Youth Murdered in Belgaum: ಪೆಟ್ರೋಲ್ ಕದಿಯೋದನ್ನು ನೋಡಿದ್ದಕ್ಕೆ ಬಲಿಯಾದ ಅಮಾಯಕ!

ಪ್ರವೀಣನ ಕಳ್ಳತನವನ್ನು ಅದೇ ಗ್ರಾಮದ ಮಹಾದೇವ ಕಚಡಿ ನೋಡಿದ್ದಾನೆ.‌ ನೋಡಿದ ಬಳಿಕ ಅಲ್ಲೇ ಬುದ್ದಿವಾದ ಹೇಳಿ, ತಡಿ ನಿನ್ನ ತಂದೆಗೂ ಹೇಳ್ತಿನಿ ಅಂತ ಪ್ರವೀಣನ ಮನೆಗೆ ಹೋಗಿ ತಂದೆಗೆ ವಿಷಯ ತಿಳಿಸಿದ್ದಾ‌ನೆ. ಅದೇ ನೋಡಿ ಈ ಅಮಾಯಕ ಮಹಾದೇವ ಮಾಡಿದ ತಪ್ಪು.

ಆರೋಪಿ ಪ್ರವೀಣ, ಕೊಲೆಯಾದ ಮಹಾದೇವ

ಆರೋಪಿ ಪ್ರವೀಣ, ಕೊಲೆಯಾದ ಮಹಾದೇವ

  • Share this:
ಬೆಳಗಾವಿ : ಆತ ತಿಂದುಂಡು ತಿರುಗೋ ಪೋಕರಿ. ಶೋಕಿಯ ಜೀವನಕ್ಕೆ ಬಿದ್ದಿದ್ದ ಆತ ರಾತ್ರಿಯಾದ್ರೆ ಪೆಟ್ರೊಲ್ ಕಳ್ಳತನ ಮಾಡೋ ಖಯಾಲಿ ರೂಢಿ ಮಾಡಿಕೊಂಡಿದ್ದ. ನಿಂತಿರುವ ಗಾಡಿಯ ಪೆಟ್ರೋಲ್ ತೆಗೆದು ಅದನ್ನ ತನ್ನ ಗಾಡಿಗೆ ಹಾಕಿ ಓಡಿಸುತ್ತಿದ್ದ ಖದೀಮ. ಮಾಡಬಾರದ ಕೆಲಸ ಮಾಡುವಾಗ ಸಿಕ್ಕಿಬಿದ್ದ ಖದೀಮ ತನ್ನ ಮರ್ಯಾದೆ ಉಳಿಸಿಕೊಳ್ಳೋಕೆ ನೋಡಿದವನನ್ನೆ ಕೊಂದು ತಿಪ್ಪೆಯಲ್ಲಿ ಹೆಣ ಹೂತಿಟ್ಟು ಈಗ ಪೊಲೀಸರ ಅತಿಥಿಯಾಗಿದ್ದಾನೆ.

ಇನ್ನೂ ಚಿಗುರು ಮೀಸೆ. ಯಳಸು ವಯಸ್ಸು ಅತ್ತ ಜೀವನ ಅಂದ್ರೆ ಎನೂ ಅಂತಾನೇ ಸರಿಯಾಗಿ ಅರ್ಥವಾಗದಿರೋ ವಯಸ್ಸು ಈ ಯುವಕನದ್ದು. ಈತ ಮಾಡಿದ ಕೆಲಸದಿಂದ ಈಗ ಈತನ ತಂದೆ ತಾಯಿ ಹಾಗೂ ಈಡೀ ಊರೆ ತಲೆ ತಗ್ಗಿಸುತ್ತಿದೆ.  ಹೆಸರು ಪ್ರವೀಣ ಸುಣಧೋಳಿ ಅಂತ ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಬಳೋಬಾಳ ಗ್ರಾಮದ ನಿವಾಸಿ. ಚನ್ನಾಗಿ ಓದಿ ದುಡಿಯೋ ವಯಸ್ಸಲ್ಲಿ ಈ ಪ್ರವೀಣ ಪೆಟ್ರೋಲ್ ಕದಿಯೋ ವಿಚಾರದಲ್ಲಿ ಪ್ರಾವಿಣ್ಯತೆ ಸಾಧಿಸಿ ಪ್ರವೀಣನಾಗಿದ್ದ ರಾತ್ರಿ ಆದರೆ ಸಾಕು ಯಾರದಾದ್ರೂ ರಸ್ತೆ ಪಕ್ಕದಲ್ಲಿದ್ದ ಬೈಕ್ ಗಳ ಪೆಟ್ರೋಲ್ ಕದ್ದು ತನ್ನ ಗಾಡಿಗೆ ಹಾಕಿ ಓಡಿಸ್ತಿದ್ದ.

ಪ್ರತಿದಿನ ರಾತ್ರಿ ಒಂದು ರೌಂಡ್ ಹೋಗಿ ಬಂದ್ರೆ ಸಾಕು ಲೀಟರ್ ಗಟ್ಟಲೇ ಪೆಟ್ರೋಲ್ ಪ್ರವೀಣ ಎಗರಿಸಿಬಿಡ್ತಿದ್ದ. ಹೀಗಿರುವಾಗ ಕಳೆದ ಶನಿವಾರ ರಾತ್ರಿ ಈತ ತನ್ನ  ಕೆಲಸದಲ್ಲಿ ತೊಡಗಿರಬೇಕಾದ್ರೆ ಅದೇ ಗ್ರಾಮದ ಮಹಾದೇವ ಕಚಡಿ ಈತನ ಕರಾಮತ್ತು ನೋಡಿದ್ದಾನೆ.‌ ನೋಡಿದ ಬಳಿಕ ಅಲ್ಲೆ ಬುದ್ದಿವಾದ ಹೇಳಿ ತಡಿ ನಿನ್ನ ತಂದೆಗೂ ಹೇಳ್ತಿನಿ ಅಂತ ಪ್ರವೀಣನ ಮನೆಗೆ ಹೋಗಿ ತಂದೆಗೆ ವಿಷಯ ತಿಳಿಸಿದ್ದಾ‌ನೆ. ಅದೇ ನೋಡಿ ಈ ಅಮಾಯಕ ಮಹಾದೇವ ಮಾಡಿದ ತಪ್ಪು.

ಅಂದು ಅವರಪ್ಪನಿಗೆ ವಿಷಯ ತಿಳಿಸಲು  ಪ್ರವೀಣನ ಮನೆಗೆ ಹೋದ ಮಹಾದೇವ ನಾಲ್ಕು ದಿನವಾದ್ರೂ ಎಲ್ಲಿಯೂ ಕಾಣಲಿಲ್ಲ. ಪ್ರೆಂಡ್ಸ್ ಸಂಬಂಧಿಕರು, ಗುರುತಿರುವವರ ಮನೆಗೂ ಸಹ ಮಹಾದೇವ ಹೋಗಿರಲಿಲ್ಲ. ಆದರೆ ನಾಲ್ಕು ದಿನ ಕಳೆದ ಬಳಿಕ ಪ್ರವೀಣನ ಮನೆಯ ಎದುರುಗಡೆ ಇರುವ ತಿಪ್ಪೆಗುಂಡಿಯಲ್ಲಿ ಶವವಾಗಿ ಸಿಕ್ಕಿದ್ದ. ಎನಾಯ್ತು ಅಂತ ಗ್ರಾಮಸ್ಥರಲ್ಲೂ ಸಹ ಕೌತುಕ,ಆತಂಕ,ಭಯ ಕಾಡತೊಡಗಿತ್ತು. ಮಹಾದೇವ ಹಾಗೆ ಶವವಾಗಿ ತಿಪ್ಪೆಗುಂಡಿಯಲ್ಲಿ ಸಿಗಲಿಕ್ಕೆ ಕಾರಣ ಎನೂ ಅಂತ ಎಲ್ಲರಿಗೂ ಪ್ರಶ್ನೆ ಆಗಿಯೇ ಉಳಿದಿತ್ತು. ಆದರೆ ಈತ ಪ್ರವೀಣನಿಗೆ ಸರಿಯಾಗಿ ಬುದ್ದಿ ಹೇಳಿ ಅಂತ ಪ್ರವೀಣನ ಮನೆಗೆ ಹೋದಾಗ ವಯಸ್ಸಾದ ಪ್ರವೀಣನ ತಂದೆಯ ಮುಂದೆಯೇ ಪ್ರವೀಣ ಹಾಗೂ ಮಾಹದೇವ ಮಧ್ಯೆ ವಾಗ್ಯುದ್ದ ಹಾಗೂ ಹೊಡೆದಾಟ ನಡೆದಿದೆ.‌

ಇದನ್ನೂ ಓದಿ: Extra Marital Affair: ಪಾಪಪ್ರಜ್ಞೆ ಕಾಡುತ್ತಿದೆ.. ಅಕ್ರಮ ಸಂಬಂಧ ಸಾಕು ಎಂದ ವಿವಾಹಿತೆಯ ಬರ್ಬರ ಕೊಲೆ!

ಈ ಘಟನೆಯಲ್ಲಿ ಪ್ರವೀಣ ತಂದೆಯೂ ಸಹ ಗಾಯಗೊಂಡು ಈಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೀತಿರೋದಾಗಿ ಸ್ಥಳೀಯರು ಹೇಳ್ತಿದ್ದಾರೆ. ಮನೆಯಲ್ಲೆ ಇದ್ದ ಕಬ್ಬಿಣದ ರಾಡ್ ತೆಗೆದುಕೊಂಡು ಮಹಾದೇವ ಬೆನ್ನಟ್ಟಿದ್ದ ಪ್ರವೀಣ ಮಹಾದೇವ ತಲೆಗೆ  ಜೋರಾಗಿ ಹೊಡೆದದ್ದಿರಿಂದ ಮಹಾದೇವ ಅಲ್ಲೆ ಕುಸಿದು ಬಿದ್ದಿದ್ದಾನೆ. ಕೆಳಗೆ ಬಿದ್ದರೂ ಸಹ ಬಿಡದ ಪ್ರವೀಣ ಮತ್ತೆ ಮತ್ತೆ ತಲೆಯ ಭಾಗಕ್ಕೆ ಎದೆಯ ಭಾಗಕ್ಕೆ ರಾಡ್ ನಿಂದ ಹೊಡೆದು ಮಹಾದೇವನ ಉಸಿರು ನಿಲ್ಲಿಸಿದ್ದಾನೆ.‌ಅಷ್ಟೊತ್ತಿಗಾಗಲೇ ರಾತ್ರಿ ೧೨ ಗಂಟೆಯ ಸಮಯವಾಗಿದೆ.‌ ಯಾರಿಗಾದ್ರೂ ವಿಷಯ ತಿಳಿದ್ರೆ ಕೆಲಸ ಕೆಡುತ್ತೆ ಅಂತ ತಿಳಿದ ಪ್ರವೀಣ ಪಕ್ಕದಲ್ಲೆ ಇದ್ದ ತಿಪ್ಪೆ ಗುಂಡಿಯಲ್ಲಿ ಪ್ರವೀಣ ಮೃತದೇಹ ಮುಚ್ಚಿ ತನ್ನ ಸಂಬಂಧಿಕರ ಊರು ಮೂಡಲಗಿ ತಾಲೂಕಿನ ಜೋಕಾನಟ್ಟಿ ಗ್ರಾಮಕ್ಕೆ ಹೋಗಿ ತಲೆಮರೆಸಿಕೊಂಡಿದ್ದಾನೆ.
ಕೊಲೆ ಮಾಡಿ ಶವವನ್ನ ಹೂತು ಹಾಕಿ ಯಾರಿಗೂ ತಿಳಿಯದಂತೆ ಪ್ರವೀಣ ತನ್ನ ಸಂಬಂಧಿಕರ ಊರಲ್ಲಿ ತಲೆಮರೆಸಿಕೊಂಡಿದ್ದ ಗಾಯಗೊಂಡಿದ್ದ ಪ್ರವೀಣ ತಂದೆ ಹಾಗೂ ಸ್ಥಳೀಯರು ನೀಡಿದ ಮಾಹಿತಿ ಆದರಿಸಿ ಪ್ರವೀಣನನ್ನ ಘಟಪ್ರಭಾ ಠಾಣೆಯ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.‌

ಒಂದುಕಡೆ ಬುದ್ದಿವಾದ ಹೇಳೋಕೆ ಹೋಗಿ ಮಹಾದೇವ ಶವವಾಗಿದ್ದರೆ ಇನ್ನೊಂದು ಕಡೆ ಮರ್ಯಾದೆ ಹೋಗುತ್ತೆ ಅಂತ ಆತನನ್ನ ಕೊಂದು ಪ್ರವೀಣ ಪೊಲೀಸರ ಅತಿಥಿಯಾಗಿದ್ದಾ‌ನೆ.‌ಆದರೆ ಸುಂದರ ಸಂಸಾರದ ಕನಸು ಕಂಡು ಮಹಾದೇವನ ಕೈ ಹಿಡಿದಿದ್ದ ಹೆಂಡತಿ ಈಗ ಏಕಾಂಗಿಯಾಗಿದ್ದಾಳೆ.
Published by:Kavya V
First published: