ಬ್ಯಾಂಕ್​ ಖಾತೆಗೆ 102 ಸಲ ಕನ್ನ ಹಾಕಿ 10 ಲಕ್ಷ ವಂಚನೆ - ಪ್ರಕರಣ ಬೇಧಿಸಿದ ಬೆಳಗಾವಿ ಪೊಲೀಸರು

ಯಲ್ಲಪ್ಪ ಅವರ ಬ್ಯಾಂಕ್ ಖಾತೆಗೆ ಲಿಂಕ್​​ ಆಗಿರುವ ಮೊಬೈಲ್ ನಂಬರ್ ಪಡೆದು, ಆನ್ ಲೈನ್ ಅಕೌಂಟ್ ಕ್ರಿಯೆಟ್ ಮಾಡಿದ ದುಷ್ಕರ್ಮಿಗಳು ತಮ್ಮ ಮೊಬೈಲ್​ಗೆ ಮೆಸೆಜ್ ಬರುವ ರೀತಿಯಲ್ಲಿ ಮಾಡಿದ್ದರು. ಬಳಿಕ 102 ಸಲ ಕನ್ನ ಹಾಕಿ, 10 ಲಕ್ಷ ರೂಪಾಯಿ ಕಳ್ಳತನ ಮಾಡಿದ್ದರು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಬೆಳಗಾವಿ(ಜು,20): ಬೆಳಗಾವಿಯಲ್ಲಿ ನಿವೃತ್ತ ಬಿಎಸ್ಎನ್ಎಲ್ ಉದ್ಯೋಗಿಯೊಬ್ಬರಿಗೆ ಕೆವೈಸಿ ಅಪಡೆಟ್ ಮಾಡಬೇಕು ಎಂದು ಹೇಳಿ ದುಷ್ಕರ್ಮಿಗಳು ಕರೆ ಮಾಡಿದ್ದರು. ಇದನ್ನು ನಂಬಿ ಒಪಿಟಿ ಹಾಗೂ ದಾಖಲೆಗಳನ್ನು ನೀಡಿದ್ದರು. ಬಳಿಕ ಖಾತೆಗೆ 102 ಸಲ ಕನ್ನ ಹಾಕಿದ ದುಷ್ಕರ್ಮಿಗಳು 10 ಲಕ್ಷ ರೂಪಾಯಿ ವಂಚನೆ ಮಾಡಿದ್ದರು.

ಈ ಬಗ್ಗೆ ನಿವೃತ್ತ ಬಿಎಸ್​ಎನ್​ಎಲ್​ ಉದ್ಯೋಗಿ ಯಲ್ಲಪ್ಪ ಜಾಧವ್ ಬೆಳಗಾವಿ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಪ್ರಕರಣ ಬೆನ್ನತ್ತಿದ ಇನ್ಸ್ ಪೆಕ್ಟರ್ ಬಿ. ಆರ್ ಗಡ್ಡೇಕರ್ ನೇತೃತ್ವದ ತಂಡ ಜಾರ್ಖಾಂಡ್ ಹಾಗೂ ಮಹಾರಾಷ್ಟ್ರ ಮೂಲದ  ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬೆಳಗಾವಿ ತಾಲೂಕಿನ ಕೆ ಎಚ್ ಕಂಗ್ರಾಳಿ ಗ್ರಾಮದ ಯಲ್ಲಪ್ಪ ಜಾಧವ್ ಇತ್ತೀಚಿಗೆ ಬಿಎಸ್ಎನ್​ಎಲ್ ಸಂಸ್ಥೆಗೆ ಸ್ವಯಂ ನಿವೃತ್ತಿ ನೀಡಿದ್ದರು. ಬಳಿಕ ಇವರಿಗೆ 10 ಲಕ್ಷ ಬಂದಿದ್ದು, ಇದನ್ನು ಸೈಟ್ ಖರಿದೀಸಬೇಕು ಎಂದು ಬ್ಯಾಂಕ್ ಖಾತೆಯಲ್ಲಿ ಇಟ್ಟುಕೊಂಡಿದ್ದರು. ಅಷ್ಟರಲ್ಲಿಯೇ ಈ ಹಣದ ಮೇಲೆ ಸೈಬರ್ ಕಳ್ಳರ ಕಣ್ಣು ಬಿದಿತ್ತು. ನಿಮ್ಮ ಬ್ಯಾಂಕ್ ಅಕೌಂಟ್​ ಕೆವೈಸಿ ಮಾಡಿಸಬೇಕು ಎಂದು ದುಷ್ಕರ್ಮಿಗಳು ಫೋನ್ ಮಾಡಿದ್ದರು. ಆದರೇ ಮೊದಲು ಯಾವುದೇ ದಾಖಲೆಯನ್ನು ಯಲ್ಲಪ್ಪ ನೀಡರಲಿಲ್ಲ. ಬಳಿಕ ಮತ್ತೆ ಕರೆ ಮಾಡಿದ್ದ ಆರೋಪಿಗಳು  ಲಾಕ್ ಡೌನ್ ಇದೇ ನೀವು ಬ್ಯಾಂಕ್ ಬರೋಕೆ ಸಾಧ್ಯವಿಲ್ಲ. ಹೀಗಾಗಿ ನಮಗೆ ದಾಖಲೆ ಕೊಡಿ ನಾವೇ ಮಾಡುತ್ತೇವೆ ಕೆವೈಸಿ ಮಾಡುತ್ತೇವೆ ಎಂದು ನಂಬಿಸಿದ್ದರು. ನಂಬಿದ್ದ ಯಲ್ಲಪ್ಪ ಒಟಿಪಿ ಹಾಗೂ ಬ್ಯಾಂಕ್ ದಾಖಲೆಯನ್ನು ನೀಡಿದ್ದರು.

ಬಳಿಕ ಯಲ್ಲಪ್ಪ ಅವರ ಬ್ಯಾಂಕ್ ಖಾತೆಗೆ ಲಿಂಕ್​​ ಆಗಿರುವ ಮೊಬೈಲ್ ನಂಬರ್ ಪಡೆದು, ಆನ್ ಲೈನ್ ಅಕೌಂಟ್ ಕ್ರಿಯೆಟ್ ಮಾಡಿದ ದುಷ್ಕರ್ಮಿಗಳು ತಮ್ಮ ಮೊಬೈಲ್ ಗೆ ಮೆಸೆಜ್ ಬರೋ ರೀತಿಯಲ್ಲಿ ಮಾಡಿದ್ದರು. ಬಳಿಕ 102 ಸಲ ಕನ್ನ ಹಾಕಿ, 10 ಲಕ್ಷ ರೂಪಾಯಿ ಕಳ್ಳತನ ಮಾಡಿದ್ದರು. ಈ ಬಗ್ಗೆ ಯಲ್ಲಪ್ಪ ಜಾಧವ್ ಜೂನ್ 6ರಂದು ಬೆಳಗಾವಿ ಸಿಇಎನ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.

ಪ್ರಕರಣ ಬೆನ್ನತಿದ್ದ ಪೊಲೀಸರಿಗೆ ಹಲವು ಮಾಹಿತಿಗಳು ಸಿಕ್ಕಿದ್ದವು. ಮೂರು ಜನ ಶಂಕಿತರನ್ನು ಪ್ರಕರಣ ಸಂಬಂಧ ವಶಕ್ಕೆ ಪಡೆದುಕೊಳ್ಳಲಾಗಿತ್ತು. ಕೃತ್ಯ ಎಸೆಗಲು 50 ಮೊಬೈಲ್, 304 ಸಿಮ್ ಬಳಕೆ ಮಾಡಲಾಗಿದ್ದು, 50 ಬ್ಯಾಂಕ್ ಅಕೌಂಟ್ ಬಳಕೆ ಮಾಡಲಾಗಿದೆ. ಅಕೌಂಟ್ ಸದ್ಯ ಸ್ಥಗಿತಗೊಳಿಸಲಾಗಿದ್ದು, 12 ಲಕ್ಷ ಹಣವನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. 5 ಮೊಬೈಲ್, ಡೆಬಿಟ್ ಕಾರ್ಡ್ ವಶಕ್ಕೆ ಪಡೆಯಲಾಗಿದೆ. ಪ್ರಕರಣ ಸಂಬಂಧ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದ್ದು, ಜಾರ್ಖಾಂಡ್ ಮೂಲದ ಚಂದ್ರಪ್ರಕಾಶ ದಾಸ್ (30), ಆಶಾ ಚಂದ್ರಪ್ರಕಾಶ್ ದಾಸ್ (25) ನಾಸೀಕ್ ಅನ್ವರ್ ಶೇಕ್ (24) ಬಂಧಿಸಲಾಗಿದೆ ಎಂದು ಡಿಸಿಪಿ ಡಾ.ವಿಕ್ರಮ ಅಮಟೆ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಕೆಆರ್‌ಎಸ್ ಬಿರುಕು‌; ತನಿಖೆ ನಡೆಸುವಂತೆ ಕೇಂದ್ರ ಸಚಿವರಿಗೆ ಸಂಸದೆ ಸುಮಲತಾ ಮನವಿ

ಇನ್ನೂ ಆರೋಪಿಗಳು ಬೆಂಗಳೂರು, ಹೈದರಬಾದ್​ ಹಾಗೂ ಕಲಬುರ್ಗಿಯಲ್ಲಿ ಸೈಬರ್ ವಂಚನೆ ಮಾಡಿರುವ ಬಗ್ಗೆ ಪೊಲೀಸರ ಬಳಿ ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಹೆಚ್ಚಿನ ತನಿಖೆಯನ್ನು ಪೊಲೀಸರು ನಡೆಸುತ್ತಿದ್ದಾರೆ. ಪ್ರಕರಣ ಭೇದಿಸಿದ ಇನ್ಸ್ಪೆಕ್ಟರ್ ಬಿ ಆರ್ ಗಡ್ಡೇಕರ್ ಹಾಗೂ ಸಿಬ್ಬಂಧಿಗಳಾದ ವಿಜಯ ಬಡವಣ್ಣವರ್, ಮಾರುತಿ ಕೊನ್ಯಾಗೋಳ ಹಾಗೂ ಕೆ ವಿ ಚಂರಲಿಂಗಮಠ ಅವರನ್ನು ಹಿರಿಯ ಅಧಿಕಾರಿಗಳು ಅಭಿನಂದಿಸಿದ್ದಾರೆ.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
Published by:HR Ramesh
First published: