ಬೆಳಗಾವಿ (ಮೇ. 14): ಮೆಡಿಕಲ್ ಕಾಲೇಜು ಚುನಾವಣೆ (Medical Collage Eelction) ವಿಚಾರಕ್ಕೆ ಸಂಬಂಧಿಸಿದಂತೆ ವೈದ್ಯಕೀಯ ವಿದ್ಯಾರ್ಥಿಗಳ (MBBS Student) ಮಧ್ಯೆ ಮಾರಾಮಾರಿ ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ವಿದ್ಯಾರ್ಥಿಗಳ ಗಲಾಟೆಯಲ್ಲಿ ಓರ್ವನಿಗೆ ಗಂಭೀರ ಗಾಯವಾಗಿದ್ದು 15 ವೈದ್ಯಕೀಯ ವಿದ್ಯಾರ್ಥಿಗಳನ್ನ ಕಾಲೇಜಿನಿಂದ ಸಸ್ಪೆಂಡ್ ಮಾಡಲಾಗಿದೆ. ಬೆಳಗಾವಿ ಬಿಮ್ಸ್ (BHIMS) ಮೆಡಿಕಲ್ ಕಾಲೇಜಿನಲ್ಲಿಈ ಘಟನೆ ನಡೆದೆ. ಚುನಾವಣೆ ವಿಚಾರ ಸಂಬಂಧ ವೈದ್ಯಕೀಯ ಪದವಿಯ ನಾಲ್ಕನೇ ವರ್ಷದ ವಿದ್ಯಾರ್ಥಿಗಳು ಹಾಸ್ಟೆಲ್ ನಲ್ಲಿ ಮಾರಾಮಾರಿ ಹೊಡೆದಾಟ ಮಾಡಿಕೊಂಡಿದ್ದಾರೆ. ಪ್ರಕರಣ ಸಂಬಂಧ 15 ಜನ ವಿದ್ಯಾರ್ಥಿಗಳ ವಿರುದ್ಧ ಎಪಿಎಂಸಿ ಪೊಲೀಸ್ ಠಾಣೆಯಲ್ಲಿ(Police Station) ಕೇಸ್ ದಾಖಲಾಗಿದೆ. ಇನ್ನೂ ಗಾಯಗೊಂಡ ವಿದ್ಯಾರ್ಥಿಗೆ ಜೋಧಪುರ ಎಮ್ಸ್ ನಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಅಪ್ಪ-ಅಮ್ಮ ಕಷ್ಟಪಟ್ಟು, ಒಪ್ಪತ್ತು ಊಟ ಮಾಡಿ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ಕೊಡಿಸಿ ಡಾಕ್ಟರ್, ಇಂಜಿನಿಯರ್ ಮಾಡುವ ಕನಸು ಕಂಡಿರುತ್ತಾರೆ. ಅದರಲ್ಲೂ MBBS ಸೀಟು ಪಡೆಯುವುದು ತಪಸ್ಸೇ ಸರಿ. ಹಗಲು-ರಾತ್ರಿ ಕಷ್ಟಪಟ್ಟು ಓದಿ ನೀಟ್ ಎಕ್ಸಾಂ ಬರೆದು ಸೀಟು ಗಿಟ್ಟಿಸಿಕೊಂಡಿದ್ದ MBBS ವಿದ್ಯಾರ್ಥಿಗಳು ಇದೀಗ್ ಒಣ ಪ್ರತಿಷ್ಠೆಗೆ ಬಿದ್ದು ಉಜ್ವಲ ಭವಿಷ್ಯದ ಮೇಲೆ ಚಪ್ಪಡಿ ಎಳೆದುಕೊಂಡಿದ್ದಾರೆ.
ಕ್ಷುಲಕ ವಿಚಾರಕ್ಕೆ ಮಾರಾಮಾರಿ
ಮೇ 4 ರಂದು ಬೆಳಗಾವಿಯ ಪ್ರತಿಷ್ಠಿತ ಬಿಮ್ಸ್ ಮೆಡಿಕಲ್ ಕಾಲೇಜಿನಲ್ಲಿ ವಿದ್ಯಾರ್ಥಿ ಸಂಘಗಳ ಚುನಾವಣೆ ನಡೆದಿತ್ತು. ಇದೇ ವಿಚಾರವಾಗಿ ಎರಡು ವಿದ್ಯಾರ್ಥಿ ಗುಂಪುಗಳ ನಡುವೆ ಕಾಲೇಜಿನ ಹಾಸ್ಟೆಲ್ ನಲ್ಲಿ ಮಾರಾಮಾರಿ ನಡೆದು ರಾಜಸ್ಥಾನ ಮೂಲದ ಬುರಾರಾಮ್ ಗೋಧರೆ ಎಂಬ ವಿದ್ಯಾರ್ಥಿಗೆ ಗಂಭೀರ ಗಾಯವಾಗಿದೆ. ಅಷ್ಟೇ ಅಲ್ಲದೇ ಗಲಾಟೆ ಹಾಸ್ಟೆಲ್ ನ ಕಿಟಕಿ-ಗಾಜು, ಅಲಮೇರಾಗಳು ಕೂಡ ಜಖಂ ಆಗಿವೆ. ಗಾಯಾಳು ಬುರಾರಾಮಗೆ ಜೋಧಪುರ ಏಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಹೊಡೆದಾಟದ ವೇಳೆ ಸಕಾಲಕ್ಕೆ ಬಿಮ್ಸ್ ನ ಭದ್ರತಾ ಸಿಬ್ಬಂದಿ ಮಧ್ಯ ಪ್ರವೇಶಿಸಿದ್ದು ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ.
ಇದನ್ನು ಓದಿ: ಹತ್ತಿ ಬಿತ್ತನೆ ಬೀಜಕ್ಕೆ ಕೋಟೆನಾಡಿನಲ್ಲಿ ಹೆಚ್ಚಿದ ಬೇಡಿಕೆ: ಕೃತಕ ಅಭಾವ ಸೃಷ್ಟಿ
15 ವಿದ್ಯಾರ್ಥಿಗಳು ಸಸ್ಪೆಂಡ್
ವಿದ್ಯಾರ್ಥಿಗಳ ಮಾರಾಮಾರಿ ವಿಷಯ ತಿಳಿದ ಕಾಲೇಜು ಆಡಳಿತಾಧಿಕಾರಿಗಳು ಘಟನೆ ಕುರಿತು ಪ್ರಾಥಮಿಕ ವರದಿ ಪಡೆದು, ಘಟನೆಯನ್ನ ಗಂಭೀರವಾಗಿ ಪರಿಗಣಿಸಿ 15 ವೈದ್ಯಕೀಯ ವಿದ್ಯಾರ್ಥಿಗಳ ವಿರುದ್ದ ಬೆಳಗಾವಿ ಎ.ಪಿ.ಎಂ.ಸಿ ಠಾಣೆಗೆ ದೂರು ನೀಡಿದ್ದಾರೆ. ಅಷ್ಟೇ ಅಲ್ಲದೇ ಮುಂದಿನ ದಿನಗಳಲ್ಲಿ ಇತರೇ ವಿದ್ಯಾರ್ಥಿಗಳಿಗೆ ಎಚ್ಚರಿಕೆ ಕರೆಗಂಟೆ ಎಂಬಂತೆ ಗಲಾಟೆಯಲ್ಲಿ ಭಾಗವಹಿಸಿದ್ದ 15 ವಿದ್ಯಾರ್ಥಿಗಳನ್ನ ಕಾಲೇಜಿನಿಂದ ಅಮಾನತುಗೊಳಿಸಿ ಬಿಮ್ಸ್ ನ ಅಧಿಕಾರಿಗಳು ಆದೇಶಿಸಿದ್ದಾರೆ. ಬಿಮ್ಸ್ ಅಧಿಕಾರಿಗಳು ನೀಡಿರುವ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡಿರುವ ಬೆಳಗಾವಿ ಎ.ಪಿ.ಎಂ.ಸಿ ಪೋಲಿಸರು ತನಿಖೆ ನಡೆಸಿದ್ದಾರೆ.
ಇದನ್ನು ಓದಿ: ಆಕಾಶದಿಂದ ಬಿದ್ದಿವೆಯಂತೆ ಈ ವಿಚಿತ್ರ ಲೋಹದ ಚೆಂಡುಗಳು! ದಿಗ್ಭ್ರಮೆಗೊಂಡ ಗುಜರಾತ್ ನಿವಾಸಿಗಳು
ಇನ್ನೇನು ಒಂದೆರೆಡು ವರ್ಷಗಳಲ್ಲಿ ಡಾಕ್ಟರ್ ಆಗಿ ಹೊರಹೊಮ್ಮಿ ಜನರ ಸೇವೆ ಮಾಡಬೇಕಾದ ವಿದ್ಯಾರ್ಥಿಗಳ ಬಾಳಿನಲ್ಲಿ ಸ್ವಯಂಕೃತ ಅಪರಾಧದಿಂದ ಬಿರುಗಾಳಿ ಎದ್ದಿದೆ. ಕಾಲೇಜು ಚುನಾವಣೆ ಎಂಬ ರಾಜಕೀಯದ ಆಸೆಗೆ ಬಿದ್ದು ಮಾರಾಮಾರಿ ಮಾಡಿ ಕೊಂಡಿದ್ದಾರೆ. ಮುಂದೆ ಕಾಲೇಜು ಆಡಳಿತ ಮಂಡಳಿ ಯಾವ ನಿರ್ಣಯ ಕೈಗೊಳ್ಳಲಿದೆ ಎಂಬುದು ಕಾದು ನೋಡಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ