ರಾಷ್ಟ್ರಗೀತೆಯೊಂದಿಗೆ ಬೆಳಗಾವಿ ಚಳಿಗಾಲದ ಅಧಿವೇಶನಕ್ಕೆ ತೆರೆ, ಎಲ್ಲರಿಗೂ ಧನ್ಯವಾದ ಅರ್ಪಿಸಿದ ಸ್ಪೀಕರ್​

ಬೆಳಗಾವಿ ಶಾಸಕರಾದ ಅಭಯ್ ಪಾಟೀಲ್ ಹಾಗೂ ಅನಿಲ್ ಬೆನಕೆ ಅವರು ಅಧಿವೇಶನದಲ್ಲಿ ಪಾಲ್ಗೊಂಡ ಎಲ್ಲ ಶಾಸಕರು, ಸಚಿವರಿಗೂ ಬೆಳಗಾವಿ ವಿಶೇಷ ಖಾದ್ಯವಾದ ಕರದಂಡನ್ನು ಉಡುಗೊರೆಯಾಗಿ ನೀಡಿದರು.

HR Ramesh | news18
Updated:December 21, 2018, 1:32 PM IST
ರಾಷ್ಟ್ರಗೀತೆಯೊಂದಿಗೆ ಬೆಳಗಾವಿ ಚಳಿಗಾಲದ ಅಧಿವೇಶನಕ್ಕೆ ತೆರೆ, ಎಲ್ಲರಿಗೂ ಧನ್ಯವಾದ ಅರ್ಪಿಸಿದ ಸ್ಪೀಕರ್​
ಕಲಾಪದಲ್ಲಿ ಬಿಜೆಪಿ ಶಾಸಕರ ಗದ್ದಲ
HR Ramesh | news18
Updated: December 21, 2018, 1:32 PM IST
ಬೆಳಗಾವಿ: ಕಳೆದ ಹತ್ತು ದಿನಗಳಿಂದ ಬೆಳಗಾವಿಯಲ್ಲಿ ನಡೆದ ಚಳಿಗಾಲದ ಅಧಿವೇಶನ ಇಂದು ಮುಕ್ತಾಯಗೊಂಡಿದ್ದು, ರಾಷ್ಟ್ರಗೀತೆಯೊಂದಿಗೆ ಅಧಿವೇಶನಕ್ಕೆ ತೆರೆ ಎಳೆಯಲಾಯಿತು.

ನಂತರ ಸುವರ್ಣಸೌಧದಲ್ಲಿ ಸ್ಪೀಕರ್ ರಮೇಶ್ ಕುಮಾರ್, ಉಪ ಸ್ಪೀಕರ್ ಕೃಷ್ಣಾ ರೆಡ್ಡಿ ಜಂಟಿ ಸುದ್ದಿಗೋಷ್ಠಿ ನಡೆಸಿದರು. ಅಗಲಿದ ಗಣ್ಯರಿಗೆ ಚಳಿಗಾಲ ಅಧಿವೇಶನದಲ್ಲಿ ಸಂತಾಪ ಸೂಚಿಸಲಾಯ್ತು. ವಾಜಪೇಯಿ, ಅನಂತ್ ಕುಮಾರ್, ಅಂಬರೀಷ್ ಸೇರಿದಂತೆ ಅನೇಕ ಗಣ್ಯರಿಗೆ ಸಂತಾಪ ಸೂಚಿಸಿಲಾಯ್ತು. ಈ ಅಧಿವೇಶನ ತೃಪ್ತಿ ತಂದಿದೆ. ಪ್ರಮುಖ ವಿಚಾರಗಳ ಬಗ್ಗೆ ಚರ್ಚೆಯಾಗಿದೆ. ಆಡಳಿತ ಪಕ್ಷ- ವಿರೋಧ ಪಕ್ಷದ ಶಾಸಕರಿಗೆ ಧನ್ಯವಾದಗಳು. ಯಾವುದೇ ಸಮಸ್ಯೆ ಇಲ್ಲದಂತೆ ಅಧಿವೇಶನ ಮುಕ್ತಾಯವಾಗಿದೆ. ಹೆಚ್ಚಿನ ಹಣ ಅಧಿವೇಶನಕ್ಕೆ ಖರ್ಚು ಆಗುತ್ತಿತ್ತು. ಈ ಬಾರಿ ಹೆಚ್ಚಿನ ಹಣ ಪೋಲು ಮಾಡದಂತೆ  ಸೂಚಿಸಲಾಗಿತ್ತು. ಎಂಟರಿಂದ ಹತ್ತು ಕೋಟಿ ಉಳಿದಿದೆ. 10 ರಿಂದ 12 ಕೋಟಿ ಖರ್ಚು ಮಾಡಲಾಗಿದೆ. ಕಳೆದ ಬಾರಿ 22 ಕೋಟಿ ಹಣ ಖರ್ಚು ಆಗಿತ್ತು. ಎಲ್ಲ ವರ್ಗದ ಸಿಬ್ಬಂದಿಗೆ ನಾನು ಧನ್ಯವಾದಗಳು ಹೇಳುತ್ತೇನೆ ಎಂದು ಸ್ಪೀಕರ್​ ಹೇಳಿದರು.

ಎಲ್ಲರ ಸಹಕಾರದಿಂದ ಈ ಬಾರಿಯ ಬೆಳಗಾವಿ ಅಧಿವೇಶನ ಸುಗಮವಾಗಿ, ಅರ್ಥಪೂರ್ಣವಾಗಿ ನಡೆಯಿತು. ಅತ್ಯುತ್ತಮ ಚರ್ಚೆಗಳಿಗೆ ಈ ಅಧಿವೇಶನ ಸಾಕ್ಷಿಯಾಯಿತು. ಈ ಅವಧಿಯಲ್ಲಿ ಮಾಧ್ಯಮ ಮಿತ್ರರು ನೀಡಿದ ಸಹಕಾರ, ಬೆಂಬಲಕ್ಕೆ ನನ್ನ ಹೃತ್ಪೂರ್ವಕ ಧನ್ಯವಾದಗಳು ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ತಿಳಿಸಿದ್ದಾರೆ.

ಸುವರ್ಣಸೌಧದಲ್ಲಿ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಮಾತನಾಡಿ, ಇದೊಂದು ಕಾಟಾಚಾರದ ಅಧಿವೇಶನ. ಸಾಲಮನ್ನಾ ವಿಚಾರದಲ್ಲಿ ಸ್ಪಷ್ಟೀಕರಣ ಕೊಟ್ಟಿಲ್ಲ.  ಸುಸೂತ್ರವಾಗಿ ಸದನ ನಡೆಸುವ ಪ್ರಯತ್ನವನ್ನು ಸರ್ಕಾರ ಮಾಡಿಲ್ಲ. ಅವರಿಗೆ ಅಧಿವೇಶನ ಮೊಟಕುಗೊಳಿಸುವುದೇ ಉದ್ದೇಶವಾಗಿತ್ತು. ಯಾವುದೇ ವಿಚಾರದ ಬಗ್ಗೆ ಸರಿಯಾದ ಚರ್ಚೆಯಾಗಲಿಲ್ಲ. ಬರಗಾಲ, ಉ.ಕ ಸಮಸ್ಯೆ, ಸಾಲ ಮನ್ನಾ ಬಗ್ಗೆ ಸ್ಪಷ್ಟೀಕರಣವಿಲ್ಲ.  ನಮ್ಮ‌ಹೋರಾಟ ಮುಂದುವರಿಯಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೊನೇ ದಿನವಾದ ಶುಕ್ರವಾರ ಎಂದಿನಂತೆ ಸದನ ಆರಂಭವಾಗುತ್ತಿದ್ದಂತೆ ಆಡಳಿತ ಪಕ್ಷದ ಶಾಸಕರ ಬಹುತೇಕ ಆಸನಗಳು ಖಾಲಿ ಇದ್ದವು. ಪ್ರತಿಪಕ್ಷದ ಶಾಸಕರು ಸಾಲ ಮನ್ನಾ ಹಾಗೂ ಉತ್ತರ ಕರ್ನಾಟಕದ ಬಗೆಗಿನ ಸರ್ಕಾರದ ನಿರ್ಲಕ್ಷ್ಯ ಧೋರಣೆ ಖಂಡಿಸಿ, ಧರಣಿ ಗದ್ದಲವನ್ನು ಮುಂದುವರೆಸಿದರು. ಇದರ ನಡುವೆಯೇ ಕಲಾಪ ಮುಂದೂಡಿಕೆ, ಮತ್ತೆ ಗದ್ದಲದ ನಡುವೆಯೇ ಮೂರು ವಿಧೇಯಕಗಳಿಗೆ ವಿಧಾನಸಭೆ ಅಂಗೀಕಾರ ನೀಡುವುದರೊಂದಿಗೆ ಅಧಿವೇಶನವನ್ನು ಮುಕ್ತಾಯಗೊಳಿಸಲಾಯಿತು.

ಸದನದಲ್ಲಿ ಉತ್ತರ ಕರ್ನಾಟಕ ವಿರೋಧಿ ಸರ್ಕಾರ ಎಂದು ಘೋಷಣೆ ಬಿಜೆಪಿ ಸದಸ್ಯರು ಘೋಷಣೆ ಕೂಗಿ, ನಂಜುಂಡಪ್ಪ ವರದಿ ಜಾರಿಯಾಗಬೇಕು, ಸಾಲ ಮನ್ನಾ ಆಗಲೇಬೇಕು. ಸಿಎಂ ಕ್ಷಮೆ ಕೋರಬೇಕು ಎಂದು ಘೋಷಣೆ ಕೂಗಿ ಸದನದ ಬಾವಿಗಿಳಿದು ಧರಣಿ ಆರಂಭಿಸಿದರು. ಇದರಿಂದ ಗೊಂದಲ, ಗದ್ದಲ ಹೆಚ್ಚಾದಾಗ ಸ್ಪೀಕರ್​ ರಮೇಶ್​ ಕುಮಾರ್​ ಸದನವನ್ನು ಹನ್ನೆರಡು ಗಂಟೆಯವರೆಗೆ ಮುಂದೂಡಿದರು. ಮತ್ತೆ ಕಲಾಪ ಆರಂಭವಾದಾಗಲೂ ಬಿಜೆಪಿ ಸದಸ್ಯರು ಧರಣಿ ಮುಂದುವರೆಸಿದರು. ಪ್ರತಿಪಕ್ಷ ಶಾಸಕರ ಧರಣಿ, ಗದ್ದಲದ ನಡುವೆಯೇ ಮೂರೂ ವಿಧೇಯಕಗಳಿಗೆ ವಿಧಾನಸಭೆಯಲ್ಲಿ ಅಂಗೀಕಾರ ದೊರೆಯಿತು. ಆನಂತರ ರಾಷ್ಟ್ರಗೀತೆಯೊಂದಿಗೆ ಬೆಳಗಾವಿಯ ಚಳಿಗಾಲದ ಅಧಿವೇಶನಕ್ಕೆ ತೆರೆ ಎಳೆಯಲಾಯಿತು.
Loading...

ಇದನ್ನು ಓದಿ: ಉ.ಕ.ದ ಅಭಿವೃದ್ಧಿ ಬಗ್ಗೆ ಚರ್ಚಿಸದ ಅಧಿವೇಶನ ಸಂಪೂರ್ಣ ವಿಫಲ – ವಾಟಾಳ್ ನಾಗರಾಜ್

ಕರ್ನಾಟಕ ವಿಧಾನ ಮಂಡಳ ಅನರ್ಹತಾ ನಿವಾರಣಾ ತಿದ್ದುಪಡಿ ವಿಧೇಯಕ, ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿವಿ ತಿದ್ದುಪಡಿ ವಿಧೇಯಕ ಹಾಗೂ ಕರ್ನಾಟಕ ಸಿವಿಲ್ ಸೇವೆಗಳ ನೇಮಕಾತಿ ಸಮಯದಲ್ಲಿ ಅಭ್ಯರ್ಥಿಗಳ ಆಯ್ಕೆಯ ಕಾರ್ಯ ವಿಧಾನ ವಿಧೇಯಕಗಳು ಅಂಗೀಕಾರಗೊಂಡವು.

ಶಾಸಕರಿಗೆ ಕರದಂಟು ಉಡುಗೊರೆ

ಬೆಳಗಾವಿ ಶಾಸಕರಾದ ಅಭಯ್ ಪಾಟೀಲ್ ಹಾಗೂ ಅನಿಲ್ ಬೆನಕೆ ಅವರು ಅಧಿವೇಶನದಲ್ಲಿ ಪಾಲ್ಗೊಂಡ ಎಲ್ಲ ಶಾಸಕರು, ಸಚಿವರಿಗೂ ಬೆಳಗಾವಿ ವಿಶೇಷ ಖಾದ್ಯವಾದ ಕರದಂಡನ್ನು ಉಡುಗೊರೆಯಾಗಿ ನೀಡಿದರು.

First published:December 21, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...
  • I agree to receive emails from NW18

  • I promise to vote in this year's elections no matter what the odds are.

    Please check above checkbox.

  • SUBMIT

Thank you for
taking the pledge

Vote responsibly as each vote
counts and makes a difference

Click your email to know more

Disclaimer:

Issued in public interest by HDFC Life. HDFC Life Insurance Company Limited (Formerly HDFC Standard Life Insurance Company Limited) (“HDFC Life”). CIN: L65110MH2000PLC128245, IRDAI Reg. No. 101 . The name/letters "HDFC" in the name/logo of the company belongs to Housing Development Finance Corporation Limited ("HDFC Limited") and is used by HDFC Life under an agreement entered into with HDFC Limited. ARN EU/04/19/13618
T&C Apply. ARN EU/04/19/13626