• ಹೋಂ
  • »
  • ನ್ಯೂಸ್
  • »
  • state
  • »
  • Belagavi: ಬೆಳಗಾವಿಯಲ್ಲಿ ಯೋಧನ ಕುಟುಂಬಕ್ಕೆ ಗ್ರಾಮಸ್ಥರಿಂದ ಬಹಿಷ್ಕಾರ ಆರೋಪ !

Belagavi: ಬೆಳಗಾವಿಯಲ್ಲಿ ಯೋಧನ ಕುಟುಂಬಕ್ಕೆ ಗ್ರಾಮಸ್ಥರಿಂದ ಬಹಿಷ್ಕಾರ ಆರೋಪ !

ಸೈನಿಕನ ಕುಟುಂಬ

ಸೈನಿಕನ ಕುಟುಂಬ

ಬೆಳಗಾವಿ ತಾಲೂಕಿನ ಗೌಂಡವಾಡ ಗ್ರಾಮದ ಯೋಧ ದೀಪಕ್ ಪಾಟೀಲ್ ಗ್ರಾಮಸ್ಥರ ವಿರುದ್ಧ ಬಹಿಷ್ಕಾರ ಆರೋಪ ಮಾಡಿದ್ದಾರೆ. ಇಂದು ಬೆಳಗಾವಿ ಜಿಲ್ಲಾಧಿಕಾರಿ ಕಚೇರಿಗೆ ಸಮವಸ್ತ್ರ ಧರಸಿಕೊಂಡು ಕುಟುಂಬ ಸಮೇತರಾಗಿ ಬಂದು ತಮ್ಮಗೆ ಆಗಿರೋ ಅನ್ಯಾಯದ ಬಗ್ಗೆ ದೂರು ನೀಡಿದ್ದಾರೆ.

  • Share this:

ಬೆಳಗಾವಿ: ದೇಶಕ್ಕಾಗಿ ಸೇವೆ ಸಲ್ಲಿಸೋ ಯೋಧರು ಎಂದರೇ ಎಲ್ಲರಿಗೂ ಗೌರವ. ಆದರೇ ಬೆಳಗಾವಿ ಜಿಲ್ಲೆಯಲ್ಲಿ ಯೋಧನ ಕುಟುಂಬಕ್ಕೆ ಬಹಿಷ್ಕಾರ ಹಾಕಿರೋ ಆರೋಪ ಕೇಳಿ ಬಂದಿದೆ. ಇಂದು ಸ್ವತಃ ಯೋಧ ಕುಟುಂಬ ಸಮೇತರಾಗಿ ಬಂದು ಜಿಲ್ಲಾಧಿಕಾರಿಗೆ ದೂರು ನೀಡಿದ್ದಾರೆ. ಗ್ರಾಮದಲ್ಲಿ ನಮ್ಮ ಜತೆಗೆ ಮಾತನಾಡಿದವರಿಗೆ ದಂಡ ವಿಧಿಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ. ಅಷ್ಟಕ್ಕೂ ಗ್ರಾಮದಲ್ಲಿ ಯೋಧನ ಕುಟುಂಬಕ್ಕೆ ಬಹಿಷ್ಕಾರ ಹಾಕಲು ಕಾರಣವಾಗಿದ್ದು ಜಮೀನು ವಿವಾದ.


ಬೆಳಗಾವಿ ತಾಲೂಕಿನ ಗೌಂಡವಾಡ ಗ್ರಾಮದ ಯೋಧ ದೀಪಕ್ ಪಾಟೀಲ್ ಗ್ರಾಮಸ್ಥರ ವಿರುದ್ಧ ಬಹಿಷ್ಕಾರ ಆರೋಪ ಮಾಡಿದ್ದಾರೆ. ಇಂದು ಬೆಳಗಾವಿ ಜಿಲ್ಲಾಧಿಕಾರಿ ಕಚೇರಿಗೆ ಸಮವಸ್ತ್ರ ಧರಸಿಕೊಂಡು ಕುಟುಂಬ ಸಮೇತರಾಗಿ ಬಂದು ತಮ್ಮಗೆ ಆಗಿರೋ ಅನ್ಯಾಯದ ಬಗ್ಗೆ ದೂರು ನೀಡಿದ್ದಾರೆ. ಗ್ರಾಮದ ಪಂಚ ಕಮೀಟಿ ವಿರುದ್ಧ ಯೋಧ ದೀಪಕ್ ಪಾಟೀಲ್ ಅನೇಕ ಆರೋಪ ಮಾಡಿದ್ದಾರೆ. ದೀಪಕ್ ಪಾಟೀಲ್ ಸಂಬಂಧಿ ಅಶೋಕ್ ಪಾಟೀಲ್  ಹಾಗೂ ಗ್ರಾಮದ ಪಂಚ ಕಮೀಟಿ ನಡುವೆ ಜಮೀನು ವಿವಾದ ಇದೆ. ನಾನು ಅಶೋಕ್ ಪಾಟೀಲ್ ಬೆಂಬಲಿಸಿರೋದ್ರಿಂದ ನನ್ನ ಕುಟುಂಬವನ್ನು ಗ್ರಾಮಸ್ಥರು ಬಹಿಷ್ಕಾರ ಹಾಕಿದ್ದಾರೆ ಎಂದು ದೀಪಕ್ ಪಾಟೀಲ್ ಆರೋಪಿಸಿದ್ದಾರೆ.


ಇದನ್ನೂ ಓದಿ: Alcohol: ಮದ್ಯವನ್ನು ‘ಎಣ್ಣೆ’ ಎಂದು ಕರೆಯುವುದು ಏಕೆ? ಇದರ ಹಿಂದೆ ಇದೆ ರೋಚಕ ಕತೆ !


ಅಶೋಕ ಪಾಟೀಲ್ ಸೇರಿರೋ ಜಮೀನನ್ನುಗ್ರಾಮದ ಮುಖಂಡರು ಗಣಪತಿ, ಕಲ್ಲೇಶ್ವರ, ಕಾಲಭೈರವ ದೇವಸ್ಥಾನಕ್ಕೆ ಸೇರಿದ ಜಮೀನು ಎನ್ನುತ್ತಿರುವ ಗ್ರಾಮಸ್ಥರು. ಆದರೆ‌ ಜಮೀನು ತಮ್ಮ ಸಂಬಂಧಿಗೆ ಸೇರಿದ ಬಗ್ಗೆ ದಾಖಲೆ ಇದೆ. ಸದ್ಯ ನ್ಯಾಯಾಲಯದಲ್ಲಿ ಇರುವ ಜಮೀನು ವಿವಾದ, ಸುಮಾರು ಐದು ಎಕರೆ ಜಮೀನು ಸಂಬಂಧ ಹಲವು ವರ್ಷಗಳಿಂದ ವಿವಾದ ಏರ್ಪಟಿದೆ. 2020ರ ನವೆಂಬರ್ 30ರಂದು ನಮ್ಮ ಮನೆ ಮೇಲೆ ದಾಳಿ ಮಾಡಿದ್ರು. ಈಗ ಮತ್ತೆ ಜೂನ್ 6ರಂದು ಮತ್ತೆ ಯೋಧನ ಮನೆಗೆ ನುಗ್ಗಿ ದಾಂಧಲೆ ಮಾಡಿದ್ದಾರೆ. ಗೌಂಡವಾಡ ಗ್ರಾಮದ ಪಂಚಕಮೀಟಿ ಹಾಗೂ ಇತರ 50 ರಿಂದ 60 ಜನರ ತಂಡದಿಂದ ದಾಳಿ ನಡೆದಿದೆ ಎಂದು ಯೋಧನ ಆರೋಪವಾಗಿದೆ.


ಯೋಧ ದೀಪಕ್‌ಗೆ ಸೇರಿದ ರೈಸ್ ಮಿಲ್ ಮೇಲೆ ದಾಳಿ‌ ಮಾಡಿ ಬೆಂಕಿ ಹಚ್ಚಿ ದಾಂಧಲೆ ನಡೆಸಲಾಗಿದ್ದು, ಮನೆಗೆ ನುಗ್ಗಿ ಪೀಠೋಪಕರಣಗಳನ್ನು ಧ್ವಂಸ ಮಾಡಿದೆ. ಈ ಕುರಿತು 16 ಜನರ ವಿರುದ್ಧ ಕಾಕತಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲು ಮಾಡಲಾಗಿದೆ. ಪೊಲೀಸರಿಗೆ ದೂರು ನೀಡಿದರೂ ಕ್ರಮ ಕೈಗೊಳ್ಳುತ್ತಿಲ್ಲವೆಂದು ಯೋಧನ ಕುಟುಂಬಸ್ಥರ ಆರೋಪ. ನ್ಯಾಯ ಕೊಡಿಸುವಂತೆ ಕುಟುಂಬ ಸಮೇತ ಬೆಳಗಾವಿ ಡಿಸಿ ಕಚೇರಿಗೆ ಆಗಮಿಸಿದ ಯೋಧ ದೀಪಕ್ ಪಾಟೀಲ್, ತಮ್ಮ ಕುಟುಂಬಕ್ಕೆ ರಕ್ಷಣೆ ನೀಡುವಂತೆ ಮನವಿ ಮಾಡಿದ್ದಾರೆ. ಗಲಾಟೆ ನಡೆದ ಗ್ರಾಮಕ್ಕೆ ನಿನ್ನೆ ಸ್ಥಳೀಯ ಶಾಸಕ ಸತೀಶ ಜಾರಕಿಹೊಳಿ ಭೇಟಿ ನೀಡಿ ಮಾತುಕತೆ ನಡೆಸಿದ್ದರು. ಎರಡು ಗುಂಪುಗಳ ನಡುವೆ ಸಂಧಾನ ನಡೆಸುವ ಪ್ರಯನ್ನ ಮಾಡಿದ್ದರು. ಆದರೇ ಇಂದು ಯೋಧ ಮತ್ತೆ ಜಿಲ್ಲಾಧಿಕಾರಿಗೆ ದೂರು ನೀಡಿದ್ದು, ಪ್ರಕರಣ ಇದೀಗ ಬೇರೆ ಸ್ವರೂಪ ಪಡೆದುಕೊಂಡಿದೆ.


ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ತಮ್ಮ ತಮ್ಮ ಸರದಿ ಬಂದಾಗ ತಪ್ಪದೇ ಲಸಿಕೆ ಪಡೆಯಬೇಕು. ಈಗಿನ ಪರಿಸ್ಥಿತಿಯಲ್ಲಿ ಲಸಿಕೆ ಒಂದೇ ಸೋಂಕಿನ ವಿರುದ್ಧ ಹೋರಾಡುವ ಮಾರ್ಗವಾಗಿದೆ. ಅತ್ಯಗತ್ಯವಿದ್ದರೆ ಮಾತ್ರವೇ ಮನೆಯಿಂದ ಹೊರಗೆ ಹೋಗುವ ಅಭ್ಯಾಸ ರೂಢಿಸಿಕೊಳ್ಳಬೇಕು.

First published: