Savadatti Yallamma: 16 ತಿಂಗಳ ಬಳಿಕ ತೆರೆದ ಸವದತ್ತಿ ಯಲ್ಲಮ್ಮ ದೇವಸ್ಥಾನದ ಬಾಗಿಲು; ಮೊದಲೇ ದಿನವೇ ಸಾವಿರಾರು ಭಕ್ತರಿಂದ ದರ್ಶನ!

ಮಹಾರಾಷ್ಟ್ರದಲ್ಲಿ ಕೊರೊನಾ ಕಡಿಮೆಯಾಗಿದ್ದು ಭಕ್ತರ ಒತ್ತಾಸೆಯ ಮೇರೆಗೆ ದೇವಿಯ ದರ್ಶನಕ್ಕೆ ನೀಡಲಾಗಿದೆ. ಮೊದಲ ದಿನವೇ ಸಾವಿರಾರು ಭಕ್ತರು ದರ್ಶನ ಪಡೆದರು.

ಸವದತ್ತಿ ಯಲ್ಲಮ್ಮ ದೇವಸ್ಥಾನ

ಸವದತ್ತಿ ಯಲ್ಲಮ್ಮ ದೇವಸ್ಥಾನ

  • Share this:
ಬೆಳಗಾವಿ(ಸೆಪ್ಟೆಂಬರ್, 28)- ಉತ್ತರ ಕರ್ನಾಟಕದ ಶಕ್ತಿ ಪೀಠ, ಯಲ್ಲಮ್ಮ ದೇವಿಯ (Savadatti Yallamma) ದರ್ಶನಕ್ಕೆ ಕೊನೆಗೂ ಬೆಳಗಾವಿ ಜಿಲ್ಲಾಡಳಿತ (Belgaum district Administration) ಅನುಮತಿ ನೀಡಿದೆ. ಉತ್ತರ ಕರ್ನಾಟಕ ಹಾಗೂ ಮಹಾರಾಷ್ಟ್ರದಲ್ಲಿ ಕೊರೊನಾ ಕಡಿಮೆಯಾಗಿದ್ದು ಭಕ್ತರ ಒತ್ತಾಸೆಯ ಮೇರೆಗೆ ದೇವಿಯ ದರ್ಶನಕ್ಕೆ ನೀಡಲಾಗಿದೆ. ಮೊದಲ ದಿನವೇ ಸಾವಿರಾರು ಭಕ್ತರು ದರ್ಶನ ಪಡೆದರು. ದೇವಸ್ಥಾನಕ್ಕೆ ವಿಶೇಷ ಅಲಂಕಾರ ಮಾಡಲಾಗಿತ್ತು, ಕೋವಿಡ್ ನಿಯಮಗಳ ಪಾಲಿನೆಗೆ ಆಡಳಿತ ಮಂಡಳಿ ಜಾಗೃತಿ ಮೂಡಿಸಿದೆ.

ವರ್ಷದ ಎಲ್ಲಾ ದಿನಗಳು ಭಕ್ತರಿಂದ ಕಿಕ್ಕಿರಿದು ತುಂಬಿರುತ್ತಿದ್ದ ಉತ್ತರ ಕರ್ನಾಟಕದ ಪವಿತ್ರ ಪುಣ್ಯಕ್ಷೇತ್ರ ಸವದತ್ತಿ ಯಲ್ಲಮ್ಮ ದೇವಿ ದರ್ಶನಕ್ಕೆ 16 ತಿಂಗಳ ಬಳಿಕ ಅವಕಾಶ ನೀಡಲಾಗಿದೆ. ಈ ಕುರಿತು ಬೆಳಗಾವಿ ಡಿಸಿ ಆದೇಶ ಹೊರಡಿಸುತ್ತಿದ್ದಂತೆ ದೇವಿಯ ದರ್ಶನಕ್ಕೆ ಭಕ್ತರ ದಂಡೇ ಹರಿದು ಬಂದಿದೆ. ಇಂದು ಮುಂಜಾನೆ ಸವದತ್ತಿ ಯಲ್ಲಮ್ಮದೇವಿ ದೇವಸ್ಥಾನಕ್ಕೆ ಭೇಟಿ ನೀಡಿದ ಬೆಳಗಾವಿ ಡಿಸಿ ಎಂ.ಜಿ.ಹಿರೇಮಠ ಹಾಗೂ ಶಾಸಕ ಆನಂದ ಮಾಮನಿ ದೇವಿಗೆ ಪೂಜೆ ಸಲ್ಲಿಸುವ ಮೂಲಕ ಭಕ್ತರ ದರ್ಶನಕ್ಕೆ ಅಧಿಕೃತವಾಗಿ ಚಾಲನೆ ನೀಡಿದ್ರು. ಕೋವಿಡ್ ಮಾರ್ಗಸೂಚಿ ಅನ್ವಯ ಭಕ್ತರಿಗೆ ಸಾಮಾಜಿಕ ಅಂತರ, ಸ್ಯಾನಿಟೈಜರ್ ವ್ಯವಸ್ಥೆ ಮಾಡಲಾಗಿದ್ದು, ಕೇವಲ ದರ್ಶನಕ್ಕೆ ಮಾತ್ರ ಅವಕಾಶ ನೀಡಲಾಗಿದೆ ಎಂದು ದೇವಸ್ಥಾನದ ಸಿಇಒ ರವಿ ಕೋಟಾರ್ ಗಸ್ತಿ ಹೇಳಿದರು.

ಇದನ್ನು ಓದಿ: ಕರಿದ ಎಣ್ಣೆಯನ್ನು ಮತ್ತೆ ಅಡುಗೆಗೆ ಬಳಕೆ ಮಾಡುತ್ತೀರಾ? ಅದಕ್ಕೂ ಮುನ್ನ ಈ ವಿಷಯ ಅರಿಯಿರಿ

ಸವದತ್ತಿ ಯಲ್ಲಮ್ಮದೇವಿ ಮಹಾರಾಷ್ಟ್ರದಿಂದ ಲಕ್ಷಾಂತರ ಭಕ್ತರು ಬರ್ತಾರೆ. ಮಹಾರಾಷ್ಟ್ರದಲ್ಲಿ ಕೋವಿಡ್ ಹೆಚ್ಚಳ ಹಿನ್ನೆಲೆ ದೇವಿಯ ದರ್ಶನಕ್ಕೆ ನಿರ್ಬಂಧ ವಿಧಿಸಲಾಗಿತ್ತು. ಸದ್ಯ ಕರ್ನಾಟಕ, ಮಹಾರಾಷ್ಟ್ರದಲ್ಲಿ ಕೋವಿಡ್ ನಿಯಂತ್ರಣ ಹಿನ್ನೆಲೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.ಇಂದಿನಿಂದ ಭಕ್ತರ ಆಗಮನ ಹಿನ್ನೆಲೆಯಲ್ಲಿ ತಳೀರು ತೋರಣಗಳಿಂದ ದೇವಸ್ಥಾನವನ್ನು ಶೃಂಗಾರ ಮಾಡಲಾಗಿದೆ. ಜಿಲ್ಲಾಡಳಿತ ದರ್ಶನಕ್ಕೆ ಅನುಮತಿ ನೀಡುತ್ತಿದ್ದಂತೆ ಸಾವಿರಾರು ಭಕ್ತರು ದೇವಿಯ ದರ್ಶನಕ್ಕೆ ಆಗಮಿಸಿದರು. ಧಾರ್ಮಿಕ ಆಚರಣೆಗಳು, ಉತ್ಸವ, ಜಾತ್ರೆ, ಜನ ಸೇರುವ ಎಲ್ಲ ಕಾರ್ಯಕ್ರಮಗಳಿಗೂ ನಿರ್ಬಂಧ ವಿಧಿಸಲಾಗಿದ್ದು ಕೇವಲ ದರ್ಶನಕ್ಕೆ ಮಾತ್ರ ಅವಕಾಶ ನೀಡಲಾಗಿದೆ.

ಇದನ್ನು ಓದಿ: ರೈತರೊಂದಿಗೊಂದು ದಿನ: ಎತ್ತಿನ ಬಂಡಿ ಏರಿಬಂದು ಕಬ್ಬು ನಾಟಿ ಮಾಡಿದ ಕೃಷಿ ಸಚಿವ ಬಿ.ಸಿ.ಪಾಟೀಲ್​​

ಕಳೆದ 16 ತಿಂಗಳಿಂದ ದೇವಸ್ಥಾನ ಬಂದ್ ಹಿನ್ನೆಲೆಯಲ್ಲಿ ಭಕ್ತರು ಪರದಾಟ ನಡೆಸಿದರು. ರಾಜ್ಯದ ಎಲ್ಲಾ ದೇವಸ್ಥಾನ ಓಪನ್ ಆದ್ರು ಯಲ್ಲಮ್ಮ ದೇವಾಲಯಕ್ಕೆ ಭಕ್ತರ ಪ್ರವೇಶಕ್ಕೆ ಅನುಮತಿ ನೀಡಿರಲಿಲ್ಲ. ಸದ್ಯ ಭಕ್ತ ಒತ್ತಾಯದ ಮೇರೆಗೆ ಜಿಲ್ಲಾಡಳಿತ ದೇವಾಲಯ ತೆಗೆಯಲು ಅನುಮತಿ ನೀಡಿದೆ. ಭಕ್ತರು ಕೋವಿಡ್ ನಿಯಮ ಪಾಲನೆ ಮಾಡಬೇಕು ಎಂದು ಜಾಗೃತಿ ‌ಮೂಡಿಸಲಾಗಿದೆ. ದೇವಸ್ಥಾನಕ್ಕೆ ಗ್ರಾಮೀಣ ಭಾಗದ ಭಕ್ತರೇ ಹೆಚ್ಚು ಆಗಮಿಸುತ್ತಾರೆ.

ದೇವಾಲಯ ಬಂದ್ ಹಿನ್ನೆಲೆಯಲ್ಲಿ ಆದಾಯದಲ್ಲಿ ಕೋಟ್ಯಾಂತರ ರೂಪಾಯಿ ನಷ್ಟ ಸಂಭವಿಸಿದೆ. ಅಷ್ಟೇ ಅಲ್ಲದೇ ದೇವಾಲಯ ಬಳಿ ಇದ್ದ ಪುಟ್ಟ ಪುಟ್ಟ ಅಂಗಡಿಗಳ ವ್ಯಾಪಾರಿಗಳಿಗೆ ನಷ್ಟ ಆಗಿದೆ. ಸದ್ಯ ದೇವಸ್ಥಾನ ಓಪನ್ ಆಗಿದ್ದು, ಹೆಚ್ಚಿನ ಜಾಗೃತಿ ವಹಿಸಬೇಕಾದ ಅನಿವಾರ್ಯತೆ ಇದೆ.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು
Published by:Seema R
First published: