• Home
  • »
  • News
  • »
  • state
  • »
  • Belagavi: ಸ್ಮಾರ್ಟ್ ಸಿಟಿ ಅಧ್ವಾನ, 12 ಶುದ್ಧ ಕುಡಿಯುವ ನೀರಿನ ಘಟಕ ಸ್ಥಗಿತ!

Belagavi: ಸ್ಮಾರ್ಟ್ ಸಿಟಿ ಅಧ್ವಾನ, 12 ಶುದ್ಧ ಕುಡಿಯುವ ನೀರಿನ ಘಟಕ ಸ್ಥಗಿತ!

12 ಶುದ್ಧ ಕುಡಿಯುವ ನೀರಿನ ಘಟಕ ಸ್ಥಗಿತ!

12 ಶುದ್ಧ ಕುಡಿಯುವ ನೀರಿನ ಘಟಕ ಸ್ಥಗಿತ!

ಬೆಳಗಾವಿಯಲ್ಲಿ (Belagavi) ಸ್ಮಾರ್ಟ್ ಸಿಟಿ ಯೋಜನೆಯಿಂದ ಅನೇಕ ಯಡವಟ್ಟು ಆಗಿದ್ದು ಜನ ಹಿಡಿಶಾಪ ಹಾಕುವಂತಹ ಸ್ಥಿತಿ ನಿರ್ಮಾಣವಾಗಿದೆ. ಸ್ಮಾರ್ಟ್ ಸಿಟಿ ಯೋಜನೆಯಿಂದ ಬೆಳಗಾವಿ ನಗರದಲ್ಲಿ 1.20 ಕೋಟಿ ವೆಚ್ಚದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆ ಮಾಡಲಾಗಿದೆ. ಆದರೆ ಕಳೆದ ಒಂದೂವರೆ ವರ್ಷದಿಂದ ಶುದ್ಧ ಕುಡಿಯುವ ನೀರಿನ ಘಟಕಗಳು ಸ್ಥಗಿತಗೊಂಡಿವೆ

ಮುಂದೆ ಓದಿ ...
  • Share this:

ಬೆಳಗಾವಿ(ಅ.3): ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಲ್ಲಿ ಸ್ಮಾರ್ಟ್ ಸಿಟಿ ಯೋಜನೆ (Smart city) ಪ್ರಮುಖವಾಗಿರೋದು, ಆದರೆ ಯೋಜನೆ ಅನುಷ್ಠಾನದಲ್ಲಿ ಸಾಕಷ್ಟು ಲೋಪದೋಷಗಳು ಆಗಿವೆ. ಬೆಳಗಾವಿಯಲ್ಲಿ (Belagavi) ಸ್ಮಾರ್ಟ್ ಸಿಟಿ ಯೋಜನೆಯಿಂದ ಅನೇಕ ಯಡವಟ್ಟು ಆಗಿದ್ದು ಜನ ಹಿಡಿಶಾಪ ಹಾಕುವಂತಹ ಸ್ಥಿತಿ ನಿರ್ಮಾಣವಾಗಿದೆ. ಸ್ಮಾರ್ಟ್ ಸಿಟಿ ಯೋಜನೆಯಿಂದ ಬೆಳಗಾವಿ ನಗರದಲ್ಲಿ 1.20 ಕೋಟಿ ವೆಚ್ಚದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆ ಮಾಡಲಾಗಿದೆ. ಆದರೆ ಕಳೆದ ಒಂದೂವರೆ ವರ್ಷದಿಂದ ಶುದ್ಧ ಕುಡಿಯುವ ನೀರಿನ ಘಟಕಗಳು ಸ್ಥಗಿತಗೊಂಡಿವೆ. ಇದರ ನಿರ್ವಹಣೆ ಪಾಲಿಕೆಗೆ ವಹಿಸಲಾಗಿದೆ. ಆದರೆ ಘಟಕಗಳು ಮಾತ್ರ ಆರಂಭವಾಗಿಲ್ಲ. ಸ್ಮಾರ್ಟ್ ಸಿಟಿ ಹಾಗೂ ಮಹಾನಗರ ಪಾಲಿಕೆ ಸಮನ್ವಯದ ಕೊರತೆಯಿಂದ ಸಾಕಷ್ಟು ಸಮಸ್ಯೆಗಳು ಉಂಟಾಗಿವೆ.


ಇದನ್ನೂ ಓದಿ: Viral Video: ಇದು ಆನೆ ಬೀಡಿ ಎಳೆಯುವುದಾ ಅಥವಾ ಹೊಗೆ ಬಿಡುವುದಾ? ನೀವೇ ಹೇಳಿ


ಸ್ಮಾರ್ಟ್ ಸಿಟಿ ಯೋಜನೆಗೆ ಬೆಳಗಾವಿ ಆಯ್ಕೆಯಾದ ಸಂದರ್ಭದಲ್ಲಿ ಬೆಳಗಾವಿಯ ಜನ ಸಂಭ್ರಮಿಸಿದ್ದರು. ಆದರೆ ಈಗ ಆಗಿರೋ ಅದ್ವಾನ ನೋಡಿ ಹಿಡಿಶಾಪ ಹಾಕೋ ಸ್ಥಿತಿ ನಿರ್ಮಾಣವಾಗಿದೆ. ಸ್ಮಾರ್ಟ್ ಸಿಟಿ ಹಾಗೂ ಮಹಾನಗರ ಪಾಲಿಕೆ ನಡುವೆ ಸಮನ್ವಯತೆ ಕೊರತೆಯಿಂದ ಸಾಕಷ್ಟು ಸಮಸ್ಯೆಗಳು ಎದುರಾಗಿವೆ. ನಗರದಲ್ಲಿ ಸಾರ್ವಜನಿಕರ ಅನಕೂಲಕ್ಕಾಗಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆ ಮಾಡಲಾಗಿದೆ.  ಬೆಳಗಾವಿ ನಗರದ 12 ಕಡೆಗಳಲ್ಲಿ ಸ್ಮಾರ್ಟ್ ಸಿಟಿಯಿಂದ ಘಟಕಗಳ ಸ್ಥಾಪನೆ ಆಗಿದೆ. ಆದರೆ ಘಟಕಗಳು 2 ವರ್ಷಗಳಿಂದ ಸ್ಥಗಿತಗೊಂಡಿವೆ. ಸ್ಮಾರ್ಟ್ ಸಿಟಿ ಕೇವಲ ಅಭಿವೃದ್ಧಿ ಕೆಲಸ ಮಾಡುತ್ತದೆ ಅದರ ನಿರ್ವಹಣೆ ಜವಾಬ್ದಾರಿ ಮಹಾನಗರ ಪಾಲಿಕೆಯ ಮೇಲಿದೆ. ಸದ್ಯ ಇಬ್ಬರ ನಡುವೆ ಯಾವುದೇ ಸಮನ್ವತೆ ಇಲ್ಲ ಎಂಬುವುದು ಜನರ ಆರೋಪವಾಗಿದೆ.


ಪಾಲಿಕೆ, ಸ್ಮಾರ್ಟ್ ಸಿಟಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ಕೋಟ್ಯಾಂತರ ರೂಪಾಯಿ ಹಣ ವ್ಯರ್ಥವಾಗಿದೆ. ಒಂದು ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆಗೆ 8-10 ಲಕ್ಷ ರೂಪಾಯಿ ವೆಚ್ಚ ಮಾಡಲಾಗಿದೆ. ಬೆಳಗಾವಿ ನಗರದಲ್ಲಿ 12 ಕಡೆ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆ ಮಾಡಲಾಗಿದ್ದು,  1.20 ಕೋಟಿ ವೆಚ್ಚದಲ್ಲಿ ಮಾಡಲಾಗಿದೆ. ಕಳೆದ ಒಂದೂವರೆ ವರ್ಷದಿಂದ ನಿರ್ವಹಣೆ ಇಲ್ಲದೇ ಘಟಕಗಳು ಸ್ಥಗಿತಗೊಂಡಿವೆ. ಜನಪ್ರತಿನಿಧಿನಿಗಳು ಇದರ ಬಗ್ಗೆ ಗಮನ ಹರಿಸಿಲ್ಲ. ಬೆಳಗಾವಿ ಜಿಲ್ಲಾಧಿಕಾರಿ ಕಚೇರಿಯಲ್ಲಿಯೇ ಘಟಕ ಸ್ಥಗಿತಗೊಂಡ್ರು ಡೋಂಟ್ ಕೇರ್ ಎನ್ನುವ ಅಧಿಕಾರಿಗಳು ಇದ್ದಾರೆ.


ಸಾರ್ವಜನಿಕರ ಉಪಯೋಗಕ್ಕಿಲ್ಲದ ಸೌಲಭ್ಯ


ಈ ಬಗ್ಗೆ ನ್ಯೂಸ್ 18 ಕನ್ನಡದ ಜತೆಗೆ ಮಾತನಾಡಿದ ಎಎಪಿ ಮುಖಂಡ ರಾಜೀವ ಟೋಪಣ್ಣವನರ್, ಸ್ಮಾರ್ಟ್ ಸಿಟಿ ಯೋಜನೆಯಲ್ಲಿ 12 ಶುದ್ಧ ಕುಡಿಯುವ ನೀರಿನ ಘಟಕದ ಸ್ಥಾಪನೆ ಮಾಡಲಾಗಿದೆ. 1 ಕೋಟಿ ರೂಪಾಯಿ ವೆಚ್ಚ ಮಾಡಲಾಗಿದೆ. ಸಾರ್ವಜನಿಕರಿಗೆ ಇದರಿಂದ ಯಾವುದೇ ಉಪಯೋಗ ಆಗುತ್ತಿಲ್ಲ. ಸರ್ಕಾರ ಯೋಜನೆಗೆ ಹಣ ಖರ್ಚು ಮಾಡುತ್ತವೆ, ಆದರೇ ನಿರ್ವಹಣೆ  ಆಗಲ್ಲ. ಜಿಲ್ಲಾಧಿಕಾರಿ ಕಚೇರಿಗೆ ನಿತ್ಯ ಸಾವಿರಾರು ಜನ ಬರ್ತಾರೆ, ಆದರೆ ಶುದ್ಧ ಕುಡಿಯುವ ನೀರಿ ಸಿಗದೇ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.


ಇದನ್ನೂ ಓದಿ:  Video: ಕಾಡಿನಲ್ಲಿ ಕಳೆದು ಹೋದ ಮರಿ ಆನೆಯನ್ನು ಮತ್ತೆ ಅದರ ಹಿಂಡಿನೊಂದಿಗೆ ಸೇರಿಸಿದ ಅರಣ್ಯ ಸಿಬ್ಬಂದಿ! ಈ ಸಂತಸದ ಕ್ಷಣವನ್ನೊಮ್ಮೆ ನೋಡಿ


ಬೆಳಗಾವಿ ಮಹಾನಗರ ಪಾಲಿಕೆ ಆಯುಕ್ತ ರುದ್ರೇಶ ಘಾಳಿ ನ್ಯೂಸ್ 18 ಕನ್ನಡಕ್ಕೆ ಹೇಳಿಕೆ ನೀಡಿದ್ದು, ಸ್ಮಾರ್ಟ್ ಸಿಟಿಯಿಂದ 12 ಶುದ್ಧ ಕುಡಿಯುವ ನೀರಿನ ಘಟಕ ಹಸ್ತಾಂತರ ಮಾಡಲಾಗಿದೆ. ಘಟಕದ ನಿರ್ವಹಣೆಗೆ ಟೆಂಡರ್ ಕರೆದು ವರ್ಕ್ ಆರ್ಡರ್ ಕೊಡಲಾಗಿದೆ. ಮೂರು ಘಟಕಗಳು ಆರಂಭವಾಗಿದ್ದು, 9 ಘಟಕಗಳಲ್ಲಿ ಸಣ್ಣಪುಟ್ಟ ರಿಪೇರಿ ಇದೆ. ಹಲವು ಶರತ್ತುಗಳನ್ನು ವಿಧಿಸಿ ನಿರ್ವಹಣೆಗೆ ಗುತ್ತಿಗೆ ಕೊಡಲಾಗಿದೆ. ಪಾಲಿಕೆಗೆ ಒಂದು ವರ್ಷಕ್ಕೆ 54 ಸಾವಿರ ರೂಪಾಯಿ ಹಣ ಕೊಡಬೇಕು. ಶುದ್ಧ ಕುಡಿಯುವ ನೀರಿನ ಘಟಕ ಆರಂಭಿಸಲು ಮೂರು ತಿಂಗಳು ಗಡುವು ವಿಧಿಸಲಾಗಿದೆ. ಯಾವುದೇ ಘಟಕಗಳು ಆರಂಭ ಇಲ್ಲ ಎಂದು ಮಾಹಿತಿ ನೀಡಿದ್ದೀರಿ. ಈ ಬಗ್ಗೆ ಗುತ್ತಿಗೆದಾರರ ಜತೆಗೆ ಸಭೆ ನಡೆಸಿ ಸೂಚನೆ ನೀಡಲಾಗುವುದು ಎಂದರು.

Published by:Precilla Olivia Dias
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು