Traffic Fine: ದಂಡಕ್ಕೆ ಪಟ್ಟು ಹಿಡಿದ ಟ್ರಾಫಿಕ್​ ಪೊಲೀಸ್​; ಮಾಂಗಲ್ಯ ಸರ ಮಾರಲು ಮುಂದಾದ ಮಹಿಳೆ

ಹೆಲ್ಮೆಟ್​ ಹಾಕದ ದಂಪತಿಗೆ ದಂಡ ಕಟ್ಟಿ ಎಂದು ಪಟ್ಟು ಹಿಡಿದ ಹಿನ್ನಲೆ, ದಿಕ್ಕು ತೋಚದ ಮಹಿಳೆ ತನ್ನ ಮಾಂಗಲ್ಯ ಸರ ಅಡವಿಡಲು ಮುಂದಾಗಿದ್ದಾರೆ.

ಹೆಲ್ಮೆಟ್​ ಹಾಕದ ದಂಪತಿಗೆ ದಂಡ ಕಟ್ಟಿ ಎಂದು ಪಟ್ಟು ಹಿಡಿದ ಹಿನ್ನಲೆ, ದಿಕ್ಕು ತೋಚದ ಮಹಿಳೆ ತನ್ನ ಮಾಂಗಲ್ಯ ಸರ ಅಡವಿಡಲು ಮುಂದಾಗಿದ್ದಾರೆ.

ಹೆಲ್ಮೆಟ್​ ಹಾಕದ ದಂಪತಿಗೆ ದಂಡ ಕಟ್ಟಿ ಎಂದು ಪಟ್ಟು ಹಿಡಿದ ಹಿನ್ನಲೆ, ದಿಕ್ಕು ತೋಚದ ಮಹಿಳೆ ತನ್ನ ಮಾಂಗಲ್ಯ ಸರ ಅಡವಿಡಲು ಮುಂದಾಗಿದ್ದಾರೆ.

  • Share this:
    ಬೆಳಗಾವಿ (ಮಾ. 1): ನಿಯಮ ಉಲ್ಲಂಘನೆ ಮಾಡಿದ ವಾಹನಗಳಿಂದ ದಂಡ ಸಂಗ್ರಹಿಸುವುದನ್ನೇ ಗುರಿಯಾಗಿಸಿಕೊಂಡ ಟ್ರಾಫಿಕ್​ ಪೊಲೀಸರು ಸಾಮಾನ್ಯ ಜನರೊಂದಿಗೆ ಮಾನವೀಯತೆಯನ್ನು ಮರೆತು ಹಣ ವಸೂಲಿಗೆ ಇಳಿದಿದ್ದಾರೆ. ಹೆಲ್ಮೆಟ್​ ಹಾಕದ ದಂಪತಿ ಬಳಿ ಹಣ ಇಲ್ಲದಿದ್ದರೂ ದಂಡ ಕಟ್ಟಿ ಎಂದು ಪಟ್ಟು ಹಿಡಿದ ಹಿನ್ನಲೆ, ದಿಕ್ಕು ತೋಚದ ಮಹಿಳೆ ತನ್ನ ಮಾಂಗಲ್ಯ ಸರ ಅಡವಿಡಲು ಮುಂದಾಗಿದ್ದಾರೆ. ಜನರ ರಕ್ಷಿಸಬೇಕಾದ ಪೊಲೀಸರ ಈ ಅಮಾನವೀಯ ವರ್ತನೆಗೆ ಈಗ ಎಲ್ಲೆಡೆ ಟೀಕೆ ಕೇಳಿ ಬಂದಿದೆ. ದಂಡ ವಸೂಲಿಯನ್ನೇ ಪೊಲೀಸರು ಪರಮ ಗುರಿ ಎಂಬಂತೆ ಸಾಮಾನ್ಯ ಜನರೊಂದಿಗೆ ಈ ರೀತಿ ನಡೆದುಕೊಂಡಿರುವ ಅವರ ವರ್ತನೆಗೆ ಎಲ್ಲೆಡೆ ಟೀಕೆ ಕೇಳಿ ಬಂದಿದೆ. ಇಲ್ಲಿನ ಬಸ್​ ನಿಲ್ದಾಣದಲ್ಲಿ ದಂಪತಿಯೊಂದಿಗೆ ಪೊಲೀಸರು ನಡೆದು ಕೊಂಡ ವರ್ತನೆ ಈಗ ಎಲ್ಲೆಡೆ ಸುದ್ದಿಯಾಗಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿದೆ.

    ಬೆಳಗಾವಿ ಬಸ್​ನಿಲ್ದಾಣದ ಬಳಿ ಹೆಲ್ಮೆಟ್​ ಇಲ್ಲದೇ ಪ್ರಯಾಣಿಸುತ್ತಿದ್ದ ದಂಪತಿಯನ್ನು ಟ್ರಾಫಿಕ್​ ಪೊಲೀಸರು ತಡೆದಿದ್ದಾರೆ. ಹೆಲ್ಮೆಟ್​ ಹಾಕದೇ ಪ್ರಯಾಣಿಸುತ್ತಿದ್ದ ಹಿನ್ನಲೆ ಅವರಿಗೆ 500 ದಂಡ ವಿಧಿಸಿದ್ದಾರೆ. ಈ ವೇಳೆ ಭಾರತಿ ವಿಭೂತಿ ಎಂಬ ಮಹಿಳೆ ಪೊಲೀಸರಿಗೆ ತಮ್ಮ ಬಳಿ ಅಷ್ಟ ಹಣ ಇಲ್ಲ. ಮಾರುಕಟ್ಟೆಯಲ್ಲಿ ಸಾಮಾನು ಖರೀದಿಗೆ ಖರ್ಚಾಗಿದೆ. ತಮ್ಮ ಬಳಿ ಕೇವಲ 100 ಚಿಲ್ಲರೆ ಹಣ ಉಳಿದಿದೆ ಎಂದಿದ್ದಾರೆ. ಆದರೆ, ಪೊಲೀಸರು ಮಾತ್ರ ದಂಡ ಕಟ್ಟಿಯೇ ತೆರಳಬೇಕು ಎಂದಿದ್ದಾರೆ.

    ಅಲ್ಲದೇ, ದಂಡ ಕಟ್ಟದ ಹಿನ್ನಲೆ ಬೈಕ್​ ಅನ್ನು ಕೂಡ ಪೊಲೀಸರು ವಶಕ್ಕೆ ಪಡೆದಿದ್ದರು. ಈ ಹಿನ್ನಲೆ ಎರಡು ಗಂಟೆಗಳ ಕಾಲ ದಂಪತಿಗಳು ಅಲ್ಲಿಯೇ ಕಾದು ಕುಳಿತಿದ್ದಾರೆ. ದಂಪತಿಗಳು ಎಷ್ಟು ಮನವಿ ಮಾಡಿದರೂ ಪೊಲೀಸರು ಮನ ಮಾತ್ರ ಕರಗಿಲ್ಲ. ಹೀಗೆ ಕಾದು ಸುಸ್ತಾದ ಮಹಿಳೆಗೆ ಕಡೆಗೆ ದಿಕ್ಕು ತೋಚದೇ ತಮ್ಮ ಮಾಂಗಲ್ಯ ಸರ ಅಡವಿಟ್ಟು ಬಂದು ಹಣ ನೀಡುವುದಾಗಿ ಪೊಲೀಸರಿಗೆ ತಿಳಿಸಿ, ಮಾಂಗಲ್ಯ ಮಾರಲು ಮುಂದಾಗಿದ್ದಾರೆ. ಈ ಸಂದರ್ಭದಲ್ಲಿ ಆಟೋ ಡ್ರೈವರ್​ ಸೇರಿದಂತೆ ಅನೇಕ ಸಾರ್ವಜನಿಕರು ಸ್ಥಳದಲ್ಲಿದ್ದು, ಪೊಲೀಸರ ಈ ವರ್ತನೆ ವಿರುದ್ಧ ಕಿಡಿಕಾರಿದ್ದಾರೆ. ಪೊಲೀಸರು ಜನಸಾಮಾನ್ಯರ ಕಷ್ಟ ಆಲಿಸದೇ ಜನರ ಸುಲಿಗೆಗೆ ಇಳಿದಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ
    Published by:Seema R
    First published: