Belagavi Politics: ಸಚಿವ ಕತ್ತಿ ಟೀಂಗೆ ಇಂದು ಕೈಕೊಟ್ಟ ಬೆಳಗಾವಿ ಜಿಲ್ಲೆಯ ಹಲವು ಶಾಸಕರು; ಜಾರಕಿಹೊಳಿ ಸಹೋದರರ ವಿರುದ್ಧ ಸಿಎಂಗೆ ದೂರು

ಮಾಜಿ ಡಿಸಿಎಂ ಲಕ್ಷ್ಮಣ ಸವದಿ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಶಾಸಕರಾದ ಮಹಾದೇವಪ್ಪ ಯಾದವಾಡ, ಪಿ ರಾಜೀವ, ಅಭಯ ಪಾಟೀಲ್  ಮಾತ್ರ ಇದ್ದರು. ಇನ್ನೂ ಅನೇಕ ಶಾಸಕರು ಭಾಗಿಯಾಗಿಲ್ಲ

ಸಚಿವ ಉಮೇಶ್ ಕತ್ತಿ

ಸಚಿವ ಉಮೇಶ್ ಕತ್ತಿ

  • Share this:
ಬೆಳಗಾವಿ (ಜನವರಿ. 28):  ಬೆಳಗಾವಿ ಜಿಲ್ಲೆಯಲ್ಲಿ ಉಂಟಾಗಿರುವ ಭಿನ್ನಾಪ್ರಾಯ ಇಂದು ಸಿಎಂ ಬಸವರಾಜ ಬೊಮ್ಮಾಯಿ (CM Basavaraja Bommai) ಅಂಗಳಕ್ಕೆ ತಲುಪಿವೆ. ಜಿಲ್ಲೆಯಲ್ಲಿ ಅತಿ ಹೆಚ್ಚು ಶಾಸಕರು ಹೊಂದಿರೋ ಬಿಜೆಪಿಯಲ್ಲಿ ಎರಡು ಬಣಗಳು ಆಗಿರೋದು ಪಕ್ಷದ ನಾಯಕರ ತಲೆ ನೋವಿಗೆ ಕಾರಣವಾಗಿದೆ. ಇತ್ತೀಚಿಗೆ ಬೆಳಗಾವಿಯಲ್ಲಿ ಜಾರಕಿಹೊಳಿ ಸಹೋದರರ ವಿರುದ್ಧ ಸಭೆ ಮಾಡುವಲ್ಲಿ ಯಶಸ್ವಿಯಾಗಿದ್ದ ನಾಯಕರು ಇಂದು ಇದೇ ಹುರುಪಿನಲ್ಲಿ ಸಿಎಂ ಭೇಟಿ ಮಾಡಿದ್ದರು. ಜಾರಕಿಹೊಳಿ  ಸಹೋದರರ (Jarkiholi Brothers) ವಿರುದ್ಧ ದೂರನ್ನು ಸಹ ನೀಡಿದ್ದಾರೆ ಎನ್ನಲಾಗಿದೆ. ಆದರೇ ಸಚಿವ ಉಮೇಶ ಕತ್ತಿ ನೇತೃತ್ವದ ನಡೆದ ಸಭೆಯಲ್ಲಿ ಪಾಲ್ಗೊಂಡಿದ್ದ ಅನೇಕ ಶಾಸಕರು ಇಂದು ಗೈರಾಗಿದ್ದು, ಸಚಿವ ಕತ್ತಿ, ಸವದಿಗೆ ದೊಡ್ಡ ಹಿನ್ನಡೆಯಾಗಿದೆ. ಸಿಎಂ ಭೇಟಿಯ ಸಂದರ್ಭದಲ್ಲಿ ಸಚಿವ ಉಮೇಶ ಕತ್ತಿ (Umesh Katti), ಮಾಜಿ ಡಿಸಿಎಂ ಲಕ್ಷ್ಮಣ ಸವದಿ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಶಾಸಕರಾದ ಮಹಾದೇವಪ್ಪ ಯಾದವಾಡ, ಪಿ ರಾಜೀವ, ಅಭಯ ಪಾಟೀಲ್  ಮಾತ್ರ ಇದ್ದರು. ಇನ್ನೂ ಅನೇಕ ಶಾಸಕರು ಇಂದಿನ ನಿಯೋಗಕ್ಕೆ ಕೈ ಕೊಟ್ಟಿದ್ದಾರೆ.

ಬಿಜೆಪಿ ನಾಯಕರ ಪ್ರಾಬಲ್ಯವಿರುವ ಜಿಲ್ಲೆ

ಬೆಳಗಾವಿ ಜಿಲ್ಲೆಯ 18 ವಿಧಾನಸಭಾ ಕ್ಷೇತ್ರಗಳ ಪೈಕಿ 13 ಕ್ಷೇತ್ರದಲ್ಲಿ ಬಿಜೆಪಿ ಶಾಸಕರೇ ಇದ್ದಾರೆ. ಜತೆಗೆ ಮೂರು ಜನ ಸಂಸದರು ಜಿಲ್ಲೆಯಲ್ಲಿದ್ದು, ಇಷ್ಟೇಲ್ಲ ದೊಡ್ಡ ಕಾರ್ಯಕರ್ತರ ಪಡೆ ಇದ್ದರೂ ಇತ್ತೀಚಿಗೆ ನಡೆದ ವಿಧಾನ ಪರಿಷತ್ ಚುನಾವಣೆಯಲ್ಲಿ ಸೋಲನ್ನು ಪಕ್ಷ ಅನುಭವಿಸುತ್ತು. ಜಿಲ್ಲೆಯ ದ್ವಿಸದಸ್ಯ ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಚನ್ನರಾಜ್ ಹಟ್ಟಿಹೊಳಿ, ಪಕ್ಷೇತರ ಅಭ್ಯರ್ಥಿ ಲಖನ್ ಜಾರಕಿಹೊಳಿ ಗೆಲವು ಸಾಧಿಸಿದ್ದರು. ಬಿಜೆಪಿ ಅಭ್ಯರ್ಥಿ ಮಹಾಂತೇಶ ಕವಟಗಿಮಠ ಸೋಲಿನ ಬಳಿಕ ಸುಮ್ಮನೆ ಆಗಿರಲಿಲ್ಲ. ಸೋಲಿನ ಬಗ್ಗೆ ಪರಾಮರ್ಶೆ ನಡೆಸಲು ಮುಂದಾಗಿದ್ದರು. ಸೋಲಿಗೆ ಜಾರಕಿಹೊಳಿ ಸಹೋದರರ ಕಾರಣ ಎನ್ನುವುದು ಮಹಾಂತೇಶ ಕವಟಗಿಮಠ ಅಭಿಪ್ರಾಯವಾಗಿದೆ.

ಇದನ್ನು ಓದಿ: ಮಾನವೀಯತೆ ಮೆರೆದ MLA Raju Gowda; ಶಾಸಕರು ಫೋನ್ ಮಾಡಿದ್ರೂ ಬರದ 108 ಅಂಬುಲೆನ್ಸ್

ಪರಿಷತ್​ ಸೋಲಿಗೆ ಜಾರಕಿಹೊಳಿ ಸಹೋದರರು ಕಾರಣ

ಸಚಿವ ಉಮೇಶ ಕತ್ತಿ ನಿವಾಸದಲ್ಲಿ ಇತ್ತೀಚಿಗೆ ಸಭೆಗೆ ಜಿಲ್ಲೆಯ ಎಲ್ಲಾ ಶಾಸಕರು, ಸಂಸದರನ್ನು ಕವಟಗಿಮಠ ಆಹ್ವಾನ ನೀಡಿದ್ದರು. ಈ ವೇಳೆಯಲ್ಲಿ ಪಾಲ್ಗೊಂಡ ಅನೇಕ ಶಾಸಕರು ಪರಿಷತ್ ಸೋಲಿಗೆ ಜಾರಕಿಹೊಳಿ ಸಹೋದರರು ಕಾರಣ ಎಂದು ಹೇಳಿದ್ರು. ಅಷ್ಟೇ ಅಲ್ಲದೇ ಇದೇ ರೀತಿ ಮುಂದುವರೆದ್ರೆ ಪಕ್ಷಕ್ಕೆ ಮುಂದಿನ ದಿನದಲ್ಲಿ ಹಿನ್ನಡೆಯಾಗಲಿದ್ದು, ಈ ಬಗ್ಗೆ ಸಿಎಂ ಹಾಗೂ ಪಕ್ಷದ ಹಿರಿಯ ನಾಯಕರ ಗಮನಕ್ಕೆ ತರಲು ತೀರ್ಮಾಣ ಕೈಗೊಳ್ಳಲಾಗಿತ್ತು. ಅದರಂತೆ ಇಂದು ಕತ್ತಿ ನೇತೃತ್ವದ ನಿಯೋಗ ಸಿಎಂ ಭೇಟಿ ಮಾಡಿ ಹಲವು ವಿಚಾರಗಳ ಬಗ್ಗೆ ಚರ್ಚೆ ನಡೆಸಿದೆ. ಆದರೇ ಕತ್ತಿ ನಿಯೋಗಕ್ಕೆ ಸಿಎಂ ಮಣೆಹಾಕಿಲ್ಲ ಎನ್ನುವ ಚರ್ಚೆಗಳು ಸಹ ಸದ್ಯ ಆರಂಭವಾಗಿದೆ.

ಇದನ್ನು ಓದಿ: ಸಿಎಂ ಇಬ್ರಾಹಿಂ ಭೇಟಿಯಾದ HDK; ಜೆಡಿಎಸ್​ ಸೇರ್ಪಡೆ ಖಚಿತ?

ಪ್ರತ್ಯೇಕ ಸಭೆ ಬಗ್ಗೆ ಸಿಎಂ ಕೂಡ ಅಸಮಾಧಾನ

ಕತ್ತಿ ನೇತೃತ್ವದ ನಿಯೋಗದಿಂದ ಅನಿಲ್ ಬೆನಕೆ, ಮಹಾಂತೇಶ ದೊಡ್ಡಗೌಡರ್, ಮಹೇಶ ಕುಮಟಹಳ್ಳಿ, ಆನಂದ ಮಾಮನಿ, ಶಶಿಕಲಾ ಜೊಲ್ಲೆ, ಶ್ರೀಮಂತ ಪಾಟೀಲ್ ದೂರ. ಮಾಜಿ ಸಚಿವ ರಮೇಶ ಜಾರಕಿಹೊಳಿ, ಬಾಲಚಂದ್ರ ಜಾರಕಿಹೊಳಿ ದೂರ ಉಳಿದಿದ್ದಾರೆ. ಇನ್ನೂ ಪ್ರತ್ಯೇಕ ಸಭೆಯ ಬಗ್ಗೆ ಸಿಎಂ ಅಸಮಾಧಾನಗೊಂಡಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಶೀಘ್ರದಲ್ಲಿಯೇ ಸಭೆ ಸಮಸ್ಯೆ ಇತ್ಯರ್ಥ ನಡೆಸುವ ಭರವಸೆ ನೀಡಿದ್ದಾರೆ ಎನ್ನಲಾಗಿದೆ.

ಇನ್ನು ಭೇಟಿ ಕುರಿತು ಮಾತನಾಡಿದ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಕಳೆದ ಎರಡು ದಿನಗಳಿಂದ ಬೆಳಗಾವಿ ಅಸಮಧಾನ ಬಗ್ಗೆ ವರದಿಯಾಗುತ್ತಿದೆ. ನಾವು ತಿಳಿದಂತೆ ಯಾವುದೇ ಅಸಮಧಾನ ಇಲ್ಲ.. ಇಂದು ಕೂಡ ಸಿಎಂ ಭೇಟಿ ಆಗಿ ಚರ್ಚೆ ಮಾಡಿದ್ದೇವೆ. ಬೆಳಗಾವಿ ಶಾಸಕರು, ಸಂಸದರು, ಸಚಿವರು ಭೇಟಿ ನೀಡಿ ಅಭಿವೃದ್ಧಿ ವಿಚಾರ ಚರ್ಚೆ ಮಾಡಿದ್ದೇವೆ ಅಷ್ಟೇ ಎಂದರು
Published by:Seema R
First published: