• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • ತೆರೆದ ಮಾರುಕಟ್ಟೆಯಲ್ಲಿ ಸೂಪರ್‌ ಮಾರ್ಕೆಟ್ ರೀತಿ ನಿಯಮ ಜಾರಿ! ಜನದಟ್ಟಣೆ‌ ತಪ್ಪಿಸಲು ಬಿಬಿಎಂಪಿ ಮೆಗಾಪ್ಲಾನ್

ತೆರೆದ ಮಾರುಕಟ್ಟೆಯಲ್ಲಿ ಸೂಪರ್‌ ಮಾರ್ಕೆಟ್ ರೀತಿ ನಿಯಮ ಜಾರಿ! ಜನದಟ್ಟಣೆ‌ ತಪ್ಪಿಸಲು ಬಿಬಿಎಂಪಿ ಮೆಗಾಪ್ಲಾನ್

ಕೆ.ಆರ್. ಮಾರುಕಟ್ಟೆ

ಕೆ.ಆರ್. ಮಾರುಕಟ್ಟೆ

ಸದ್ಯ ನಗರದಲ್ಲಿ 0.7 ಪಾಸಿಟಿವ್ ದರ ಇದ್ದು ಒಂದು ವೇಳೆ ಇದು 2ಕ್ಕಿಂತ ಹೆಚ್ಚಾದರೆ ಕಠಿಣ ಕ್ರಮ ಜಾರಿಗೊಳಿಸುವುದಾಗಿ ಪಾಲಿಕೆ ಆಯುಕ್ತ ಗೌರವ್ ಗುಪ್ತಾ ತಿಳಿಸಿದ್ದಾರೆ.

  • Share this:

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮೂರನೇ ಅಲೆ ತಡೆಯುವ ಜವಾಬ್ದಾರಿಯನ್ನ ಸರ್ಕಾರ ಬಿಬಿಎಂಪಿ ಹೆಗಲಿಗೆ ಹಾಕಿದೆ. ಸರ್ಕಾರ ಕೊಟ್ಟ ಈ ಟಾಸ್ಕ್ ಯಶಸ್ವಿಯಾಗಿ ನಿಭಾಯಿಸಲು ಬಿಬಿಎಂಪಿ ಮೆಗಾ ಪ್ಲಾನ್‌ ರೂಪಿಸಿದೆ. ಕೊರೋನಾ‌ ಹಾಟ್ ಸ್ಪಾಟ್ ಆಗಿರುವ ಮಾರ್ಕೆಟ್‌ಗಳಲ್ಲಿ ಇನ್ಮುಂದೆ ಸೂಪರ್‌ ಮಾರ್ಕೆಟ್‌ನಲ್ಲಿ‌ ಅಳವಡಿಸಿದ ಕೊರೋನಾ ಮಾರ್ಗಸೂಚಿ ಪಾಲನೆ ಮಾಡಲು ಮುಂದಾಗಿದೆ. ಅದು ಹೇಗೆ ಅಂತೀರಾ? ಈ ಸ್ಟೋರಿ ಓದಿ.


ಇಷ್ಟು ದಿನ ಸರ್ಕಾರದ ಆದೇಶ ಏನು ಬರುತ್ತೋ ಅದನ್ನ ಜಾರಿ ಮಾಡ್ತಿವಿ. ಕೋವಿಡ್ ನಿರ್ವಹಣೆ ಸರ್ಕಾರದ ಹೊಣೆ. ಅವರು ಹೇಳಿದ್ದಷ್ಟೇ ಮಾಡೋದು ನಮ್ಮ ಕೆಲಸ ಅಂತಿದ್ರು ಪಾಲಿಕೆ ಅಧಿಕಾರಿಗಳು. ಆದರೆ ಈಗ ಸಿಎಂ ಪಾಲಿಕೆಗೆ ಹೊಸ ಜವಾಬ್ದಾರಿ ವಹಿಸಿದ್ದಾರೆ. ಕೋವಿಡ್ ನಿರ್ವಹಣೆಯ ಹೊಣೆಗಾರಿಕೆಯನ್ನ ಪಾಲಿಕೆಗೆ ಹೆಗಲಿಗೇರಿಸಿದ್ದಾರೆ. ಲಾಕ್ಡೌನ್ ತೀರ್ಮಾನವನ್ನೂ ಪಾಲಿಕೆ ಆಯುಕ್ತರಿಗೇ ಬಿಟ್ಟಿದ್ದಾರೆ. ಹೀಗಾಗಿ ಪಾಲಿಕೆ ಎದ್ನೋ ಬಿದ್ನೋ ಅಂತ ಕೋವಿಡ್ ನಿರ್ವಹಣೆಗೆ ಒಂದಿಷ್ಟು ಯತ್ನ ಮಾಡೋಕೆ ಶುರು ಮಾಡಿದೆ. ಮುಖ್ಯವಾಗಿ ವರಮಹಾಲಕ್ಷ್ಮೀ ಹಬ್ಬ, ಮೊಹರಂ ಸೇರಿದಂತೆ ಮುಂಬರೋ ಪ್ರತಿಯೊಂದು ಹಬ್ಬದ ಆಚರಣೆಗೂ ಒಂದಿಷ್ಟು ಬ್ರೇಕ್ ಹಾಕೋಕೆ ಪಾಲಿಕೆ ನಿರ್ಧರಿಸಿದೆ.


ಇನ್ನು ಈ ಬಾರಿ ಸಾರ್ವಜನಿಕ ಗಣೇಶೋತ್ಸವಕ್ಕೂ ಕಳೆದ ಬಾರಿಯಂತೆ ನಿರ್ಬಂಧ ವಿಧಿಸೋಕೆ ಪಾಲಿಕೆ ನಿರ್ಧರಿಸಿದೆ. ಸಾರ್ವಜನಿಕ ಸ್ಥಳಗಳಲ್ಲಿ ಗಣೇಶೋತ್ಸವ ಆಚರಣೆಗೆ ಕಂಪ್ಲೀಟ್ ಬ್ರೇಕ್ ಹಾಕೋಕೆ ಪಾಲಿಕೆ ತೀರ್ಮಾನಿಸಿದೆ. ಈ ಹಬ್ಬಗಳ ವೇಳೆ ನಿರ್ವಹಣೆಗಾಗಿ ಸಪರೇಟ್ ಟೀಂ ರಚಿಸೋಕು ಪಾಲಿಕೆ ಮುಂದಾಗಿದೆ. ಜೊತೆಗೆ ಹಬ್ಬದ ಹೆಸರಲ್ಲಿ ಮಾರ್ಕೆಟ್ ಗಳಲ್ಲಿ ಜನದಟ್ಟಣೆ ತಪ್ಪಿಸೋಕೆ ಪಾಲಿಕೆ ಯೋಜನೆ ರೂಪಿಸ್ತಿದೆ. ಮಾರುಕಟ್ಟೆ ಪ್ರದೇಶದಲ್ಲಿ ಜನದಟ್ಟಣೆ ನಿಯಂತ್ರಣಕ್ಕೆ ಕಟ್ಟು ನಿಟ್ಟಿನ ಕ್ರಮ ಜಾರಿಗೆ ಮುಂದಾಗಿದೆ. ಸೂಪರ್ ಮಾರ್ಕೆಟ್ ನಲ್ಲಿ ಈಗಿರುವ ಕೊರೋನಾ ಮಾರ್ಗಸೂಚಿಯನ್ನು ತೆರೆದ ಮಾರ್ಕೆಟ್ ಗಳಲ್ಲಿಯೂ ಇಂತಿಷ್ಟು ಜನ ಒಳಹೋದರೆ ಇಂತಿಷ್ಟು ಜನರು ಹೊರ ಬರುವವರೆಗೂ ಕಾಯಬೇಕು. ಆನಂತರವಷ್ಟೇ ಒಳ ಹೋಗಬೇಕು. ಈ ಮಾದರಿಯನ್ನು ತೆರೆದ ಮಾರುಕಟ್ಟೆಯಲ್ಲಿ ಅಳವಡಿಸಲು ಬಿಬಿಎಂಪಿ ಮುಂದಾಗಿದೆ. ಇದಕ್ಕಾಗಿ ಬೆಂಗಳೂರು ಜಿಲ್ಲಾಧಿಕಾರಿ, ಪೊಲೀಸ್ ಆಯುಕ್ತರು ಹಾಗೂ ಬಿಬಿಎಂಪಿ ಮುಂದಾಳತ್ವದಲ್ಲಿ ತಂಡವನ್ನ ರಚಿಸಲಾಗ್ತಿದೆ ಎಂದು ಬಿಬಿಎಂಪಿ ವಿಶೇಷ ಆಯುಕ್ತ ಡಾ‌ ರಂದೀಪ್ ತಿಳಿಸಿದ್ದಾರೆ.


ಇನ್ನು ಬೆಂಗಳೂರಿನಲ್ಲಿ ಲಾಕ್ಡೌನ್ ಇಲ್ಲ. ಸೀಲ್ಡೌನ್ ತೀರ್ಮಾನ ಕೈಗೊಳ್ಳೋಕೆ ಕೋವಿಡ್ ಪಾಸಿಟಿವಿಟಿ ದರವನ್ನೇ ಮಾನದಂಡವಾಗಿ ಇರಿಸಿಕೊಳ್ಳೋಕೆ ಪಾಲಿಕೆ ನಿರ್ಧರಿಸಿದೆ. ಸದ್ಯ ನಗರದಲ್ಲಿ 0.7 ಪಾಸಿಟಿವ್ ದರ ಇದ್ದು ಒಂದು ವೇಳೆ ಇದು 2ಕ್ಕಿಂತ ಹೆಚ್ಚಾದರೆ ಕಠಿಣ ಕ್ರಮ ಜಾರಿಗೊಳಿಸುವುದಾಗಿ ಪಾಲಿಕೆ ಆಯುಕ್ತ ಗೌರವ್ ಗುಪ್ತಾ ತಿಳಿಸಿದ್ದಾರೆ.


ಇದನ್ನು ಓದಿ: Afghanistan Crisis; 126 ಭಾರತೀಯರನ್ನು ಹೊತ್ತು ಕಾಬೂಲ್​ನಿಂದ ಭಾರತಕ್ಕೆ ಹೊರಟ ಕೊನೆಯ ಏರ್ ಇಂಡಿಯಾ ವಿಮಾನ!


ಒಟ್ಟಿನಲ್ಲಿ ಸರ್ಕಾರ ಕೋವಿಡ್ ನಿರ್ವಹಣೆಯನ್ನ ಸಂಪೂರ್ಣ ಪಾಲಿಕೆ ಹೆಗಲಿಗೇರಿಸಿದ ಬಳಿಕ ಪಾಲಿಕೆ ಹೆಚ್ಚು ಅಲರ್ಟ್ ಆಗಿದೆ. ಯಾಕಂದ್ರೆ ಮುಂದಾಗೋ ಎಲ್ಲಾ ಪರಿಣಾಮವನ್ನೂ ಪಾಲಿಕೆಯೇ ಎದುರಿಸಬೇಕಾಗಿ ಇರುವುದರಿಂದ ಪರಿಸ್ಥಿತಿ ಕೈ ಮೀರಲು ಬಿಡದೇ ಈಗಿನಿಂದಲೇ ಕಟ್ಟುನಿಟ್ಟಾದ ಕ್ರಮ ಜಾರಿಗೆ ಪಾಲಿಕೆ ನಿರ್ಧರಿಸಿದೆ. ಹೀಗಾಗಿ ಮುಂಬರೋ ಎಲ್ಲಾ ಹಬ್ಬಗಳಿಗೂ ಬ್ರೇಕ್ ಬೀಳಲಿದ್ದು ಮಾರ್ಕೇಟ್ ವ್ಯಾಪಾರ ವ್ಯವಹಾರಕ್ಕೂ ಹೊಸ ರೂಲ್ಸ್ ಜಾರಿಯಾಗೋದು ಪಕ್ಕಾ ಆಗಿದೆ.


ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.

Published by:HR Ramesh
First published: