ಬೆಳಗಾವಿ : ಬೆಳಗಾವಿ ಪಾಲಿಕೆ ಚುನಾವಣೆ ಸಂಬಂಧ ಎಎಂಐಎಂ ರಾಷ್ಟ್ರೀಯ ಅಧ್ಯಕ್ಷ ಅಸಾದುದ್ದೀನ ಓವೈಸಿ ಜಿಲ್ಲೆಗೆ ಭೇಟಿ ನೀಡಿ ತಮ್ಮ ಅಭ್ಯರ್ಥಿಗಳ ಪರ ಪ್ರಚಾರ ನಡೆಸಿದರು. ಬಳಿಕ ಮಾತನಾಡಿದ ಅವರು ಬೆಳಗಾವಿ ಪಾಲಿಕೆ ಚುನಾವಣೆಯಲ್ಲಿ ಗೆಲ್ಲುವುದೇ ನಮ್ಮ ರಣತಂತ್ರ. ಜನರ ವಿಶ್ವಾಸ ಗಳಿಸುವುದು, ಅವರ ಹೃದಯದಲ್ಲಿ ಪ್ರೀತಿ ಗಳಿಸುವುದು, ತಳಮಟ್ಟದಲ್ಲಿ ಪಕ್ಷವನ್ನು ಗಟ್ಟಿ ಮಾಡುವುದೇ ನಮ್ಮ ಅಜೆಂಡಾ ಅಂದರು. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಜೊತೆಗೆ ಹೊಂದಾಣಿಕೆ ಮಾಡಿಕೊಂಡಿದ್ದೆವು. ಹೀಗಾಗಿ ನಾವು ಅಭ್ಯರ್ಥಿಗಳನ್ನ ಕಣದಲ್ಲಿ ಹಾಕಲಿಲ್ಲ, ನಂತರ ನನಗೆ ಮನವರಿಕೆ ಆಯ್ತು. ಕಾಂಗ್ರೆಸ್ ಜೊತೆ ಜೆಡಿಎಸ್ ಮೈತ್ರಿ ಮಾಡಿಕೊಂಡು ತಪ್ಪು ಮಾಡಿತು ಎಂದು.
ಅಂದು ಎಚ್.ಡಿ.ಕುಮಾರಸ್ವಾಮಿ ನನಗೆ ಕರೆ ಮಾಡಿ ಪ್ರಮಾಣವಚನ ಸಭಾರಂಭಕ್ಕೆ ಬರಲು ಆಹ್ವಾನಿಸಿದ್ರು. ಆಗಲೇ ಅವರಿಗೆ ಹೇಳಿದ್ದೆ, ನೀವು ಬಹಳ ದೊಡ್ದ ತಪ್ಪು ಮಾಡುತ್ತಿದ್ದೀರಿ ಅಂತ. ಇದು ನಿಮ್ಮ ಪಕ್ಷಕ್ಕೂ ಹಾನಿ ಆಗುತ್ತೆ, ನಿಮಗೆ ವೋಟು ಹಾಕಿದ ಮತದಾರರಿಗೆ ನಿರಾಸೆ ಆಗುತ್ತದೆ ಎಂದು ಎಚ್ಚರಿಸಿದ್ದೆ. ಆದರೆ ಅವರು ಮೈತ್ರಿ ಸರ್ಕಾರ ರಚಿಸಿದರು. ನಂತರ ಏನಾಯ್ತು ಅಂತ ಎಲ್ಲರಿಗೂ ತಿಳಿದಿದೆ. ಇದೇ ಕಾರಣಕ್ಕೆ ಪಾಲಿಕೆ ಚುನಾವಣೆಯಲ್ಲಿ ಹೊಂದಾಣಿಕೆ ಮಾಡಿಕೊಂಡಿಲ್ಲ ಎಂದು ಓವೈಸಿ ಸ್ಪಷ್ಟನೆ ನೀಡಿದರು.
ಇನ್ನು ಅಫ್ಘಾನಿಸ್ತಾನ ಬಿಕ್ಕಟ್ಟಿನ ಬಗ್ಗೆ ಪ್ರಶ್ನಿಸಿದ್ದಕ್ಕೆ ಓವೈಸಿ ಸಿಡಿಮಿಡಿಗೊಂಡರು. ನಾನೇನು ಹೇಳಲಿ ಅಫ್ಘಾನಿಸ್ತಾನದ ಬಗ್ಗೆ ಅಣ್ಣಾ.. ನನಗೇನು ಸಂಬಂಧವಿದೆ ಅಫ್ಘಾನಿಸ್ತಾನದ ಜೊತೆ? ನನ್ನ ತವರು ಮನೆಯೂ ಅಲ್ಲ, ನಮ್ಮವರು ಯಾರು ಅಲ್ಲಿಗೆ ಹೋಗಿಲ್ಲ. ನನಗೂ ಅಫ್ಘಾನಿಸ್ತಾನಕ್ಕೂ ಸಂಬಂಧವೇ ಇಲ್ಲ. ಅಫ್ಘಾನಿಸ್ತಾನದಲ್ಲಿ ಏನಾಗುತ್ತಿದೆ ಅನ್ನೋದನ್ನ ಮೋದಿಯವರನ್ನ ಕೇಳಿ. 20 ವರ್ಷದಲ್ಲಿ ಮೂರು ಬಿಲಿಯನ್ ಹಣವನ್ನ ಖರ್ಚು ಮಾಡಿದ್ರು. ಅಲ್ಲಿನ ವಿದ್ಯಾರ್ಥಿಗಳಿಗೆ ಕರೆಸಿ ಶಿಕ್ಷಣ, ಮಿಲಿಟರಿ ಅಕಾಡೆಮಿಯಲ್ಲಿ ತರಬೇತಿ ನೀಡಿದ್ದಾರೆ. ಈ ರೀತಿ 17 ಸಾವಿರ ಜನರಿಗೆ ತರಬೇತಿ ನೀಡಿದ್ದೇವೆ, ಇವರು ಎಲ್ಲದಕ್ಕೂ ಕಾದು ನೋಡಿ ಅಂತಾ ಹೇಳ್ತಾರೆ. ಬೆಲೆ ಏರಿಕೆ ಆಯ್ತು, ಎಲ್ಲದಕ್ಕೂ ವೇಯ್ಟ್ ಆಂಡ್ ವಾಚ್ ಅಂತಾರೆ ಎಂದು ಪ್ರಧಾನಿ ಮೋದಿ ಸರ್ಕಾರದ ವಿರುದ್ಧ ಕಿಡಿಕಾರಿದ್ರು.
ಇದನ್ನೂ ಓದಿ: BS Yediyurappa: ಬಿಎಸ್ವೈ ರಾಜ್ಯ ಪ್ರವಾಸ: ಪ್ರಭಾವಿ ನಾಯಕನ ಮೇಲೆ ಕಣ್ಣಿಟ್ಟ ಬಿಜೆಪಿ ಹೈಕಮಾಂಡ್
ಕೊನೆಯಲ್ಲಿ ನನ್ನ ಮೇಲೆ, ನಮ್ಮ ಪಕ್ಷದ ಮೇಲೆ ನಂಬಿಕೆ ಇಟ್ಟು ಮತವನ್ನ ಹಾಕಿ ಎಂದು ಅಸಾದುದ್ದೀನ ಓವೈಸಿ ಬೆಳಗಾವಿ ಮತದಾರರಲ್ಲಿ ಮನವಿ ಮಾಡಿದ್ರು.
ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ