ಅನ್ಯಕೋಮಿನ ಯುವಕನ ಪ್ರೀತಿ ಕೊಲೆ ಪ್ರಕರಣ: ಶೀಘ್ರದಲ್ಲೇ ಆರೋಪಿಗಳ ಬಂಧನಕ್ಕೆ ಒತ್ತಡ

ಬೆಳಗಾವಿ ಎಸ್ಪಿ ಲಕ್ಷ್ಮಣ ನಿಂಬರಗಿ ಬೈಲಹೊಂಗಲ ಡಿಎಸ್ಪಿ ನೇತೃತ್ವದಲ್ಲಿ ಕೇಸ್ ಪತ್ತೆಗೆ ಪ್ರತ್ಯೇಕ ತಂಡ ರಚನೆ ಮಾಡಿದ್ದಾರೆ.

ಸಾವನ್ನಪ್ಪಿದ ಯುವಕ

ಸಾವನ್ನಪ್ಪಿದ ಯುವಕ

  • Share this:
ಬೆಳಗಾವಿ (ಅಕ್ಟೋಬರ್. 5 ): ಅನ್ಯ ಕೋಮಿನ ಯುವತಿಯನ್ನು ಪ್ರೀತಿಸಿದ ಕಾರಣಕ್ಕಾಗಿ ಯುವಕ ಬರ್ಬರ ಹತ್ಯೆ ಪ್ರಕರಣವನ್ನು ಪೊಲೀಸರು ತನಿಖೆ ಚುರುಕು ಆಗಿದೆ.‌ ಈ ಕೊಲೆ ಬೆಳಗಾವಿ ಜಿಲ್ಲೆಯ ಖಾನಾಪುರ ‌ಪಟ್ಟಣದಲ್ಲಿ ಸೆಪ್ಟೆಂಬರ್28ರಂದು ನಡೆದಿದ್ದ ಕೊಲೆ ಜಿಲ್ಲೆಯ ಜನರನ್ನು ಬೆಚ್ಚಿ ಬೀಳಿಸಿತ್ತು. ಅಲ್ಲದೇ ಈ ಕೊಲೆಯನ್ನು ಆತ್ಮಹತ್ಯೆ ಎಂದು ಬಿಂಬಿಸಲು ಯುವಕನ ಶವನ್ನು ರೈಲ್ವೆ ಹಳಿ ಮೇಲೆ ಬಿಸಾಡಲಾಗಿತ್ತು. ನಂತರ ಯುವಕನಿಗೆ ಕೈಗೆ ಹಗ್ಗ ಕಟ್ಟಿರುವುದು ಪತ್ತೆಯಾಗಿತ್ತು. ಬಳಿಕ ಈ ಭೀಕರ ಕೊಲೆಗೆ ಅನ್ಯ ಕೋಮಿನ ಯುವತಿ ಜತೆಗಿನ ಪ್ರೀತಿಯೆ ಕಾರಣ ಎಂಬುದು ಕುಟುಂಬಸ್ಥರ ಆರೋಪ ಮಾಡಿದ್ದರು. ಈ ಪ್ರಕರಣ ಸದ್ಯ ರೈಲ್ವೆ ಪೊಲೀಸರಿಂದ ಖಾನಾಪುರ ಪೊಲೀಸರಿಗೆ ವರ್ಗವಾಣೆ ಆಗಿದೆ. ಪ್ರಕರಣ ಭೇದಿಸುವಂತೆ‌ ಪೊಲೀಸರ ಮೇಲೆ ಸಂಘಟನೆಗಳಿಂದ ಒತ್ತಡ ಆರಂಭವಾಗಿದೆ. ಶುಕ್ರವಾದ ಒಳಗೆ ಆರೋಪಿಗಳನ್ನು ಬಂಧನ ಮಾಡದೇ ಇದ್ದರೆ ಹೋರಾಟ ನಡೆಸುವುದಾಗಿ ಎಂಐಎಂಐಎಂ ಪಕ್ಷ ಹೇಳಿದೆ.

ರುಂಡ-ಮುಂಡ ಬೇರೆಯಾಗಿದ್ದ ಶವ ಪತ್ತೆ
ಬೆಳಗಾವಿ ಜಿಲ್ಲೆಯ ಖಾನಾಪುರ  ಸೆಪ್ಟೆಂಬರ್28 ರಂದು ಅರ್ಬಾಜ್(28) ಎಂಬ ಯುವಕರ ಭೀಕರ ಕೊಲೆ ನಡೆದಿದೆ. ರೈಲ್ವೆ ಹಳಿಯ ಮೇಲೆ ರುಂಡು, ಮುಂಡ ಬೇರೆಯಾದ ಸ್ಥಿತಿಯಲ್ಲಿ  ಶವ ಪತ್ತೆಯಾಗಿತ್ತು. ಇದು ಭೀಕರ ಕೊಲೆಯಾಗಿದ್ದು, ಮುಚ್ಚಿಹಾಕಲು ಆರೋಪಿಗಳು ಶವವನ್ನು ರೈಲು ಹಳಿ ಮೇಲೆ ಬಿಸಾಡಿದ್ದರು. ಈ ಕೇಸ್ ದಾಖಲಿಸಿಕೊಂಡ ಖಾನಾಪುರ ರೈಲ್ವೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.  ಬೆಳಗಾವಿ ಎಸ್ಪಿ ಲಕ್ಷ್ಮಣ ನಿಂಬರಗಿ ಬೈಲಹೊಂಗಲ ಡಿಎಸ್ಪಿ ನೇತೃತ್ವದಲ್ಲಿ ಕೇಸ್ ಪತ್ತೆಗೆ ಪ್ರತ್ಯೇಕ ತಂಡ ರಚನೆ ಮಾಡಿದ್ದಾರೆ.

ಜಿಲ್ಲೆಯಲ್ಲಿ ತೀವ್ರಗೊಂಡ ಪ್ರತಿಭಟನೆ
ಅರ್ಬಾಜ್  ಭೀಕರ ಹತ್ಯೆ ಖಂಡಿಸಿ ಖಾನಾಪುರದಲ್ಲಿ ಇಂದು ಪ್ರತಿಭಟನೆ ನಡೆಸಲಾಯಿತು.ಅಂಜುಮನ್ ಇಸ್ಲಾಂ ಕಮಿಟಿ ಹಾಗೂ ಅನೇಕ ಮುಖಂಡರು ‌ಪಾಲ್ಗೊಂಡಿದ್ದರು.‌ ಆರೋಪಿಗಳನ್ನು ಶೀಘ್ರದಲ್ಲೇ ಬಂಧಿಸಿ ಕಠಿಣ ಶಿಕ್ಷೆ ವಿಧಿಸಲು ಒತ್ತಾಯ.‌ ತಹಶಿಲ್ದಾರರಗೆ ನಾಸೀರ್ ಭಗಾವನ್, ಇರ್ಫಾನ್ ತಾಳಿಕೋಟೆ ಸೇರಿ ಅನೇಕರು ಪಾಲ್ಗೊಂಡಿದ್ದರು.

ಇದನ್ನು ಓದಿ: ರಾಜ್​ ಕುಂದ್ರಾ ಮನೆಗೆ ಮರಳಿದ ಬಳಿಕ ಮೊದಲ ಬಾರಿ ಮಾಧ್ಯಮದ ಮುಂದೆ ಮನಸಾರೆ ನಕ್ಕ ಶಿಲ್ಪಾ ಶೆಟ್ಟಿ

ಖಾನಾಪುರದಲ್ಲಿ ಮುಸ್ಲಿಂ ಯುವಕನ ಭೀಕರ ಕೊಲೆ ಪ್ರಕರಣ ಬುಧವಾರದ ಒಳಗೆ ಆರೋಪಿಗಳನ್ನು ಬಂಧಿಸಬೇಕು. ಇಲ್ಲವೇ ಎಐಎಂಐ ಪಕ್ಷದಿಂದ ಧರಿಣಿ ನಡೆಸುವ ಎಚ್ಚರಿಕೆ ನೀಡಲಾಗಿದೆ.‌ ಹೈದರಾಬಾದ್ ಸಂಸದ ಅಸಾದುದ್ದೀನ್ ಓವೈಸಿಗೆ ಘಟನೆ ಬಗ್ಗೆ ಮಾಹಿತಿ ನೀಡಲಾಗಿದೆ. ಆರೋಪಿಗಳ ಬಂಧನ ಆದರೇ ಇದ್ರೆ ಬೆಳಗಾವಿಗೆ ಓವೈಸಿ ಬರ್ತಾರೆ ಎಂದು ಎಐಎಂಐಎಂ ಬೆಳಗಾವಿ ಅಧ್ಯಕ್ಷ ಲತೀಫ ಖಾನ್ ಪಠಾಣ್ ಹೇಳಿದ್ದಾರೆ.

ಇದನ್ನು ಓದಿ: ಬಾಗಿಲು ತೆರೆದ ಶಿರಡಿ ಬಾಬಾ ಮಂದಿರ; ನವರಾತ್ರಿಯಿಂದ ಸಾರ್ವಜನಿಕರಿಗೆ ಸಿಗಲಿದೆ ಸಾಯಿ ದರ್ಶನ

ಪ್ರಕರಣ ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಆರೋಪಿಗಳ ಪತ್ತೆಗೆ ಹರಸಾಹಸ ಪಡುತ್ತಿದ್ದಾರೆ. ಈಗಾಗಲೇ ಎರಡು ವಾಹನ ವಶಕ್ಕೆ ಪಡೆಯಲಾಗಿದೆ.‌ ಅಷ್ಟೇ ಅಲ್ಲದೆ ಅನೇಕವನ್ನು ಪೊಲೀಸರು ಕರೆದು ವಿಚಾರಣೆ ಮಾಡುತ್ತಿದ್ದಾರೆ. ಆರೋಪಿಗಳ ಬಂಧನವಾಗಿ ಕಠಿಣ ಶಿಕ್ಷೆ ಆಗಬೇಕು ಎನ್ನುವುದು ಕುಟುಂಬಸ್ಥರ ಆಗ್ರಹವಾಗಿದೆ.

ಅನ್ಯ ಕೋಮಿನ ಯುವತಿ ಪ್ರೇಮವೇ ಮುಳುವಾಯಿತಾ?

ಅರ್ಬಾಜ್​ ಮುಲ್ಲಾ ಕಾರ್​ ಬ್ರೋಕರ್​ ಆಗಿ ಕೆಲಸ ಮಾಡುತ್ತಿದ್ದ. ಈತ ತನ್ನ ಕಾಲೋನಿಯಲ್ಲಿಯೇ ವಾಸವಾಗಿದ್ದ ಯುವತಿ ಜೊತೆ ಪ್ರೇಮ ಹೊಂದಿದ್ದ. ಈ ವಿಚಾರ ತಿಳಿದಿದ್ದ ತಾಯಿ ಕೂಡ ಆಗ್ಗಿಂದಾಗೆ ಮಗನ ಜೊತೆ ಜಗಳವಾಡುತ್ತಿದ್ದಳು. ಈ ವಿಚಾರವಾಗಿ ಅರ್ಬಾಜ್​ ತಾಯಿ ಕೂಡ ತಮ್ಮ ಮನೆಗೆ ಯುವತಿಯನ್ನು ಕಳುಹಿಸದಂತೆ ಯುವತಿ ಪೋಷಕರಿಗೆ ಎಚ್ಚರಿಕೆ ನೀಡಿದ್ದರು. ಈ ವಿಚಾರ ಕೆಲವು ಸಂಘಟನೆಗಳಿಗೆ ತಿಳಿದಿದ್ದು, ಈ ಸಂಬಂದ ಅರ್ಬಾಜ್​ಗೆ ಎಚ್ಚರಿಕೆ ಕೂಡ ನೀಡಲಾಗಿತ್ತು ಎಂಬ ಆರೋಪ ಕೇಳಿ ಬಂದಿದೆ
Published by:Seema R
First published: