಲಾ ರೀತಿಯ ಪ್ರಯತ್ನ. 56 ಜನ ಪಾಲಿಕೆ ಸದಸ್ಯರು ಹೊಸಬರು ಆಯ್ಕೆಯಾಗಿದ್ದಾರೆ. ಹೊಸ ಪಾಲಿಕೆ ಸದಸ್ಯರಿಗೆ ಜನರ ಸಮಸ್ಯೆ, ಕೆಲಸದ ಬಗ್ಗೆ ಟ್ರೈನಿಂಗ್ ಕ್ಯಾಂಪ್ ಮಾಡುತ್ತೇವೆ. ಯಶಸ್ವಿ ಮಹಾನಗರ ಪಾಲಿಕೆ ಗಳಿಗೆ ಟೂರ್ ಫಿಕ್ಸ್ ಮಾಡುತ್ತೇವೆ. ಜನ ಸಂಪರ್ಕ ಸಭೆ,  ವಾರ್ಡ್ ವ್ಯಾಪ್ತಿಯಲ್ಲಿ ಕಚೇರಿ, ಜನರ ಜತಗೆ ನಿರಂತರ ಸಂಪರ್ಕದಲ್ಲಿ ಎಲ್ಲಾ ಕೆಲಸ. ಪಕ್ಷದ ಚಿನ್ಹೆ ಮೇಲೆ ನಡೆದ ಚುನಾವಣೆ ಸಿಕ್ಕ ಗೆಲವು ಬೆಳಗಾವಿ ಜನರ ಗೆಲವು.. ಪಾಲಿಕೆ ಸದಸ್ಯರು ಆದರ್ಶ ಪಾಲಿಕೆ ಸದಸ್ಯರಾಗಿ ಕೆಲಸ ಮಾಡುತ್ತೇವೆ‌ ಎಂದರು.

ರಾಜ್ಯದ ಮೂರು ಮಹಾನಗರ ಪಾಲಿಕೆಗಳ ಚುನಾವಣೆಯ ಫಲಿತಾಂಶವು ತೃಪ್ತಿದಾಯಕವಾಗಿದ್ದು, ಮೊದಲ ಬಾರಿಗೆ ಬೆಳಗಾವಿಯಲ್ಲಿ ಸ್ಪಷ್ಟ ಬಹುಮತದಿಂದ ಬಿ.ಜೆ.ಪಿ. ಅಧಿಕಾರಕ್ಕೆ ಬಂದಿದ್ದು, ಇದೊಂದು ಐತಿಹಾಸಿಕ ಗೆಲುವಾಗಿದೆ ಎಂದು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ  ಅವರು ಹರ್ಷ ವ್ಯಕ್ತಪಡಿಸಿದ್ದಾರೆ. ಬೆಳಗಾವಿ ಹುಬ್ಬಳ್ಳಿ- ಧಾರವಾಡ ಮತ್ತು ಕಲಬುರಗಿ ಮೂರು ಮಹಾನಗರ ಪಾಲಿಕೆ ಚುನಾವಣೆ ಫಲಿತಾಂಶ ಇಂದು ಪ್ರಕಟವಾಗಿದೆ. ಫಲಿತಾಂಶದ ಬಳಿಕ ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿರುವ ಬಿಎಸ್​ವೈ ಅವರು, ಹುಬ್ಬಳ್ಳಿ-ಧಾರವಾಡ ಮತ್ತು ಕಲಬುರಗಿ ಮಹಾನಗರ ಪಾಲಿಕೆಯಲ್ಲಿ ಸಂಸದರು, ಶಾಸಕರ ಹಾಗೂ ವಿಧಾನಪರಿಷತ್ ಸದಸ್ಯರ ಬೆಂಬಲದೊಂದಿಗೆ ಬಿಜೆಪಿ ಪುನಃ. ಸ್ಪಷ್ಟ ಬಹುಮತದಿಂದ ಅಧಿಕಾರಕ್ಕೆ ಬರಲಿದೆ ಎಂದು ಹೇಳಿದ್ದಾರೆ.
Published by:Kavya V
First published: