ಬೆಳಗಾವಿ ‌ಮಹಾನಗರ ಪಾಲಿಕೆ ಚುನಾವಣೆ- ಟಿಕೆಟ್ ಹಂಚಿಕೆಗೆ ಕೊನೆ ಹಂತದಲ್ಲಿ ಕಸರತ್ತು!

ಆಮ್ ಆದ್ಮಿ ಪಕ್ಷದಿಂದ ಈಗಾಗಲೇ 28 ವಾರ್ಡ್ ಗಳಿಗೆ ಟಿಕೆಟ್ ಹಂಚಿಕೆ ಮಾಡಿದ್ದು, ಕೆಲವು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿ ಭರ್ಜರಿ ಪ್ರಚಾರ ಕೂಡ ಮಾಡುತ್ತಿದ್ದಾರೆ. ಕೋವಿಡ್​ ರೂಲ್ಸ್ ಪ್ರಕಾರ ಐದು ಜನರೇ ಮನೆ ಹಾಗೂ ಅಂಗಡಿಗಳಿಗೆ ತೆರಳಿ ತಮ್ಮ ಪರ ಮತಯಾಚನೆ ಮಾಡುತ್ತಿದ್ದ ದೃಶ್ಯ ಕಂಡು ಬಂತು.

ಬೆಳಗಾವಿ ಮಹಾನಗರ ಪಾಲಿಕೆ

ಬೆಳಗಾವಿ ಮಹಾನಗರ ಪಾಲಿಕೆ

  • Share this:
ಬೆಳಗಾವಿ(ಆ,22)-  ಸೆ.3ರಂದು ನಡೆಯುತ್ತಿರುವ ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆಗೆ ಇದೀಗ ಕುಂದಾನಗರಿ ಬೆಳಗಾವಿಯಲ್ಲಿ ಚುನಾವಣಾ ಕಣ ದಿನದಿಂದ ದಿನಕ್ಕೆ ರಂಗೇರುತ್ತಿದೆ. 58 ವಾರ್ಡ್ ಗಳಿರುವ ಬೆಳಗಾವಿ ಮಹಾನಗರ ಪಾಲಿಕೆಗೆ ಇದೇ ಮೊದಲ ಬಾರಿಗೆ ರಾಜಕೀಯ ಪಕ್ಷಗಳೆಲ್ಲವೂ ಚಿಹ್ನೆ ಮೇಲೆ ಅಗ್ನಿಪರೀಕ್ಷೆಗಳಿದಿವೆ.

ಕಳೆದ ಒಂದು ವಾರದ ಹಿಂದೆಯೇ ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲು ಬೆಳಗಾವಿಗೆ ಆಗಮಿಸಿ ಬಿಜೆಪಿ ಪಕ್ಷದ ಚಿಹ್ನೆ ಮೇಲೆ 58ವಾರ್ಡ್ ಗಳಲ್ಲಿ ಸ್ಪರ್ಧೆ ಮಾಡುವುದು ಅಂತಾ ಘೋಷಣೆ ಮಾಡಿ ಹೋಗಿದ್ದರು. ಇದಾದ ಬಳಿಕವೂ ಇಲ್ಲಿವರೆಗೂ ಬಿಜೆಪಿಯಲ್ಲಿ ಇನ್ನೂ ಟಿಕೆಟ್ ಅಭ್ಯರ್ಥಿಗಳ ಪಟ್ಟಿ ಅಂತಿಮವಾಗಿಲ್ಲ.

ಇದೆಲ್ಲದರ ನಡುವೆ ಆಮ್ ಆದ್ಮಿ ಪಕ್ಷ, ಜೆಡಿಎಸ್ ಕೂಡ ಕಣಕ್ಕಿಳಿಯುವುದಾಗಿ ಘೋಷಣೆ ಮಾಡಿದ್ದವು, ಆದರೆ ಕಾಂಗ್ರೆಸ್ ಮಾತ್ರ ಲೆಕ್ಕಾಚಾರ ಹಾಕುವುದರಲ್ಲೇ ಇತ್ತು ಯಾವಾಗ ಎಲ್ಲ ರಾಜಕೀಯ ಪಕ್ಷಗಳು ಪಕ್ಷದ ಮೇಲೆ ಸ್ಪರ್ಧೆ ಮಾಡುತ್ತಿವೆ ಎಂಬುದು ಗೊತ್ತಾಯಿತೋ ಕಾಂಗ್ರೆಸ್ ಕೂಡ ಚಿಹ್ನೆ ಮೇಲೆ ಸ್ಪರ್ಧೆ ಮಾಡಲು ಮುಂದಾಯಿತು.

ಅಳೆದು ತೂಗಿ ಕಣಕ್ಕಿಳಿಯುತ್ತಿರುವ ಕಾಂಗ್ರೆಸ್ ನಲ್ಲಿ ಅಸಮಾಧಾನ ಶುರುವಾಗಿದೆ.  ಬೆಳಗಾವಿ ನಗರದಲ್ಲಿ ಹಿಡಿತ ಸಾಧಿಸಲು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ತಮ್ಮ ಬೆಂಬಲಿಗರಿಗೆ ಟಿಕೆಟ್ ಕೊಡಿಸಲು ಪ್ಲ್ಯಾನ್ ಮಾಡುತ್ತಿದ್ದರೇ, ಇತ್ತ ಮಾಜಿ ಶಾಸಕ ಫೀರೋಜ್ ಸೇಠ್ ಕೂಡ ತಮ್ಮ ಬೆಂಬಲಿಗರಿಗೆ ಟಿಕೆಟ್ ಕೊಡಿಸಿ ಕ್ಷೇತ್ರವನ್ನ ಹಿಡಿತಕ್ಕೆ ತೆಗೆದುಕೊಳ್ಳಲು ಪ್ಲ್ಯಾನ್ ಮಾಡುತ್ತಿದ್ದಾರೆ.

ಈ ಇಬ್ಬರು ನಾಯಕರ ಮುಸುಕಿನ ಗುದ್ದಾಟದಿಂದ ಬೆಳಗಾವಿ ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ಇನ್ನೂ ಅಭ್ಯರ್ಥಿಗಳು ಪೈನಲ್ ಮಾಡಲು ಆಗಿಲ್ಲ. ನಿನ್ನೆ ರಾತ್ರಿ 12ಗಂಟೆ ವರೆಗೂ ಬೆಳಗಾವಿ ಕಾಂಗ್ರೆಸ್ ಕಚೇರಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸೇರಿದಂತೆ ಸ್ಥಳೀಯ ನಾಯಕರು ಅಭ್ಯರ್ಥಿ ಆಯ್ಕೆ ವಿಚಾರಕ್ಕೆ ಸಭೆ ನಡೆಸಿದರೂ ಅಂತಿಮಗೊಳಿಸಲು ಆಗಿಲ್ಲ.

ಇಂದು ಕೂಡ ಅಜ್ಞಾತ ಸ್ಥಳದಲ್ಲಿ ಸತೀಶ್ ಲೆಕ್ಕಾಚಾರ ಮಾಡುತ್ತಾ ಕುಳಿತಿದ್ದರೇ, ಇತ್ತ ಫೀರೋಜ್ ಸೇಠ್ ಕೂಡ ಕೆಪಿಸಿಸಿ ವರಿಷ್ಠರ ಮೇಲೆ ಒತ್ತಡ ಹೇರಿ ತಮ್ಮವರಿಗೆ ಟಿಕೆಟ್ ಕೊಡಿಸಲು ಪ್ರಯತ್ನ ನಡೆಸಿದ್ದಾರೆ. ಇಬ್ಬರು ನಾಯಕರ ಈ ಕಿತ್ತಾಟದಿಂದ ಕೆಪಿಸಿಸಿ ಅಧ್ಯಕ್ಷ ತಾವೇ ಪಟ್ಟಿಯನ್ನ ಪೈನಲ್ ಮಾಡುವುದಾಗಿ ಹೇಳಿ ಇಬ್ಬರ ಲಿಸ್ಟ್ ತರೆಸಿಕೊಂಡಿದ್ದು ಇಂದು ರಾತ್ರಿ ವರೆಗೂ ಅಭ್ಯರ್ಥಿ ಅಂತಿಮ ಪಟ್ಟಿ ಹೊರ ಬರಲಿದೆ.

ಬಿಜೆಪಿ, ಕಾಂಗ್ರೆಸ್ ನಲ್ಲಿ ನಾಯಕರ ಭಿನ್ನಮತ ಈಗಲೇ ಶುರುವಾಗಿದ್ದು ಒಂದು ಕಡೆಯಾದರೆ ಇತ್ತ ಚುನಾವಣೆ ಉಸ್ತುವಾರಿ ವಹಿಸಿಕೊಂಡ ಶಾಸಕ ಅಭಯ್ ಪಾಟೀಲ್ ಇಂದು ತಮ್ಮ ಕ್ಷೇತ್ರದಲ್ಲಿ ಬಿಜೆಪಿ ಪಕ್ಷದ ಕಚೇರಿಯನ್ನ ಉದ್ಘಾಟನೆ ಮಾಡಿ ಅತೀ ಹೆಚ್ಚು ಸ್ಥಾನ ಗೆಲ್ಲುವ ವಿಶ್ವಾಸವನ್ನ ವ್ಯಕ್ತಪಡಿಸಿದರು.

ಇದನ್ನೂ ಓದಿ: corona : ಅಧಿಕಾರಿಗಳ ನಿರ್ಲಕ್ಷ್ಯ; ಕೊಡಗಿನ ಕರಿಕೆ ಚೆಕ್‍ಪೋಸ್ಟ್​ನಲ್ಲಿ ಇಲ್ಲ ಕಟ್ಟುನಿಟ್ಟಿನ ಕ್ರಮ

ಆಮ್ ಆದ್ಮಿ ಪಕ್ಷದಿಂದ ಈಗಾಗಲೇ 28 ವಾರ್ಡ್ ಗಳಿಗೆ ಟಿಕೆಟ್ ಹಂಚಿಕೆ ಮಾಡಿದ್ದು, ಕೆಲವು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿ ಭರ್ಜರಿ ಪ್ರಚಾರ ಕೂಡ ಮಾಡುತ್ತಿದ್ದಾರೆ. ಕೋವಿಡ್​ ರೂಲ್ಸ್ ಪ್ರಕಾರ ಐದು ಜನರೇ ಮನೆ ಹಾಗೂ ಅಂಗಡಿಗಳಿಗೆ ತೆರಳಿ ತಮ್ಮ ಪರ ಮತಯಾಚನೆ ಮಾಡುತ್ತಿದ್ದ ದೃಶ್ಯ ಕಂಡು ಬಂತು.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
Published by:HR Ramesh
First published: