• Home
  • »
  • News
  • »
  • state
  • »
  • ಇದು ರೀಲ್ ಅಲ್ಲ, ರಿಯಲ್ 'Jogi' ಕಥೆ! "ಎಲ್ಲಿದ್ದೀಯೋ ಕೂಸೇ" ಅಂತ ಮಗನನ್ನು ಹುಡುಕುತ್ತಿದ್ದಾಳೆ ಈ ತಾಯಿ

ಇದು ರೀಲ್ ಅಲ್ಲ, ರಿಯಲ್ 'Jogi' ಕಥೆ! "ಎಲ್ಲಿದ್ದೀಯೋ ಕೂಸೇ" ಅಂತ ಮಗನನ್ನು ಹುಡುಕುತ್ತಿದ್ದಾಳೆ ಈ ತಾಯಿ

ಮಗನನ್ನು ಹುಡುಕಿಕೊಡುವಂತೆ ವೃದ್ಧೆಯ ಮನವಿ

ಮಗನನ್ನು ಹುಡುಕಿಕೊಡುವಂತೆ ವೃದ್ಧೆಯ ಮನವಿ

ಇದನ್ನ ಓದಿದ್ರೆ "ಅಯ್ಯೋ ದೇವರೇ, ನೀನೂ ಇದ್ದರೆ ಇಂತಾ ಶಿಕ್ಷೆ ಪಾಪಿಗೂ ಕೊಡಬೇಡ" ಅಂತ ನೀವು ಕಣ್ಣೀರು ಇಡ್ತೀರಿ. 'ಜೋಗಿ' ಸಿನಿಮಾದಲ್ಲಿ 'ಭಾಗ್ಯಕ್ಕ' 'ಮಾದೇಸ'ನ ಹುಡ್ಕೊಂಡು ಹೋದಳು. ರಿಯಲ್ ಕಥೆಯಲ್ಲಿ ಈ ಅಜ್ಜಿ ಮಗನಿಗಾಗಿ ಹುಡುಕುತ್ತಾ ಕಣ್ಣೀರಿಡುತ್ತಿದ್ದಾಳೆ. ಏನಿದು ಅಜ್ಜಿಯ ಸಂಕಷ್ಟದ ಕಥೆ ಅಂತ ನೀವೇ ಓದಿ...

ಮುಂದೆ ಓದಿ ...
  • Share this:

ಬೆಳಗಾವಿ: ನೀವೆಲ್ಲ ಶಿವರಾಜ್‌ ಕುಮಾರ್ (Shivarajkumar) ಅಭಿನಯದ ‘ಜೋಗಿ’ (Jogi) ಸಿನಿಮಾವನ್ನು (Cinema) ನೋಡೇ ಇರ್ತೀರಿ. ತಾಯಿ (Mother), ಮಗನ (Son) ಬಾಂಧವ್ಯದ ಕಥೆಯನ್ನು ಹೇಳುವ ಜೋಗಿ ಸಿನಿಮಾ ನೋಡಿ ಕನ್ನಡಿಗರು ಅತ್ತಿದ್ದು, ಸಿನಿಮಾ ಸೂಪರ್ ಹಿಟ್ (Super Hit) ಆಗಿದ್ದು ಈಗ ಇತಿಹಾಸ. ಈ ಸಿನಿಮಾದಲ್ಲಿ ಭಾಗ್ಯಕ್ಕ ಎಂಬ ಪಾತ್ರದಲ್ಲಿ ಅಭಿನಯಿದ್ದ ಅರುಂಧತಿ ನಾಗ್ ಅವರು, ತನ್ನ ಪುತ್ರ ಮಾದೇಸ ಅಂದ್ರೆ ಶಿವರಾಜ್‌ ಕುಮಾರ್ ಅವರನ್ನು ಹುಡುಕುತ್ತಾ ಬೆಂಗಳೂರಲ್ಲಿ ಅಲೆಯುತ್ತಾರೆ. ಆ ದೃಶ್ಯವನ್ನು ನೋಡಿ ನೀವೆಲ್ಲಾ ಕಣ್ಣೀರಿಟ್ಟಿದ್ದೀರಿ. ಅದು ರಿಲ್ ಕಥೆ ಆಯ್ತು. ಆದ್ರೆ ಅಂಥದ್ದೇ ರಿಯಲ್ ಕಥೆ ಇಲ್ಲಿ ನಡೆದಿದೆ. ಇಲ್ಲಿ 80 ವರ್ಷದ ಅಜ್ಜಿಯೊಬ್ಬಳು ತನ್ನ ಮಗನನ್ನು ಹುಡುಕಿ ಸುಸ್ತಾಗಿ, ಕೊನೆಗೆ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದಾಳೆ. ಆದ್ರೆ ಅಲ್ಲಿ ತಾಯಿ ಪ್ರೀತಿಗಾಗಿ ಮಗ ಕಷ್ಟಪಟ್ಟರೆ, ಇಲ್ಲಿ ಮಗ ತಾಯಿಯನ್ನು ದೂರ ಮಾಡಿ, ಕಷ್ಟ ಕೊಡುತ್ತಿದ್ದಾನೆ.


 ಬೆಳಗಾವಿಯಲ್ಲಿ ನಡೆಯಿತು ರಿಯಲ್ ‘ಜೋಗಿ’ ಕಥೆ


 ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಖಾನಪೇಟ ನಿವಾಸಿ, 80 ವರ್ಷದ ಅಜ್ಜಿ ಬಸವಣ್ಣೆವ್ವ ಕೋರಿಶೆಟ್ಟಿ ಎಂಬುವರು ಇದೀಗ ಕಣ್ಣೀರಿಡುತ್ತಿದ್ದಾರೆ. ವೃದ್ಧಾಪ್ಯದಲ್ಲಿ ಏಕಾಂಗಿಯಾಗಿದ್ದೇನೆ. ನಂಗೆ ನನ್ನ ಮಗನನ್ನು ಹುಡುಕಿ ಕೊಡಿ ಸಾಹೇಬ್ರೇ ಅಂತ ಬೆಳಗಾವಿ ಜಿಲ್ಲಾಧಿಕಾರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.


ಸವತಿ ಮಕ್ಕಳನ್ನು ಸ್ವಂತ ಮಕ್ಕಳಂತೆ ಬೆಳೆಸಿದ್ದ ವೃದ್ಧೆ


ವೃದ್ಧೆ ಬಸವಣ್ಣೆವ್ವ ಅವರು ಗುರುಪಾದಪ್ಪ ಕೋರಿ ಶೆಟ್ಟರ್ ಎಂಬವರ ಎರಡನೇ ಪತ್ನಿಯಾಗಿದ್ದರು.  ಮೊದಲ ಪತ್ನಿ ಮೃತಪಟ್ಟ ಬಳಿಕ ಬಸವಣ್ಣೆವ್ವ ಜೊತೆ ಗುರುಪಾದಪ್ಪ ಎರಡನೇ ಮದುವೆಯಾಗಿದ್ದ.


ಮೊದಲನೇ ಪತ್ನಿಗೆ ಬಸಪ್ಪ, ಶಿಂಗಪ್ಪ ಎಂಬ ಇಬ್ಬರು ಮಕ್ಕಳಿದ್ರು. ಆದ್ರೆ ಸವತಿ ಮಕ್ಕಳು ಅಂತ ನೋಡದೇ ಈ ವೃದ್ಧೆಯೇ ಮಕ್ಕಳಿಬ್ಬರನ್ನು ಸಾಕಿ, ಬೆಳೆಸಿದ್ದಳು. ಬ್ಬರು ಮಕ್ಕಳನ್ನು ಓದಿಸಿ ಸರ್ಕಾರಿ ನೌಕರಿಗೆ ಸೇರಿಸಿದ್ದಳು.


ಇದನ್ನೂ ಓದಿ: Bengaluru: ಮಗನ ಗರ್ಲ್‌ ಫ್ರೆಂಡ್‌ನ 'ಹಸಿಬಿಸಿ' ಫೋಟೋಗಳನ್ನೇ ಸೆರೆ ಹಿಡಿದ ತಂದೆ! ಆ ಕಾಮುಕ ಯಾರು ಗೊತ್ತಾ?


ಮಲತಾಯಿಗೆ ಆಸ್ತಿಯಲ್ಲಿ ಪಾಲುಕೊಟ್ಟಿದ್ದ ಹಿರಿಯ ಪುತ್ರ


ಕಾಲಾನಂತರ ಆಸ್ತಿ ಭಾಗ ಮಾಡಿದ್ದ ಹಿರಿಯ ಪುತ್ರ ಬಸ್ಪಪ ಕೋರಿಶೆಟ್ಟಿ, ಮಲ ತಾಯಿ ಬಸವಣ್ಣೆವ್ವ ಕೋರಿಶೆಟ್ಟಿಗೆ 2 ಎಕರೆ ಜಮೀನು ಹಾಗೂ ಒಂದು ಮನೆ ನೀಡಿದ್ದ. ಇದಾದ ಬಳಿಕ ಕಳೆದ 18 ವರ್ಷಗಳ ಹಿಂದೆ  ಹಿರಿಯ ಪುತ್ರ ಬಸಪ್ಪ ಕೋರಿಶೆಟ್ಟಿ ಅನಾರೋಗ್ಯದಿಂದ ಸಾವನ್ನಪ್ಪಿದ್ದ. ಆಗ ಅಧಿಕಾರವೆಲ್ಲ ತಮ್ಮ ಶಿಂಗಪ್ಪ ಕೋರಿಶೆಟ್ಟಿ ಕೈಸೇರಿತು.


ವೃದ್ಧೆ ಆಸ್ತಿ ಮೇಲೆ ಪಾಪಿ ಪುತ್ರನ ಕಣ್ಣು


ಅಣ್ಣ ಸಾಯುತ್ತಿದ್ದಂತೆ ತಮ್ಮ ಶಿಂಗಪ್ಪ, ಮಲತಾಯಿ ಬಸವಣ್ಣೆವ್ವ ಆಸ್ತಿ ಮೇಲೆ ಕಣ್ಣು ಹಾಕಿದ. ಜಮೀನು ಮಾರಿ ನಿನ್ನ ಹೆಸರಲ್ಲಿ ಹಣ ಬ್ಯಾಂಕ್‌ನಲ್ಲಿಡ್ತೀನಿ ಎಂದು ನಂಬಿಸಿದ್ದ. ಬಳಿಕ ಹಣ, ಮನೆಯಲ್ಲಿನ ವಸ್ತುಗಳ ಜೊತೆ ಪರಾರಿಯಾಗಿದ್ದ.


18 ವರ್ಷಗಳಿಂದಲೂ ಮಗನಿಗಾಗಿ ಹುಡುಕಾಟ


ಅತ್ತ ಆಸ್ತಿ ಇಲ್ಲದೇ, ಇರಲು ಆಶ್ರಯ ಇಲ್ಲದೇ ಕಂಗಾಲಾಗಿದ್ದ ವೃದ್ಧೆ 18 ವರ್ಷಗಳಿಂದ ಮಗನನ್ನು ಬೆಂಗಳೂರು, ಧಾರವಾಡ ಸೇರಿ ವಿವಿಧೆಡೆ ಮಗನಿಗಾಗಿ ಹುಡುಕಿ ಸುಸ್ತಾಗಿದ್ದಳು. ಕಳೆದ 15 ದಿನಗಳ ಹಿಂದೆ ಖಾನಪೇಟ ಗ್ರಾಮಕ್ಕೆ ಮಗ‌ ಶಿಂಗಪ್ಪ ಬಂದಿದ್ದ‌ ಮಾಹಿತಿ ಅಜ್ಜಿಗೆ ಸಿಕ್ಕಿದೆ. ಹೀಗಾಗಿ ತನ್ನ ಮಗ‌ನ ಹುಡುಕಿ ಕೊಡುವಂತೆ ತಾಯಿ ಬಸವಣ್ಣೆವ್ವಾ ಮನವಿ ಮಾಡಿದ್ದಾರೆ.


ಇದನ್ನೂ ಓದಿ: Viral Video: ಮಗನ ಮದುವೆಯಲ್ಲಿ ಕುಣಿಯುತ್ತಲೇ ಪ್ರಾಣಬಿಟ್ಟ ಅಮ್ಮ! ಕಣ್ಣಲ್ಲಿ ನೀರು ತರಿಸೋ ದೃಶ್ಯ ಇಲ್ಲಿದೆ


ಜಿಲ್ಲಾಧಿಕಾರಿ ಮುಂದೆ ಕಣ್ಣೀರಿಟ್ಟ ವೃದ್ಧೆ


ಬೆಳಗಾವಿ ಡಿಸಿಗೆ ಮನವಿ ಪತ್ರ ಸಲ್ಲಿಸಿದ ಅಜ್ಜಿ, ಕಣ್ಣೀರಿಟ್ಟಿದ್ದಾಳೆ. ಇಷ್ಟು ವರ್ಷ ಶಕ್ತಿ ಇತ್ತು. ನಾನೇ ಕೂಲಿ ನಾಲಿ ಮಾಡಿ ಬದುಕು ಸಾಗಿಸಿದೆ. ಈಗ ನಾನು ಅಶಕ್ತಳಾಗಿದ್ದು ಸರ್ಕಾರಿ ನೌಕರಿಯಲ್ಲಿರುವ ನನ್ನ ಮಗನ ಹುಡುಕಿಕೊಡಿ. ಮಗನ ಹುಡುಕಿ ಕೊಟ್ಟು ಜೀವನ ಸಾಗಿಸಲು ಆಸರೆ ಕಲ್ಪಿಸಿ ಅಂತಾ ವೃದ್ದ ತಾಯಿ ಬಸವಣ್ಣೆವ್ವ ಮನವಿ ಮಾಡಿದ್ದಾಳೆ.

Published by:Annappa Achari
First published: