Belagavi |ಬೆಳಗಾವಿ ಪಾಲಿಕೆ ಫೈಟ್; ಬಿಜೆಪಿಯನ್ನು ಟಾರ್ಗೆಟ್ ಮಾಡಿದ ಎಂಇಎಸ್, ಭಾಷಾ ಜಗಳಕ್ಕೆ ಬಿಜೆಪಿ ಕಾರಣವೇ?

ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರೋ ಎಂಇಎಸ್ ಕಾರ್ಯಕರ್ತರು, ಪಾಲಿಕೆ ಮೇಲಿನ ಭಗವಾ ಧ್ವಜ ಇಳಿಸಿದ ಬಿಜೆಪಿ ಈಗ ಕೆಂಪು, ಹಳದಿ ಬಣ್ಣದ ಧ್ವಜ ಹಾರಿಸಿದೆ ಎಂದು ಕಿಡಿ ಕಾರಿದೆ. ಬಿಜೆಪಿ ಟೀಕಿಸುವ ಭರದಲ್ಲಿ ಎಂಇಎಸ್ ನಾಯಕರು ಕನ್ನಡ ಧ್ವಜಕ್ಕೂ ಸಹ ಅಪಮಾನ ಮಾಡಿದ್ದಾರೆ.

ಬೆಳಗಾವಿ ಮಹಾನಗರ ಪಾಲಿಕೆ

ಬೆಳಗಾವಿ ಮಹಾನಗರ ಪಾಲಿಕೆ

  • Share this:
ಬೆಳಗಾವಿ (ಆಗಸ್ಟ್​ 25); ಸೆಪ್ಟೆಂಬರ್ 3ರಂದು ಬೆಳಗಾವಿ ಮಹಾನಗರ ಪಾಲಿಕೆ (Belagavi Coroporation Election) ಚುನಾವಣೆ ನಡೆಯಲಿದ್ದು, ಇದಕ್ಕಾಗಿ ಜಿದ್ದಿಜಿದ್ದಿನ ಹೋರಾಟ ಆರಂಭವಾಗಿದೆ. ಪಾಲಿಕೆಯಲ್ಲಿಈ ಸಲ ಪಕ್ಷಗಳ ಆಧಾರದ ಮೇಲೆ ಅಭ್ಯರ್ಥಿಗಳು ಕಣಕ್ಕೆ ಇಳಿದಿದ್ದಾರೆ. ಭಾಷೆ ಆಧಾರದ ಮೇಲೆ ಚುನಾವಣೆ ನಡೆದ ಸಂದರ್ಭದಲ್ಲಿ ಈ ಹಿಂದೆ ಎಂಇಎಸ್ (MES) ಪ್ರಾಬಲ್ಯ ಸಾಧಿಸಿತ್ತು. ಇನ್ನೂ ಈ ಸಲ ಚುನಾವಣೆಯಲ್ಲಿ ಬಿಜೆಪಿಯನ್ನು (BJP) ಎಂಇಎಸ್ ಟಾರ್ಗೆಟ್ ಮಾಡಿದೆ. ಕನ್ನಡಿಗರು ಹಾಗೂ ಮರಾಠಿಗರ ನಡುವೆ ಬಿಜೆಪಿ ಜಗಳ ಹಚ್ಚುವ ಕೆಲಸ ಮಾಡಿದ ಎಂದು ಸಾಮಾಜಿಕ ಜಾಲತಾಣದಲ್ಲಿ (Social Media) ವಾಗ್ದಾಳಿಯನ್ನು ನಡೆಸಿದೆ. ಇದಕ್ಕೆ ತಿರುಗೇಟು ಕೊಟ್ಟ ಶಾಸಕ ಅಭಯ ಪಾಟೀಲ್ ಎಂಇಎಸ್ ಕೆಲ ನಾಯಕರು ಕಾಂಗ್ರೆಸ್ ಬಿಟಿಮ್ ನಂತೆ ಕೆಲಸ ಮಾಡುತ್ತಿದ್ದಾರೆ ಎಂದು ವಾಗ್ದಾಳಿಯನ್ನು ನಡೆಸಿದ್ದಾರೆ.

ಬೆಳಗಾವಿ ಲೋಕಸಭೆ ಉಪಚುನಾವಣೆ ಹಾಗೂ ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯನ್ನು ಗಮನದಲ್ಲಿ ಇಟ್ಟುಕೊಂಡ ರಾಜ್ಯ ಸರ್ಕಾರ ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಿತ್ತು. ಇದು ರಾಜ್ಯದಲ್ಲಿ ಚರ್ಚೆಗೆ ಗ್ರಾಸವಾಗಿ ಆರೋಪ, ಪ್ರತ್ಯಾರೋಪ ಗಳು ಸಹ ನಡೆದಿದ್ದವು. ಆದರೇ ಪ್ರಾಧಿಕಾರದಿಂದ ಚುನಾವಣೆಯಲ್ಲಿ ಬಿಜೆಪಿಗೆ ದೊಡ್ಡ ಮಟ್ಟದ ಲಾಭ ಏನು ಸಿಗಲಿಲ್ಲ. ಬೆಳಗಾವಿ ವಿಚಾರದಲ್ಲಿ ಮರಾಠ ಸಮುದಾಯ ಬೇರೆಯ ಲೆಕ್ಕಚಾರ ಹಾಕಿತ್ತು. ಇದೀಗ ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆ ಎದುರಾಗಿದೆ. ಇಲ್ಲಿ ಬಿಜೆಪಿ ನಾಯಕರನ್ನು ಟಾರ್ಗೆಟ್ ಮಾಡುವ ಮೂಲಕ ನೇರವಾಗಿ ಎಂಇಎಸ್ ನಾಯಕರು ಪಾಲಿಕೆ ಗದ್ದುಗೆಯ ಮೇಲೆ ಕಣ್ಣಿಟ್ಟಿರೋದು ಬಹಿರಂಗವಾಗಿದೆ.

ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರೋ ಎಂಇಎಸ್ ಕಾರ್ಯಕರ್ತರು, ಪಾಲಿಕೆ ಮೇಲಿನ ಭಗವಾ ಧ್ವಜ ಇಳಿಸಿದ ಬಿಜೆಪಿ ಈಗ ಕೆಂಪು, ಹಳದಿ ಬಣ್ಣದ ಧ್ವಜ ಹಾರಿಸಿದೆ ಎಂದು ಕಿಡಿ ಕಾರಿದೆ. ಬಿಜೆಪಿ ಟೀಕಿಸುವ ಭರದಲ್ಲಿ ಎಂಇಎಸ್ ನಾಯಕರು ಕನ್ನಡ ಧ್ವಜಕ್ಕೂ ಸಹ ಅಪಮಾನ ಮಾಡಿದ್ದಾರೆ. ಇದು ಕಳೆದ ಎರಡು ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ.

ಇದನ್ನೂ ಓದಿ: Anand Singh| ಅಸಮಾಧಾನ ಕೈಬಿಟ್ಟ ಆನಂದ್​ ಸಿಂಗ್; ಇಂದು ಪರಿಸರ ಇಲಾಖೆ ಅಧಿಕಾರಿಗಳ ಜೊತೆ ಸಭೆ!

ಈ ಬಗ್ಗೆ ಪ್ರತಿಕ್ರಿಯೆ ಕೊಟ್ಟ ಬೆಳಗಾವಿ ದಕ್ಷಿಣ ಮತಕ್ಷೇತ್ರದ ಬಿಜೆಪಿ ಶಾಸಕ ಅಭಯ ಪಾಟೀಲ್, ಮರಾಠಿಗರಿಗೆ ಅನುಕೂಲ ಆಗಲಿ ಎಂದು ಬಿಜೆಪಿ ಸರ್ಕಾರ ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಿದೆ. ಪ್ರಾಧಿಕಾರಕ್ಕೆ 50 ಕೋಟಿ ಹಣ ನೀಡಿದ್ದು, ಇದರಿಂದ ಸಮಾಜದ ಸಾಕಷ್ಟು ಜನರಿಗೆ ಅನಕೂಲ ಆಗಿದೆ. ಆದರೇ ಕೆಲ ಎಂಇಎಸ್ ನಾಯಕರು ಕಾಂಗ್ರೆಸ್ ಬಿ ಟೀಂ ನಂತೆ ವರ್ತನೆ ಮಾಡುತ್ತಿದ್ದಾರೆ. ಈ ರೀತಿ ಮೊದಲು ಇರಲಿಲ್ಲ ಈಗ ಆರಂಭವಾಗಿದೆ ಎಂದು ಟೀಕೆ ಮಾಡಿದ್ದಾರೆ.

ಇದನ್ನೂ ಓದಿ: CoronaVirus| ಲಾಮಾ ಪ್ರತಿಕಾಯಗಳು ಕೋವಿಡ್-19 ವಿರುದ್ಧ ಹೋರಾಡಲಿವೆ; ಅಧ್ಯಯನಗಳಿಂದ ಸಾಬೀತು

ಎಂಇಎಸ್ ನಾಯಕರ ಪೋಸ್ಟ್ ಬಗ್ಗೆ ಕರವೇ ಜಿಲ್ಲಾಧ್ಯಕ್ಷ ದೀಪಕ್ ಗುಡಗನಟ್ಟಿ ಸಹ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಎಂಇಎಸ್ ತನ್ನ ಅಭ್ಯರ್ಥಿಗಳನ್ನು ಘೋಷಣೆ ಮಾಡಲಿ ಎಂದು ಸವಾಲ್ ಹಾಕಿದ್ದಾರೆ. ಅಧಿಕೃತ ಅಭ್ಯರ್ಥಿ ಯನ್ನು ಕಣಕ್ಕೆ ಇಳಿಸಿದ್ರೆ ಎಂಇಎಸ್ ಬಂಡವಾಳ ಬಯಲಾಗಿದೆ ಎಂದು ದೀಪಕ್ ಹೇಳಿದ್ದಾರೆ.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್​​ಡೌನ್​ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
Published by:MAshok Kumar
First published: