Karnataka-Maharashtra Border: "ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರುವವರೆಗೂ ಹೋರಾಟ" ಎಂದ 'ಮಹಾ' ಡಿಸಿಎಂ, ಇತ್ತ ಮತ್ತೆ ಎಂಇಎಸ್ ಕಿರಿಕ್!

"ಬೆಳಗಾವಿ, ನಿಪ್ಪಾಣಿ ಸೇರಿದಂತೆ ಮರಾಠಿ ಮಾತನಾಡುವ ಪ್ರದೇಶಗಳು ಮಹಾರಾಷ್ಟ್ರಕ್ಕೆ ಸೇರುವವರೆಗೂ ನಾವು ಹೋರಾಟ ನಡೆಸುತ್ತವೇ ಇರುತ್ತೇವೆ" ಅಂತ 'ಮಹಾ' ಡಿಸಿಎಂ ಅಜಿತ್ ಪವಾರ್ ಹೇಳಿದ್ದಾರೆ. ಇದರ ಬೆನ್ನಲ್ಲೇ ಕರ್ನಾಟಕದ ಗಡಿ ಪ್ರದೇಶಗಳನ್ನು ಮಹಾರಾಷ್ಟ್ರಕ್ಕೆ ಸೇರಿಸಿದ ನಕಾಶೆಯನ್ನು ಎಂಇಎಸ್ ನಾಯಕ ಸೋಶಿಯಲ್ ಮೀಡಿಯಾಗಳಲ್ಲಿ ಶೇರ್ ಮಾಡಿದ್ದಾನೆ.

ಮಹಾರಾಷ್ಟ್ರ ಡಿಸಿಎಂ ಅಜಿತ್ ಪವಾರ್

ಮಹಾರಾಷ್ಟ್ರ ಡಿಸಿಎಂ ಅಜಿತ್ ಪವಾರ್

  • Share this:
ಪುಣೆ, ಮಹಾರಾಷ್ಟ್ರ: ಕರ್ನಾಟಕ (Karnataka) ಮತ್ತು ಮಹಾರಾಷ್ಟ್ರ (Maharashtra) ನಡುವಿನ ಗಡಿ ಗಲಾಟೆ (Border Dispute) ಇಂದು ನಿನ್ನೆಯದ್ದಲ್ಲ. ಉಭಯ ರಾಜ್ಯಗಳ ಈ ಸಂಘರ್ಷಕ್ಕೆ (Conflict) ಹಲವು ದಶಕಗಳ ಇತಿಹಾಸವೇ (History) ಇದೆ. ಆಗಾಗ ಮಹಾರಾಷ್ಟ್ರದ ರಾಜಕೀಯ ನಾಯಕರು, ಸಂಘಟನೆ ನಾಯಕರು ಬೆಳಗಾವಿ (Belagavi) ಗಡಿ ವಿವಾದದ ಕುರಿತಂತೆ ವಿವಾದಾತ್ಮಕ ಹೇಳಿಕೆ (Controversial Statement) ನೀಡುತ್ತಲೆ ಇರುತ್ತಾರೆ. ಇದೀಗ ಮಹಾರಾಷ್ಟ್ರ ಉಪ ಮುಖ್ಯಮಂತ್ರಿ (DCM) ಅಜಿತ್ ಪವಾರ್ (Ajit Pawar) ಸರದಿ. ಬೆಳಗಾವಿ, ನಿಪ್ಪಾಣಿ (Nippani) ಸೇರಿದಂತೆ ಮರಾಠಿ (Marathi) ಮಾತನಾಡುವ ಪ್ರದೇಶಗಳನ್ನು ಮಹಾರಾಷ್ಟ್ರಕ್ಕೆ ಸೇರಿಸುವವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ ಅಂತ ಅಜಿತ್ ಪವಾರ್ ಹೇಳಿದ್ದಾರೆ. ಮತ್ತೊಂದೆಡೆ ಎಂಇಎಸ್‌ ನಾಯಕರು (MES Leaders) ಭಾಷಾ ವಿರೋಧಿ ಹೇಳಿಕೆ ನೀಡಿ, ವಿಡಿಯೋ ರಿಲೀಸ್ (Video Release) ಮಾಡಿದ್ದಾರೆ.

“ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರುವವರೆಗೂ ಹೋರಾಟ”

ಮಹಾರಾಷ್ಟ್ರದ ಪುಣೆಯಲ್ಲಿ ನಡೆದ ಮಹಾರಾಷ್ಟ್ರ ಸಂಸ್ಥಾಪನಾ ದಿನದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಡಿಸಿಎಂ ಅಜಿತ್ ಪವಾರ್, ಬೆಳಗಾವಿ ಗಡಿ ವಿವಾದದ ಕುರಿತಂತೆ ಮಾತನಾಡಿದ್ದಾರೆ. ಮರಾಠಿ ಭಾಷಿಕರ ಪ್ರದೇಶಗಳನ್ನು ಮಹಾರಾಷ್ಟ್ರಕ್ಕೆ ಸೇರಿಸುವ ಹೋರಾಟಕ್ಕೆ ನಾವು ಬೆಂಬಲ ನೀಡುತ್ತೇವೆ. ಬೆಳಗಾವಿ, ನಿಪ್ಪಾಣಿ ಸೇರಿದಂತೆ ಮರಾಠಿ ಮಾತನಾಡುವ ಪ್ರದೇಶಗಳು ಮಹಾರಾಷ್ಟ್ರಕ್ಕೆ ಸೇರುವವರೆಗೂ ನಾವು ಹೋರಾಟ ನಡೆಸುತ್ತವೇ ಇರುತ್ತೇವೆ ಎಂದಿದ್ದಾರೆ.

“ವೀಲಿನ ಸಾಧ್ಯವಾಗದೇ ಇರುವುದಕ್ಕೆ ವಿಷಾದ”

ಮುಂದುವರೆದು ಮಾತನಾಡಿದ ಅಜಿತ್ ಪವಾರ್, 1960ರಲ್ಲಿ ಇದೇ ದಿನ ಪಶ್ಚಿಮ ರಾಜ್ಯ ಮಹಾರಾಷ್ಟ್ರ ರಚನೆಯಾಯಿತು. ಮಹಾರಾಷ್ಟ್ರ ರಚನೆಯಾಗಿ 62 ವರ್ಷಗಳಾಗಿದ್ದು, ಈ ಸಂದರ್ಭದಲ್ಲಿ ಬೀದರ್, ಭಾಲ್ಕಿ, ಬೆಳಗಾವಿ, ಕಾರವಾರ, ನಿಪ್ಪಾಣಿ ಸೇರಿ ಕರ್ನಾಟಕದ ಮರಾಠಿ ಭಾಷಿಕ ಗ್ರಾಮಗಳನ್ನು ವಿಲೀನಗೊಳಿಸಲು ಸಾಧ್ಯವಾಗದೇ ಇರುವುದಕ್ಕೆ ವಿಷಾದ ವ್ಯಕ್ತಪಡಿಸುತ್ತೇನೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: BJP Vs Shivsena: ಹಿಂದುತ್ವದ ಹೆಸರಿನಲ್ಲಿ ಬಾಳ ಠಾಕ್ರೆಗೆ ಮೋಸ ಮಾಡಿರೋದು ಬಿಜೆಪಿ: ಸಿಎಂ ಉದ್ಧವ್ ಠಾಕ್ರೆ

“ಜನರ ಹೋರಾಟದ ಜೊತೆ ಸರ್ಕಾರ ಇರುತ್ತದೆ”

ಕರ್ನಾಟಕದ ಗಡಿಭಾಗದಲ್ಲಿನ ಕೆಲವು ಸ್ಥಳಗಳಲ್ಲಿ ನೆಲೆಸಿರುವ ಜನರು ಸಂಪೂರ್ಣ ಮರಾಠಿ ಮಾತನಾಡುತ್ತಾರೆ. ಇಂತಹ ಪ್ರದೇಶಗಳನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕೆಂದು ಬಹಳ ಕಾಲದಿಂದ ಹೋರಾಟ ನಡೆಯುತ್ತಿದೆ. ಈ ಹೋರಾಟಕ್ಕೆ ಮಹಾರಾಷ್ಟ್ರದ ಜನತೆ ಹಾಗೂ ಸರ್ಕಾರ ಜೊತೆಗಿದೆ ಎಂಬುದನ್ನು ಈ ಸಂದರ್ಭದಲ್ಲಿ ಹೇಳಲು ಇಚ್ಛಿಸುತ್ತೇನೆ. ಆ ಪ್ರದೇಶಗಳು ಮಹಾರಾಷ್ಟ್ರದ ಭಾಗವಾಗುವವರೆಗೆ ನಾವು ಈ ಹೋರಾಟವನ್ನು ಬೆಂಬಲಿಸುತ್ತೇವೆ ಎಂಬ ಭರವಸೆ ನೀಡುತ್ತೇನೆ ಎಂದು ಅಜಿತ್‌ ಪವಾರ್‌ ತಿಳಿಸಿದ್ದಾರೆ.

ಮತ್ತೆ ಕಿರಿಕ್ ಶುರು ಮಾಡಿದ ಎಂಇಎಸ್ ನಾಯಕರು

ಮಹಾರಾಷ್ಟ್ರ ಡಿಸಿಎಂ ಅಜಿತ್ ಪವಾರ್ ಹೇಳಿಕೆ ಬೆನ್ನಲ್ಲೆ ಎಂಇಎಸ್ ಕಿರಿಕ್ ಶುರುಮಾಡಿದೆ. ಗಡಿ ಜಿಲ್ಲೆ ಬೆಳಗಾವಿಯಲ್ಲಿ ದೇಶದ್ರೋಹ ಕೇಸ್ ಕೈ ಬಿಟ್ಟ ಬೆನ್ನಲ್ಲೇ ಪುಂಡಾಟಿಕೆ ಆರಂಭವಾಗಿದೆ. ನಾಡದ್ರೋಹಿ ಎಂಇಎಸ್ ಮುಖಂಡ ಶುಭಂ‌ ಶಳಕೆ ಎಂಬಾತ ಭಾಷಾ ಸಾಮರಸ್ಯ ಕದಡುವ ಹುನ್ನಾರ ನಡೆಸಿದ್ದು, ವಿವಾದಾತ್ಮಕ ವಿಡಿಯೋ ಪೋಸ್ಟ್ ಮಾಡಿದ್ದಾನೆ.

ತನ್ನದೇ ಹೊಸ ನಕಾಶೆ ಪೋಸ್ಟ್ ಮಾಡಿದ ಎಂಇಎಸ್ ನಾಯಕ

ಎಂಇಎಸ್ ಮುಖಂಡ ಶುಭಂ ಶಳಕೆ ತನ್ನ ಫೇಸ್ ಬುಕ್ ನಲ್ಲಿ ಹೊಸದೊಂದು ನಕಾಶೆ ಪೋಸ್ಟ್ ಮಾಡಿದ್ದಾನೆ. ಸಂಪೂರ್ಣ ಸಂಯುಕ್ತ ಮಹಾರಾಷ್ಟ್ರ ಶೀರ್ಷಿಕೆಯಡಿ ನಕ್ಷೆ ಪೋಸ್ಟ್ ಮಾಡಿರುವ ಆತ, ಸಂಯುಕ್ತ ಮಹಾರಾಷ್ಟ್ರ ನಕ್ಷೆಯಲ್ಲಿ ಬೆಳಗಾವಿ, ನಿಪ್ಪಾಣಿ, ಕಾರವಾರ, ಬೀದರ, ಬಾಲ್ಕಿ ಸೇರಿಸಿದ್ದಾನೆ.

“ರಕ್ತದ ಹೋರಾಟಕ್ಕೆ ಮುನ್ನುಡಿ” ಎಂದ ಶುಭಂ

ಮಹಾರಾಷ್ಟ್ರ ವಾದಿಗಳೇ ನಮಗೆ ಮನಃಪೂರ್ವಕವಾಗಿ ಮಹಾರಾಷ್ಟ್ರ ಡೇಗೆ ಶುಭಕೋರಲು ಆಗುತ್ತಿಲ್ಲ. ಸಂಯುಕ್ತ ಮಹಾರಾಷ್ಟ್ರಕ್ಕೆ ಬೆಳಗಾವಿ ರಕ್ತದ ಹೋರಾಟದ ಮುನ್ನುಡಿ ಬರೆದಿದೆ. ಬೆಳಗಾವಿ ಸೇರಿ ಗಡಿ ಭಾಗದ ಮರಾಠಿಗರು ನ್ಯಾಯಕ್ಕಾಗಿ ಕಾಯುತ್ತಿದ್ದೇವೆ ಎಂದು ಶುಭಂ ಶಳಕೆ ಪೋಸ್ಟ್ ಮಾಡಿದ್ದಾನೆ. .

ಇದನ್ನೂ ಓದಿ: Azan: ಮೇ 9ರಿಂದ ಬೆಳಗ್ಗೆ 5 ಗಂಟೆಗೆ ಒಂದು ಸಾವಿರ ದೇವಾಲಯಗಳಲ್ಲಿ ಸುಪ್ರಭಾತ: Pramod Mutalik

ಪವಾರ್ ವಿರುದ್ದ ಎಚ್‌ಡಿಕೆ ಕಿಡಿಕಿಡಿ

ಮಹಾರಾಷ್ಟ್ರ ಡಿಸಿಎಂ ಅಜಿತ್‌ ಪವಾರ್‌ ಉದ್ಧಟತನದ ಹೇಳಿಕೆಗೆ ಕರ್ನಾಟಕದ ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಹಿಂದೆ ಕರ್ನಾಟಕ ಮತ್ತು ಕನ್ನಡಿಗರ ಬಗ್ಗೆ ಕೀಳು ಅಭಿರುಚಿಯ ಹೇಳಿಕೆಗಳನ್ನು ನೀಡಿದ್ದ ಅವರು ಪುನಃ ತಮ್ಮ ನಾಲಿಗೆ ಹರಿಬಿಟ್ಟಿದ್ದಾರೆ. ಇದು ಖಂಡನೀಯ ಎಂದು ಮಾಜಿ ಸಿಎಂ ಎಚ್‌ಡಿಕೆ ಟ್ವೀಟ್‌ ಪ್ರಹಾರ ನಡೆಸಿದ್ದಾರೆ.
Published by:Annappa Achari
First published: