Belagavi No. 2- ಕೋವಿಡ್ ಲಸಿಕಾ ಮೇಳ: ಬೆಳಗಾವಿ ಜಿಲ್ಲೆ ದೇಶದಲ್ಲೇ ನಂಬರ್ 2

Vaccination Campaign- ಪ್ರಧಾನಿ ಮೋದಿ ಜನ್ಮದಿನದಂದು ದೇಶಾದ್ಯಂತ ಯುದ್ಧೋಪಾದಿಯಲ್ಲಿ ಲಸಿಕಾ ಅಭಿಯಾನ ನಡೆದಿತ್ತು. ಆ ದಿನ ಅತಿ ಹೆಚ್ಚು ಲಸಿಕೆ ಹಾಕಿದ ಜಿಲ್ಲೆಗಳಲ್ಲಿ ದೇಶದಲ್ಲೇ ಮೊದಲ ಸ್ಥಾನ ಗಿಟ್ಟಿಸಿದ್ದು ಬೆಂಗಳೂರು, ಎರಡನೇ ಸ್ಥಾನ ಬೆಳಗಾವಿಗೆ ಬಂದಿದೆ.

ಬೆಳಗಾವಿಯಲ್ಲಿ ಲಸಿಕಾ ಅಭಿಯಾನ

ಬೆಳಗಾವಿಯಲ್ಲಿ ಲಸಿಕಾ ಅಭಿಯಾನ

  • Share this:
ಬೆಳಗಾವಿ (ಸೆ. 18): ಶುಕ್ರವಾರ ಇಡೀ ದೇಶದ್ಯಾಂತ ದೊಡ್ಡ ಮಟ್ಟದಲ್ಲಿ ಕೊವಿಡ್ ಲಸಿಕಾ ಮೇಳವನ್ನ ಆಯೋಜನೆ ಮಾಡಲಾಗಿತ್ತು. ದೇಶದ ಮೂಲೆ ಮೂಲೆಯಲ್ಲೂ ಈ ಒಂದು ಲಸಿಕಾ ಮೇಳ ಸಾಗಿತ್ತು. ಆದ್ರೇ ಈ ಲಸಿಕಾ ಮೇಳದಲ್ಲಿ ಕರ್ನಾಟಕದ ಕುಂದಾನಗರಿ ದೇಶದಲ್ಲೇ ಎರಡನೇ ಸ್ಥಾನ ಗಿಟ್ಟಿಸಿಕೊಂಡಿದ್ದು ಹೆಮ್ಮೆಯ ಸಂಗತಿ. ಪ್ರಧಾನಿ ಮೋದಿ ಅವರ ಹುಟ್ಟು ಹಬ್ಬದ ನಿಮಿತ್ತ ಇಡೀ ದೇಶಾದ್ಯಂತ ಬೃಹತ್ ಲಸಿಕಾ ಮೇಳವನ್ನು ಆಯೋಜನೆ ಮಾಡಲಾಗಿತ್ತು. ಈ ಮೇಳ ದೇಶದ ಮೂಲೆ ಮೂಲೆಯಲ್ಲಿ ಕೂಡ ನಡೆದಿತ್ತು. ಒಟ್ಟಾರೆ ಬೆಳಗ್ಗೆ ಹತ್ತು ಗಂಟೆಗೆ ಆರಂಭವಾದ ಮೇಳ ಸಂಜೆವರೆಗೂ ನಡೆದಿತ್ತು. ನಿನ್ನೆ ಶುಕ್ರವಾರ ಒಂದೇ ದಿನ ಬೆಳಗಾವಿಯಲ್ಲಿ ಅತೀ ಹೆಚ್ಚು ಲಸಿಕೆ ನೀಡಿದ್ದು, ಇದು ದೇಶದಲ್ಲೇ ಎರಡನೇ ಸ್ಥಾನ ಬರುವಂತೆ ಮಾಡಿದೆ.

ಹೌದು ನಿನ್ನೆ ಬೆಳಗಾವಿ ಜಿಲ್ಲೆಯಲ್ಲಿ ಒಟ್ಟು 1200 ಲಸಿಕಾ ಕೇಂದ್ರಗಳನ್ನ ಸ್ಥಾಪನೆ ಮಾಡಲಾಗಿತ್ತು. ಈ ಲಸಿಕಾ ಕಾರ್ಯಕ್ರಮದಲ್ಲಿ ಎಂಟು ಸಾವಿರಕ್ಕೂ ಅಧಿಕ ಜನರ ಸಿಬ್ಬಂದಿ ಭಾಗಿಯಾಗಿದ್ದು ಆರೋಗ್ಯ ಇಲಾಖೆಯ ಸಿಬ್ಬಂದಿ, ಕೈಗಾರಿಕಾ ಇಲಾಖೆ ಸಿಬ್ಬಂದಿ, ಶಿಕ್ಷಣ ಇಲಾಖೆ ಸಿಬ್ಬಂದಿ, ಗ್ರಾಮ ಪಂಚಾಯತಿ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು, ಕಂದಾಯ ಇಲಾಖೆ ಸಿಬ್ಬಂದಿ ಲಸಿಕಾ ಮೇಳದಲ್ಲಿ ಪಾಲ್ಗೊಂಡಿದ್ದರು. ಈ ಮೂಲಕ ಗಲ್ಲಿ ಗಲ್ಲಿಯಲ್ಲೂ ಲಸಿಕೆಯನ್ನ ನೀಡಿ ಸೈ ಎನಿಸಿಕೊಳ್ಳುವುದರ ಜತೆಗೆ ದೇಶದಲ್ಲೇ ಬೆಳಗಾವಿ ಎರಡನೇ ಸ್ಥಾನ ಗಿಟ್ಟಿಸಿಕೊಳ್ಳುವಂತೆ ಮಾಡಿದ್ದಾರೆ.

ಒಂದೇ ದಿನ ಬೆಳಗಾವಿ ಜಿಲ್ಲೆಯಲ್ಲಿ ಮೂರು ಲಕ್ಷ ಜನರಿಗೆ ಲಸಿಕೆ ನೀಡುವ ಗುರಿಯನ್ನ ಹೊಂದಲಾಗಿತ್ತು. ಇದಕ್ಕೆ ಬೇಕಾದ ಪೂರ್ವ ತಯಾರಿಯನ್ನೂ ಜಿಲ್ಲಾಡಳಿತ ನಾಲ್ಕು ದಿನಗಳಿಂದ ಮಾಡಿಕೊಂಡು ಬಂದಿತ್ತು. ಚುನಾವಣೆಯ ಮಾದರಿಯಲ್ಲಿ ಲಸಿಕಾಕರಣಕ್ಕೆ ಜಿಲ್ಲಾಡಳಿತ ಸಿದ್ಧಗೊಂಡಿತ್ತು. ಪ್ರತಿ ಇಲಾಖೆಯ ಸಿಬ್ಬಂದಿಯನ್ನೂ ಇದರಲ್ಲಿ ಬಳಸಿಕೊಂಡು ಯಾವುದೇ ತಾಂತ್ರಿಕ ಸಮಸ್ಯೆ ಆಗದಂತೆ ಜನರ ಮನವೊಲಿಸಿ ನಿನ್ನೆ ಒಂದೇ ದಿನ ಒಟ್ಟು 2,97,000 ಸಾವಿರ ಜನರಿಗೆ ಲಸಿಕೆಯನ್ನ ನೀಡಿದ್ದಾರೆ. ಇದ್ರಲ್ಲಿ 2,57,604 ಜನರಿಗೆ ಲಸಿಕೆ ನೀಡಿದ್ದು ಮಾತ್ರ ಆನ್​ಲೈನ್​ನಲ್ಲಿ ದಾಖಲಾಗಿದೆ. ಇನ್ನುಳಿದ ಎಂಟ್ರಿ ಬಾಕಿ ಇತ್ತು. ಆದ್ರೂ ಕೂಡ ಬೆಳಗಾವಿ ಜಿಲ್ಲೆ ದೇಶದಲ್ಲಿ ಎರಡನೇ ಸ್ಥಾನದಲ್ಲಿದೆ.

ಇದನ್ನೂ ಓದಿ: Controversy Statement: ನಾವು ಗಾಂಧೀಜಿಯನ್ನೇ ಬಿಟ್ಟಿಲ್ಲ, ಇನ್ನು ನಿಮ್ಮನ್ನು ಬಿಡುತ್ತೇವಾ?: ಸಿಎಂಗೆ ಕೊಲೆ ಬೆದರಿಕೆ ಹಾಕಿದ ಹಿಂದೂ ಮಹಾಸಭಾ

ಇತ್ತ ಬೆಂಗಳೂರಿನಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ ನಿನ್ನೆ ಒಂದೇ ದಿನ 4,09,977 ಜನರಿಗೆ ಲಸಿಕೆ ನೀಡಿದ್ದು ಇದು ದೇಶದಲ್ಲೇ ನಂಬರ್ ಒನ್ ಸ್ಥಾನಕ್ಕೇರಿದೆ. ಈ ಸಾಧನೆಗೆ ಶ್ರಮಿಸಿದ ಕಂದಾಯ, ಆರೋಗ್ಯ, ಗ್ರಾಮೀಣಾಭಿವೃದ್ಧಿ, ನಗರ ಸ್ಥಳೀಯ ಸಂಸ್ಥೆಗಳು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಡಿಸಿ ಹಿರೇಮಠ ಕೃತಜ್ಞತೆ ಸಲ್ಲಿಸಿದ್ದಾರೆ. ಮೆಗಾ ಲಸಿಕಾಮೇಳದ ಯಶಸ್ವಿಯಾಗಲು ಸಹಕರಿಸಿದ ಎಲ್ಲ ಜನಪ್ರತಿನಿಧಿಗಳು, ಸಂಘ-ಸಂಸ್ಥೆಗಳು ಹಾಗೂ ಸಾರ್ವಜನಿಕರಿಗೆ ಜಿಲ್ಲಾಧಿಕಾರಿ ಧನ್ಯವಾದಗಳನ್ನ ತಿಳಿಸಿದ್ದಾರೆ.

ಬೆಳಗಾವಿ ಜಿಲ್ಲೆಯಲ್ಲಿ 36ಲಕ್ಷ ಜನರಿಗೆ ವ್ಯಾಕ್ಸಿನ್ ನೀಡುವ ಗುರಿಹೊಂದಿದ್ದು ಇಲ್ಲಿವರೆಗೂ 29ಲಕ್ಷ ಜನರಿಗೆ ಬೆಳಗಾವಿ ಜಿಲ್ಲಾಡಳಿತ ಲಸಿಕೆ ನೀಡುವುದರಲ್ಲಿ ಯಶಸ್ವಿಯಾಗಿದೆ. ಇನ್ನು ಹತ್ತು ದಿನಗಳಲ್ಲಿ ಉಳಿದ ಏಳು ಲಕ್ಷ ಜನರಿಗೂ ವ್ಯಾಕ್ಸಿನ್ ನೀಡುವ ಗುರಿ ಬೆಳಗಾವಿ ಜಿಲ್ಲಾಡಳಿತ ಹೊಂದಿದೆ. ಇದಕ್ಕೆ ಅಗತ್ಯವಾದ ಪೂರ್ವ ತಯಾರಿ ಕೂಡ ಮಾಡಿಕೊಂಡಿದೆ. ಇನ್ನು, ದೇಶದಲ್ಲಿ ಎರಡನೇ ಸ್ಥಾನ ಬಂದಿದ್ದಕ್ಕೆ ಬೆಳಗಾವಿ ಡಿಸಿಗೆ ಸಿಎಂ ಬಸವರಾಜ ಬೊಮ್ಮಾಯಿ ಸೇರಿ ಬೆಳಗಾವಿ ಜಿಲ್ಲೆಯ ಜನರು ಅಭಿನಂದಿಸುತ್ತಿದ್ದಾರೆ.

ವರದಿ: ಚಂದ್ರಕಾಂತ ಸುಗಂಧಿ
Published by:Vijayasarthy SN
First published: