Good News: ಸಾರಿಗೆ ಸಿಬ್ಬಂದಿಗಳಿಗೆ ಸಿಹಿ ಸುದ್ದಿ ನೀಡಿದ ಸಾರಿಗೆ ಸಚಿವ ಶ್ರೀರಾಮುಲು: ವಜಾ ಆಗಿದ್ದ ಎಲ್ಲಾ ಸಿಬ್ಬಂದಿಗಳ ಮರುನೇಮಕ!

ಸಾರಿಗೆ ಸಿಬ್ಬಂದಿಗಳ ಬೇಡಿಕೆಗೆ ಸ್ಪಂದಿಸುವ ಕೆಲಸ ಮಾಡಲಾಗುತ್ತದೆ.  ನಮ್ಮ ಶಕ್ತಿ ಸಾರಿಗೆ ಇಲಾಖೆ ಸಿಬ್ಬಂದಿಗಳು. ಹೀಗಾಗಿ ಸಾರಿಗೆ ಇಲಾಖೆಯ ಸಿಬ್ಬಂದಿಗಳಿಗೆ ಸಂಬಳದಲ್ಲಿ ಯಾರಿಗೂ ತೊಂದರೆ ಆಗದಂತೆ ಅನುದಾನ ಕೊಡಲಾಗುವುದು. ಹೊಸ ಬದಲಾವಣೆಗೆ ಮುನ್ನುಡಿ ಬರೆಯೋಣ ಎಂದು ಸಚಿವ ಶ್ರೀರಾಮುಲು ಕರೆ ನೀಡಿದರು.

ಬಿ ಶ್ರೀರಾಮುಲು

ಬಿ ಶ್ರೀರಾಮುಲು

  • Share this:
ಚಿಕ್ಕೋಡಿ: ಈ ಹಿಂದೆ ಮಾಜಿ ಸಚಿವ ಲಕ್ಷಣ ಸವದಿ (Laxman Savadi) ಸಾರಿಗೆ ಸಚಿವರಾಗಿದ್ದಾಗ ಸಾರಿಗೆ ನೌಕರರು ದೀರ್ಘ ಕಾಲದ ಮುಷ್ಕರ (Transport Strike) ನಡೆಸಿದ್ದು ನಮಗೆಲ್ಲಾ ತಿಳಿದಿರುವ ವಿಚಾರ. ಅಂದು ಸಾರಿಗೆ ನೌಕರರ ಬೇಡಿಕೆಗಳನ್ನು ತಕ್ಷಣವೇ ಈಡೇರಿಸಲು ಆಗದೆ ನೂರಾರು ಸಾರಿಗೆ ನೌಕರರನ್ನು ಅಂದಿನ ಯಡಿಯೂರಪ್ಪ ನೇತೃತ್ವದ ಸರ್ಕಾರ ವಜಾ ಮಾಡುವ ಮೂಲಕ ಸಾರಿಗೆ ಸಿಬ್ಬಂದಿಗಳ ಮೇಲೆ ಒತ್ತಡ ಹಾಕಿತ್ತು. ನೂರಾರು ನೌಕರರನ್ನ ವಜಾ ಮಾಡಿದ ಬೆನ್ನಲೆ ಒಬ್ಬೊಬ್ಬರಾಗಿ ನೌಕರರು ಸರ್ಕಾರ ಬಿಗಿ ಪಟ್ಟಿಗೆ ಮಣಿದು ಕೆಲಸಕ್ಕೆ ಹಾಜರಾಗಿದ್ದರು. ಅಂದಿನಿಂದಲು ಇವತ್ತಿನವರೆಗೆ ಮತ್ತೆ ವಜಾಗೊಂಡಿದ್ದ ಸಿಬ್ಬಂದಿಯನ್ನು ಕೆಲಸಕ್ಕೆ ವಾಪಸ್  ನೇಮಿಸಬೇಕು ಎಂಬ ಕೂಗು ಕೇಳಿ ಬರುತ್ತಲೇ ಇತ್ತು.

ಸದ್ಯ ಯಡಿಯೂರಪ್ಪ ಬಳಿಕ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಯಾಗಿದ್ದು ಸಾರಿಗೆ ಸಚಿವರಾಗಿ ಬಿ. ಶ್ರೀರಾಮುಲು (Transport Minister B Sriramulu) ಅಧಿಕಾರದಲ್ಲಿ ಇದ್ದಾರೆ. ಸದ್ಯ ಬಿ ಶ್ರೀರಾಮಲು ಸಾರಿಗೆ ಸಿಬ್ಬಂದಿಗೆ ಸಿಹಿ ಸುದ್ದಿ ನೀಡಿದ್ದು ಯಾವುದೇ ಕಂಡಿಷನ್ ಇಲ್ಲದೆ ವಜಾ ಆಗಿದ್ದ ಸಾರಿಗೆ ನೌಕರರನ್ನು ಮತ್ತೆ ಕೆಲಸಕ್ಕೆ ಸೇರಿಸಿಕೊಳ್ಳಲು ಮುಂದಾಗಿದ್ದಾರೆ. ಇದೇ ವಿಚಾರದಲ್ಲಿ ಚಿಕ್ಕೋಡಿಯಲ್ಲಿ ಶನಿವಾರ ಮಾತನಾಡಿರುವ ಸಚಿವ ಶ್ರೀರಾಮಲು ಮುಖ್ಯಮಂತ್ರಿಗಳ ಜೊತೆ ಚರ್ಚೆ ನಡೆಸಲಾಗಿದೆ. ಮುಷ್ಕರದಲ್ಲಿ ಭಾಗಿಯಾಗಿ ಶಿಕ್ಷೆಗೆ ಗುರಿಯಾಗಿದ್ದ ಎಲ್ಲಾ ಸಿಬ್ಬಂದಿಗಳನ್ನು ಮರು ನೇಮಕ ಮಾಡಿಕೊಳ್ಳುಲು ಸೂಚನೆ ನೀಡಿದ್ದಾರೆ. ಈಗಾಗಲೇ ಬೇರೆಡೆಗೆ ವರ್ಗಾವಣೆ ಆಗಿದ್ದಲ್ಲಿ ಅಂತಹ ಸಿಬ್ಬಂದಿಗಳನ್ನು ಯಾವುದೇ ಕಂಡಿಷನ್ ಇಲ್ಲದೆ ಮತ್ತೆ ತಮ್ಮ ಕಾರ್ಯಕ್ಷೇತ್ರಕ್ಕೆ ಮರು ನೇಮಕ ಮಾಡುವಂತೆ ಸೂಚನೆ ನೀಡಿದ್ದೇನೆ. ಮುಷ್ಕರ ನಡೆಸುತ್ತಿರುವ ಸಿಬ್ಬಂದಿಗಳಿಗೆ ಈ ಮೂಲಕ ಮನವಿ ಮಾಡಿಕೊಳ್ಳುತ್ತೇನೆ. ಮುಷ್ಕರದಿಂದ ಯಾರಿಗೂ ತೊಂದರೆ ಆಗಬಾರದು. ಸರ್ಕಾರ ಇಕ್ಕಟ್ಟಿಗೆ ಸಿಲುಕಬಾರದು. ಆ ರೀತಿಯಲ್ಲಿ ಎಲ್ಲರೂ ನಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.

ಸಾರಿಗೆ ಸಿಬ್ಬಂದಿಗಳ ಬೇಡಿಕೆಗೆ ಸ್ಪಂದಿಸುವ ಕೆಲಸ ಮಾಡಲಾಗುತ್ತದೆ.  ನಮ್ಮ ಶಕ್ತಿ ಸಾರಿಗೆ ಇಲಾಖೆ ಸಿಬ್ಬಂದಿಗಳು. ಹೀಗಾಗಿ ಸಾರಿಗೆ ಇಲಾಖೆಯ ಸಿಬ್ಬಂದಿಗಳಿಗೆ ಸಂಬಳದಲ್ಲಿ ಯಾರಿಗೂ ತೊಂದರೆ ಆಗದಂತೆ ಅನುದಾನ ಕೊಡಲಾಗುವುದು. ಹೊಸ ಬದಲಾವಣೆಗೆ ಮುನ್ನುಡಿ ಬರೆಯೋಣ ಎಂದು ಸಚಿವ ಶ್ರೀರಾಮುಲು ಕರೆ ನೀಡಿದರು.

ಇನ್ನು ಇದೇ ವೇಳೆ ಕಾಂಗ್ರೆಸ್ ನಾಯಕರ ಮೇಲೆ ಹರಿಹಾಯ್ದ ಶ್ರೀ ರಾಮುಲು ಪ್ರಧಾನಿ ನರೇಂದ್ರ ಮೋದಿ ಅವರು ಮತ್ತು ಬೊಮ್ಮಾಯಿ ಅವರು ಡಬಲ್ ಇಂಜಿನ್ ಸರ್ಕಾರವಾಗಿ ದೇಶ ಹಾಗೂ ರಾಜ್ಯವನ್ನು ಅಭಿವೃದ್ದಿ ಮಾಡುತ್ತಿದ್ದಾರೆ. ಕಾಂಗ್ರೆಸ್ಸ್ ಪಕ್ಷವನ್ನು ದೇಶದ ಜನ ಹಾಗೂ ರಾಜ್ಯದ ಜನ ತಿರಸ್ಕಾರ ಮಾಡಿದ್ದಾರೆ. ಹುಬ್ಬಳ್ಳಿ, ಬೆಳಗಾವಿ ನಗರಸಂಸ್ಥೆಗಳ ಚುನಾವಣೆಯಲ್ಲೂ ಸಹ ಇದು ಪ್ರೂವ್ ಆಗಿದೆ. ಕಾಂಗ್ರೆಸ್ ಪಕ್ಷದಲ್ಲಿ ಡಬಲ್ ಕೂಡ ಇದ್ದಾರೆ ಟ್ರಬಲ್ ಕೂಡ ಇದ್ದಾರೆ.  2023 ರಲ್ಲಿ ಮತ್ತೆ ಬಿಜೆಪಿ ಸಂಪೂರ್ಣ ಬಹುಮತದಿಂದ ಅಧಿಕಾರಕ್ಕೆ ಬರುತ್ತದೆ ಎಂದು ಸಚಿವ ಶ್ರೀ ರಾಮುಲು ಭವಿಷ್ಯ ನುಡಿದರು.

ಇದನ್ನು ಓದಿ: CM Basavaraja Bommai: ಜನರ ಸುತ್ತಲೂ ಅಭಿವೃದ್ಧಿ ಆಗಬೇಕು, ಅಭಿವೃದ್ಧಿ ಸುತ್ತಲೂ ಜನರು ಓಡಾಡಬೇಕು; ಸಿಎಂ ಬಸವರಾಜ ಬೊಮ್ಮಾಯಿ

ಸೋಮವಾರ ಭಾರತ್ ಬಂದ್ ಹಿನ್ನಲೆ; ಬಸ್ ಬಂದ್ ಮಾಡಲ್ಲ

ಕಾಂಗ್ರೆಸ್ ನಾಯಕರು ರಾಜಕಾರಣದಲ್ಲಿ ಬೆಳೆಯಬೇಕು ಎಂದು ಜನರನ್ನು ದಾರಿ ತಪ್ಪಿಸುತ್ತಿದ್ದಾರೆ. ಅವರು ಕರೆ ನೀಡಿರುವ ಬಂದ್​ ಗೆ ನಾವು ಬೆಂಬಲ ವ್ಯಕ್ತಪಡಿಸುವ ಅಗತ್ಯ ಇಲ್ಲ. ಎಲ್ಲಾ ಸರ್ಕಾರಿ ಬಸ್ಸುಗಳು ಅಂದು ಚಾಲ್ತಿಯಲ್ಲಿರಲಿವೆ. ಅನೇಕ ಸುಧಾರಣೆಗಳನ್ನು ಕೇಂದ್ರ ಸರ್ಕಾರ ಮಾಡಿಕೊಂಡು ಬಂದಿದೆ. ರೈತರನ್ನು ದಾರಿ ತಪ್ಪಿಸುವ ಕೆಲಸ ಕಾಂಗ್ರೆಸ್ ಪಕ್ಷ  ಮಾಡುತ್ತಿದೆ. ನಿಜವಾದ ರೈತರು ನಮ್ಮ ಪರವಾಗಿದ್ದಾರೆ.‌ ಬಿಳಿ ಬಟ್ಟೆ ಹಾಕಿಕೊಳ್ಳುವ ರೈತರು ಕಾಂಗ್ರೆಸ್ ಪಕ್ಷದ ಬೆಂಬಲಕ್ಕೆ ನಿಂತಿದ್ದಾರೆ ಎಂದು ರಾಮುಲು ವ್ಯಂಗ್ಯವಾಡಿದರು.
Published by:HR Ramesh
First published: