HOME » NEWS » State » BELE SAMIKSHE MOBILE APP HELPFULL TO GADAG FARMERS LG

ಅಂಗೈಯಲ್ಲಿ ಬೆಳೆ ಪರಿಹಾರ; ಗದಗ ರೈತರಿಗೆ ಸಹಕಾರಿಯಾದ ಬೆಳೆ ಸಮೀಕ್ಷೆ ಮೊಬೈಲ್ ಆ್ಯಪ್

ರೈತರೇ ತಮ್ಮ ಮೊಬೈಲ್‌ ಮೂಲಕ ಬೆಳೆಗಳ ವಿವರಣೆ ದಾಖಲಿಸುವುದರಿಂದ ಯಾರಿಗೂ ಕಾಯಬೇಕಾದ ಅವಶ್ಯಕತೆ ಇರುವುದಿಲ್ಲ. ತಪ್ಪು ಮಾಹಿತಿ ದಾಖಲಾಗುವುದಿಲ್ಲ.

news18-kannada
Updated:September 15, 2020, 2:14 PM IST
ಅಂಗೈಯಲ್ಲಿ ಬೆಳೆ ಪರಿಹಾರ; ಗದಗ ರೈತರಿಗೆ ಸಹಕಾರಿಯಾದ ಬೆಳೆ ಸಮೀಕ್ಷೆ ಮೊಬೈಲ್ ಆ್ಯಪ್
ಬೆಳೆ ಫೋಟೋ ತೆಗೆದು ಬೆಳೆ ಸಮೀಕ್ಷೆ ಆ್ಯಪ್​ಗೆ ಅಪ್​ಲೋಡ್​ ಮಾಡುತ್ತಿರುವ ದೃಶ್ಯ
  • Share this:
ಗದಗ(ಸೆ.15): ರೈತರ ಬೆಳೆ ಸಮೀಕ್ಷೆ ಮೊಬೈಲ್ ಆ್ಯಪ್, ಅನ್ನದಾತರಿಗೆ ಸಹಕಾರಿಯಾಗಿದೆ‌. ಹೌದು ಮುದ್ರಣ ಕಾಶಿ ಗದಗ ಜಿಲ್ಲೆಯಲ್ಲಿ ರಾಜ್ಯ ಸರ್ಕಾರ ಬಿಡುಗಡೆ ಮಾಡಿದ,‌ರೈತರ ಬೆಳೆ ಸಮೀಕ್ಷೆ ಮೊಬೈಲ್ ಆ್ಯಪ್ ಬಹಳ ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಲಾಗುತ್ತಿದೆ. ಗದಗ ಜಿಲ್ಲೆಯ ಬಿಂಕದಕಟ್ಟಿ, ಹುಲಕೋಟಿ, ಸೇರಿದಂತೆ ಹಲವು ಜಮೀನುಗಳಿಗೆ ತೆರಳಿ ಕೃಷಿ ಆ್ಯಪ್ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ. ರೈತರು ಮೊದಲು ಗೂಗಲ್ ಪ್ಲೇ-ಸ್ಟೋರ್‍ನಿಂದ “ರೈತರ ಬೆಳೆ ಸಮೀಕ್ಷೆ” ಮೊಬೈಲ್ ಆಪ್ ಅನ್ನು ಡೌನ್‍ಲೋಡ್ ಮಾಡಿಕೊಳ್ಳಬೇಕು. ರೈತರ ಹೆಸರು, ಮೊಬೈಲ್ ಸಂಖ್ಯೆ ಮತ್ತು ಓಟಿಪಿ ಸಂಖ್ಯೆಯನ್ನು ನಮೂದಿ  ರೈತರು ತಮ್ಮ ವಿವರಗಳನ್ನು ನೋಂದಣಿ ಮಾಡಿಕೊಳ್ಳಬೇಕು. ಮೊಬೈಲ್ ಆಪ್‍ನಲ್ಲಿ ಮೊದಲು ಮಾಸ್ಟರ್ ವಿವರಗಳನ್ನು  ಡೌನ್‍ಲೋಡ್ ಮಾಡಿಕೊಳ್ಳಬೇಕು. ನಂತರ ತಮ್ಮ ಜಮೀನಿನ ಸರ್ವೆ ನಂಬರ್​​ಗಳನ್ನು ಆ್ಯಪ್‍ಗೆ ಸೇರಿಸಿಕೊಳ್ಳಬೇಕು.



ಮುಂದಿನ ಹಂತದಲ್ಲಿ ರೈತರು ತಮ್ಮ ಜಮೀನಿನಲ್ಲಿ ಬೆಳೆದ ಬೆಳೆಯ ಫೋಟೋ ತೆಗೆದು ಡೌನ್‌ಲೋಡ್ ಮಾಡಬೇಕು. ಇಷ್ಟು ಮಾಡಿದ್ರೆ ಸಾಕು ರೈತರು ಕಚೇರಿ ಕಚೇರಿಗಳಿಗೆ ಅಲೆದಾಟ ತಪ್ಪುತ್ತದೆ. ಇದರಿಂದ ರೈತರು ಬೆಳೆದ ಬೆಳೆ ಕುರಿತು ಕೃಷಿ ಇಲಾಖೆಗೆ ಮಾಹಿತಿ ಸಿಗುತ್ತದೆ ಅದನ್ನೆ ಕೃಷಿ ಅಧಿಕಾರಿಗಳು ಪರಿಶೀಲನೆ ನಡೆಸಿ ಸರ್ಕಾರಕ್ಕೆ ಕಳುಹಿಸಿ ಕೊಡುತ್ತಾರೆ. ಆಗ ಅವರಿಗೆ ಬೆಳೆ ವಿಮೆ ಹಾಗೂ ಪರಿಹಾರ ನೀಡಲು ಅನುಕೂಲವಾಗುತ್ತದೆ ಅಂತಾರೆ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ರುದ್ರೇಶಪ್ಪ ಅವರು.



Sandalwood Drug Case: ಸ್ಯಾಂಡಲ್​ವುಡ್​ ಡ್ರಗ್ ಕೇಸ್; ಆದಿತ್ಯ ಆಳ್ವ ಮನೆ ಮೇಲೆ ಸಿಸಿಬಿ ದಾಳಿ

ಇನ್ನೂ ಈ ವಿನೂತನ ಆ್ಯಪ್ ನಿಂದ ರೈತರು ಸಹ ಸಂತಸ ವ್ಯಕ್ತ ಪಡಿಸಿದ್ದಾರೆ.  ಕೃಷಿಕರ ಏಳ್ಗೆಗಾಗಿ ಬೆಂಬಲ ಬೆಲೆ, ಬೆಳೆವಿಮೆ, ಕೃಷಿ ಸಮ್ಮಾನ ಸಹಾಯಧನದಂತಹ ಯೋಜನೆಗನ್ನು ಜಾರಿಗೊಳಿಸಿದ್ದು, ರೈತರೇ ತಮ್ಮ ಮೊಬೈಲ್‌ ಮೂಲಕ ಬೆಳೆಗಳ ವಿವರಣೆ ದಾಖಲಿಸುವುದರಿಂದ ಯಾರಿಗೂ ಕಾಯಬೇಕಾದ ಅವಶ್ಯಕತೆ ಇರುವುದಿಲ್ಲ. ತಪ್ಪು ಮಾಹಿತಿ ದಾಖಲಾಗುವುದಿಲ್ಲ. ಹಾಗೂ ಕಚೇರಿಗಳಿಗೆ ತೆರಳಿ, ಆಧಾರ ಕಾರ್ಡ್, ಬ್ಯಾಂಕ್ ಪಾಸ್ ಬುಕ್ ಹಾಗೂ ಜಮೀನಿನ ಉತ್ತಾರ ಹಿಡಿದುಕೊಂಡು ಅಲೆದಾಡುವುದು ಸಹ ತಪ್ಪುತ್ತದೆ.

ಜಮೀನಿನಲ್ಲಿನ ಹಾನಿಯಾದ ಬೆಳೆ ಹಾಗೂ ಸಮೃದ್ಧವಾಗಿ ಬೆಳೆದ ಬೆಳೆಯ ಮಾಹಿತಿಯನ್ನು ಹಾಕೋದರಿಂದ ನಾಳೆ ಬೆಳೆಗಳನ್ನು ಮಾರಾಟ ಮಾಡಲು ಸಹ ಅನುಕೂಲವಾಗುತ್ತದೆ ಹಾಗು ಬೆಳೆ ವಿಮೆ ಪಡೆಯಲು ಸಹ ಅನುಕೂಲವಾಗುತ್ತದೆ. ಹಾಗಾಗಿ ಈ ಆ್ಯಪ್ ರೈತರಿಗೆ ಬಹಳ ಅನುಕೂಲವಾಗಲಿದೆ ಅಂತಾರೆ ರೈತರು.
Youtube Video


ಒಟ್ಟಿನಲ್ಲಿ ಇಷ್ಟು ದಿನ ತಾವು ಬೆಳೆದ ಬೆಳೆಯ ಕುರಿತು ರೈತರು ಸರ್ಕಾರಕ್ಕೆ ಮಾಹಿತಿ ನೀಡಲು ಪರದಾಡುತ್ತಿದ್ದರು. ಆದರೆ ಈವಾಗ ಕೃಷಿ ಇಲಾಖೆಯ ಈ ಆ್ಯಪ್ ನಿಂದ ಅಂಗೈಯಲ್ಲಿ ಬೆಳೆ ಪರಿಹಾರ ಪಡೆಯಬಹುದು. ಇದು ರೈತ ವರ್ಗಕ್ಕೆ ಸಾಕಷ್ಟು ಸಂತಸ ತಂದಿದೆ ಎನ್ನಬಹುದು.
Published by: Latha CG
First published: September 15, 2020, 2:04 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories