• Home
  • »
  • News
  • »
  • state
  • »
  • Belagavi: MESಗೆ ಮತ್ತೊಂದು ಶಾಕ್ ಕೊಡಲು ಬಿಜೆಪಿ ಪ್ಲ್ಯಾನ್; ಮೇಯರ್, ಉಪಮೇಯರ್ ಆಯ್ಕೆಯಲ್ಲಿ ಜಾಣ ನಡೆ!

Belagavi: MESಗೆ ಮತ್ತೊಂದು ಶಾಕ್ ಕೊಡಲು ಬಿಜೆಪಿ ಪ್ಲ್ಯಾನ್; ಮೇಯರ್, ಉಪಮೇಯರ್ ಆಯ್ಕೆಯಲ್ಲಿ ಜಾಣ ನಡೆ!

ಬೆಳಗಾವಿ ಪಾಲಿಕೆ

ಬೆಳಗಾವಿ ಪಾಲಿಕೆ

ಮೇಯರ್ ಪಟ್ಟವನ್ನು ಮರಾಠ ಸಮುದಾಯದ ನಾಯಕನಿಗೆ ಕಟ್ಟಲು ಬಿಜೆಪಿ ಪ್ಲ್ಯಾನ್ ಮಾಡಿದೆ. ಈ ಮೂಲಕ ಎಂಇಎಸ್​​ಗೆ ಸಂಪೂರ್ಣವಾಗಿ ಬಾಯಿ ಮುಚ್ಚಿಸುವ ತೀರ್ಮಾನಕ್ಕೆ ಬಂದಿದೆ. ಮೇಯರ್ ಸ್ಥಾನ ಮರಾಠ ಸಮುದಾಯಕ್ಕೆ, ಉಪಮೇಯರ್ ಸ್ಥಾನ ಲಿಂಗಾಯತರಿಗೆ ನೀಡುವ ಚರ್ಚೆ  ಬಿಜೆಪಿಯಲ್ಲಿ ನಡೆದಿದೆ.

  • Share this:

ಬೆಳಗಾವಿ(ಸೆಪ್ಟೆಂಬರ್ 11): ಬೆಳಗಾವಿ(Belagavi) ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ ಬಾರಿಸಿದ್ದು,‌ ಈಗ ಮೇಯರ್, ಉಪಮೇಯರ್(Mayor and Deputy Mayor) ಆಯ್ಕೆ ಚರ್ಚೆಗಳು ಆರಂಭವಾಗಿವೆ. ಸದ್ಯ‌ ಆಯೋಗದಿಂದ ಮೇಯರ್, ಉಪಮೇಯರ್ ‌ಆಯ್ಕೆ ಬಗ್ಗೆ ಚುನಾವಣೆ ನಡೆಸುವ ಬಗ್ಗೆ ಇನ್ನೂ ತೀರ್ಮಾನ ಆಗಿಲ್ಲ. ಆಯೋಗ‌‌ ನಿಗದಿಪಡಿಸಿದ ದಿನಾಂಕದಂದು ಪ್ರಾದೇಶಿಕ ಆಯುಕ್ತರು ಚುನಾವಣೆ ನಡೆಸಲಿದ್ದಾರೆ. ಆದರೆ ಗೆದ್ದ ಅನೇಕ ಪಾಲಿಕೆ ಸದಸ್ಯರು ಮೇಯರ್, ‌ಉಪಮೇಯರ್ ಸ್ಥಾನದ ಆಕಾಂಕ್ಷಿಗಳಾಗಿದ್ದಾರೆ. ಈ ಪೈಕಿ ಹಲವರ ಹೆಸರು ಸಹ‌ ಮುಂಚೂಣಿಯಲ್ಲಿ ಇದೆ. ಬೆಳಗಾವಿ ಪಾಲಿಕೆಯ ಮೊದಲ ಬಿಜೆಪಿ ಮೇಯರ್‌(BJP Mayor) ಆಗುವ ಅದೃಷ್ಟ ಯಾರಿಗೆ ಒಲಿಯಲಿದೆ ಎಂಬುದು ಕಾದು ನೋಡಬೇಕು.


ನಗರಾಭಿವೃದ್ಧಿ ಇಲಾಖೆಯಿಂದ 2021ರ ಫೆಬ್ರವರಿ 11 ರಂದು‌ ಮೇಯರ್, ಉಪಮೇಯರ್ ಸ್ಥಾನದ ಮೀಸಲಾತಿ ಪ್ರಕಟ ಆಗಿದೆ. ಇದರಂತೆ ಮೇಯರ್ ಸಾಮಾನ್ಯ ವರ್ಗ, ಉಪ ಮೇಯರ್‌ ಸಾಮಾನ್ಯ ವರ್ಗದ ಮಹಿಳೆಗೆ ಮೀಸಲು ಇದೆ. ಇನ್ನೂ ಮೇಯರ್,  ಉಪಮೇಯರ್ ಆಯ್ಕೆ ಸಂದರ್ಭದಲ್ಲಿ ಸಹ ಬಿಜೆಪಿ ಜಾಣ ನಡೆಯನ್ನು ಅನುಸರಿಸಲು ತೀರ್ಮಾನ ಮಾಡಿದೆ. ಈಗಾಗಲೇ ಬೆಳಗಾವಿಯಲ್ಲಿ ಎಂಇಎಸ್ ಸೋತು ಹೋಗಿದೆ. ಕೇವಲ 2 ಪಾಲಿಕೆ ಸದಸ್ಯರಿಗೆ ಸೀಮಿತವಾಗಿರೋ ಎಂಇಎಸ್,  ಕಳೆದ ಹತ್ತಾರು ವರ್ಷಗಳಿಂದ ಪಾಲಿಕೆಯಲ್ಲಿ ಹಿಡಿತ ಹೊಂದಿತ್ತು. ಸೋಲಿನ ಬಳಿಕ ಬೆಳಗಾವಿಯಲ್ಲಿ ಭಾಷಾ ರಾಜಕಾರಣಕ್ಕೆ ಸಂಪೂರ್ಣ ಇತಿಶ್ರೀ ಬಿದ್ದಿದೆ. ಮೇಯರ್, ಉಪಮೇಯರ್ ಆಯ್ಕೆಯಲ್ಲಿಯೂ ಬಿಜೆಪಿ ಎಚ್ಚರಿಕೆ ಹೆಜ್ಜೆ ಇಡಲು ತೀರ್ಮಾನ ಮಾಡಿದೆ.


ಇದನ್ನೂ ಓದಿ:Petrol Price- ಉಡುಪಿಯಲ್ಲಿ ಪೆಟ್ರೋಲ್ ಬೆಲೆ 1 ರೂ ಹೆಚ್ಚಳ; ಚಿತ್ರದುರ್ಗದಲ್ಲಿ ಬೆಲೆ ಇಳಿಕೆ


ಮೇಯರ್ ಪಟ್ಟವನ್ನು ಮರಾಠ ಸಮುದಾಯದ ನಾಯಕನಿಗೆ ಕಟ್ಟಲು ಬಿಜೆಪಿ ಪ್ಲ್ಯಾನ್ ಮಾಡಿದೆ. ಈ ಮೂಲಕ ಎಂಇಎಸ್​​ಗೆ ಸಂಪೂರ್ಣವಾಗಿ ಬಾಯಿ ಮುಚ್ಚಿಸುವ ತೀರ್ಮಾನಕ್ಕೆ ಬಂದಿದೆ. ಮೇಯರ್ ಸ್ಥಾನ ಮರಾಠ ಸಮುದಾಯಕ್ಕೆ, ಉಪಮೇಯರ್ ಸ್ಥಾನ ಲಿಂಗಾಯತರಿಗೆ ನೀಡುವ ಚರ್ಚೆ  ಬಿಜೆಪಿಯಲ್ಲಿ ನಡೆದಿದೆ. ಶಾಸಕ ಅಭಯ ಪಾಟೀಲ್ ಮೇಯರ್ ಆಯ್ಕೆಯಲ್ಲಿ ನಿರ್ಣಾಯಕ ಪಾತ್ರ ವಹಿಸಲಿದ್ದಾರೆ. ಒಂದು ವರ್ಷದಿಂದ ಪ್ಲ್ಯಾನ್ ಮಾಡಿ ಎಂಇಎಸ್​​ಗೆ ಮಣ್ಣು ಮುಕ್ಕಿಸಿದ್ದ ಪಾಟೀಲ್,  ಸಿಎಂ ಭೇಟಿಯಾಗಿ ಮೇಯರ್, ಉಪಮೇಯರ್ ಆಯ್ಕೆಯಲ್ಲಿ ಅನುಸರಿಸಬೇಕಾದ ತಂತ್ರದ ಬಗ್ಗೆ ಚರ್ಚೆ ನಡೆಸಲಿದ್ದಾರೆ. ಮೇಯರ್ ಆಯ್ಕೆಯಲ್ಲಿ ಶಾಸಕ ಅಭಯ ಪಾಟೀಲ್ ನಿರ್ಧಾರವೇ ಅಂತಿಮ ಸಾಧ್ಯತೆ ಎನ್ನಲಾಗಿದೆ.


ಮರಾಠ ಸಮುದಾಯದ ಹಲವರು ಮೇಯರ್ ಸ್ಥಾನಕ್ಕಾಗಿ ಪೈಪೋಟಿ ನಡೆಸುತ್ತಿದ್ದಾರೆ. ವಾರ್ಡ್ ನಂಬರ್ 41ರ ಪಾಲಿಕೆ ಸದಸ್ಯ ಮಂಗೇಶ ಪವಾರ್, ವಾರ್ಡ್ ನಂಬರ್ 29ರ ಪಾಲಿಕೆ ಸದಸ್ಯ ನಿತಿನ್ ಜಾಧವ್, ವಾರ್ಡ್ ನಂಬರ್ 44ರ ಆನಂದ ಚವ್ಹಾಣ್, ವಾರ್ಡ್ ನಂಬರ್ 22ರ ರವಿರಾಜ್ ಸಂಬ್ರೇಕರ್, ವಾರ್ಡ್ ನಂಬರ್ 23ರ ಜಯಂತ ಜಾಧವ್ ರೆಸ್ ನಲ್ಲಿ ಇದ್ದಾರೆ‌. ಇನ್ನೂ ಉಪಮೇಯರ್ ಸ್ಥಾನ ಸಾಮನ್ಯ ಮಹಿಳೆಗೆ ಮೀಸಲು ಹಿನ್ನೆಲೆ ವಾರ್ಡ್ ನಂಬರ್ 55ರ ಪಾಲಿಕೆ ಸದಸ್ಯೆ ಸವಿತಾ ಪಾಟೀಲ್, ವಾರ್ಡ್ ನಂಬರ್ 43ರ ವಾಣಿ ವಿಲಾಸ್ ಜೋಶಿ, ವಾರ್ಡ್ ನಂಬರ್ 26ರ ರೇಖಾ ಹೂಗಾರ್ ಅರ್ಹರಿದು, ಯಾರಿಗೆ ಅದೃಷ್ಟ ಒಲಿಯಲಿದೆ ಎಂಬುದನ್ನು ಕಾದು ನೋಡಬೇಕು.


ಇದನ್ನೂ ಓದಿ:Gold Price Today: ಹಬ್ಬದ ಬಳಿಕ ಏರಿಕೆ ಕಂಡ ಚಿನ್ನ; ಬೆಂಗಳೂರಿನಲ್ಲಿ ಇಂದಿನ ರೇಟ್ ಹೀಗಿದೆ ನೋಡಿ

Published by:Latha CG
First published: