Belagavi: ಸವದತ್ತಿ ಯಲ್ಲಮ್ಮನ ದೇವಸ್ಥಾನ ಭಕ್ತರ ಪ್ರವೇಶಕ್ಕೆ ಮುಕ್ತ; ಹರಿದು ಬಂದ ಜನಸಾಗರ

ಸವದತ್ತಿ ಯಲ್ಲಮ್ಮನ ದೇವಸ್ಥಾನಕ್ಕೆ ಪ್ರತಿ ನಿತ್ಯ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡಿ ದೇವರ ದರ್ಶನ ಪಡೆಯುತ್ತಾರೆ. ಹೀಗಾಗಿ   ಕೋವಿಡ್ ನಿಯಮ ಉಲ್ಲಂಘನೆ ಆಗದಂತೆ ಕೊರೋನಾ ಜಾಗೃತಿ ಮೂಡಿಸಲಾಗುತ್ತಿದೆ.

ಸವದತ್ತಿ ಯಲ್ಲಮ್ಮ

ಸವದತ್ತಿ ಯಲ್ಲಮ್ಮ

  • Share this:
ಬೆಳಗಾವಿ(ಫೆ.1): ಬೆಳಗಾವಿ(Belagavi) ಜಿಲ್ಲೆಯಲ್ಲಿ ಕೊರೋನಾ ಅಬ್ಬರ ಕೊಂಚ ಕಮ್ಮಿಯಾದ  ಬಳಿಕ  ದೇವಸ್ಥಾನದಲ್ಲಿ ದರ್ಶನಕ್ಕೆ ನಿರ್ಬಂಧ ಹೇರಿದ್ದ ಆದೇಶ ತೆರವು ಮಾಡಲಾಗಿದೆ.  ಸವದತ್ತಿ ಯಲ್ಲಮ್ಮನ(Savadatti Yallamma) ದೇವಸ್ಥಾನ ಸೇರಿದಂತೆ ಜಿಲ್ಲೆಯ ಪ್ರಮುಖ ದೇವಾಲಯ  ಓಪನ್ ಆಗಿದ್ದು ಭಕ್ತರು ದೇವರ ದರ್ಶನ  ಪಡೆಯುತ್ತಿದ್ದಾರೆ. ಗಡಿ ಜಿಲ್ಲೆ ಬೆಳಗಾವಿಯಲ್ಲಿ ಕೊರೋನಾ(Coronavirus) ಕೊಂಚ ಇಳಿಮುಖ ಆಗಿದೆ. ಹೀಗಾಗಿ ದೇವಾಲಯದಲ್ಲಿ ಭಕ್ತರ ದರ್ಶನಕ್ಕೆ ಅವಕಾಶ ನೀಡಲಾಗಿದೆ.‌ ಬೆಳಗಾವಿಯ ಜಿಲ್ಲೆಯ ಸವದತ್ತಿ ತಾಲೂಕಿನ ಸವದತ್ತಿ ಯಲ್ಲಮ್ಮನ ದೇವಸ್ಥಾನ (Temple) ಬಾಗಿಲು ಓಪನ್ ಆಗಿದ್ದು,  ಸಾರ್ವಜನಿಕ ದರ್ಶನಕ್ಕೆ ವಿಧಿಸಿದ್ದ ನಿರ್ಬಂಧ ಆದೇಶವನ್ನು ಜಿಲ್ಲಾಧಿಕಾರಿ ಎಂ ಜಿ ಹಿರೇಮಠ  ತೆರವು ಮಾಡಿದ್ದಾರೆ.

ಮಹಾರಾಷ್ಟ್ರದಲ್ಲಿ  ಕೊರೋನಾ  ಪ್ರಕರಣ ಹೆಚ್ಚಾಗಿದ್ದರಿಂದ,  ಮಹಾರಾಷ್ಟ್ರ ಭಕ್ತರು ಯಲ್ಲಮ್ಮನ ದರ್ಶನಕ್ಕೆ ಬರುವ ಹಿನ್ನೆಲೆಯಲ್ಲಿ ಭಕ್ತರ ಹಿತದೃಷ್ಟಿಯಿಂದ  ಇದುವರೆಗೆ  ದೇವಸ್ಥಾನ ಬಂದ್ ಆಗಿತ್ತು. ಈಗ ದೇವಸ್ಥಾನ ಓಪನ್ ಆಗಿದ್ದರಿಂದ  ಭಕ್ತರು  ದೇವಸ್ಥಾನಕ್ಕೆ ಆಗಮಿಸಿ ದೇವರ ದರ್ಶನ ಪಡೆಯುತ್ತಿದ್ದಾರೆ. ಹೀಗಾಗಿ ಭಕ್ತರು  ಪುಲ್ ಖುಷಿ ಆಗಿದ್ದಾರೆ..

ಬೆಳಗಾವಿ ಜಿಲ್ಲೆಯಲ್ಲಿ ಸವದತ್ತಿ ಯಲ್ಲಮ್ಮ, ಚಿಂಚಲಿ ಮಾಯಕ್ಕ, ಗೊಡಚಿ ವೀರಭದ್ರ  ಸೇರಿದಂತೆ  9 ದೇವಸ್ಥಾನಗಳು ಇದುವರೆಗೆ ಬಂದ್​ ಆಗಿದ್ದವು. ಈಗ ಬಾಗಿಲು ಓಪನ್ ಆಗಿದೆ.  ಇನ್ನು ಕೊರೋನಾ ಕೊಂಚ ಇಳಿಮುಖ ಆಗಿದ್ದರಿಂದ  ಕೋವಿಡ್ ನಿಯಮ  ಪಾಲಿಸಿಕೊಂಡು  ಬಾಗಿಲು ಓಪನ್ ಮಾಡಲಾಗಿದೆ. ಸವದತ್ತಿ ಯಲ್ಲಮ್ಮನ ದೇವಸ್ಥಾನಕ್ಕೆ ಪ್ರತಿ ನಿತ್ಯ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡಿ ದೇವರ ದರ್ಶನ ಪಡೆಯುತ್ತಾರೆ. ಹೀಗಾಗಿ   ಕೋವಿಡ್ ನಿಯಮ ಉಲ್ಲಂಘನೆ ಆಗದಂತೆ ಕೊರೋನಾ ಜಾಗೃತಿ ಮೂಡಿಸಲಾಗುತ್ತಿದೆ.  ಇನ್ನು ಜನರು ಕೂಡ ಕೊರೋನಾ ನಿಯಮ ಪಾಲನೆ ಮಾಡಬೇಕು,  ಇದಕ್ಕೆ ಸಹಕಾರ ನೀಡಬೇಕು ಅಂತಾ ದೇವಸ್ಥಾನ ಸಿಇಒ  ಭಕ್ತರಲ್ಲಿ ಮನವಿ ಮಾಡಿದ್ದಾರೆ.

ಇದನ್ನೂ ಓದಿ: Morning Digest: ಇಂದು ಕೇಂದ್ರ ಬಜೆಟ್ ಮಂಡನೆ, ಇಳಿಕೆಯಾದ ಚಿನ್ನದ ಬೆಲೆ, ಬೆಳಗಿನ ಟಾಪ್​ ನ್ಯೂಸ್​ಗಳು

ಏಳುಕೊಳ್ಳದ ಯಲ್ಲಮ್ಮನ ಸಾನ್ನಿಧ್ಯಕ್ಕೆ ದೇಶದ ನಾನಾ ಕಡೆಗಳಿಂದ ಭಕ್ತರ ದಂಡೇ ಹರಿದು ಬಂದಿತ್ತು. ಭಕ್ತಾಧಿಗಳು ತಮ್ಮ ಇಷ್ಟಾರ್ಥ ಈಡೇರಿಸಿದ ದೇವಿಗೆ ಕಾಣಿಕೆ ರೂಪದಲ್ಲಿ ಚಿನ್ನ, ಬೆಳ್ಳಿ ಆಭರಣ ನೀಡುತ್ತಾರೆ. ಅಲ್ಲದೆ, ದೇವಸ್ಥಾನ ಹುಂಡಿಯಲ್ಲಿ ಹಣ ಹಾಕಿ ಭಕ್ತಿ ಸಮರ್ಪಿಸುತ್ತಾರೆ. 2020ರ ಅ.26ರಿಂದ ಡಿ.10ರ ಅವಧಿಯಲ್ಲಿ ಹುಂಡಿಯಲ್ಲಿ 1.18 ಕೋಟಿ ರೂ. ಸಂಗ್ರಹವಾಗಿದೆ. ಅಲ್ಲದೆ, 17.39 ಲಕ್ಷ ರೂ. ಮೌಲ್ಯದ ಚಿನ್ನ ಮತ್ತು 2.20 ಲಕ್ಷ ರೂ. ಮೌಲ್ಯದ ಬೆಳ್ಳಿ ಸಂಗ್ರಹವಾಗಿತ್ತು.

ಇದನ್ನೂ ಓದಿ: Union Budget 2022: ಜನರ ಹೊಟ್ಟೆ ಮೇಲೆ ತಣ್ಣೀರು ಹಾಕಿದೆ ಈ ಬಜೆಟ್ - HDK ಕಿಡಿ

ಬಳಿಕ ಓಮೈಕ್ರಾನ್ ಪ್ರಕರಣ, ಕೊರೊನಾ ಮೂರನೇ ಅಲೆಯ ಭೀತಿ ಹಿನ್ನೆಲೆಯಲ್ಲಿ ದೇವಸ್ಥಾನಕ್ಕೆ ಭಕ್ತರ ಪ್ರವೇಶ ನಿಷೇಧಿಸಲಾಗಿತ್ತು. ಈಗ ಮತ್ತೆ ದೇವಾಲಯಗಳು  ಓಪನ್ ಆಗಿದ್ದು ಭಕ್ತರಲ್ಲಿ ಖುಷಿ ವಿಚಾರ ಆಗಿದೆ.  ಆದರೆ  ಕೊರೋನಾ ನಿಯಮ ಉಲ್ಲಂಘನೆ ಆಗದಂತೆ  ನೋಡಿಕೊಳ್ಳುವುದು  ಜನ ಸಾಮಾನ್ಯರ ಜವಾಬ್ದಾರಿ ಆಗಿದೆ.
Published by:Latha CG
First published: