ಬಾರ್ಸಿಲೋನಾ ಸಿನಿಮಾ ಉತ್ಸವದಲ್ಲಿ ಬೆಳಗಾವಿ ಕನ್ನಡ ಶಿಕ್ಷಕನ ಚಿತ್ರ

news18
Updated:July 16, 2018, 1:00 PM IST
ಬಾರ್ಸಿಲೋನಾ ಸಿನಿಮಾ ಉತ್ಸವದಲ್ಲಿ ಬೆಳಗಾವಿ ಕನ್ನಡ ಶಿಕ್ಷಕನ ಚಿತ್ರ
news18
Updated: July 16, 2018, 1:00 PM IST
-ನ್ಯೂಸ್​ 18

ಬೆಂಗಳೂರು (ಜು 16): ಬೆಳಗಾವಿಯ ಕನ್ನಡ ಮೇಷ್ಟ್ರು ತಮ್ಮ ಬೇಸಿಗೆ ರಜೆ ದಿನದಲ್ಲಿ ತೆಗೆದ ಸಾಮಾಜಿಕ ಕಳಕಳಿಯ ಚಿತ್ರವೊಂದು ಬಾರ್ಸಿಲೋನಾ​  ಸಿನಿಮಾ ಉತ್ಸವಕ್ಕೆ ಆಯ್ಕೆಯಾಗಿದೆ.

ಸ್ಪೇನ್​ನಲ್ಲಿ ನಡೆಯುತ್ತಿರುವ ಚಲನಚಿತ್ರೋತ್ಸವದಲ್ಲಿ ಉತ್ತಮ ನಿರೂಪಣಾ ವಿಭಾಗಕ್ಕೆ ಕನ್ನಡದ 'ಬೆಳಕಿನ ಕನ್ನಡಿ' ಚಿತ್ರ ಆಯ್ಕೆಯಾಗಿದೆ.

ಬೆಳಗಾವಿಯ ಮಾರ್ಕಂಡೇಯ ನಗರದ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರಾಗಿರುವ ಉಮೇಶ್​ ಬಡಿಗೇರ್​ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಸಿನಿಮಾ ಕ್ಷೇತ್ರದ ಬಗ್ಗೆ ಆಸಕ್ತಿಯನ್ನು ಹೊಂದಿರುವ ಬಡಿಗೇರ್​ ತಮ್ಮ ಬೇಸಿಗೆ ರಜಾದಿನಗಳಲ್ಲಿ ಈ  ಚಿತ್ರ ನಿರ್ದೇಶನ, ನಿರ್ಮಾಣದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ಈ ಹಿಂದೆ 2017ರಲ್ಲಿ ವೃದ್ದಾಪ್ಯದ ಕುರಿತು 'ಕೊನೆಯ ಪುಟ' ಎಂಬ ಕಿರುಚಿತ್ರವನ್ನು ನಿರ್ಮಾಣ ಮಾಡಿದ್ದ ಅವರು, ಈ ಬಾರಿ ದೊಡ್ಡ ಚಿತ್ರ ನಿರ್ಮಾಣಕ್ಕೆ ಕೈ ಹಾಕಿದ್ದರು.

12 ವರ್ಷದ ಶಾಲಾ ಬಾಲಕನೊಬ್ಬ ಶಾಲೆಯಲ್ಲಿ ತಾನು ಓದಿದ ಸಾಮಾಜಿಕ ಸುಧಾರಣಾ ಪಾಠಗಳಿಂದ ಪ್ರೇರಿಪಿತನಾಗಿ ತನ್ನ ವಿಧವೆ ತಾಯಿಯನ್ನು ವಧುವಾಗಿ ಮಾರ್ಪಡಿಸುವ ಕಥೆ ಬೆಳಕಿನ ಕನ್ನಡಿಯಾಗಿದೆ.

2 ಗಂಟೆ 17 ನಿಮಿಷದ ಕಥೆ ಹೊಂದಿರುವ ಈ ಚಿತ್ರಕ್ಕೆ ಬಸವರಾಜ್​ ಹಮ್ಮಿನಿ ನಿರ್ಮಾಣ ಮಾಡಿದ್ದು, ಅವರು ಕೂಡ ಉಮೇಶ್​ರೊಟ್ಟಿಗೆ ಬಾರ್ಸಿಲೋನಾ​ದಲ್ಲಿ ನಡೆಯುತ್ತಿರುವ ಫಿಲ್ಮ್​ ಫೆಸ್ಟಿವಲ್​ಗೆ ತೆರಳಿದ್ದಾರೆ
Loading...

ಶಾಲೆಯಲ್ಲಿ ವಿದ್ಯಾರ್ಥಿಗಳು ರಜೆ ಹಾಕಿದಾಗ ಅವರ ಹಿಂದೆ ಒಂದು ಕಥೆ ಇರುತ್ತಾರೆ. ಶಿಕ್ಷಕನಾಗಿ ಎಲ್ಲರಿಗಿಂತ ಉತ್ತಮವಾಗಿ ಅವರ ಕಥೆ ನನಗೆ ಅರ್ಥವಾಗುತ್ತದೆ. ಈ ಕಾರಣಕ್ಕಾಗಿ ನಾನು ಚಿತ್ರಕಥೆ ಬರೆಯಲು ಶುರುಮಾಡಿದೆ. ನನ್ನ ಗೆಳೆಯರ ಪ್ರೋತ್ಸಾಹದಿಂದಾಗಿ ನಾನು ಚಿತ್ರಕಥೆ ನಿರ್ಮಾಣ ಮಾಡಿದೆ. ರಜಾ ದಿನಗಳಲ್ಲಿ ವ್ಯರ್ಥವಾಗಿ ಕಾಲಕಳೆಯುವ  ಇಚ್ಛೆ ನನ್ನದಾಗಿರಲಿಲ್ಲ. ಆದ್ದರಿಂದಾಗಿ ಈ ಪ್ರಯತ್ನಕ್ಕೆ ಕೈ ಹಾಕಿದೆ. 20 ದಿನಗಳ ಕಾಲ ನಾವು ಚಿತ್ರೀಕರಣ ನಡೆಸಿ, ನಂತರ 20 ದಿನ ಡಬ್ಬಿಂಗ್​ ನಿರ್ಮಾಣ ಕಾರ್ಯ ನಡೆಯಿತು. ಚಿತ್ರ ಉತ್ಸವದ ಬಳಿಕ  ಬೆಂಗಳೂರಿನಲ್ಲಿಯೂ ಈ ಚಿತ್ರದ ಪ್ರೀಮಿಯಂ ಶೋ​ ಮಾಡಬೇಕು ಎಂಬ ಇಚ್ಛೆ ಹೊಂದಿದ್ದೇನೆ ಎನ್ನುತ್ತಾರೆ ಉಮೇಶ್​​
First published:July 16, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ